ಬ್ರಿಟಿಷ್ ಕಾಲದ ತಂತ್ರಜ್ಞಾನಕ್ಕೆ ಗುಡ್‍ಬೈ - ಬರ್ತಿದೆ ಹಮಾಮಾನ ಮುನ್ಸೂಚನೆ ನೀಡುವ ಸೂಪರ್ ಕಂಪ್ಯೂಟರ್

ಟೀಮ್​ ವೈ.ಎಸ್​.ಕನ್ನಡ

ಬ್ರಿಟಿಷ್ ಕಾಲದ ತಂತ್ರಜ್ಞಾನಕ್ಕೆ ಗುಡ್‍ಬೈ - ಬರ್ತಿದೆ ಹಮಾಮಾನ ಮುನ್ಸೂಚನೆ ನೀಡುವ ಸೂಪರ್ ಕಂಪ್ಯೂಟರ್

Wednesday June 22, 2016,

2 min Read

ಪ್ರತಿ ವರ್ಷ ಜೂನ್ ತಿಂಗಳು ಬಂತಂದ್ರೆ ಎಲ್ಲರ ಚಿತ್ತ ಹವಾಮಾನ ಇಲಾಖೆಯತ್ತ ತಿರುಗುತ್ತದೆ. ಎಲ್ಲರೂ ಮಾನ್ಸೂನ್‍ಗಾಗಿ ಕಾತರದಿಂದ ಕಾಯುತ್ತಿರುತ್ತಾರೆ, ಮುಂಗಾರು ಆಗಮನ, ಮಳೆಯ ಪ್ರಮಾಣದ ಬಗ್ಗೆ ತಿಳಿಯಲು ಪ್ರತಿಯೊಬ್ಬರೂ ಮೊರೆಹೋಗೋದು ಹವಾಮಾನ ಇಲಾಖೆಗೆ (ಎಂಇಟಿ). ಯಾಕಂದ್ರೆ ಮುಂಗಾರು ಭಾರತದ ಬೆನ್ನೆಲುಬಾಗಿರುವ ರೈತರ ಜೀವನಾಡಿ. ಆದ್ರೆ ಪ್ರತಿ ಬಾರಿಯೂ ಹವಾಮಾನ ಇಲಾಖೆ ತಿಳಿಸಿದಂತೆ ಮಳೆಯಾಗಿಲ್ಲ. ಇಲಾಖೆಯ ಲೆಕ್ಕಾಚಾರವೆಲ್ಲ ಉಲ್ಟಾ ಪಲ್ಟಾ ಆಗಿದ್ದೇ ಹೆಚ್ಚು. ಹವಾಮಾನ ಇಲಾಖೆಯ ಮಳೆಯ ಮುನ್ಸೂಚನೆ ನೀಡಿದ್ರೆ, ಅಂದು ಬಿಸಿಲು ಕಾದಿದೆ ಎಂದೇ ಅರ್ಥ. ಪ್ರತಿ ಬಾರಿ ಇಲಾಖೆಯ ಅಂದಾಜಿನಂತೆ ಪ್ರಕೃತಿ ನಡೆದುಕೊಳ್ತಾ ಇಲ್ಲ. ಆದ್ರೆ ಇನ್ಮುಂದೆ ಇಂಥ ತಲೆನೋವು ಇಲ್ವೇ ಇಲ್ಲ, ಹವಾಮಾನದ ಬಗ್ಗೆ ನಿಖರ ಮಾಹಿತಿ ನೀಡುವ ಹೊಸ ವ್ಯವಸ್ಥೆಯೊಂದು ಭಾರತಕ್ಕೆ ಲಭ್ಯವಾಗಿದೆ.

image


ಅದೊಂದು ಸೂಪರ್ ಕಂಪ್ಯೂಟರ್, ಮುಂಗಾರು ಮುನ್ಸೂಚನೆಯನ್ನು ನಿಖರವಾಗಿ ಹೇಳುತ್ತೆ. ಈ ಸೂಪರ್ ಕಂಪ್ಯೂಟರ್‍ಗಾಗಿ ಹವಾಮಾನ ಇಲಾಖೆ ಬರೋಬ್ಬರಿ 400 ಕೋಟಿ ರೂಪಾಯಿ ಖರ್ಚು ಮಾಡ್ತಾ ಇದೆ. ಈ ಹೊಸ ಕಂಪ್ಯೂಟರ್ ಸದ್ಯ ಅಮೆರಿಕದಲ್ಲಿ ಬಳಕೆಯಲ್ಲಿರುವ ಗಣಕಯಂತ್ರಕ್ಕೆ ಸರಿಸಮನಾದದ್ದು. ಮುಂಗಾರು ಯಾವ ರೀತಿ ಇರಬಹುದು ಎಂಬುದನ್ನು ತಿಳಿಸಲು ಸಹಾಯವಾಗುವಂತಹ 3 ಆಯಾಮಗಳನ್ನು ಸೃಷ್ಟಿಸಲಾಗುತ್ತಿದೆ. ಮೇಘಸ್ಫೋಟ, ಚಂಡಮಾರುತ ಮತ್ತು ಪ್ರವಾಹದಂತಹ ಪ್ರಕೃತಿ ವಿಕೋಪಗಳ ಬಗ್ಗೆ ಸಹ ಈ ಸೂಪರ್ ಕಂಪ್ಯೂಟರ್‍ನಿಂದ ಮೊದಲೇ ಮಾಹಿತಿ ತಿಳಿದುಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದು.

ಇದನ್ನು ಓದಿ: ಕ್ರಿಕೆಟಿಗರಿಗೆ ಮಾನಸಿಕ ನೆಮ್ಮದಿ ತಂದುಕೊಟ್ಟ ಗುರು- ಯೋಗದಿಂದ ಒತ್ತಡ ಮೆಟ್ಟಿನಿಂತ ಕ್ರೀಡಾತಾರೆಗಳು..!

2017ರ ವೇಳೆಗೆ ಭಾರತದ ಹವಾಮಾನ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿರುವ ಈ ಸೂಪರ್ ಕಂಪ್ಯೂಟರ್‍ನ ವಿಶೇಷತೆ ಏನು ಅನ್ನೋದನ್ನು ತಿಳಿದುಕೊಳ್ಳೋಣ.

* ಬ್ರಿಟಿಷರ ಕಾಲದ ಸಂಖ್ಯಾಶಾಸ್ತ್ರದ ಮಾದರಿಯನ್ನು ಈ ಸೂಪರ್ ಕಂಪ್ಯೂಟರ್‍ನ ಕ್ರಿಯಾತ್ಮಕ ವ್ಯವಸ್ಥೆ ಬದಲಾಯಿಸಲಿದೆ.

* ಮೂರು ಆಯಾಮದ ಮಾದರಿಗಳನ್ನು ಸೃಷ್ಟಿಸಲು ಅಪಾರವಾದ ಕಂಪ್ಯೂಟಿಂಗ್ ಪವರ್‍ನ ಅಗತ್ಯವಿದೆ.

* 2017ರ ವೇಳೆಗೆ ಈ ಹೊಸ ವ್ಯವಸ್ಥೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

* ಸದ್ಯ ಹವಾಮಾನ ಇಲಾಖೆ ಬಳಸುತ್ತಿರುವ ಭಾಸ್ಕರ ಕಂಪ್ಯೂಟರ್‍ಗಿಂತ ಹತ್ತು ಪಟ್ಟು ಹೆಚ್ಚು ವೇಗವಾಗಿ ಈ ಸೂಪರ್ ಕಂಪ್ಯೂಟರ್ ಕಾರ್ಯನಿರ್ವಹಿಸಲಿದೆ.

* ಭಾರೀ ಮಳೆ, ಚಂಡಮಾರುತ, ಮೇಘಸ್ಫೋಟ ಹೀಗೆ ಭಯಾನಕ ನೈಸರ್ಗಿಕ ವಿಕೋಪಗಳ ಬಗ್ಗೆ ಮೊದಲೇ ನಿಖರ ಮಾಹಿತಿ ಪಡೆಯಬಹುದು.

* ಮಳೆಯ ಬಗ್ಗೆ ನಿಖರ ಮಾಹಿತಿ ದೊರೆಯುವುದರಿಂದ ರೈತರು ಕೂಡ ಕೃಷಿಗೆ ಬೇಕಾದ ಅನುಕೂಲಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಳ್ಳಬಹುದು. ನೀರಾವರಿ ಸೌಲಭ್ಯ, ಮಣ್ಣು, ಗೊಬ್ಬರ ಬಳಕೆ ಬಗ್ಗೆ ಯೋಜನೆ ರೂಪಿಸಿಕೊಳ್ಳಬಹುದು. ಮಳೆ ಕೈಕೊಟ್ಟಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೂಡ ತೆಗೆದುಕೊಳ್ಳಬಹುದು. ಇದರಿಂದ ದೇಶದ ಕೃಷಿ ಉತ್ಪಾದನೆ ಕೂಡ ಶೇ.15ರಷ್ಟು ಹೆಚ್ಚಳವಾಗಲಿದೆ. 

ಇದನ್ನು ಓದಿ

1. ಕಲಾವಿದನೊಳಗೊಬ್ಬ ಕೃಷಿಕ - ತವರಿನ ರೈರಿಗಾಗಿ ನೀರಾವರಿ ವಿಧಾನ ಆಮದು ಮಾಡಿಕೊಂಡ ನವಾಜುದ್ದೀನ್ ಸಿದ್ದಿಕಿ

2. ರಾಜಧಾನಿಯಲ್ಲೇ ಕತ್ತಲು - ಬೆಂಗಳೂರಿನ 33,000 ಮನೆಗಳಿಗಿಲ್ಲ ವಿದ್ಯುತ್ ಸಂಪರ್ಕ

3. ಕೊಳಗೇರಿ ಮಕ್ಕಳ ಭವಿಷ್ಯ ರೂಪಿಸುತ್ತಿರುವ ಜನಾಗ್ರಹ ಸಂಸ್ಥೆ