ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಡೋಂಟ್ ಕೇರ್, ತಂಬಾಕು ಸೇವನೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ..!

ಟೀಮ್​ ವೈ.ಎಸ್​. ಕನ್ನಡ

ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಡೋಂಟ್ ಕೇರ್, ತಂಬಾಕು ಸೇವನೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ..!

Thursday July 13, 2017,

2 min Read

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಬೀಡಿ, ಸಿಗರೇಟ್.ಗುಟ್ಕಾ ಸಹಿತ ಇತರೆ ತಂಬಾಕು ಪದಾರ್ಥಗಳ ಸೇವನೆ ಮಾತ್ರ ಕಡಿಮೆಯಾಗಿಲ್ಲ. ತಂಬಾಕು ಆರೋಗ್ಯಕ್ಕೆ ಮಾಡುವ ಹಾನಿಯ ಬಗ್ಗೆ ಜನರಿಗೆ ಅರಿವಿದ್ದರೂ, ಅದರ ಸೇವನೆಯಿಂದ ಮಾತ್ರ ಜನ ದೂರವಾಗಿಲ್ಲ. ತಂಬಾಕು ಪದಾರ್ಥಗಳ ಸೇವನೆಯಿಂದ ಜನರು ಅನೇಕ ರೋಗಕ್ಕೀಡಾಗಿ ಸಾವನ್ನಪ್ಪುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶ್ವದಲ್ಲಿ ಪ್ರತೀವರ್ಷ ಸುಮಾರು 6ಮಿಲಿಯನ್ ಜನ ಇದರಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅವಲೋಕಿಸಲಾಗಿದೆ. ಇದರ ಪ್ರಮಾಣ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಬಗ್ಗೆ ಆತಂಕವಿದೆ. 2030ರ ಹೊತ್ತಿಗೆ ಜಗತ್ತಿನಲ್ಲಿ ಸುಮಾರು 8 ಮಿಲಿಯನ್ ಜನರು ತಂಬಾಕು ಪದಾರ್ಥಗಳ ಸೇವನೆಯ ಕಾರಣದಿಂದ ಸಾವನ್ನಪ್ಪುವ ಶಂಕೆ ಇದೆ.

image


ತಂಬಾಕು ಸೇವನೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತದೆ. ಟಿ.ಬಿ, ಹೃದಯ ಸಂಬಂಧಿತ ಖಾಯಿಲೆಗಳು, ಆತ್ಮಹತ್ಯೆ, ನಿಧಾನವಾಗಿ ಗಾಯ ನಿವಾರಣೆಯಾಗುವುದು,ಮುಂತಾದ ಖಾಯಿಲೆಗಳು ತಂಬಾಕು ಸೇವನೆಯಿಂದ ಉಂಟಾಗುತ್ತದೆ. ಅಲ್ಸರ್​ನಂತಹ ಸಮಸ್ಯೆಗೂ ತಂಬಾಕು ಸೇವನೆ ಅತೀ ಹೆಚ್ಚಾಗಿ ಕಾರಣವಾಗುತ್ತಿದೆ. ಕ್ಯಾನ್ಸರ್​ನಂತಹ ಭಯಾನಕ ಖಾಯಿಲೆ ಕೂಡ ತಂಬಾಕು ಸೇವನೆಯಿಂದ ಬರುತ್ತದೆ.

ಒಂದು ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ, ಸರಿಸುಮಾರು 3 ಜನರ ಪೈಕಿ ಒಬ್ಬ ಯುವಕ ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾನೆ ಎಂಬುದು ಸಾಭೀತಾಗಿದೆ. ಈ ಪೈಕಿ ಕಡುಬಡವರು ಹೆಚ್ಚಾಗಿ ತಂಬಾಕು ಸೇವನೆ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 2011 ರಲ್ಲಿ ಕೇವಲ ಬೀಡಿ ಸೇವನೆಯ ದುಷ್ಪರಿಣಾಮದಿಂದ ಭಾರತದಲ್ಲಿ 5.8 ಲಕ್ಷ ಜನರು ಸಾವನ್ನಪ್ಪಿದ್ದರು. ಇನ್ನು ಉಳಿದ ಪದಾರ್ಥಗಳಿಂದ ಆರೋಗ್ಯಕ್ಕೆ ಆದ ಹಾನಿ ಬಗ್ಗೆ ನೀವೇ ಯೋಚಿಸಿ. ತಂಬಾಕು ಸೇವನೆಯು ಯುವಜನರಲ್ಲಿ ಬಹಳ ಕೆಟ್ಟ ಪರಿಣಾಮ ಬೀರುತ್ತಿದೆ.

ಇದನ್ನು ಓದಿ: ಎಟಿಎಂ ಬಳಕೆದಾರರೇ ಎಚ್ಚರ..!ಬೆಂಗಳೂರಿನಲ್ಲಿ ವಂಚಕರ ಜಾಲವಿದೆ..!

ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಬಗ್ಗೆ ಜನರಿಗೆ ಅರಿವಿದೆ. ಆದ್ರೆ ಅದರಿಂದ ದೂರವಾಗುವ ಯೋಚನೆ ಮಾತ್ರ ಯಾರೂ ಮಾಡುತ್ತಿಲ್ಲ. ಅಂಕಿಅಂಶದ ಪ್ರಕಾರ ಪ್ರತೀ ಆರು ಸೆಕೆಂಡ್ ಗೆ ಒಬ್ಬರಂತೆ ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ,

ಅಂದಹಾಗೇ, ತಂಬಾಕು ಕೇವಲ ವೈಕ್ತಿಕವಾಗಿ ಹಾನಿ ಮಾಡುವುದು ಮಾತ್ರವಲ್ಲ, ಬದಲಾಗಿ ದೇಶದ ಅರ್ಥವ್ಯವಸ್ಥೆಗೆ ಸವಾಲಾಗಿ ನಿಂತಿದೆ. ಹೆಲ್ತ್ ಕೇರ್ ಖರ್ಚುಗಳನ್ನು ಹೆಚ್ಚು ಮಾಡುವ ಜೊತೆಗೆ ಜನರ ಸಾಮರ್ಥ್ಯವನ್ನು ಕಡಿಮೆ ಮಾಡುತ್ತಿದೆ. ಇದು ಭಾರತದ ಬಡತನಕ್ಕೂ ಕಾರಣವಾಗಿದೆ ಅನ್ನುವುದು ಮತ್ತೊಂದು ಶಾಕಿಂಗ್ ನ್ಯೂಸ್.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಭಾರತದಲ್ಲಿ ಸರಿಸುಮಾರು ಶೇಕಡಾ 30ರಷ್ಟು ಮಹಿಳೆಯರ ಮತ್ತು ಪುರುಷರಲ್ಲಿನ ಕ್ಯಾನ್ಸರ್ ಗೆ ತಂಬಾಕು ಸೇವನೆಯೇ ಕಾರಣವಾಗಿದೆ. ಈ ಪೈಕಿ ಬಾಯಿ ಕ್ಯಾನ್ಸರ್ ಮತ್ತು ಶ್ವಾಸನಾಳದ ಕ್ಯಾನ್ಸರ್ ಸಾಮಾನ್ಯವಾಗಿದೆ. ತಂಬಾಕು ಸೇವನೆಯಿಂದ ಉಂಟಾದ ಕ್ಯಾನ್ಸರ್​ನಿಂದ ಶೇಕಡಾ 42ರಷ್ಟು ಪುರುಷರು ಸಾವನ್ನಪ್ಪಿದರೆ, ಶೇಕಡಾ 18.3ರಷ್ಟು ಮಹಿಳೆಯರು ಯಮನ ಪಾದ ಸೇರುತ್ತಿದ್ದಾರೆ.

ಸಾಮಾನ್ಯವಾಗಿ ತಂಬಾಕಿನಲ್ಲಿ ಸುಮಾರು 4800 ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಈ ಪೈಕಿ 69 ಅಂಶಗಳು ಕ್ಯಾನ್ಸರ್ ಗೆ ಕಾರಣವಾಗಿದೆ. ತಂಬಾಕು ಸೇವನೆಯಿಂದ ಕಾರ್ಬನ್ ಮೊನಾಕ್ಸೈಡ್ ದೇಹದೊಳಗೆ ಸೇರಿಕೊಂಡಯ ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಸಾರ್ವಜನಿಕ ಸ್ಥಳ ಹಾಗೂ, ಅಪ್ರಾಪ್ತರಿಗೆ ತಂಬಾಕು ಮಾರಾಟ ಮಾಡುವಂತಿಲ್ಲ ಅನ್ನುವ ಕಾನೂನು ಇದ್ದರೂ ಭಾರತದಲ್ಲಿ ಅದರ ಪಾಲನೆಯಾಗುತ್ತಿಲ್ಲ. ಅಷ್ಟೇ ಅಲ್ಲ ಭಾರತದಲ್ಲಿ ತಂಬಾಕು ಉತ್ಪನ್ನಗಳ ವಿರುದ್ಧ ಜನರಿಗೆ ತಿಳಿ ಹೇಳುವ ಕಾರ್ಯ ತುಂಬಾ ಕಡಿಮೆ ತೀಕ್ಷ್ಣತೆಯಲ್ಲಿ ನಡೆಯುತ್ತಿದೆ. 198 ರಾಷ್ಟ್ರಗಳ ಪೈಕಿ ಭಾರತ ಅತೀ ಹೆಚ್ಚು ತಂಬಾಕು ಸೇವನೆ ರಾಷ್ಟ್ರಗಳ ಪೈಕಿ 136ನೇ ಸ್ಥಾನ ಪಡೆದುಕೊಂಡಿದೆ. ಇನ್ನಾದರೂ ಜನ ಎಚ್ಚೆತ್ತುಕೊಳ್ಳದೇ ಇದ್ದರೆ, ಭವಿಷ್ಯದಲ್ಲಿ ಸಾಕಷ್ಟು ಅಪಾಯ ಎದುರಾಗುವುದು ಖಚಿತ.

ಇದನ್ನು ಓದಿ:

1. ಕಸ ವಿಲೇವಾರಿಗೆ ಹೊಸ ಟಚ್- ವಿಜಯವಾಡದಲ್ಲಿ ಎಲೆಕ್ಟ್ರಿಕ್ ರಿಕ್ಷಾಗಳದ್ದೇ ದರ್ಬಾರ್..!

2.ಮಹಿಳೆಯರ ನೆರವಿಗೆ ನಿಂತು ಉದ್ಯಮದಲ್ಲಿ ಯಶಸ್ಸು ಸಾಧಿಸಿ ಸುಮನ್ ಕಥೆ ಕೇಳಿ..!

3. ಭಾರತೀಯ ಸ್ಟಾರ್ಟ್​ಅಪ್ ಲೋಕದ ವೇದವಾಕ್ಯಗಳು..!

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ