ಬುಟ್ಟಿ ಸ್ಟೋರ್​​ನಲ್ಲಿ ವಿಭಿನ್ನವಾದ ಗಿಫ್ಟ್: ಸುಳ್ಯದ ಯುವಕನ ಸಾಹಸ..!

ಉಷಾ ಹರೀಶ್​​

24th Nov 2015
  • +0
Share on
close
  • +0
Share on
close
Share on
close

ಬಹಳ ಆತ್ಮೀಯರಾದವರಿಗೆ ಅವರ ಹುಟ್ಟಹಬ್ಬಕ್ಕೋ ಅಥವಾ ಮದುವೆಗೋ ಇನ್ಯಾವುದೋ ಫಂಕ್ಷನ್​​ಗಳಿಗೆ ಒಳ್ಳೆ ಉಡುಗೊರೆ ನೀಡಬೇಕೆಂಬುದು ಎಲ್ಲರ ಆಲೋಚನೆ. ಕೆಲವರಂತೂ ಸರಪ್ರೈಸ್ ಉಡುಗೊರೆ ನೀಡಿ ಅಚ್ಚರಿ ಮೂಡಿಸಿ ಅವರ ಸಂತಸ ಹೆಚ್ಚಿಸಲು ಪ್ರಯತ್ನ ಪಡುತ್ತಾರೆ. ಅಂಥವರಿಗಾಗಿಯೇ ಯುವ ತರುಣ ಶ್ರೀಮುಖ ಸುಳ್ಯ ಅವರು ಬುಟ್ಟಿ ಸ್ಟೋರ್.ಕಾಮ್ ಆರಂಭಿಸಿದ್ದಾರೆ.

image


ಎಲ್ಲಾ ಸಮಾರಂಭಗಳಲ್ಲೂ ಅದೇ ಹಳೆಯ ಗಿಫ್ಟ್​​ಗಳ ಬದಲಿಗೆ ಹೊಸತನ ತುಂಬಿದ ಉಡುಗೊರೆ ನೀಡಬೇಕು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ. ಅದರಲ್ಲೂ ಬೇರೆಲ್ಲರೂ ಕೊಟ್ಟ ಗಿಫ್ಟ್​​ಗಳಿಗಿಂತಲೂ ನನ್ನದು ಸ್ವಲ್ಪ ಸ್ಪೇಷಲ್ ಆಗಿರಲಿ ಎಂಬುದು ಕೆಲವರ ಅಭಿಮತವಾಗಿರುತ್ತದೆ. ಆದರೆ ನಾವಂದುಕೊಂಡಂತಹ ಕನಸಿನ ಉಡುಗೊರೆಯನ್ನು ಎಲ್ಲಿಂದ ತರುವುದು ಎಂಬ ಪ್ರಶ್ನೆಗೆ ಶ್ರೀಮುಖ ಅವರ ಬುಟ್ಟಿ ಸ್ಟೋರ್.ಕಾಮ್ ಎಂಬ ಆನ್​​ಲೈನ್ ಶಾಪಿಂಗ್ ವೆಬ್​​ಸೈಟ್​​​ ಉತ್ತರ ನೀಡುತ್ತದೆ.

image


ಬಿಸಿಎ ಪದವಿ ಮುಗಿಸಿರುವ ಶ್ರೀಮುಖ ಸುಳ್ಯ ಅವರು ತಮ್ಮ ಕೆಲ ಆಪ್ತರಿಗೆ ಹೇಗೆ ಹೊಸತನವಿರುವ ಉಡುಗೊರೆ ನೀಡಿದರೆ ಖುಷಿಯಾಗುತ್ತದೆ ಎಂಬುದನ್ನು ಯೋಚಿಸುತ್ತಿದ್ದಾಗ ಆರಂಭವಾಗಿದ್ದೇ ಈ ಬುಟ್ಟಿ ಸ್ಟೋರ್ .ಕಾಂ. ಈ ಯೋಜನೆಯ ಬಗ್ಗೆ ಸ್ನೇಹಿತರೊಂದಿಗೆ ಹಂಚಿಕೊಂಡಾಗ ಅವರ ಬೆಂಬಲವೂ ಸುಳ್ಯ ಅವರಿಗೆ ದೊರೆಯಿತು.

image


ಯಾವ ತರಹದ ಉಡುಗೊರೆಗಳು ಸಿಗುತ್ತವೆ..?

ಬುಟ್ಟಿಯಲ್ಲಿ ಗ್ರಾಹಕರ ಆಸಕ್ತಿಗೆ ಪೂರಕವಾಗುವಂತಹ ಉಡುಗೊರೆಗಳು ರೂಪಗೊಳ್ಳುತ್ತವೆ. ಉದಾಹರಣೆಗೆ ಪೆನ್ಸಿಲ್ ಸ್ಕೆಚ್, ವಾಟರ್ ಪೈಂಟಿಂಗ್ಸ್, ತೈಲ ವರ್ಣ, ಕಾರ್ಟೂನ್, ಕ್ಯಾರಿಕೇಚರ್​​ಗಳು, ಅಷ್ಟೇ ಅಲ್ಲದೇ ಇಲ್ಲಿ ಗ್ರಾಹಕರು ಆಸೆ ಪಟ್ಟರೆ ಹೊಸ ಹಾಡುಗಳನ್ನು ಕಂಪೋಸ್ ಮಾಡಿ ಕೊಡಲಾಗುವುದು. ಅದಕ್ಕಾಗಿಯೇ ಶ್ರೀಮುಖ ಅವರು ತನ್ನ ಸರ್ಕಲ್ನಲ್ಲಿದ್ದ ಕೆಲ ಪ್ರತಿಭಾವಂತ ಸಂಗೀತ ಮತ್ತು ಚಿತ್ರ ಕಲಾವಿದರ ಸಹಾಯವನ್ನು ಪಡೆದು ಅವರ ಪ್ರತಿಭೆಯನ್ನು ಹಲವರಿಗೆ ಪರಿಚಯ ಮಾಡಿಕೊಡುತ್ತಿದ್ದಾರೆ.

image


ಕ್ಷಿಪ್ರಗತಿಯಲ್ಲಿ ಬೇರೆ ರಾಜ್ಯಗಳಿಗೂ ತಲುಪಿದ ಬುಟ್ಟಿ

ಕಳೆದ ಜೂನ್​​ನಲ್ಲಷ್ಟೇ ಆರಂಭವಾಗಿರುವ ಈ ಬುಟ್ಟಿ ಆನ್​​ಲೈನ್ ಸ್ಟೋರ್ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಗೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಅಷ್ಟೇ ಅಲ್ಲದೇ ಅಲ್ಲಿಂದ ಸಾಕಷ್ಟು ಬೇಡಿಕೆಗಳನ್ನು ಸಂಗೀತ ಮತ್ತು ಕಲಾಕೃತಿಗಳಿಗಾಗಿ ಪಡೆಯುತ್ತಿದೆ.

ಬುಕ್ಕಿಂಗ್ ಹೇಗೆ..?

ಪ್ರೀತಿ ಪಾತ್ರರದವರಿಗೆ ಅವರ ಚಿತ್ರ ಕೊಡುವ ಆಸೆ ಇದ್ದರೆ ಅವರೊದ್ದೊಂದು ಭಾವ ಚಿತ್ರ ಮತ್ತಿತರ ವಿವರಗಳನ್ನು ಆನ್​​ಲೈನ್ ಮೂಲಕ ಬುಟ್ಟಿಸ್ಟೋರ್​​ಗೆ ಆಪ್ಲೋಡ್ ಮಾಡಬೇಕು. ಆಗ ಬುಟ್ಟಿಯ ಕಲಾವಿದರು ಅವರ ಅಪೇಕ್ಷೆಗೆ ತಕ್ಕಂತೆ ಚಿತ್ರ ಬಿಡಿಸಿ ಗ್ರಾಹಕರು ನಿಗದಿ ಪಡಿಸಿದ ಅವಧಿಯೊಳಗೆ ವಾಪಾಸ್ ಕಳುಹಿಸಿಕೊಡುತ್ತಾರೆ. ಗ್ರಾಹಕರ ಬಯಸಿದರೆ ಹಾಡನ್ನು ರಚಿಸಿ ರಾಗ ಸಂಯೋಜಿಸಿ ಹಾಡನ್ನು ಹಾಡಿ ಗ್ರಾಹಕರು ತಿಳಿಸಿದ ವಿಳಾಸಕ್ಕೆ ಅದನ್ನು ಕಳುಹಿಸಿಕೊಡುತ್ತಾರೆ. ಒಂದು ವೇಳೆ ಹಾಡು ಅವರಿಗೆ ಇಷ್ಟವಾಗದಿದ್ದಲ್ಲಿ ಮತ್ತೊಮ್ಮೆ ಪರಿಷ್ಕರಣೆ ಮಾಡುತ್ತಾರೆ. ಬೇಡವಾದರೆ ನೀವು ಕೊಟ್ಟ ಹಣವನ್ನು ಮರುಪಾವತಿ ಮಾಡುತ್ತಾರೆ. ಹಣದ ವ್ಯವಹಾರವು ಆನ್​ಲೈನ್​​ನಲ್ಲೇ ನಡೆಯುವುದರಿಂದ ಮೋಸದ ಮಾತು ಇಲ್ಲಿ ಸುಳಿಯುವುದೇ ಇಲ್ಲ.

image


ಸಾವಿರದಿಂದ ಐದು ಸಾವಿರದ ವರೆಗೆ

ಬುಟ್ಟಿಸ್ಟೋರ್​​ನಲ್ಲಿ ರಚಿತವಾಗುವ ಕಲಾಕೃತಿಗಳು,ಹಾಡಿಗೆ ಒಂದು ಸಾವಿರದಿಂದ ಐದು ಸಾವಿರ ರೂಪಾಯಿಗಳನ್ನು ಚಾರ್ಜ್ ಮಾಡುತ್ತಾರೆ. ಚಿತ್ರದ ಗಾತ್ರ ಆಕಾರ ದೊಡ್ಡದಾದಂತೆ ಹಣವೂ ದುಪ್ಪಟ್ಟಾಗುತ್ತಾ ಹೋಗುತ್ತದೆ. ಇದಕ್ಕಾಗಿ ಶ್ರೀಮುಖ ಅವರಿಗೆ ಅವರ ಸ್ನೇಹಿತರಾದ ಕೀರ್ತಿ ಸತ್ಯ, ಶಬರಿ ಗಾಣಿಗ, ರೇಷ್ಮಾ, ದಿಶಾಂತ್ ಮತ್ತಿತರ ಯುವ ಕಲಾವಿದರು, ತಂತ್ರಜ್ಞರೂ ಜತೆಯಾಗಿದ್ದಾರೆ. ಸಧ್ಯ 11 ಚಿತ್ರ ಕಲಾವಿದರು 10 ಸಂಗೀತ ಕಲಾವಿದರು ಬುಟ್ಟಿಯಲ್ಲಿದ್ದಾರೆ. ಅತೀ ಕಡಿಮೆ ದರದಲ್ಲಿ ಕಡಿಮೆ ಸಮಯದಲ್ಲಿ ಗ್ರಾಹಕರಿಗೆ ಉತ್ತಮ ಉಡುಗೊರೆಯನ್ನು ಅವರ ಮನೆ ತಲುಪಿಸುವುದು ಬುಟ್ಟಿ ಸ್ಟೋರ್​​ನ ಮುಖ್ಯ ಉದ್ದೇಶವಾಗಿದೆ,ಇನ್ಯಾಕೆ ತಡ buttistore.com ವೆಬ್​​ಸೈಟ್​ಗೆ ಲಾಗ್ ಇನ್ ಆಗಿ ನಿಮ್ಮ ಪ್ರೀತಿ ಪಾತ್ರರಿಗೆ ಉತ್ತಮ ಉಡುಗೊರೆ ನೀಡಿ.

  • +0
Share on
close
  • +0
Share on
close
Share on
close
Report an issue
Authors

Related Tags

Our Partner Events

Hustle across India