ಆವೃತ್ತಿಗಳು
Kannada

ಅಚ್ಚರಿ ಆದರೂ ಇದು ಸತ್ಯ- ಹಳ್ಳಿಗಳಿಗಿಂತ ನಗರ ಪ್ರದೇಶದಲ್ಲೇ ಬಾಲ್ಯ ವಿವಾಹದ ಸಂಖ್ಯೆ ಹೆಚ್ಚು..!

ಟೀಮ್​ ವೈ.ಎಸ್​. ಕನ್ನಡ

15th Jun 2017
Add to
Shares
2
Comments
Share This
Add to
Shares
2
Comments
Share

ಬಾಲ್ಯ ವಿವಾಹದ ಮಾತು ಬಂದಾಗ ಅದು ಹಳೆಯ ಕಾಲದ ಮಾತು ಅನ್ನುವವರೇ ಹೆಚ್ಚು. ಆದ್ರೆ ಈ ಆಧುನಿಕ ಕಾಲದಲ್ಲೂ ಅಲ್ಲಲ್ಲಿ ಬಾಲ್ಯ ವಿವಾಹದ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿವೆ. ಅಷ್ಟೇ ಅಲ್ಲ ಕೆಲವು ಉದಾಹರಣೆಗಳು ಕೂಡ ಸಿಗುತ್ತವೆ. ಸಾಮಾನ್ಯವಾಗಿ ಬಾಲ್ಯ ವಿವಾಹ ಹಳ್ಳಿಗಳಲ್ಲಿ ಹೆಚ್ಚಾಗಿದೆ ಅಂತ ವಾದ ಮಾಡುವವರೇ ಹೆಚ್ಚು. ಆದ್ರೆ ಸರ್ವೇಯೊಂದರ ಪ್ರಕಾರ ಹಳ್ಳಿಗಳಿಗಿಂತ ನಗರ ಪ್ರದೇಶಗಳಲ್ಲಿ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿವೆ. ಇದು ಅಚ್ಚರಿ ಅನಿಸಿದ್ರೂ ಸತ್ಯ. ಅಷ್ಟೇ ಅಲ್ಲ ಬಾಲ್ಯ ವಿವಾಹದ ವಿರುದ್ಧ ಕಟ್ಟುನಿಟ್ಟಿನ ಕಾಯ್ದೆಗಳಿದ್ದರೂ ಹಳ್ಳಿಗಳಿಗಿಂತ, ನಗರ ಪ್ರದೇಶಗಳಲ್ಲೇ ಬಾಲ್ಯವಿವಾಹದ ಸಂಖ್ಯೆಗಳು ಹೆಚ್ಚಾಗುತ್ತಿದೆ.

image


ಭಾರತದಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುವುದು 13 ರಾಜ್ಯಗಳ 70 ಜಿಲ್ಲೆಗಳಲ್ಲಿ. ಈ 70 ಜಿಲ್ಲೆಗಳಲ್ಲಿ ಸರಿಸುಮಾರು ಶೇಕಡಾ 21ರಷ್ಟು ಬಾಲ್ಯವಿಹಾಹದ ಪ್ರಕರಣಗಳು ದಾಖಲಾಗಿವೆ. 2011ರಲ್ಲಿ ಶೇಕಡಾ 25ಕ್ಕಿಂತ ಹೆಚ್ಚು ಬಾಲ್ಯ ವಿವಾಹಗಳು ನಗರ ಪ್ರದೇಶದಲ್ಲಿ ನಡೆದಿವೆ. 10 ರಿಂದ 17 ವರ್ಷದ ಒಳಗಿನ ಹೆಣ್ಣುಮಕ್ಕಳನ್ನು ಮದುವೆ ಆಗುವವರ ಸಂಖ್ಯೆ ನಗರ ಪ್ರದೇಶದಲ್ಲಿ ಹೆಚ್ಚಿದೆ.

ರಾಜಸ್ಥಾನದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿವೆ. ಬಾಲಕ ಅಥವಾ ಬಾಲಕಿಗೆ ಮದುವೆ ವಯಸ್ಸಿಗೆ ಮುನ್ನವೇ ಸಂಸಾರದ ಪಟ್ಟವನ್ನು ಕಟ್ಟಿ ಬಿಡುತ್ತಾರೆ. "ಯಂಗ್ ಲೈವ್ಸ್" ಮತ್ತು "ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್" ಸಂಸ್ಥೆ ಈ ಸರ್ವೆಯನ್ನು ನಡೆಸಿತ್ತು. ಈ ಸರ್ವೆ ಪ್ರಕಾರ ಮಹಾರಾಷ್ಟ್ರದ 20 ಜಿಲ್ಲೆಗಳಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ನಡೆಯುತ್ತಿದೆ. ಅಚ್ಚರಿ ಅಂದ್ರೆ ಮಹಾರಾಷ್ಟ್ರ ದೇಶದಲ್ಲೇ ಅತೀ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯಗಳ ಪೈಕಿ 3ನೇ ಸ್ಥಾನದಲ್ಲಿದೆ. ಬಾಲ್ಯ ವಿವಾಹ ತಡೆ ಕಾಯ್ದೆ ಮಹಾರಾಷ್ಟ್ರದಲ್ಲಿ ಸರಿಯಾಗಿ ಅನುಷ್ಠಾನಗೊಳ್ಳದೇ ಇರುವುದು ಇದಕ್ಕೆ ಬಹುಮುಖ್ಯ ಕಾರಣವಾಗಿದೆ.

ಇದನ್ನು ಓದಿ: ವೃತ್ತಿಯಲ್ಲಿ ಆಟೋ ಚಾಲಕ- ಆದ್ರೆ 5000 ಸಸಿಗಳನ್ನು ನೆಟ್ಟ ಅಪ್ಪಟ ಪರಿಸರ ಪ್ರೇಮಿ

ಬಾಲ್ಯ ವಿವಾಹ ಕಾಯ್ದೆ 2007ರಲ್ಲೇ ಕಟ್ಟುನಿಟ್ಟಾಗಿ ಜಾರಿಗೆ ಬಂದಿದೆ. ಆದ್ರೆ ಗ್ರಾಮೀಣ ಭಾಗದಲ್ಲಿ ಚೈಲ್ಡ್ ಮ್ಯಾರೇಜ್ ಪ್ರಿವೆನ್ಷನ್ ಆಫೀಸರ್ ಗಳನ್ನು ನೇಮಕ ಮಾಡಲು 6 ವರ್ಷಗಳು ಬೇಕಾಗಿತ್ತು. ಹೀಗಾಗಿ ಕಾಯ್ದೆಯನ್ನು ಕಠಿಣವಾಗಿ ಜಾರಿಗೆ ತರಲು ಕಷ್ಟವಾಗಿದೆ. 2011ರ ಜನಗಣತಿಯ ಪ್ರಕಾರ ಕಳೆದ 16 ವರ್ಷಗಳಲ್ಲಿ ಮ ಮಹಾರಾಷ್ಟ್ರದಲ್ಲಿ ಬಾಲ್ಯ ವಿವಾಹದ ಸಂಖ್ಯೆ ಸಾಕಷ್ಟು ಕಡಿಮೆ ಆಗಿದೆ.

ಈ ನಡುವೆ ಬಾಲ್ಯ ವಿವಾಹವಾಗುವ ಗಂಡು ಮಕ್ಕಳ ಸಂಖ್ಯೆ ಸಾಕಷ್ಟು ಕಡಿಮೆ ಆಗಿದೆ. ಆದ್ರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಮದುವೆ ಮಾಡುವ ಸಂಖ್ಯೆಯಲ್ಲಿ ಕಡಿಮೆಯಾಗಿದ್ದರೂ ಅದ್ರ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ರಾಜಸ್ಥಾನದ ಬಂದಾರಾ ಜಿಲ್ಲೆಯಲ್ಲಿ ಅತೀ ಹೆಚ್ಚು ಬಾಲ್ಯ ವಿವಾಹವಾಗುತ್ತಿದ್ದರು, 2011ರಿಂದ ಈಚೆಗೆ ಇದರ ಪ್ರಮಾಣ ಶೇಕಡಾ 5ರಷ್ಟು ಹೆಚ್ಚಾಗಿದೆ. ಒಟ್ಟಿನಲ್ಲಿ ಬಾಲ್ಯವಿವಾಹವನ್ನು ತಡೆಯಲು ಸರಕಾರ ಸರ್ಕಸ್​ಗಳನ್ನು ಮಾಡುತ್ತಿದ್ದರೂ, ಜನರ ನಿರ್ಲಕ್ಷ್ಯತನ ಸರಕಾರಕ್ಕೆ ತಲೆನೋವು ತಂದಿದೆ. 

ಇದನ್ನು ಓದಿ:

1. ಎಚ್ಚರ..! ಇನ್ನು 10 ವರ್ಷಗಳಲ್ಲಿ ಬಾಳೆಹಣ್ಣು ಸಿಗೋದೇ ಇಲ್ವಂತೆ..!

2. ಆರೋಗ್ಯಕ್ಕೆ ಹಾನಿಕಾರಕ- ಪರಿಸರಕ್ಕೆ ಮಾರಕ-ಪ್ಲಾಸ್ಟಿಕ್​ಗೆ ಗುಡ್​ ಬೈ ಹೇಳಲು ಸ್ಯಾನ್​ಫ್ರಾನ್ಸಿಸ್ಕೋ ನಿರ್ಧಾರ

3. 10ನೇ ಕ್ಲಾಸ್ ವಿದ್ಯಾರ್ಥಿಯ ಉತ್ಕೃಷ್ಟ ಯೋಜನೆ- ಸ್ವಚ್ಛಭಾರತ ಅಭಿಯಾನಕ್ಕೆ ವಿಭಿನ್ನ ಕೊಡುಗೆ

Add to
Shares
2
Comments
Share This
Add to
Shares
2
Comments
Share
Report an issue
Authors

Related Tags