ಆವೃತ್ತಿಗಳು
Kannada

5 ಮನೆಗಳಿಗೆ ಬೆಳಕು ಕೊಡುವ 'ಸೌರ ವೃಕ್ಷ'

ಟೀಂ ವೈ.ಎಸ್.ಕನ್ನಡ 

YourStory Kannada
12th Oct 2016
10+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ದುರ್ಗಾಪುರದ ಸೆಂಟ್ರಲ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ರಿಸರ್ಚ್ ಇನ್ಸ್​ಟಿಟ್ಯೂಟ್​ನ ಮುಖ್ಯ ವಿಜ್ಞಾನಿ ಸಿಬ್ನಾಥ್ ಮೈತಿ ನೇತೃತ್ವದ ತಂಡ 'ಸೌರ ಶಕ್ತಿ ವೃಕ್ಷ'ವೊಂದನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಕೇವಲ ನಾಲ್ಕು ಚದರ ಅಡಿ ಜಾಗವಿದ್ದರೆ ಸಾಕು, 5 ಮನೆಗಳಿಗೆ ಸಾಕಾಗುವಷ್ಟು ವಿದ್ಯುತ್ ಇದರಿಂದ ದೊರೆಯುತ್ತದೆ. ಭಾರತದ ವಿದ್ಯುತ್ ಸಮಸ್ಯೆಗಿರುವ ಪರಿಹಾರವೇ ಈ ಸೋಲಾರ್ ಟ್ರೀ.

image


ಪ್ರತಿ ಮರಕ್ಕೂ ನಾಲ್ಕು ಚದರ ಅಡಿ ಜಾಗ ಬೇಕು. ಅಂದ್ರೆ ಸಾಮಾನ್ಯ ಕಚೇರಿಯೊಂದರಲ್ಲಿ ಮೇಜು ಇಡಲು ಬೇಕಾಗುವ ಜಾಗದಲ್ಲಿ ಅರ್ಧದಷ್ಟು ಸ್ಥಳ. ಅಷ್ಟೇ ಜಾಗದಲ್ಲಿ ಈ ಸೋಲಾರ್ ವೃಕ್ಷದ ಮೂಲಕ 4-5 ಕಿಲೋ ವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಬಹುದು. ಈ ಸೌರ ಮರವನ್ನು ಸಿಬ್ನಾಥ್ ಮೈತಿ ವಿನ್ಯಾಸಗೊಳಿಸಿದ್ದಾರೆ. ಕಳೆದ ಮೇನಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಈ ಸೋಲಾರ್ ಟ್ರೀಯನ್ನು ಉದ್ಘಾಟಿಸಿದ್ದರು. ಸದ್ಯ ದೆಹಲಿಯ ವಿವಿಧೆಡೆಗಳಲ್ಲಿ ಕಾರ್ಯಾರಂಭ ಮಾಡಲು ಸೋಲಾರ್ ವೃಕ್ಷಗಳು ಸಿದ್ಧವಾಗಿವೆ.

ಇಂತಹ 10 ಸೋಲಾರ್ ವೃಕ್ಷಗಳನ್ನು ಒದಗಿಸುವಂತೆ ಸಿಎಂಇಆರ್​ಐ ಬಳಿ ದುರ್ಗಾಪುರ ಪುರಸಭೆ ಅಧಿಕಾರಿಗಳು ಕೇಳಿದ್ದಾರೆ. ಬಂಗಾಳದ ಉಷ್ಣ ವಿದ್ಯುತ್ ಸ್ಥಾವರ ಕೂಡ ಇಂತಹ 120 ಸೋಲಾರ್ ಟ್ರೀಗಳನ್ನು ಕೊಡುವಂತೆ ಬೇಡಿಕೆ ಇಟ್ಟಿದೆ. ಈ ಸೋಲಾರ್ ವೃಕ್ಷಗಳ ಆಯುಷ್ಯ 25 ವರ್ಷಗಳು, ಅಲ್ಲಿಯವರೆಗೂ ಅವು ನಿಮಗೆ ನಿರಂತರವಾಗಿ ಸೌರಶಕ್ತಿಯನ್ನು ಒದಗಿಸಬಲ್ಲವು.

ಈ ಸೌರ ಮರಗಳಿಂದ ಕೃಷಿ ಭೂಮಿಗಳಿಗೂ ಅನುಕೂಲವಿದೆ. ``ಸೌರಶಕ್ತಿ ಕೋಶಗಳ ನವೀನ ಲಂಬ ವ್ಯವಸ್ಥೆಯ ಮೂಲಕ ಇದು ವಿದ್ಯುತ್ ಉತ್ಪಾದಿಸುವುದರಿಂದ ಇದಕ್ಕೆ ಹೆಚ್ಚಿನ ಭೂಮಿಯ ಅವಶ್ಯಕತೆಯಿಲ್ಲ ಎನ್ನುತ್ತಾರೆ'' ದುರ್ಗಾಪುರದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ನಿರ್ದೇಶಕ ಗಿರೀಶ್ ಸಾಹ್ನಿ.

ಇತ್ತೀಚೆಗಷ್ಟೆ ಮುಂಬೈ ಮೂಲದ ದಂಪತಿ 'ಉಲ್ಟಾ ಚಾಟಾ' ಎಂಬ ಉಪಕರಣವೊಂದನ್ನು ತಯಾರಿಸಿದ್ರು. ಅದೊಂದು ಮ್ಯಾಜಿಕಲ್ ಪ್ರಾಡಕ್ಟ್. ಅದು ಸೌರಶಕ್ತಿಯನ್ನು ಉತ್ಪಾದಿಸಬಲ್ಲದು ಜೊತೆಗೆ ವಾರ್ಷಿಕ 100,000 ಲೀಟರ್ ಮಳೆ ನೀರನ್ನು ಕೊಯ್ಲು ಮಾಡಬಲ್ಲದು. 'ಉಲ್ಟಾ ಚಾಟಾ', 'ಸೌರ ಮರ'ದಂತಹ ನವೀನ ದೇಸೀ ಉತ್ಪನ್ನಗಳ ಮೂಲಕ ವಿಜ್ಞಾನಿಗಳು ಮತ್ತು ಉದ್ಯಮಿಗಳು ಭಾರತದ ವಿದ್ಯುತ್ ಸಮಸ್ಯೆಯನ್ನು ನೀಗಿಸಬಲ್ಲರು.  

ಇದನ್ನೂ ಓದಿ..

76ರ ಅಜ್ಜಿಯ ಕೈ ರುಚಿ- ಮೈ ಅಮ್ಮಾಸ್ ಹೋಮ್​ ಮೇಡ್ ಮ್ಯಾಜಿಕ್​..!

ಒಂದು ಕೈ ಇಲ್ಲದಿದ್ದರೇನಂತೆ ಬದುಕುವ ಛಲವಿದೆಯಲ್ಲ..

10+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags