ಆವೃತ್ತಿಗಳು
Kannada

ಹಾಸನಕ್ಕಿದೆ ಇಸ್ರೋ ಕಂಟ್ರೋಲಿಂಗ್ ಗರಿ

ಟೀಮ್​ ವೈ.ಎಸ್​. ಕನ್ನಡ

3rd Feb 2016
Add to
Shares
0
Comments
Share This
Add to
Shares
0
Comments
Share

ಹಾಸನ ಜಿಲ್ಲಾ ಅವಲೋಕನ

ಇಸ್ರೋದ ಮಾಸ್ಟರ್ ಕಂಟ್ರೋಲ್ ಸೌಲಭ್ಯದೊಂದಿಗೆ ಹಾಸನ ಜಿಲ್ಲೆಯು ಕೈಗಾರಿಕೆಯಲ್ಲಿ 6 ಅಭಿವೃದ್ಧಿ ಹೊಂದಿದ ಕೈಗಾರಿಕಾ ಪ್ರದೇಶಗಳು, 4 ವಿಶೇಷ ಆರ್ಥಿಕ ವಲಯಗಳಿಗೆ ಸಾಕ್ಷಿಯಾಗಿ ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕುತ್ತಿದೆ. ಜಿಲ್ಲೆಯ ಸುಮಾರು 70ರಷ್ಟು ಜನರು ವ್ಯವಸಾಯದಲ್ಲಿ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ 265 ಎಕರೆ ಆಹಾರ ಸಂಸ್ಕರಣೆಯ ವಿಶೇಷ ಆರ್ಥಿಕ ವಲಯದಲ್ಲಿ ರಫ್ತು ಸಂಬಂಧಿ ವಸ್ತುಗಳ ಉತ್ಪಾದನೆಯಾಗುತ್ತಿದೆ. 6814 ಚದರ ಕಿಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿರೋ ಹಾಸನದಲ್ಲಿ ಆಲೂರು, ಅರಕಲಗೂಡು, ಅರಸೀಕೆರೆ, ಬೇಲೂರು, ಚೆನ್ನರಾಯಪಟ್ಟಣ, ಹಾಸನ, ಎಚ್.ಎನ್.ಪುರ ಹಾಗೂ ಸಕಲೇಶಪುರ 8 ತಾಲ್ಲೂಕುಗಳಿವೆ. ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ 75.89% ಇದೆ.

image


ಆರ್ಥಿಕ ಅವಲೋಕನ: ಹಾಸನದ ಒಟ್ಟು ಜಿಡಿಪಿ ರೂ 66.12 ಶತಕೋಟಿಗಳಾಗಿದ್ದು, ರಾಜ್ಯ ಜಿಎಸ್‍ಡಿಪಿ ಗೆ ಜಿಲ್ಲೆ 2.2% ಕೊಡುಗೆ ನೀಡುತ್ತಿದೆ ಮತ್ತು ಜಿಲ್ಲೆ ಜನರ ವಾಷಿಕ ತಲಾ ಆದಾಯ ರೂ 53,000 ಇದ್ದು ಬೆಳವಣಿಗೆ ಪ್ರಮಾಣ 6.3% ಇದೆ.

ವ್ಯವಸಾಯದೆಡೆ ಗಮನ

ಜಿಲ್ಲೆಯ ಒಟ್ಟು ಭೂಮಿಯಲ್ಲಿ 46.49% ಜಾಗದಲ್ಲಿ ವ್ಯವಸಾಯ ಮಾಡಲಾಗುತ್ತಿದ್ದು, ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ. ಉಭಯ ಕೃಷಿ ಹವಾಮಾನ ಮತ್ತು ಎರಡು ರೀತಿಯ ಮಳೆ ವಿವಿಧ ಬೆಳೆ ಬೆಳೆಯಲು ಸಹಕಾರಿಯಾಗಿದೆ. ವ್ಯವಸಾಯ ಯೋಗ್ಯ 64.15% ಭೂಮಿಯಲ್ಲಿ ಧಾನ್ಯಗಳನ್ನು ಬೆಳೆದರೆ, ಬೇಳೆ ಕಾಳುಗಳು ಕೇವಲ 16.22% ಜಾಗದಲ್ಲಿ ಬೆಳೆಯಲಾಗುತ್ತದೆ. ಎಣ್ಣೆ ಬೀಜಗಳಾದ ಸೂರ್ಯಕಾಂತಿ, ಕಡಲೆಕಾಯಿ, ಎಳ್ಳು, ಸಾಸಿವೆ, ಸೋಯಾಬೀನ್ಸ್ ಮತ್ತು ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು, ತಂಬಾಕು, ಅಡಿಕೆ, ಕೋಕಾ, ಕಾಫಿ, ತಾಳೆಯನ್ನು ಮಸಾಲೆಗಳೊಂದಿಗೆ ಬೆಳೆಯಲಾಗುತ್ತದೆ. ಇತರೆ ತೋಟಗಾರಿಕೆ ಬೆಳೆಗಳಾದ ಟೊಮೊಟೊ, ಮೆಣಸಿನಕಾಯಿ, ಆಲೂಗಡ್ಡೆ, ಬದನೆಕಾಯಿ ಜತೆ ಬಾಳೆ, ಮಾವು, ನಿಂಬೆ, ಸಪೋಟದಂತಹ ಹಣ್ಣುಗಳನ್ನೂ ಸಹ ಬೆಳೆಯಲಾಗುತ್ತದೆ.

ಕೈಗಾರಿಕಾ ಭೂ ಅವಲೋಕನ

ಹಾಸನದಲ್ಲಿ ವ್ಯವಸಾಯ ಪ್ರಮುಖ ಕಸುಬು. ಮಸಾಲೆ ಪದಾರ್ಥ, ಏಲಕ್ಕಿ, ತೆಂಗು ಹಾಗೂ ಕಾಫಿಯ ಉತ್ಕೃಷ್ಟ ಉತ್ಪಾದಕ ಹಾಸನ ಜಿಲ್ಲೆ. ಇದರಿಂದ ಇಲ್ಲಿ ಆಹಾರ ಸಂಸ್ಕರಣಾ ಘಟಕ ಅಭಿವೃದ್ಧಿ ಸಾಧ್ಯ. ರಫ್ತು ಉತ್ತೇಜನಕ್ಕಾಗಿ 265 ಎಕರೆಯ ಆಹಾರ ಸಂಸ್ಕರಣ ಘಟಕ ವಿಶೇಷ ಆರ್ಥಿಕ ವಲಯ ಹಾಗೂ 300 ಮೆಟ್ರಿಕ್ ಟನ್‍ನ ಜಾನುವಾರು ಮೇವು ಪ್ರದೇಶ ಜಿಲ್ಲೆಯ ಆರ್ಥಿಕತೆಯನ್ನು ಮತ್ತಷ್ಟು ಬಲಶಾಲಿಯನ್ನಾಗಿಸಿದೆ. ಅದೇ ರೀತಿ ಜವಳಿ ವಲಯದಲ್ಲಿ ಹೂಡಲಾಗಿರೋ 114.69 ಮಿಲಿಯನ್ ಡಾಲರ್ ಬಂಡವಾಳ 2390 ಜನಕ್ಕೆ ಕೆಲಸ ಕೊಟ್ಟಿದೆ.

ಔಷದೀಯ ವಿಶೇಷ ಆರ್ಥಿಕ ವಲಯ 25 ಸಾವಿರ ಜನರಿಗೆ ಉದ್ಯೋಗ ಒದಗಿಸಿದ್ದು 270 ಎಕರೆಯಲ್ಲಿ ಉದ್ಯಮ ಹರಡಿಕೊಂಡಿದೆ. ಇನ್ನು ಎಲೆಕ್ಟ್ರಾನಿಕ್ ಎಸ್‍ಇಝಡ್‍ನಲ್ಲಿ 6.86 ಶತಕೋಟಿ ರೂಗಳ ಹೂಡಿಕೆಯಿಂದ ಸೆಮಿ ಕಂಡಕ್ಟರ್‍ಗಳ ಉತ್ಪಾದನೆಯಾಗಿ ಎಲೆಕ್ಟ್ರಾನಿಕ್ಸ್, ಹಾರ್ಡ್‍ವೇರ್, ಐಟಿ ಮತ್ತು ಐಟಿಯೇತರ ಘಟಕಗಳಿಗೆ ರಫ್ತಾಗುತ್ತಿದೆ.

ರೂ 6.78 ಶತಕೋಟಿ ಹೂಡಿಕೆಯಲ್ಲಿ 10 ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಇದ್ದು, 13,456 ಸಣ್ಣ ಕೈಗಾರಿಕೆಗಳು ರೂ 3.04 ಶತಕೋಟಿ ಹೂಡಿಕೆಯಲ್ಲಿ ಜಿಲ್ಲೆಯಲ್ಲಿ ತಲೆಯೆತ್ತಿವೆ. 6 ಕೈಗಾರಿಕಾ ಪ್ರದೇಶ, 7 ಕೈಗಾರಿಕಾ ಎಸ್ಟೇಟ್‍ಗಳು ಹಾಸನದಲ್ಲಿವೆ. ಇಷ್ಟಲ್ಲದೇ 400 ಎಕರೆಗಳಲ್ಲಿ ಹರಡಿಕೊಂಡಿರೋ ಸುಸಜ್ಜಿತ ಕೈಗಾರಿಕಾ ಅಭಿವೃದ್ಧಿ ಕೇಂದ್ರವು ಹೆದ್ದಾರಿಗಳಿಂದ ಸಂಪರ್ಕ ಹೊಂದಿದೆ ಮತ್ತು ಪ್ರತ್ಯೇಕ ವಿದ್ಯುತ್ ಸಂಪರ್ಕ ಪಡೆದಿದೆ. ಹಾಸನದಲ್ಲಿ 1058 ಎಕರೆ ಮತ್ತು ಅರಸೀಕೆರೆಯಲ್ಲಿ 238 ಎಕರೆ ಲ್ಯಾಂಡ್ ಬ್ಯಾಂಕ್ ಇಲ್ಲಿ ಕೈಗಾರಿಕೆಗಳಿಗೆ ಅವಕಾಶ ತೆರೆದಿದೆ.

ಮೂಲ ಸೌಕರ್ಯ ಮತ್ತು ಸಂಪನ್ಮೂಲಗಳು-

ಭೂಮಿ ಮತ್ತು ಮಣ್ಣು: ಹಾಸನ 6,62,602 ಹೆಕ್ಟೇರ್ ವಿಸ್ತೀರ್ಣದ ಭೂ ಪ್ರದೇಶ ಹೊಂದಿದ್ದು ವಿವಿಧ ಕೃಷಿ ಹವಾಮಾನ ದಕ್ಷಿಣ ಸಂಕ್ರಮಣ, ದಕ್ಷಿಣ ಒಣಹವೆ, ಮತ್ತು ಕೇಂದ್ರ ಒಣಹವೆ ವಲಯಗಳು ಬೇರೆ ಬೇರೆ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಮಾಡಿದೆ. ಜಿಲ್ಲೆಯಲ್ಲಿ ಅಚ್ಚು ಮರಳು, ಕ್ವಾರ್ಟ್ರ್ಜ್, ತಾಮ್ರದ ಅದಿರು ಮತ್ತು ಕ್ರೊಮೈಟ್ ಅದಿರಿನ ನೈಸರ್ಗಿಕ ನಿಕ್ಷೇಪಗಳಿವೆ.

ಜಲಾಶಯಗಳು: ಹಾಸನಕ್ಕೆ ಸಾಕಷ್ಟು ಮೂಲಗಳಿಂದ ನೀರಿನ ಸೌಲಭ್ಯವಿದ್ದು ¯ಭ್ಯತೆಗಿಂತ ಬಳಕೆ ಪ್ರಮಾಣ ಕಡಿಮೆ ಇದೆ. ಕಾವೇರಿ, ಹೇಮಾವತಿ ಮತ್ತು ಯಗಚಿ ನದಿಗಳು ಜಿಲ್ಲೆಯಲ್ಲಿ ಹರಿಯುತ್ತದೆ. ಗೊರೂರಿನಲ್ಲಿರೋ ಹೇಮಾವತಿ ರಿಸರ್ವಾಯರ್ ಪ್ರಮುಖ ಅಣೆಕಟ್ಟು ಆಗಿದ್ದು ಯಗಚಿ ಮತ್ತು ವಾಟೆಹೊಳೆ ರಿಸರ್ವಾಯರ್‍ಗಳು ಸಣ್ಣ ಪ್ರಮಾಣದಲ್ಲಿ ನೀರು ಪೂರೈಸುತ್ತದೆ.

ವಿದ್ಯುತ್ ಪೂರೈಕೆ

ಮೈಸೂರಿನ ಚಾಮುಂಡೇಶ್ವರಿ ಎಲೆಕ್ಟ್ರಿಕಲ್ ಸಪ್ಲೈ ಕಾರ್ಪೊರೇಷನ್ ಲಿಮಿಟೆಡ್ ಹಾಸನಕ್ಕೆ ವಿದ್ಯುತ್ ಸರಬರಾಜು ಮಾಡುತ್ತದೆ. ಆದರೂ ಜಿಲ್ಲೆಯಲ್ಲಿ ಬಯೋಮಾಸ್ ಪವರ್ ಕಂಪನಿಯ 8 ಮೆಗಾವಾಟ್ ಸಾಮಥ್ರ್ಯದ ನವೀಕರಿಸಬಹುದಾದ ಬಯೋಮಾಸ್ ವಿದ್ಯುತ್ ಯೋಜನೆ ಮತ್ತು 660 ಮೆಗಾವಾಟ್ ಸಾಮರ್ಥ್ಯದ 2 ಉಷ್ಣ ವಿದ್ಯುತ್ ಸ್ಥಾವರ ಹಾಗೂ ಆಮದು ಕಲ್ಲಿದ್ದಲು ವಿದ್ಯುತ್ ಘಟಕ ಕಾರ್ಯಾರಂಭ ಮಾಡಿದೆ.

ಜ್ಞಾನ ಕ್ಷೇತ್ರ: ಹಾಸನದಲ್ಲಿ ಉನ್ನತ ಶಿಕ್ಷಣದ ಜಾಲ ಅತ್ಯುತ್ತಮವಾಗಿದೆ. 85 ಐಟಿಐ, 7 ಪಾಲಿಟೆಕ್ನಿಕ್ ಕಾಲೇಜುಗಳು, 5 ಎಂಜಿನಿಯರಿಂಗ್ ಕಾಲೇಜು, 2 ಮೆಡಿಕಲ್ ಕಾಲೇಜು ಮತ್ತು 1 ಡೆಂಟಲ್ ಕಾಲೇಜು ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ವೈದ್ಯಕೀಯ ಸೌಲಭ್ಯ: ಹಾಸನದಲ್ಲಿ ನಾಗರೀಕ ಆರೋಗ್ಯ ಮೂಲ ಸೌಕರ್ಯ ಉತ್ತಮವಾಗಿದೆ. 135 ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ, 15 ಸಮುದಾಯ ಕೇಂದ್ರಗಳು, 22 ಅಲೋಪತಿ ಆಸ್ಪತ್ರೆಗಳು, 5 ಆಯುರ್ವೇದಿಕ್ ಆಸ್ಪತ್ರೆ, 1 ಯುನಾನಿ ಆಸ್ಪತ್ರೆಗಳು ಇದ್ದು ಉತ್ತಮ ಆರೋಗ್ಯ ಯೋಜನೆ ಜಿಲ್ಲೆಯಲ್ಲಿದೆ.

ಸಂಪರ್ಕ ವ್ಯವಸ್ಥೆ: ಹಾಸನ ಜಿಲ್ಲೆಗೆ ರಸ್ತೆ, ರೈಲು, ಆಕಾಶ, ಮತ್ತು ಸಮುದ್ರಗಳ ಉತ್ತಮ ಸಂಪರ್ಕವಿದೆ. ಜಿಲ್ಲೆಯಲ್ಲಿ ಎನ್‍ಎಚ್ 48 ಮತ್ತು ಎನ್‍ಎಚ್ 206 ಹಾದುಹೋಗಿದೆ. ಹಾ¸ನÀದ ಸ್ವಂತ ಏರ್‍ಪೋರ್ಟ್ ಕೆಲಸ ಪ್ರಗತಿಯಲ್ಲಿದ್ದು ಹತ್ತಿರದಲ್ಲಿ ಬೆಂಗಳೂರು ಮತ್ತು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಇವೆ. ಕಾರವಾರ, ಮಂಗಳೂರು ಮತ್ತು ಗೋವಾ ಬಂದರುಗಳು ಸಾಕಷ್ಟು ಹತ್ತಿರದಲ್ಲಿದೆ. ಹಾಸನಕ್ಕೆ ಪ್ರತ್ಯೇಕ ಎಸ್‍ಇಝಡ್ ವಲಯಗಳಿಗೆ ಅತ್ಯುತ್ತಮ ಮೂಲಸೌಕರ್ಯ ಒದಗಿಸಲಾಗಿದೆ. 248.55 ಹೆಕ್ಟೇರ್ ಜವಳಿ ಕ್ಷೇತ್ರಕ್ಕೆ, 159.7 ಹೆಕ್ಟೇರ್ ಆಹಾರ ಸಂಸ್ಕರಣಾ ಉದ್ಯವiಕ್ಕೆ ಹಾಗೂ ಔಷಧಿಯ ಉದ್ಯಮಕ್ಕೆ 50.65 ಹೆಕ್ಟೇರ್ ಜಮೀನು ಕೆಐಎಡಿಬಿ ವತಿಯಿಂದ ಮೀಸಲಿಡಲಾಗಿದೆ.

ಕೊನೇ ಮಾತು

ಹಾಸನ ಬೆಂಗಳೂರು - ಮುಂಬೈ ಆರ್ಥಿಕ ಕಾರಿಡಾರ್‍ನಲ್ಲಿ ಕರ್ನಾಟಕ ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಸಧ್ಯ ಅಭಿವೃದ್ಧಿಗೆ ಮೊದಲ ಆದ್ಯತೆ ಇದ್ದರೂ ಜಿಲ್ಲೆಯಲ್ಲಿ ಹಾಲು ಉತ್ಪನ್ನಗಳಿಗೆ ಒಂದು, ಆಲೂಗಡ್ಡೆಗಳಿಗೆ ಒಂದು ಹಾಗೂ ಇತರೆ ಉದ್ದೇಶಗಳಿಗೆ 5 ಶೀತಲೀ ಘಟಕ ನಿರ್ಮಾಣವಾಗಿದೆ. ಇದೆಲ್ಲವೂ ಹಾಸನ ಜಿಲ್ಲೆಯನ್ನು ಆರ್ಥಿಕವಾಗಿ ಬಲಶಾಲಿಂiÀiನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಹಾಸನದಲ್ಲಿ ಬಂಡವಾಳ ಹೂಡಿಕೆಗೆ ಇದಕ್ಕಿಂತ ಅವಕಾಶ ಬೇಕೆ?

Add to
Shares
0
Comments
Share This
Add to
Shares
0
Comments
Share
Report an issue
Authors

Related Tags