ಆವೃತ್ತಿಗಳು
Kannada

ನಿಶ್ಯಬ್ಧವಾಗಿ ಕೆಲಸ ಮಾಡಿ, ನಿಮ್ಮ ಕೆಲಸವೇ ಸದ್ದು ಮಾಡಲಿ

ಟೀಮ್​​ ವೈ.ಎಸ್​​.ಕನ್ನಡ

25th Nov 2015
Add to
Shares
36
Comments
Share This
Add to
Shares
36
Comments
Share

ಇದು ನೇಹಾ ಭುವಾನಿಯಾ ಅವರು ಪಾಲಿಸುವ ಮಂತ್ರ. ಎರಡು ಖಂಡಗಳಲ್ಲಿ ಕೆಲಸ ಮಾಡ್ತಿರೋ ನೇಹಾ ಅವರಿಗೆ ತಾಂತ್ರಿಕತೆಯೇ ದೊಡ್ಡ ಶಕ್ತಿ. ಅವರ ಉದ್ಯಮದ ಹೆಸರು ಎಫ್ಎಕ್ಸ್​​ ಮಂತ್ರ.

ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯೆಂದರೆ ಓದಿದ್ದನ್ನು ನೆನಪಿಟ್ಟುಕೊಂಡು ಪರೀಕ್ಷೆ ಬರೆಯುವುದಾಗಿದೆ. ಬೇರೆ ದೇಶಗಳಲ್ಲಿ, ಶಿಕ್ಷಣ ಪಡೆಯುವುದೆಂದರೆ, ಅದು ಉದ್ಯೋಗ ಕೇಂದ್ರಿತವಾಗಿರುತ್ತದೆ. ಭಾರತದಲ್ಲಿ ಈ ಬದಲಾವಣೆ ತರಲು ನಾನು ಬಯಸುತ್ತೇನೆ. ಜಗತ್ತಿನ ಯಾವುದೇ ಭಾಗದಲ್ಲಿರುವ ವಿದ್ಯಾರ್ಥಿಗಳು ಪರಸ್ಪರ ಸಂಪರ್ಕಿಸಿ ಒಟ್ಟಿಗೆ ಅಭ್ಯಾಸ ಮಾಡಲು ಸಾಧ್ಯವಾಗುವಂತಹ ವೇದಿಕೆ ಸೃಷ್ಟಿಸಬೇಕು. ಜನರು ಹೊಸ ಯೋಚನೆಗಳನ್ನು, ಹೊಸ ಸಂಶೋಧನೆಗಳನ್ನು ಮಾಡಬೇಕೆಂದು ನಾನು ಬಯಸುತ್ತೇನೆ.

image


ಈ ಉದ್ದೇಶದೊಂದಿಗೆ, ಅವರು 2013ರಲ್ಲಿ ಎಫ್ಎಕ್ಸ್​​ ಮಂತ್ರ ಸ್ಥಾಪಿಸಿದರು.“ಎಫ್ಎಕ್ಸ್​​ ಮಂತ್ರ ಸಿಪಿಎ/ಸಿಎ/ಎಸಿಸಿಎ ವಿದ್ಯಾರ್ಥಿಗಳಿಗೆ ಕೋಚಿಂಗ್ ತರಗತಿ ಆಯೋಜಿಸುತ್ತಿದೆ. ಜೊತೆಗೆ ಐಎಫ್ಆರ್​​​ಎಸ್ ತರಬೇತಿಯನ್ನೂ ಕೊಡುತ್ತದೆ. ಮುಂದಿನ ವರ್ಷದಿಂದ ಭಾರತದಲ್ಲಿ ಈ ಪರೀಕ್ಷೆ ಕಡ್ಡಾಯವಾಗಿ ಜಾರಿಯಾಗಲಿದೆ. ಏಷ್ಯಾ-ಪೆಸಿಫಿಕ್ ಮಾರುಕಟ್ಟೆಯಲ್ಲಿ ಇದು ಅಗತ್ಯವಾಗಿದೆ.”

ಖುದ್ದು ಚಾರ್ಟರ್ಡ್ ಅಕೌಂಟಂಟ್ ಆಗಿರುವ ನೆಹಾ ಅವರು, ಆರ್ಥಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಯಶಸ್ಸಿನ ಹಾದಿ ತುಳಿಯಬೇಕು ಎನ್ನುವುದನ್ನೇ ತಮ್ಮ ವ್ಯವಹಾರ ಮಂತ್ರವನ್ನಾಗಿಸಿಕೊಂಡಿದ್ದಾರೆ. ಎಫ್ಎಕ್ಸ್ ಮಂತ್ರದಲ್ಲಿ ಎಫ್ಎಕ್ಸ್ ಎಂದರೆ ಫೈನಾನ್ಷಿಯಲ್ ಎಕ್ಸ್ ಫ್ಯಾಕ್ಟರ್ ಎಂದು ನಗುತ್ತಾರೆ ನೇಹಾ.

ಅಕೌಂಟೆನ್ಸಿ

ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ಹುಟ್ಟಿ ಬೆಳೆದ ನೇಹಾ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. ಚಾರ್ಟರ್ಡ್ ಅಕೌಂಟನ್ಸಿಯನ್ನು ಪೂರೈಸಿದ ಬಳಿಕ, ಉದ್ಯೋಗ ಮಾಡಲಾರಂಭಿಸಿದರು. 2007ರಿಂದ 2008ರವರೆಗೆ ಸಹಾಯಕ ಅನಾಲಿಸ್ಟ್ ಆಗಿ ಡಿಲೋಯ್ಟ್​​​ ಜೊತೆ ಕೆಲಸ ಮಾಡಿದ್ದರು. 2008ರಿಂದ 2011ರವರೆಗೆ ಆರ್ಟಿಕಲ್ ಟ್ರೈನಿಯಾಗಿ ಹಾಗೂ 2012ರಿಂದ 2013ರವೆಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು.

2013ರಲ್ಲಿ ಕೆಲಸಕ್ಕೆ ಗುಡ್​​ ಬೈ ಹೇಳಿದ ಅವರು ಬರವಣಿಗೆ ಕೆಲಸ ಆರಂಭಿಸಿದರು. ಗೈಡ್ ಟು ಪ್ರೈವೇಟ್ ಈಕ್ವಿಟಿ ಎಂಬ ಪುಸ್ತಕವನ್ನು ಟ್ಯಾಕ್ಸ್​​ಮನ್ ಅವರು ಪ್ರಕಟಿಸಿದರು. ಭಾರತೀಯ ಮಾರುಕಟ್ಟೆಗೆ ಅನ್ವಯಿಸುವಂತೆ ಪ್ರೈವೇಟ್ ಈಕ್ವಿಟಿ ಬಗ್ಗೆ ಅವರು ವಿವರವಾಗಿ ಬರೆದಿದ್ದರು.

ಪುಸ್ತಕ ಬರೆಯುತ್ತಿರುವಾಗಲೇ ಅವರಿಗೆ ಶಿಕ್ಷಣ ತರಬೇತಿ ನೀಡುವ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತು. ಹೀಗಾಗಿ, ಸಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಐಸಿಎಐ ಕೋಚಿಂಗ್ ಆರಂಭಿಸಿದರು.

ಎಫ್ಎಕ್ಸ್​​ಮಂತ್ರ

ಟ್ಯಾಕ್ಸ್ ಮಂತ್ರದ ಕಾನ್ಸೆಪ್ಟ್ ರಚಿಸಿದ ಇವರು ಭಾರತದಲ್ಲಿ ಅದನ್ನು ಆರಂಭಿಸಿದರು. ಶಿಕ್ಷಣದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಅಳವಡಿಸುವ ಉದ್ದೇಶ ಅವರದ್ದಾಗಿತ್ತು. ಜಾಗತಿಕ ಮಟ್ಟದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಅವರು ತಮ್ಮ ಸಂಸ್ಥೆಯನ್ನು 2014ರಲ್ಲಿ ಆಸ್ಟ್ರೇಲಿಯಾಕ್ಕೆ ಕಚೇರಿ ಸ್ಥಳಾಂತರಿಸಿದರು.

ಶೇಕಡಾ 70ರಷ್ಟು ತರಗತಿಗಳನ್ನು ಆನ್​ಲೈನ್ ಮೂಲಕ ನಡೆಸುವ ಅವರು ಶೇಕಡಾ 30ರಷ್ಟು ತರಗತಿಗಳನ್ನು ಮುಖಾಮುಖಿಯಾಗಿ ನಡೆಸುತ್ತಿದ್ದರು. ಸೆಮಿನಾರ್​​​ಗಳ ಮೂಲಕ ಬಹುತೇಕ ತರಗತಿಗಳನ್ನು ನಡೆಸುತ್ತಿದ್ದರು. ತಮ್ಮ ಉದ್ಯಮದ ಬೆಳವಣಿಗೆಯಿಂದ ನೇಹಾ ತುಂಬಾ ಖುಷಿಯಾಗಿದ್ದಾರೆ. ಕೇವಲ ಮೂರು ವಿದ್ಯಾರ್ಥಿಗಳ ಬ್ಯಾಚ್​​ನಿಂದ ಆರಂಭಿಸಿದ ಸಂಸ್ಥೆ ಈಗ ಆಸ್ಟೇಲಿಯಾದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ.

ಅವರ ತಂಡದಲ್ಲೀಗ 7 ಮಂದಿ ಕಂಟೆಂಟ್ ರೈಟರ್​​ಗಳಿದ್ದಾರೆ. ಒಬ್ಬರು ವ್ಯವಸ್ಥಾಪಕರು ಹಾಗೂ ಮೂರು ಮಂದಿ ಐಟಿ ತಂತ್ರಜ್ಱರಿದ್ದಾರೆ. ಇವೆಲ್ಲವನ್ನೂ ನೇಹಾ ಅವರ ಪತಿ ಕಿಶೋರ್ ಅವರು ನಿಭಾಯಿಸುತ್ತಿದ್ದಾರೆ.

ಮಹಿಳಾ ಉದ್ಯಮಿ

ಚಾರ್ಟರ್ಡ್ ಅಕೌಂಟನ್ಸಿ ಎನ್ನುವುದು ಬಹುತೇಕ ಪುರುಷ ಪ್ರಧಾನ ಉದ್ಯೋಗವಾಗಿದೆ. ನೇಹಾ ಇದನ್ನು ಆರಂಭಿಸಿದ ಮೇಲೆ ಸಾಕಷ್ಟು ಸವಾಲುಗಳನ್ನೂ ಎದುರಿಸಿದ್ದಾರೆ. ವೃತ್ತಿಪರವಾಗಿ ಬೆಳೆಯುತ್ತಿರುವ ಮಹಿಳೆಯರ ಮೇಲಿನ ಸಾಮಾನ್ಯ ತಾತ್ಸಾರ ಇವರ ಮೇಲೂ ಇತ್ತು. ಆದರೆ, ನೇಹಾ ಯಾವುದನ್ನೂ ಲೆಕ್ಕಿಸದೆ ಮುನ್ನಡೆದರು.

image


ಅದು ವಾಹನ ಚಲಾಯಿಸುವುದೇ ಆಗಿರಲಿ, ಉದ್ಯಮ ನಡೆಸುವುದೇ ಆಗಿರಲಿ, ಇಂತಹ ವಿಚಾರಗಳಲ್ಲಿ ಮಹಿಳೆಯರು ಮುಂದೆ ಬರುತ್ತಾರೆ ಎಂದಾಗ ಅವರನ್ನು ನೋಡುವ ರೀತಿಯೇ ಬದಲಾಗಿರುತ್ತದೆ. ಮಹಿಳೆಯರು ಮಕ್ಕಳು ಮತ್ತು ಮನೆಯಾಚೆಗೆ ಬೇರೆ ಏನನ್ನೂ ಯೋಚಿಸಬಾರದು ಎನ್ನುವ ನಂಬಿಕೆಯೇ ಸ್ಥಿರವಾಗಿದೆ. ಅವರ ನಂಬಿಕೆಯನ್ನು ಸುಳ್ಳು ಮಾಡುವುದೇ ನನ್ನ ಗುರಿ ಎನ್ನುತ್ತಾರೆ ನೇಹಾ.

ಮಹಿಳಾ ಉದ್ಯಮಿಗಳನ್ನು ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನುವುದೇ ತಾವು ಎದುರಿಸಿದ ದೊಡ್ಡ ಸವಾಲಾಗಿತ್ತು ಎನ್ನುತ್ತಾರೆ ನೇಹಾ. ಅದಕ್ಕಿಂತ ದೊಡ್ಡ ಸವಾಲು ಅವರಿಗೆ ಎದುರಾಗಿದ್ದು ಈ ಕ್ಷೇತ್ರದಲ್ಲಿರುವ ಭಾರೀ ಪೈಪೋಟಿ.

ಉದ್ಯಮದ ಇತರ ಸ್ಪರ್ಧಿಗಳು ಇವರನ್ನು ಕೇವಲ ಮಹಿಳೆ ಎಂಬಂತೆ ಭಾವಿಸಿದ್ದರು. ಆದರೆ, ತಮ್ಮ ಗ್ರಾಹಕರಿಗೆ ಅವರ ಬಯಕೆಯಂತೆ ಸೇವೆ ನೀಡುವ ಮೂಲಕ, ನೇಹಾ ಅವರು ಈ ಸವಾಲನ್ನು ಲೀಲಾಜಾಲವಾಗಿ ಎದುರಿಸಿದರು. ನಾವು ಶುಲ್ಕ ಪಾವತಿಗೆ ಸ್ವಲ್ಪ ಫ್ಲೆಕ್ಸಿಬಿಲಿಟಿ ಕೊಟ್ಟಿದ್ದೆವು, ಅಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಆಪ್ತ ಸಲಹೆಯನ್ನು ನೀಡುವ ಮೂಲಕ ಇತರರಿಗಿಂತ ಭಿನ್ನವಾಗಿ ಉದ್ಯಮ ನಡೆಸಿದರು.

ಸ್ಫೂರ್ತಿಯನ್ನು ಮುಂದುವರಿಸುವುದು

ನನ್ನ ಪತಿಯವರು ನನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ನನ್ನ ಸಾಮರ್ಥ್ಯವನ್ನು ಬಳಸಿಕೊಂಡು ನನ್ನನ್ನು ನಾನು ಪ್ರೂವ್ ಮಾಡಲು ಸಾಕಷ್ಟು ಬೆಂಬಲ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಎಫ್ಎಕ್ಸ್​​ ಮಂತ್ರವನ್ನು ಜಾಗತಿಕ ತರಬೇತಿ ಮತ್ತು ಕೋಚಿಂಗ್ ಸಂಸ್ಥೆಯನ್ನಾಗಿ ರೂಪಿಸಲು ನೇಹಾ ಯೋಜನೆ ರೂಪಿಸಿದ್ದಾರೆ. ಕುಟುಂಬದ ಸಂಪೂರ್ಣ ಬೆಂಬಲ ಮತ್ತು ವಿದ್ಯಾರ್ಥಿಗಳ ನಗುಮುಖವೇ ಅವರಿಗೆ ಉದ್ಯಮ ಮುಂದುವರಿಸಲು ಉತ್ತೇಜನ ನೀಡುತ್ತಿದೆ.

ಲೇಖಕರು: ತಾನ್ವಿ ದುಬೇ

ಅನುವಾದಕರು: ಪ್ರೀತಮ್​​​​

Add to
Shares
36
Comments
Share This
Add to
Shares
36
Comments
Share
Report an issue
Authors

Related Tags