ಆವೃತ್ತಿಗಳು
Kannada

ಬ್ರೌನ್​ಸ್ಟ್ರಾ-19ರ ಹರೆಯದ ಯುವಕನ ಫರ್ನಿಚರ್​ ಶಾಪ್​​​​

ಟೀಮ್​ ವೈ.ಎಸ್​​

Team YS Kannada
15th Jul 2015
Add to
Shares
1
Comments
Share This
Add to
Shares
1
Comments
Share

ಮನೆ ಸುಂದರವಾಗಿ ಕಾಣಬೇಕಾದ್ರೆ ಫರ್ನಿಚರ್​ ನೀಟಾಗಿ ಇರ್ಬೇಕು. ಹಾಗಂತ ಎಲ್ಲಾ ಫರ್ನಿಚರ್​ಗಳು ಎಲ್ಲಾ ಮನೆಗಳಿಗೆ ಸೆಟ್​ ಆಗೋದಿಲ್ಲ. ಮನೆಗಳನ್ನು ಚೆನ್ನಾಗಿಡಬಲ್ಲ ಫರ್ನಿಚರ್​​ಗಳನ್ನು ಹುಡುಕೋದು ಸವಾಲಿನ ಕೆಲಸ. ಆನ್​ಲೈನ್​​ನಲ್ಲಿ ವಿವಿಧ ಫರ್ನಿಚರ್​​ಗಳಿದ್ರೂ ನಮಗೆ ಬೇಕಾದ ವಸ್ತುಗಳು ಅಲ್ಲಿ ಸಿಗೋದು ಸಂದೇಹವೇ. ಹೀಗಾಗಿ ಫರ್ನಿಚರ್​​ ಸ್ಟೋರ್​​ಗೆ ಹೊಸ ಟಚ್​ ಕೊಡಲು ಯೋಚಿಸಿದ್ದು 19 ವರ್ಷದ ಯುವಕ. ಅವನ ಹೆಸರು ಮುಕುಂದ್​ ಅಗರ್ವಾಲ್​​. ಮಾರುಕಟ್ಟೆಯಲ್ಲಿ ಗ್ರಾಹಕರ ಮನಸ್ಥಿತಿ ಅರಿತ ಮುಕುಂದ್​​​ ಬ್ರೌನ್​ ಸ್ಟ್ರಾ ಅನ್ನೋ ಫರ್ನಿಚರ್​ ಶಾಪ್​​ನ್ನು ಆರಂಭಿಸಿಯೇ ಬಿಟ್ರು. ಗ್ರಾಹಕರು ಮನಮೆಚ್ಚುವ ಫರ್ನಿಚರ್​​ಗಳ ಮಾರಾಟವನ್ನು ಆರಂಭಿಸಿದ್ರು.


image


ನಿಮ್ಮ ಮನೆಯ ಆಸುಪಾಸಿನಲ್ಲಿ ಅಥವಾ ಸಿಟಿಯಲ್ಲಿ ಹಲವು ಸ್ಟೋರ್ ಗಳು ಫರ್ನಿಚರ್ ಗಳನ್ನು ಮಾರಾಟ ಮಾಡುತ್ತಿವೆ. ಆದರೆ ಯಾವ ಸ್ಟೋರ್ ಕೂಡಾ ವಿವಿಧ ಆಯ್ಕೆಗಳನ್ನು ಒದಗಿಸುವ ಕಡೆ ಗಮನ ಹರಿಸುತ್ತಿಲ್ಲ. ಆದರೆ "ಬ್ರೌನ್ ಸ್ಟ್ರಾ" ವಿಶ್ವದಲ್ಲೇ ವಿವಿಧ ರೀತಿಯೇ ವಿನ್ಯಾಸಗಳನ್ನು ಒಳಗೊಂಡ ಫರ್ನಿಚರ್ ಗಳನ್ನು ಮಾರಾಟ ಮಾಡುವ ಕಡೆ ಗಮನ ಹರಿಸುತ್ತಿದೆ.

ಅಂದಹಾಗೇ ಮುಕುಂದ್ ಒಂದು ವ್ಯಾಪಾರಸ್ಥ ಕುಟುಂಬದಿಂದ ಬಂದವರು. ತನ್ನ ಕನಸಿನ ಕೂಸು "ಬ್ರೌನ್ ಸ್ಟ್ರಾ" ಆರಂಭಿಸುವ ಮೊದಲು ಸಿ.ಎ. ಪದವಿ ಮುಗಿಸಿದ್ದರು. ತಂದೆಯ ಗ್ರಾನೈಟ್ ಉತ್ಪಾದನಾ ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದರು. ಆದರೆ ಮುಕುಂದ್​​ಗೆ ಅದ್ರಲ್ಲಿ ತೃಪ್ತಿ ಸಿಗಲಿಲ್ಲ.​​ ತಾನೇ ಏನಾದರೂ ಮಾಡಬೇಕು ಎಂದು ಆಲೋಚಿಸಿದ್ರು. ಫರ್ನಿಚರ್ ರಫ್ತು ವ್ಯಾಪಾರ ಒಳನೋಟವನ್ನು ಅರಿಯಲು ಜೋಧ್‌ಪುರ್ ಗೆ ತೆರಳಿದರು.

ಮುಕುಂದ್​​ಗೆ ಫರ್ನಿಚರ್​ ವ್ಯಾಪಾರದ ಕನಸು ಹುಟ್ಟಿಕೊಂಡ ಹಿಂದೆಯೂ ಒಂದು ಕಥೆಯಿದೆ. ಮುಕುಂದ್​​ ಸಂಬಂಧಿ ಜೊತೆ ಅವರ ಮದುವೆಗೆ ಬಟ್ಟೆ ಕೊಳ್ಳಲು ಹೋಗಿದ್ದರು. ಅವರು ಬಟ್ಟೆ ಕೊಳ್ಳುತ್ತಿದ್ದಾಗ ವಿವಿಧ ರೀತಿಯ ಬಣ್ಣದ ಮತ್ತು ವಿನ್ಯಾಸದ ಬಟ್ಟೆಗಳನ್ನು ಆಯ್ಕೆ ಮಾಡುತ್ತಿದ್ದರು. ಆ ಸಮಯದಲ್ಲಿ ಮುಕುಂದ್​ಗೆ ಫರ್ನಿಚರ್ ವ್ಯಾಪಾರಕ್ಕೆ ವಿನ್ಯಾಸ ಮತ್ತು ಬಣ್ಣ ಮುಖ್ಯವಾಗುತ್ತದೆ ಅನ್ನೋದು ಅರಿವಾಯಿತು . ಅಲ್ಲಿಂದ "ಬ್ರೌನ್ ಸ್ಟ್ರಾ" ಕ್ಕೊಂದು ಹೊಸ ಆಯಾಮ ಸಿಕ್ತು.

ಬ್ರೌನ್ ಸ್ಟ್ರಾ ಕೇವಲ ಫರ್ನಿಚರ್ ಕಡೆ ಗಮನ ಹರಿಸುತ್ತಿಲ್ಲ. ವಿವಿಧ ರೀತಿಯ ಫರ್ನಿಚರ್ ಗಳನ್ನು ಒದಗಿಸುತ್ತಿದೆ. ಮೊದಲ ಗಮನ ಉತ್ಪನ್ನ ಮತ್ತು ಫರ್ನಿಚರ್ ವಿನ್ಯಾಸದ ಕಡೆ. ಬಣ್ಣ, ಫ್ಯಾಬ್ರಿಕ್ ಮತ್ತು ಲೆದರ್ ವಿಷಯದಲ್ಲಿ ಆಯ್ಕೆಗಳನ್ನು ಕೂಡ ಬ್ರೌನ್​ ಸ್ಟ್ರಾ ನೀಡುತ್ತಿದೆ. ಮನೆಗೆ ಯಾವುದು ಸರಿ ಹೊಂದುತ್ತದೆ ಅಂತಹ ಫರ್ನಿಚರ್ ನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶವನ್ನು ಮಾತ್ರ ಬ್ರೌನ್​ಸ್ಟ್ರಾ ಹೊಂದಿದೆ.

image


ಇನ್ನು ಡಿಜಿಟಲ್​ ಮಾರ್ಕೆಟಿಂಗ್​​ ಕಡೆಯೂ ಬ್ರೌನ್​​ಸ್ಟ್ರಾ ಕನಸು ಕಾಣುತ್ತಿದೆ. ಕಂಪನಿ ಆನ್​ಲೈನ್​​ಗೆ ಹೋದ ನಂತರ ಫಿನಿಶಿಂಗ್ ಮತ್ತು ಪ್ಯಾಕಿಂಗ್ ಘಟಕ ಸ್ಥಾಪಿಸುವ ಕಡೆ ಗಮನ ಹರಿಸಲು ಚಿಂತನೆ ನಡೆದಿದೆ.

ಬ್ರೌನ್​ ಸ್ಟ್ರಾ ಲೈವ್ ಸ್ಪೇಸ್ ಮತ್ತು ಹೋಮ್ ಲೇನ್ ಕಂಪನಿಗಳ ಜೊತೆ ಸ್ಪರ್ಧೆ ನಡೆಸುತ್ತಿದೆ. ಈಗಾಗಲೇ ಈ ಕಂಪನಿಗಳು ಬಹಳಷ್ಟು ಬೆಳೆದಿವೆ ಆದುದರಿಂದ ಬಹಳಷ್ಟು ಸವಾಲುಗಳಿವೆ ಎಂಬದರ ಬಗ್ಗೆ ಮುಕುಂದ್​​ಗೆ ಅರಿವಿದೆ.

Add to
Shares
1
Comments
Share This
Add to
Shares
1
Comments
Share
Report an issue
Authors

Related Tags