ಆವೃತ್ತಿಗಳು
Kannada

ಗಾಸಿಪ್​ಗಳಿಗೆ ಗುಡ್ ಬೈ-ಫ್ಲಿಪ್​ಕಾರ್ಟ್ ತೆಕ್ಕೆಗೆ ಬಿತ್ತು ಇ-ಬೇ

ಟೀಮ್​ ವೈ.ಎಸ್​.ಕನ್ನಡ

10th Apr 2017
Add to
Shares
21
Comments
Share This
Add to
Shares
21
Comments
Share

ಭಾರತದ ಆನ್​ಲೈನ್ ಮಾರುಕಟ್ಟೆಯ ನಾಯಕ ಫ್ಲಿಪ್​ಕಾರ್ಟ್ ಈಗ ಭಾರತದ ಅತೀ ದೊಡ್ಡ ಇ-ಕಾಮರ್ಸ್ ಪೋರ್ಟಲ್ ಆಗಿ ಬೆಳೆದುನಿಂತಿದೆ. ಇ-ಬೇ, ಮೈಕ್ರೋಸಾಫ್ಟ್ ಮತ್ತು ಟೆನ್ಸೆಂಟ್​ನಿಂದ ಏಳನೇ ಸುತ್ತಿನ ಹೂಡಿಕೆಯಲ್ಲಿಸ ಫ್ಲಿಪ್​ಕಾರ್ಟ್ ಒಟ್ಟು 1.4 ಬಿಲಿಯನ್ ಡಾಲರ್​ಗಳನ್ನು ಪಡೆದುಕೊಂಡಿದೆ. ಈ ಮೂಲಕ ಫ್ಲಿಪ್​ಕಾರ್ಟ್ 11.6 ಬಿಲಿಯನ್ ಅಮೆರಿಕನ್ ಡಾಲರ್​ಗಳ ಸಂಪತ್ತಿನ ಮೌಲ್ಯಮಾಪನ ಹೊಂದಿದ್ದು, ಭಾರತದ ಆನ್​ಲೈನ್ ಕಾಮರ್ಸ್​ನ ನಾಯಕನಾಗಿ ಇತಿಹಾಸ ಬರೆದಿದೆ. ಫ್ಲಿಪ್​ಕಾರ್ಟ್ ಇ-ಬೇಯ ಭಾರತದ ಹಕ್ಕುಗಳನ್ನು ಕೂಡ ತನ್ನದಾಗಿಸಿಕೊಂಡು ತನ್ನಲ್ಲಿ ವಿಲೀನಗೊಳಿಸಿದೆ. ಇ-ಬೇ ಈಗ ಫ್ಲಿಪ್​ಕಾರ್ಟ್ ಜೊತೆ ಸೇರಿಕೊಂಡಿದೆ. ಇ-ಬೇ ಫ್ಲಿಪ್​ಕಾರ್ಟ್​ನಲ್ಲಿ ಹೂಡಿಕೆ ಮಾಡಿದ್ದೂ ಅಲ್ಲದೇ ಇ-ಬೇ.ಇನ್(ebay.in) ಅನ್ನು ಫ್ಲಿಪ್​ಕಾರ್ಟ್ ಜೊತೆ ವಿಲೀನಗೊಳಿಸಿದೆ. ಆದ್ರೆ ಇ-ಬೇ ಭಾರತದಲ್ಲಿ ಸ್ವತಂತ್ರವಾಗಿ ಆನ್​ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಅಂತ ಫ್ಲಿಪ್​ಕಾರ್ಟ್ ಪ್ರಕಟಣೆ ತಿಳಿಸಿದೆ.

image


“ ಇದು ಫ್ಲಿಪ್​ಕಾರ್ಟ್ ಪಾಲಿನ ಐತಿಹಾಸಿಕ ಮೈಲುಗಲ್ಲು. ಭಾರತ ತಾಂತ್ರಿಕ ಶಕ್ತಿಯ ಪ್ರದರ್ಶನವಾಗಿದೆ. ನವೀನ ಯೋಚನೆ ಮತ್ತು ಸಾಂಪ್ರಾದಾಯಿಕ ಮಾರುಕಟ್ಟೆಯ ಅಡೆತಡೆಗಳನ್ನು ಮೀರಿನಿಂತು ಈ ಸಾಧನೆ ಮಾಡಿದ್ದೇವೆ. ನಮ್ಮ ಯಶಸ್ಸು ಹಲವು ಗ್ರಾಹಕರ ದಿನಿತ್ಯದ ಸಮಸ್ಯೆಗಳನ್ನು ಪರಿಹರಿಸಿ, ಅವರ ಮನ ಗೆದ್ದಿದ್ದಕ್ಕೆ ಸಿಕ್ಕಿದ ಬಹುಮಾನವಾಗಿದೆ. ”
ಸಚಿನ್ ಬನ್ಸಾಲ್, ಬಿನ್ನಿ ಬನ್ಸಾಲ್, ಫ್ಲಿಪ್​ಕಾರ್ಟ್ ಸಂಸ್ಥಾಪಕರು

ಇ-ಬೇ ಭಾರತೀಯ ಮಾರುಕಟ್ಟೆ ಪ್ರವೇಶಿಸಿ ವರ್ಷಗಳು ಕಳೆದಿವೆ. ಆದ್ರೆ ಅಮೆಜಾನ್​ನಂತೆ ಅಕ್ರಮಣಕಾರಿ ವ್ಯವಹಾರಿಕ ನೀತಿಯನ್ನು ಕಂಡುಕೊಂಡಿರಲಿಲ್ಲ. ಆದ್ರೆ ಈಗ ಇ-ಬೇ ಮತ್ತು ಫ್ಲಿಪ್​ಕಾರ್ಟ್ ಜೊತೆಯಾಗಿವೆ. ಗ್ರಾಹಕರ ಮತ್ತು ಮಾರಾಟಗಾರರಿಗೆ ವಿಭಿನ್ನ ವೇದಿಕೆಯನ್ನು ಒದಗಿಸಿಕೊಡಲಿವೆ.

“ ಇ-ಬೇ ಮತ್ತು ಫ್ಲಿಪ್​ಕಾರ್ಟ್ ಜೋಡಿ ಭಾರತದಲ್ಲಿ ವ್ಯವಹಾರದ ವಿಸ್ತಾರವನ್ನು ಹೆಚ್ಚಿಸಲಿದೆ. ಇ-ಬೇ ಜಾಗತಿಕ ಇ ಕಾಮರ್ಸ್ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದೆ. ಭಾರತದಲ್ಲಿ ಫ್ಲಿಪ್​ಕಾರ್ಟ್ ಉತ್ತಮ ಸಾಧನೆ ಮಾಡಿದೆ. ಈಗ ಎರಡೂ ಇ-ಕಾಮರ್ಸ್ ದೈತ್ಯರು ಜೊತೆಯಾಗಿರುವುದು ಉದ್ಯಮ ವಿಸ್ತರಣೆ ಅವಕಾಶ ಮಾಡಿಕೊಡಲಿದೆ.”
ಡೆವಿನ್ ವೆನಿಗ್, ಅಧ್ಯಕ್ಷರು, ಸಿಇಒ ಇ-ಬೇ ಇನ್​ಕಾರ್ಪರೇಷನ್

ಇತ್ತೀಚೆಗೆ ಫ್ಲಿಪ್​ಕಾರ್ಟ್, ಸಾಫ್ಟ್ ಬ್ಯಾಂಕ್​ನ ನೆರವು ಪಡೆಯುತ್ತಿರುವ ಸ್ನ್ಯಾಪ್ ಡೀಲ್ ಅನ್ನು ಸ್ವಾಧೀನ ಪಡಿಸಿಕೊಳ್ಳುತ್ತದೆ ಅನ್ನುವ ರೂಮರ್​ಗಳಿದ್ದವು. ಈಗ ಭಾರತದಲ್ಲಿ ತನ್ನ ಪ್ರತಿಸ್ಪರ್ಧಿ ಅಮೆಜಾನ್​ಗಿಂತ ದೊಡ್ಡದಾಗಿ ಬೆಳೆದಿರುವ ಫ್ಲಿಪ್​ಕಾರ್ಟ್ ಮುಂದಿನ ದಿನಗಳಲ್ಲಿ ಸ್ನ್ಯಾಪ್​ಡೀಲ್ ಅನ್ನು ಸ್ವಾಧೀನ ಪಡಿಸಿಕೊಳ್ಳಲು ಸಾಫ್ಟ್ ಬ್ಯಾಂಕ್​ನಿಂದ ನೆರವು ಪಡೆಯುವ ಸಾಧ್ಯತೆಯೂ ಇದೆ. ಫ್ಲಿಪ್​ಕಾರ್ಟ್ ಈ ಹಿಂದೆ ಸಾಕಷ್ಟು ಹಿನ್ನಡೆಯನ್ನು ಕೂಡ ಅನುಭವಿಸಿತ್ತು. ಆದ್ರೆ ನಾಯಕತ್ವದ ಬದಲಾವಣೆ ಫ್ಲಿಪ್​ಕಾರ್ಟ್ ಭವಿಷ್ಯವನ್ನು ಬದಲಿಸಿದೆ. ಸದ್ಯ ಕಲ್ಯಾಣ್ ಕೃಷ್ಣಮೂರ್ತಿ ಸಿಇಒ ಆಗಿದ್ದರೆ, ಬಿನ್ನಿ ಬನ್ಸಾಲ್ ಗ್ರೂಪ್ ಸಿಇಒ ಆಗಿದ್ದಾರೆ. ಸಹ ಸಂಸ್ಥಾಪಕ ಸಚಿನ್ ಬನ್ಸಾಲ್ ಈಗ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ.

2014ರಲ್ಲಿ ಫ್ಲಿಪ್​ಕಾರ್ಟ್ ಸುಮಾರು 1.7 ಬಿಲಿಯನ್ ಡಾಲರ್ ಹೂಡಿಕೆ ಪಡೆದುಕೊಂಡಿತ್ತು. ಫ್ಲಿಪ್ ಕಾರ್ಟ್ ಇತ್ತೀಚೆಗೆ ತನ್ನದೇ ಬ್ರಾಂಡ್ ಆದ ಅಂಬ್ರೆಲ್ಲಾ ವನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಫ್ಲಿಪ್​ಕಾರ್ಟ್ ಈಗಾಗಲೇ ಮಿಂತ್ರಾ, ಜಬೊಂಗ್, ಫೋನ್ ಪೆ, ಇ-ಕಾರ್ಟ್ ಆನ್​ಲೈನ್ ಫ್ಯಾಷನ್, ಡಿಜಿಟಲ್ ಪೇಮೆಂಟ್ಸ್ ಸೇರಿದಂತೆ ಹಲವು ಕಂಪನಿಗಳನ್ನು ಸ್ವಾಧೀನ ಪಡಿಸಿಕೊಂಡಿತ್ತು. ಈಗ ಅದಕ್ಕೆ ಇ-ಬೇ ಸೇರ್ಪಡೆಯಾಗಿದೆ.

ಇದನ್ನು ಓದಿ:

1.  500 ರೂಪಾಯಿ ಸಂಬಳದಿಂದ ಆರಂಭವಾದ ಜೀವನ- ಕೋಟಿ ದಾಟಿದೆ ತಿಂಗಳ ಆದಾಯ

2. ಸಿನಿಮಾರಂಗದಲ್ಲಿ ಮೂವರು ಸಹೋದರರ ಸಾಹಸ- ಇದು ಖಾಸನೀಸ್​ ಕುಟುಂಬದ ಖಾಸ್​ಬಾತ್​​

3. ಮನೆ ಬಾಗಿಲಿಗೆ ಮಾವು- ಹಣ್ಣುಗಳ ರಾಜನ ಮಾರಾಟಕ್ಕೆ ಹೊಸ ಪ್ಲಾನ್

Add to
Shares
21
Comments
Share This
Add to
Shares
21
Comments
Share
Report an issue
Authors

Related Tags