ಆವೃತ್ತಿಗಳು
Kannada

ನಾಗಾಲ್ಯಾಂಡ್ ರಾಷ್ಟ್ರೀಯ ಉದ್ಯಾನದಲ್ಲಿ ವಿನೂತನ ಪ್ರಯತ್ನ- ಈಶಾನ್ಯ ರಾಜ್ಯಗಳಲ್ಲೇ ಮೊದಲ ಬಾರಿಗೆ ಪ್ರಾಣಿ ದತ್ತು

ಟೀಮ್​​ ವೈ.ಎಸ್​​.ಕನ್ನಡ

27th Nov 2015
Add to
Shares
4
Comments
Share This
Add to
Shares
4
Comments
Share

ನಾಗಾಲ್ಯಾಂಡ್ ರಾಷ್ಟ್ರೀಯ ಉದ್ಯಾನದಲ್ಲಿ 350ಕ್ಕೂ ಹೆಚ್ಚು ಬಗೆಯ ಪ್ರಾಣಿ - ಪಕ್ಷಿಗಳಿವೆ. ಈಶಾನ್ಯ ರಾಜ್ಯಗಳಲ್ಲಿ ಇದೇ ಮೊದಲ ಬಾರಿಗೆ ಪ್ರಾಣಿಗಳನ್ನು ದತ್ತು ನೀಡುವ ವಿನೂತನ ಪರಿಕಲ್ಪನೆಗೆ ಈ ಮೃಗಾಲಯದಲ್ಲಿ ಜೀವ ನೀಡಲಾಗಿದೆ. ‘2013ರ ಜನವರಿಯಿಂದೀಚೆಗೆ ಸಾರ್ವಜನಿಕರ ಧನಸಹಾಯದಿಂದ ಹೆಚ್ಚುವರಿ 121 ಪ್ರಾಣಿ - ಪಕ್ಷಿಗಳಿಗೆ ಪಾರ್ಕ್‍ನಲ್ಲಿ ಸೂರು ಕಲ್ಪಿಸಲಾಗಿದೆ. ಈ ಮೂಲಕ ಈಗ ಪ್ರಾಣಿ - ಪಕ್ಷಿಗಳ ಸಂಖ್ಯೆ 350ಕ್ಕೆ ಏರಿದೆ’ ಅಂತಾರೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆಯ ಮುಖ್ಯಸ್ಥರಾದ ಎಮ್. ಲೋಕೇಶ್ವರ್ ರಾವ್.

image


ದಿನೇ ದಿನೇ ಉದ್ಯಾನದಲ್ಲಿ ಪ್ರಾಣಿ - ಪಕ್ಷಿಗಳ ಸಂಖ್ಯೆ ಹೆಚ್ಚಾದ ಕಾರಣ ಅವುಗಳಿಗೆ ಆಹಾರ ಒದಗಿಸಲು ಹಾಗೂ ಪಾರ್ಕ್‍ನ ನಿರ್ವಹಣೆಗೆ ಕಷ್ಟವಾಗುತ್ತಿತ್ತು. ಹೀಗಾಗಿಯೇ ಈ ಆರ್ಥಿಕ ಸಮಸ್ಯೆಯಿಂದ ಹೊರಬರಲು ಹಾಗೂ ಸಾರ್ವಜನಿಕರನ್ನೂ ಪಾರ್ಕ್ ಹಾಗೂ ಪ್ರಾಣಿ - ಪಕ್ಷಿಗಳೊಂದಿಗೆ ತೊಡಗಿಸಿಕೊಳ್ಳಲು ಆಡಳಿತ ಮಂಡಳಿಯವರು ನಿರ್ಧರಿಸಿದರು. ಆಗ ಹೊಳೆದಿದ್ದೇ ಪ್ರಾಣಿಗಳನ್ನು ದತ್ತು ನೀಡುವ ಈ ವಿನೂತನ ಆಲೋಚನೆ ಅಂತಾರೆ ಲೋಕೇಶ್ವರ್.

ಕಾಡು ಪ್ರಾಣಿ ಮತ್ತು ಪಕ್ಷಿಗಳನ್ನು ದತ್ತು ಕೊಡುವ ಯೋಜನೆ ಈಗಾಗಲೇ ನಮ್ಮ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸೇರಿದಂತೆ ಹಲವೆಡೆ ಇದ್ದರೂ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಾರಂಭವಾಗಿದ್ದು ನಾಗಾಲ್ಯಾಂಡ್ ನ್ಯಾಷನಲ್ ಪಾರ್ಕ್‍ನಲ್ಲಿ. ರಾಜ್ಯ ಸರ್ಕಾರದ ಒಪ್ಪಿಗೆ ಪಡೆದು ಈ ದತ್ತು ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು, ಯೋಜನೆಯ ಕಾರ್ಯಾಚರಣೆಯ ವಿಧಾನಗಳನ್ನು ಪಟ್ಟಿ ಮಾಡಿದ್ದಾರೆ. ಈ ದತ್ತು ಕಾರ್ಯಕ್ರಮದಲ್ಲಿ ಖಾಸಗಿ ವ್ಯಕ್ತಿಗಳು, ತಂಡಗಳು, ಸಂಘ- ಸಂಸ್ಥೆಗಳು ಸೇರಿದಂತೆ ಕುಟುಂಬದವರೂ ಭಾಗವಹಿಸಬಹುದು. ಈ ಮೂಲಕ ಮೃಗಾಲಯದಲ್ಲಿರುವ ಪ್ರಾಣಿಗಳ ಕಲ್ಯಾಣಕ್ಕೆ ಅಮೂಲ್ಯ ಕೊಡುಗೆ ನೀಡಬಹುದು ಅಂತಾರೆ ಅರಣ್ಯ ಪಡೆಯ ಮುಖ್ಯಸ್ಥರು.

ಪ್ರಾಣಿ ಪಕ್ಷಿಗಳ ಆಹಾರಕ್ಕೆ ಮತ್ತು ನಿರ್ವಹಣೆಯ ಖರ್ಚಿಗೆ, ವಾರ್ಷಿಕವಾಗಿ ಇಂತಿಷ್ಟು ಅಂತ ಹಣ ಸಹಾಯ ಮಾಡುವ ಮೂಲಕ ಸಾರ್ವಜನಿಕರು ತಮ್ಮ ಹೃದಯವೈಶಾಲ್ಯತೆ ಮೆರೆಯಬೇಕು ಅಂತ ನಾಗಾಲ್ಯಾಂಡ್ ನ್ಯಾಷನಲ್ ಪಾರ್ಕ್‍ನ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎಂ. ಲೋಕೇಶ್ವರ್ ರಾವ್ ಮನವಿ ಮಾಡಿಕೊಳ್ಳುತ್ತಾರೆ.

ಅನುವಾದಕರು: ವಿಶಾಂತ್​​

Add to
Shares
4
Comments
Share This
Add to
Shares
4
Comments
Share
Report an issue
Authors

Related Tags