ಆವೃತ್ತಿಗಳು
Kannada

ಮಹಿಳೆಯರ ಸುರಕ್ಷತೆಗೆ ದೆಹಲಿ ಕಂಪನಿಯ ಅದ್ಭುತ ವಿಧಾನ

ಟೀಮ್​ ವೈ.ಎಸ್​. ಕನ್ನಡ

YourStory Kannada
14th Jan 2016
Add to
Shares
1
Comments
Share This
Add to
Shares
1
Comments
Share

ಮುನಿರ್ಕಾ ನಿವಾಸಿ ಪರಾಸ್ ಬತ್ರಾ ಅವರು ಕಳೆದ 3 ವರ್ಷಗಳ ಹಿಂದೆ ನಡೆದ `ನಿರ್ಭಯಾ ಅತ್ಯಾಚಾರ' ಪ್ರಕರಣಕ್ಕೆ ಹೆಸರಾದ ತಮ್ಮ ಪಕ್ಕದ ಊರು ಯಾವುದೇ ಬದಲಾವಣೆ ಕಾಣದ ಬಗ್ಗೆ 2014ರ ಜುಲೈನಲ್ಲಿ ಅರಿತು, ಆ ಸ್ಥಳದ ಪರಿಸ್ಥಿತಿ ಬದಲಾಯಿಸದೆ, ಆ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ಬಗ್ಗೆ ಆಲೋಚಿಸಿದ್ದಾರೆ.

"ನಮ್ಮ ಸಂಶೋಧನೆಯ ಆಧಾರದ ಮೇಲೆ ಪ್ರಸ್ತುತದ ಪೆಪ್ಪರ್ ಸ್ಪ್ರೇಗಳು ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಉತ್ತಮ ಪರಿಹಾರ ಅಲ್ಲ. ಯಾಕಂದರೆ ಅದನ್ನು ಬಳಕೆದಾರರ ವಿರುದ್ಧವೇಮ ಪ್ರಯೋಗಿಸಬಹುದು. ಅಲ್ಲದೆ, ಅಪಾಯದಲ್ಲಿರುವವರು ತಮ್ಮ ಬ್ಯಾಗಿನಿಂದ ಫೋನ್ ತೆಗೆದು, ಕೀ ಪ್ಯಾಡ್ ಅನ್‍ಲಾಕ್ ಮಾಡಿ ಸೇಫ್ಟಿ ಆ್ಯಪ್ ಹುಡುಕುವುದು, ಪ್ರ್ಯಾಕ್ಟಿಕಲ್ ಆಗಿ ಸಾಧ್ಯಾನೂ ಇಲ್ಲ" ಅಂತಾರೆ ಪರಾಸ್.

ಮಾರ್ಕೆಟ್​​ನಲ್ಲಿ ವೇರಬಲ್ಸ್ ದೊರೆತರೂ, ಜನರು ಅಗತ್ಯಕ್ಕಿಂತ ಹೆಚ್ಚಿಗೆ ಏನನ್ನು ಧರಿಸಿದರೂ ಉಪಯೋಗ ಇಲ್ಲ ಅನ್ನೋದನ್ನ ಅವರು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ, ಅವರು ಸ್ಮಾರ್ಟ್ ಜ್ಯೂಯಲರಿಗಳನ್ನು ಧರಿಸುವುದನ್ನು ಆದಷ್ಟು ಕಡಿಮೆಮಾಡಿದ್ದಾರೆ.

ದೆಹಲಿಯ ಐವರು ಐಐಟಿ ಪದವೀಧರರು-ಅವಿನಾಶ್ ಬನ್ಸಾಲ್, ಆಯುಷ್ ಬಂಕಾ, ಚಿರಾಗ್ ಕಪಿಲ್, ಮಾಣಿಕ್ ಮೆಹ್ತಾ ಮತ್ತು ಪರಾಸ್ ಬತ್ರಾ-ಕಳೆದ ವರ್ಷ ಅಂದರೆ, ತಾವು ಪದವಿ ಓದುತ್ತಿದ್ದ ಸಂದರ್ಭದಲ್ಲೇ ಸಿಗ್ನಲ್ ಟ್ರಾನ್ಸ್​​ಮಿಟರ್‍ಂತೆ ಮೊದಲೇ ರಿಜಿಸ್ಟರ್ ಮಾಡಿಕೊಂಡಿದ್ದ ಪೋಷಕರು ಮತ್ತು ಇತರ ಆ್ಯಪ್ ಬಳಕೆದಾರರು Saferನ್ನು ಸ್ಥಾಪಿಸಿದ್ದರು. ಅವರು ಅಪಾಯದ ಸಂದರ್ಭದಲ್ಲಿ ಸಮೀಪದವರು ಸಹಾಯ ಮಾಡಲು ಸಾಧ್ಯವಾಗುವಂತೆ ಆಭರಣ ಆಧಾರಿತ ಆ್ಯಪ್‍ನ್ನು ಅಭಿವೃದ್ಧಿ ಪಡಿಸಿದರು.

Safer : ಸೌಂದರ್ಯ, ಚಾತುರ್ಯದ ಸಮಾಗಮ

ಸೇಫರ್ ಸಾಧನ (ಪೆಂಡೆಂಟ್ ಅಥವಾ ಚೇನ್), ಬ್ಲೂಟೂತ್‍ನ ಲೋ ಎನರ್ಜಿ ಮೂಲಕ ಫೋನ್‍ನ ಸೇಫರ್ ಆ್ಯಪ್ ಮೂಲಕ ಕನೆಕ್ಟ್ ಆಗಿದೆ. ಈ ಆ್ಯಪ್ ಜಿಪಿಎಸ್ ಮತ್ತು ಸೆಲ್ಯೂಲರ್ ನೆಟ್‍ವರ್ಕ್ ಅನ್ನು ಬಳಸಿ ಸಂಕಷ್ಟದಲ್ಲಿ ಇರುವವರ ಬಗ್ಗೆ, ಇರುವ ಸ್ಥಳದ ಬಗ್ಗೆ ಸ್ನೇಹಿತರಿಗೆ ಹಾಗೂ ಪೋಷಕರಿಗೆ ಎಚ್ಚರಿಕೆಯ ಸಂದೇಶವನ್ನು ಕಳುಹಿಸುತ್ತದೆ. ಇದೆರಡರ ನಡುವಿನ ಎಲ್ಲಾ ಸಂವಹನವೂ ಇಂಟರ್‍ನೆಟ್ ಹಾಗೂ ಟೆಕ್ಸ್ಟ್ ಎಸ್‍ಎಂಎಸ್ ಮೂಲಕ ನಡೆಯುತ್ತದೆ.

ಬಳಕೆದಾರರು ತಮಗಿಷ್ಟವಾದ ಜ್ಯೂಯಲರಿಯನ್ನು ಸೇಫರ್ ಬಳಸಲು ಆಯ್ಕೆಮಾಡಲು ಬಹಳಷ್ಟು ಅವಕಾಶವಿದ್ದರೂ, ಅವರು ಪೆಂಡೆಂಟ್‍ನ್ನೇ ಆಯ್ಕೆ ಮಾಡಿದ್ದಾರೆ.

" ಅದು ಪೆಂಡೆಂಟ್ ಆಗಿದ್ದಲ್ಲಿ ಬಹಳ ಸುಲಭವಾಗಿ ಬಳಸಬಹುದು. ಹಾಗೇ ಕೆಲವು ಸಂದರ್ಭಗಳಲ್ಲಿ ಇದನ್ನು ಇತರರಿಗೆ ಪ್ರದರ್ಶಿಸಲು ಇಷ್ಟವಿಲ್ಲ ಎಂದರೆ ಅದನ್ನು ಮರೆಮಾಚಲೂಬಹುದು. ಇದು ಪೆಂಡೆಂಟ್‍ನ್ನು ತಯಾರಿಸುವ ಮುನ್ನ ಮಾಡಿದ ಇಂಟೆನ್‍ಸೀವ್ ಡಿಸೈನ್ ರಿಸರ್ಚ್‍ನ ಭಾಗವಾಗಿದೆ" ಎಂದು ಹೇಳುತ್ತಾರೆ ಪರಾಸ್.

image


ಇದನ್ನು ಮಹಿಳಾ ಉತ್ಪನ್ನಗಳ ಡಿಸೈನರ್ಸ್‍ಗಳಿಂದ ಡಿಸೈನ್ ಮಾಡಲಾಗಿದ್ದು, ಹೆಚ್ಚು ವಕ್ರವಾದ ವಜ್ರದ ಕಟ್ ಗ್ಲಾಸ್ ಕ್ರಿಸ್ಟಲ್‍ನಿಂದ ಕೂಡಿದ್ದು, ಅದರ ಹಿಂದೆ ಒಂದು ಬಟನ್ ಕೂಡ ಇದೆ. ಈ ಬಟನ್‍ನ್ನು ಎರಡು ಸಾರಿ ಪ್ರೆಸ್ ಮಾಡಿದ ತಕ್ಷಣ ಈ ಆ್ಯಪ್ ಚಾಲನೆಗೊಂಡು, ಈಗಾಗಲೇ ರಿಜಿಸ್ಟರ್ ಆಗಿರುವ ಪೋಷಕರಿಗೆ ಸ್ಥಳದ ವಿವರಗಳೊಂದಿಗೆ ಅಲರ್ಟ್‍ಗಳನ್ನು ಕಳುಹಿಸುತ್ತದೆ.

ಹೆಹಲಿಯ ಮತ್ತೊಂದು ಸಂಸ್ಥೆ, ಈ ಆ್ಯಪ್‍ಗೆ ಮತ್ತಷ್ಟು ಕುತೂಕಲಕಾರಿ ಅಂಶಗಳನ್ನು ಸೇರಿಸಿ, ಈ ಸೇಫರ್​​ ಆ್ಯಪ್​ನ್ನು ಅಭಿವೃದ್ಧಿಪಡಿಸಿದೆ. ಇದು ರಿಜಿಸ್ಟರ್ ಆದ ಪೋಷಕರು, ಬಳಕೆದಾರರ ಚಲನವಲನಗಳನ್ನು ಯಾವುದೇ ನಿರ್ದಿಷ್ಟ ಸಮಯದಲ್ಲಿ ಮಾನಿಟರ್ ಮಾಡಲು ಸಾಧ್ಯವಾಗಿಸಿದೆ.

ನೀಲಿ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ದೊರೆಯುವ ಈ ಪೆಂಡೆಂಟ್ ಒಂದರ ಬೆಲೆ 3,500ರೂ. ಅಲ್ಲದೆ, ಈ ಸಂಸ್ಥೆ ತನ್ನ ಉತ್ಪನ್ನವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಇಂಡಿಯನ್ ಕ್ರೌಡ್ ಫಂಡಿಂಗ್ ಪ್ಲಾಟ್‍ಫಾರ್ಮ್ `ಕೆಟ್ಟೋ'ನ ಆರ್ಡರ್‍ಗಳಿಂದ ಸುಮಾರು ಐದು ಲಕ್ಷದವರೆಗೆ ಮರಾಟ ಹೆಚ್ಚಿಸಿದೆ.

ಜೆಟೆಕ್ಸ್, ದುಬೈ, ಎರಿಕ್ಸನ್ ಇನ್ನೋವೇಷನ್ ಅವಾರ್ಡ್, ಫೊಲಿಪ್ಸ್ ಬ್ಲೂ ಪ್ರಿಂಟ್ 2014 ಮತ್ತು ಬಾಂಬೆ ಐಐಟಿಯ ಯುರೇಕಾ ಸೇರಿದಂತೆ ಬಹಳಷ್ಟು ಮಾರಾಟ ಯೋಜನೆಗಳು ಮತ್ತು ಉತ್ಪನ್ನಗಳ ಪರಿಕಲ್ಪನೆ ಕುರಿತ ಸ್ಪರ್ಧೆಗಳಲ್ಲಿ ಲೀಪ್ ಟೀಮ್ ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.

ಅಷ್ಟೇ ಅಲ್ಲದೆ, ಇಂಡಿಯಾ ಇನ್ನೋವೇಷನ್ ಗ್ರೋತ್ ಫ್ರೋಗ್ರಾಂನ ಭಾಗವಾಗಿ ಆಯ್ಕೆಗೊಂಡು ಆ ಮೂಲಕ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ ಸ್ಟಾರ್ಟ್‍ಅಪ್ ಕನೆಕ್ಟ್ ಈವೆಂಟ್‍ನಲ್ಲಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಿದ್ದಾರೆ.

ಕಣ್ತೆರೆಸಿದ ವ್ಯಾಲಿ ಎಕ್ಸ್​​ಪೀರಿಯನ್ಸ್

ಲೀಫ್ ಟೀಮ್ ಪ್ರತಿನಿಧಿಸಿದ್ದ ಮಣಿಕ್ ಅವರನ್ನು ಭಾರತ ಹಾಗೂ ಸಿಲಿಕಾನ್ ವ್ಯಾಲಿ ನಡುವಿನ ವ್ಯತ್ಯಾಸಗಳ ಬಗ್ಗೆ ಅಭಿಪ್ರಾಯ ಕೇಳಿದಾಗ, ಅವರ ಬಹಳ ಬೇಗ ಪ್ರತಿಕ್ರಿಯಿಸಿದರು.

"ಬಹಳಷ್ಟು ವ್ಯತ್ಯಾಸವಿದೆ. ಅದರಲ್ಲಿ ಮುಖ್ಯವಾದದ್ದು, ವೈಫಲ್ಯಗಳನ್ನು ಅಸಡ್ಡೆಯಿಂದ ನೋಡುದಿದ್ದುದು. ಏಳು ವಿವಿಧ ಕಂಪನಿಗಳನ್ನು ಆರಂಭಿಸಿ, ಪ್ರತಿ ಬಾರಿ ವೈಫಲ್ಯ ಕಂಡ ಒಬ್ಬ ವ್ಯಕ್ತಿಯನ್ನು ನಾನು ಭೇಟಿ ಮಾಡಿದೆ. ಆದರೆ ಅವರು ಎಲ್ಲಾ ಏಳು ಉದ್ಯಮಗಳ ಬಗ್ಗೆಯೂ ಹೆಮ್ಮೆಪಟ್ಟರು. ಸೋತ ಉದ್ಯಮಗಳು ಅವರಿಗೆ ಮೆಡಲ್ಸ್ ಆಫ್ ಆನರ್ ಇದ್ದಂತೆ. ಏನೇ ಆದರೂ, ಭಾರತದಲ್ಲಿ ಯಾರೇ ಹೊಸತನ್ನು ಆರಮಭಿಸಿ, ಅದರಲ್ಲಿ ಸೋಲು ಕಂಡರೆ, ಸಮಾಜ ಮತ್ತು ಉದ್ಯಮ ಅವರನ್ನು ಕೆಳ ಮಟ್ಟದಲ್ಲಿ ಕಾಣುತ್ತದೆ".

`ಸೇಫರ್'ನ ಫ್ಯೂಚರ್

ಟ್ರಾನ್ಸ್​​ಫರೆನ್ಸಿ ಮಾರ್ಕೆಟ್ ರಿಸರ್ಚ್ ವರದಿ ಪ್ರಕಾರ, 2018ರ ವೇಳೆಗೆ ಧರಿಸುವ ವಸ್ತುಗಳಲ್ಲಿನ ತಂತ್ರಜ್ಞಾನ ಯುಎಸ್$5.8 ಬಿಲಿಯನ್ ತಲುಪುತ್ತದೆ. 2015ರ ವೇಳೆಗೆ ಯುಎಸ್$750 ಮಿಲಿಯನ್ ತಲುಪುತ್ತದೆ. ಇದರಂತೆ 2012 ರಿಂದ 2018ರ ವರೆಗಿನ ಕಾಂಪೌಂಡ್ ಆನುಯಲ್ ಗ್ರೋತ್ ರೇಟ್ 40.8% ಆಗಿದೆ.

"ಜ್ಯುಯಲರಿಯಿಂದ ಸ್ಮಾರ್ಟ್ ಕ್ಯುಯಲರಿಗೆ ಬದಲಾಗೋದು, ಫೀಚರ್ ಫೋನ್‍ಗಳಿಂದ ಸ್ಮಾರ್ಟ್ ಫೋನ್‍ಗಳಿಗೆ ಶಿಫ್ಟ್ ಆದಷ್ಟೂ ಅದನ್ನು ನಾವು ಕ್ರಾಂತಿಕಾರಿ ಬದಲಾವಣೆ ಅಂತ ನಾವು ನಂಬಿದ್ದೇವೆ" ಎನ್ನುತ್ತಾರೆ ಮಣಿಕ್. ಸೇಫ್ಟಿ ವೇರಬಲ್ಸ್ ವಲಯದಲ್ಲಿ ಮತ್ತಷ್ಟು ಡಿಸೈನ್‍ಗಳನ್ನು ಪರಿಚಯಿಸುವ ಯೋಜನೆಯಿದ್ದು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೂ ಸದ್ಯದಲ್ಲೇ ಪೂರೈಸಲಿದೆ.

ಅದರ ಪ್ರಕಾರ, ಮಣಿಕ್ ಅವರು 2017ರ ವೇಳೆಗೆ ನಾವು ಒಂದು ಮಿಲಿಯನ್ ಕುಟುಂಬಗಳನ್ನು ರಕ್ಷಿಸುವ ಇರಾದೆ ಹೊಂದಿದ್ದಾರೆ.

ಲೇಖಕರು: ಅಪರ್ಣಾ ಘೋಷ್

ಅನುವಾದಕರು: ಚೈತ್ರ​


Add to
Shares
1
Comments
Share This
Add to
Shares
1
Comments
Share
Report an issue
Authors

Related Tags