ಆವೃತ್ತಿಗಳು
Kannada

Posಗಳಿಗೆ ದಿಢೀರ್​ ಬೇಡಿಕೆ- ಬ್ಯಾಂಕ್​ಗಳಿಗೆ ಹೆಚ್ಚಿದ ತಲೆನೋವು

ಟೀಮ್​ ವೈ.ಎಸ್​. ಕನ್ನಡ

6th Dec 2016
Add to
Shares
12
Comments
Share This
Add to
Shares
12
Comments
Share

ಭಾರತದಲ್ಲಿ ಡಿಜಿಟಲ್ ಟ್ರಾನ್ಸ್ಆ್ಯಕ್ಷನ್​ಗೆ ಬೇಡಿಕೆ ಹೆಚ್ಚಾಗುತ್ತಿದೆ. 500 ಮತ್ತು 1000 ರೂಪಾಯಿಗಳ ನೋಟ್ ಬ್ಯಾನ್ ಬಳಿಕ ಪ್ಲಾಸ್ಟಿಕ್ ಮನಿ ಬಗ್ಗೆ ಎಲ್ಲರೂ ಯೋಚನೆ ಮಾಡುತ್ತಿದ್ದಾರೆ. ಡಿಜಿಟಲ್ ಟ್ರಾನ್ಸ್ ಆ್ಯಕ್ಷನ್ ಅನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಇದಕ್ಕಾಗಿ ಬ್ಯಾಂಕ್​ಗಳಿಂದ 10 ಲಕ್ಷ ಹೆಚ್ಚುವರಿ ಪಾಯಿಂಟ್ ಆಫ್ ಸೇಲ್ (POS)ಮೆಷಿನ್​ಗಳನ್ನು ಒದಗಿಸುವಂತೆ ಹೇಳಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ತಿಂಗಳ ಅವಧಿಯನ್ನು ಕೂಡ ನೀಡಿದೆ.

image


ಬ್ಯಾಂಕ್​ಗಳು ಈಗಾಗಲೇ 6 ಲಕ್ಷ Pos ಮೆಷಿನ್​ಗಳನ್ನು ಆರ್ಡರ್ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಂಖ್ಯೆ 10 ಲಕ್ಷಕ್ಕೆ ಏರಲಿದೆ ಅಂತ ಹಣಕಾಸು ಸಚಿವಾಲಯ ತಿಳಿಸಿದೆ. ದೇಶದಲ್ಲಿ ಈಗಾಗಲೇ ಹಲವು ಕಡೆ ಸುಮಾರು 15 ಲಕ್ಷ Pos ಮೆಷಿನ್​ಗಳು ಚಾಲ್ತಿಯಲ್ಲಿವೆ.

“ ಡಿಜಿಟಲ್ ಪೇಮೆಂಟ್​ನ ಸಿಸ್ಟಂಗಳನ್ನು ಹೆಚ್ಚಿಸಲು ಸರ್ಕಾರ ಪ್ರಯತ್ನ ಪಡುತ್ತಿದೆ. ಇದಕ್ಕಾ ಸರಕಾರ Posಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಮುಂದಿನ ಮಾರ್ಚ್ 31ರ ಒಳಗಾಗಿ 10 ಲಕ್ಷಕ್ಕೂ ಅಧಿಕ ಹೊಸ Posಗಳನ್ನು ಒದಗಿಸಿಕೊಡಬೇಕಿದೆ.”

Posಗೆ ಇಲ್ಲಿ ತನಕ ಸುಮಾರು 16.5 ರಷ್ಟು ತೆರಿಗೆ ವಿಧಿಸಲಾಗಿತ್ತು. ಆದ್ರೆ ಮುಂದಿನ ಮಾರ್ಚ್ 31ರ ತನಕ Pos ಟ್ರಾನ್ಸ್ಆ್ಯಕ್ಷನ್​ಗಳು ಉಚಿತವಾಗಿದೆ. ಅಷ್ಟೇ ಅಲ್ಲ ಕಾರ್ಮಿಕ ಇಲಾಖೆ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಕೂಲಿ ಕಾರ್ಮಿಕರಿಗೆ ಮತ್ತು ಇತರೆ ಕೆಲಸಗಾರರಿಗೆ ಉಚಿತವಾಗಿ ಬ್ಯಾಂಕ್ ಖಾತೆಗಳನ್ನು ನೀಡುವ ಯೋಜನೆಯನ್ನು ಕೂಡ ಮಾಡಿದೆ.

ಇದನ್ನು ಓದಿ: 200 ಗರ್ಭಿಣಿಯರ ಜೀವ ಉಳಿಸಿದ ಆಪತ್ಬಾಂಧವ..

ಇಲ್ಲಿ ತನಕ ಸುಮಾರು 273 919 ಕ್ಯಾಂಪ್​ಗಳನ್ನು ಮಾಡಲಾಗಿದೆ. ಈ ಕ್ಯಾಂಪ್​ಗಳ ಪರಿಣಾಮವಾಗಿ ಸುಮಾರು 24.54 ಲಕ್ಷ ಹೊಸ ಬ್ಯಾಂಕ್ ಖಾತೆಗಳನ್ನು ಓಪನ್ ಮಾಡಿಸಲಾಗಿದೆ. 500 ಮತ್ತು 1000 ರೂಪಾಯಿ ನೋಟ್​ಗಳ ನಿಷೇಧದಿಂದ ಬ್ಯಾಂಕ್ ಖಾತೆಗಳನ್ನು ಮಾಡಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಮಧ್ಯೆ ಕಾನೂನು ಬಾಹಿರವಾಗಿ ವ್ಯವಹಾರ ಮಾಡಿದ ಹಲವರನ್ನು ಸರ್ಕಾರ ಪತ್ತೆ ಹಚ್ಚಿದೆ.

ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಡಿಜಿಟಲ್ ಇಂಡಿಯಾ ಕಾನ್ಸೆಪ್ಟ್ ದಿನದಿಂದ ದಿನಕ್ಕೆ ಜನರ ಬಳಿ ತಲುಪುತ್ತಿದೆ. ನೋಟ್ ಬ್ಯಾನ್​ನಿಂದ ಜನಕ್ಕೆ ಕೊಂಚ ತೊಂದರೆ ಆಗಿದ್ರೂ, Pos ಮತ್ತು ಇತರೆ ಪೇಮೆಂಟ್ ಸಿಸ್ಟಮ್​ಗಳ ಬಗ್ಗೆ ಜನರಿಗೆ ಅರಿವು ಮೂಡುತ್ತಿದೆ.

ಇದನ್ನು ಓದಿ:

1. ಸಿಎಂ ಭದ್ರತೆಯ ಹೊಣೆ ಹೊತ್ತ ಮೊದಲ ಮಹಿಳಾ ಐಪಿಎಸ್ ಅಧಿಕಾರಿ..

2. ಕೌಮುಥಿ ಸೋಲಾರ್​ ಪವರ್​ ಪ್ರಾಜೆಕ್ಟ್​ನ ವಿಶ್ವದಾಖಲೆ- ನನಸಾಗುತ್ತಿದೆ ಗ್ರೀನ್​ ಇಂಡಿಯಾ ಕಾನ್ಸೆಪ್ಟ್​

3. 100 ದಿನಗಳಲ್ಲಿ 100 ಡಿಜಿಟಲ್ ಗ್ರಾಮ- ಇದು ಐಸಿಐಸಿಐ ಬ್ಯಾಂಕ್​ ಪಣ

Add to
Shares
12
Comments
Share This
Add to
Shares
12
Comments
Share
Report an issue
Authors

Related Tags