ಆವೃತ್ತಿಗಳು
Kannada

ಬಾಹ್ಯ ಸೌಂದರ್ಯ ಹಾಳಾದಾಗ ಕೈ ಹಿಡಿದಿದ್ದು ಅಂತರಂಗ ಸೌಂದರ್ಯ..!

ಆರಾಭಿ ಭಟ್ಟಾಚಾರ್ಯ

AARABHI BHATTACHARYA
14th Feb 2016
Add to
Shares
5
Comments
Share This
Add to
Shares
5
Comments
Share

ಬದುಕು ಕಷ್ಟ ಅನ್ನಿಸೋದು ಯಾವಾಗ ಅಂದ್ರೆ ಜೀವನದಲ್ಲಿ ನಿಜವಾದ ಕಷ್ಟದ ದರ್ಶನವಾದಾಗ. ಸಂಧಿಗ್ಧ ಪರಿಸ್ಥಿತಿಯಲ್ಲಿ ಯಾರೂ ಕೈಹಿಡಿಯದೇ ಇದ್ದಾಗ, ನಂಬಿದವ್ರೇ ಬೆನ್ನಿಗೆಚೂರಿ ಹಾಕಿದಾಗ, ಇಂತದೊಂದು ಸಂಗತಿ ಎಲ್ಲರ ಜೀವನದಲ್ಲೂ ನಡೆದಿರುತ್ತದೆ. ಆದ್ರೆ ಇಂತಹ ಘಟನೆ ಜೀವನಕ್ಕೆ ಗೋರಿ ಕಟ್ಟಿಬಿಟ್ಟರೆ ಎಂಥವ್ರಿಗೂ ಜೀವನ ಸಾಕು ಅನ್ನಿಸದೇಇರಲಾರದು. ಇಂತಹ ಅನುಭವದಿಂದ ಇಂದು ದೇಶದಲ್ಲಿ ದೊಡ್ಡ ಹೋರಾಟಗಾರ್ತಿಯಾಗಿ ನಿಲ್ಲೋದಕ್ಕೆ ಸ್ಫೂರ್ತಿಯಾಗಿದ್ದು ರೂಪ ಅವ್ರ ಜೀವನದಲ್ಲಿ.

image


ರೂಪ, ತನ್ನ ಮಲತಾಯಿಯಿಂದಲೇ ಆಸಿಡ್ ದಾಳಿಗೆ ಒಳಗಾದವರು. ಆ್ಯಸಿಡ್ ದಾಳಿ ಆದ ತಕ್ಷಣ ರೂಪ ಧೃತಿಗೆಡಲಿಲ್ಲ. ತನಗೆ ಬೇಕಿದ್ದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾರೆ. ಅಷ್ಟೆ ಅಲ್ಲದೆ, ಇಂದು ದೇಶದಲ್ಲಿ ಆ್ಯಸಿಡ್ ದಾಳಿಗೆ ಒಳಗಾಗುತ್ತಿರುವವರ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ಮೂಲತಃ ಉತ್ತರ ಪ್ರದೇಶದವರಾದ ರೂಪ ಚಿಕ್ಕ ವಯಸ್ಸಿನಲ್ಲೇ ತನ್ನ ತಾಯಿಯನ್ನ ಕಳೆದುಕೊಂಡಿದ್ದರು. ನಂತ್ರ ಅಪ್ಪ ಹಾಗೂ ಮಲತಾಯಿಯ ಆಶ್ರಯದಲ್ಲಿ ಬೆಳೆದ ರೂಪ ಪ್ರತಿಕ್ಷಣವನ್ನೂ ಭಯದಲ್ಲೇ ಕಳೆದ್ರು. ಅನೇಕ ಬಾರಿ ರೂಪಳನ್ನ ಕೊಲ್ಲಲು ಪ್ರಯತ್ನ ಪಟ್ಟುಕಡೆಯದಾಗಿ ರೂಪಾಳ ಮೇಳೆ ಆ್ಯಸಿಡ್ ದಾಳಿ ಮಾಡುತ್ತಾರೆ ಅವರ ಮಲತಾಯಿ. ದಾಳಿಯಾದ 6 ಗಂಟೆಗಳ ಕಾಲ ರೂಪ ಯಾವುದೇ ಚಿಕಿತ್ಸೆ ಇಲ್ಲದೆ ಒದ್ದಾಡಿದ್ದರು. ನಂತ್ರ ರೂಪಾಳ ಚಿಕ್ಕಪ್ಪನಿಗೆ ವಿಷಯ ತಿಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಾರೆ. ಕಟ್ಟಿಂಗ್ ಶಾಪ್‍ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ರೂಪ ಅವ್ರ ಚಿಕ್ಕಪ್ಪ ತನ್ನ ಕೈಲಾದಷ್ಟು ಸಹಾಯ ಮಾಡಿ ರೂಪಾಳಿಗೆ ಮತ್ತೊಂದು ಜೀವನವನ್ನು ನೀಡುತ್ತಾರೆ. ಸುಮಾರು ಏಳು ಶಸ್ತ್ರಚಿಕಿತ್ಸೆ ನಂತ್ರ ರೂಪ ತನ್ನ ಮುಖದ ರೂಪವನ್ನೇ ಕಳೆದುಕೊಂಡಿದ್ದರು.

ಇದನ್ನು ಓದಿ

ಕೆರೆಯ ನೀರಿನಿಂದಾಗಿ ಕಲ್ಲಾದ ಪ್ರಾಣಿ ಪಕ್ಷಿಗಳು...

image


ರೂಪಾಳ ಚಿಕಿತ್ಸೆಗಾಗಿ ಸುಮಾರು 9 ಲಕ್ಷಖರ್ಚು ಮಾಡಿದ ನಂತ್ರ ಸರ್ಕಾರದಿಂದ ಚಿಕಿತ್ಸೆಗಾಗಿ ನಿರೀಕ್ಷೆ ಮಾಡಿದ್ರು. ಆದ್ರೆ ಅದು ಇಂದಿಗೂ ಸಾಧ್ಯವಾಗಲಿಲ್ಲ. ಹಾಗೂ ಹೀಗೂ ಚಿಕಿತ್ಸೆ ಪಡೆದು ರೂಪಾಳಿಗೆ ಮತ್ತೆ ಜೀವಂತವಾಗಿ ಬಂದಿದ್ದರು. ಅಂದಿನಿಂದ ತನ್ನ ನ್ಯಾಯಕ್ಕಾಗಿ ಹೋರಾಟ ಆರಂಭ ಮಾಡಿದ ರೂಪ ಇಂದಿಗೂ ಕೂಡ ಹಿಂತಿರುಗಿ ನೋಡಿಲ್ಲ. ಆಸಿಡ್ ದಾಳಿ ನಂತ್ರತನ್ನಊರಿಗೆ ಮರಳಿ ಹೋಗಲು ಇಷ್ಟ ಪಡದ ರೂಪ ತನಗಾದ ಅನ್ಯಾಯದ ವಿರುದ್ದ ಸಿಡುದು ಬೀಳುತ್ತಾಳೆ. ನ್ಯಾಯ ಪಡೆಯಲು (Chhanv) ಅನ್ನೋ ಟೀಮ್​ ಹುಟ್ಟು ಹಾಕಿ ಕ್ಯಾಂಪೈನ್ ಶುರು ಮಾಡುತ್ತಾರೆ. ಮೊದಲಿಗೆ ಕಷ್ಟವಾದ್ರು ಕೂಡ ನಂತರದ ದಿನಗಳಲ್ಲಿ ತಮ್ಮಂತೆ ದಾಳಿಗೆ ಒಳಗಾದವ್ರಿಗಾಗಿ ಹೋರಾಟ ಮಾಡಲು ರಸ್ತೆಗಿಳಿಯುತ್ತಾರೆ.(Chhanv) ಆಸಿಡ್​​ ದಾಳಿಗೊಳಗಾದವ್ರಿಗೆ ಆಶ್ರಯ ತಾಣ. ದಾಳಿಗೆ ಒಳಗಾದ ಮೇಲೆ ಸಮಾಜವನ್ನ ಎದುರಿಸಲಾಗದೆ ಭಯ ಪಡುವವರಿಗೆ ಧೈರ್ಯ ನೀಡಿ ಅವ್ರುಗಳಿಗೆ ಚಿಕಿತ್ಸೆ ಕೊಡಿಸೋ ಕೆಲಸದ ಜೊತೆಗೆ ಅವ್ರಿಗಾದ ಅನ್ಯಾಯದ ವಿರುದ್ದ ಹೋರಾಟ ಮಾಡಲು ಹುಟ್ಟಿಕೊಂಡಿರೋ ತಂಡ. ಹೋರಾಟದ ಜೊತೆ ಜೊತೆಗೆಏನಾದ್ರು ಸಾಧಿಸ ಬೇಕು ಅನ್ನೋ ಆಲೋಚನೆ ರೂಪ ಅವ್ರ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತೆ. ಮನಸ್ಸಿನಲ್ಲಿದ್ದ ಆಸೆಗಳು ಚಿಗುರೊಡೆಯುತ್ತೆ...

image


ಹೊರಗಿನ ಸೌಂದರ್ಯ ಸತ್ತ ನಂತ್ರ ರೂಪ, ಮನಸ್ಸಿನ ಸೌಂದರ್ಯಕ್ಕೆ ಹೊಸ ರೂಪ ನೀಡಿದ್ರು. ಇವೆಲ್ಲವೂ ಆದ ನಂತ್ರ ರೂಪಳ ಒಳಗಿದ್ದ ಒಬ್ಬ ಡಿಸೈನರ್ ಹೊರ ಪ್ರಪಂಚಕ್ಕೆ ಪರಿಚಯ ಆಗಿ ಬಿಟ್ಟಳು. ಒಂಟಿಯಾಗಿ ನಿಂತು ತನ್ನ ಜೀವನವನ್ನ ಕಟ್ಟಿಕೊಳ್ಳಲು ನಿರ್ಧಾರ ಮಾಡುತ್ತಾಳೆ ರೂಪ. ತನ್ನದೇ ಹೊಸ ಬುಟಿಕ್ ಮಾಡಬೇಕು ಅಂತ ಸಿದ್ದವಾಗಿರೋ ರೂಪ ಈಗಾಗ್ಲೆ ಸಾಕಷ್ಟು ಡ್ರಸ್ ಗಳನ್ನ ಡಿಸೈನ್ ಮಾಡಿ ಮಾಡೆಲ್ ಗಳಿಗೆ ನೀಡಿದ್ದಾರೆ. ತನ್ನದೇ ಡಿಸೈನ್ ನಲ್ಲಿ ಹೊಸದೊಂದು ಬುಟಿಕ್‍ ಓಪನ್ ಮಾಡಿ ತನ್ನಂತೆ ಆಸಿಡ್ ದಾಳಿಗೆ ಒಳಗಾದವ್ರಿಗೆ ಕೆಲಸ ನೀಡಬೇಕು ಅನ್ನೊಆಸೆಯನ್ನ ಹೊತ್ತಿದ್ದಾರೆ.

image


ರೂಪ ತನ್ನ ಕನಸನ್ನ ನನಸು ಮಾಡಿಕೊಳ್ಳೋದ್ರ ಜೊತೆಯಲ್ಲಿ ತನ್ನಂತೆ ಯಾರ ಜೀವನದಲ್ಲೂ ನಡೆಯಬಾರದು ಅನ್ನೋ ಕಾರಣದಿಂದ ಆಸಿಡ್ ದಾಳಿಯ ವಿರುದ್ದ ಹಾಗೂ ಆಸಿಡ್ ದಾಳಿಗೊಳಗಾದವ್ರ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇದ್ರ ಜೊತೆಗೆ ರೂಪ ತಾವು ಮಾಡೋ ಡಿಸೈನಿಂಗ್ ಕೆಲಸದಲ್ಲಿ ನ್ಯಾಷನಲ್‍ ಇನ್ಸಿಟ್ಯೂಟ್‍ ಆಫ್‍ಡಿಸೈನ್ ನ ಜೊತೆಗೂಡಿಸಿಕೊಂಡಿದ್ದಾರೆ. ತಾವು ಡಿಸೈನ್ ಮಾಡಿದ ಬಟ್ಟೆಗಳನ್ನ ಚಾನ್ವ(Chhanv)ನ ಮೂಲಕ ಆನ್ ಲೈನ್ ನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಸದ್ಯ ರೂಪ ಮಾಡೋ ಡಿಸೈನ್ಸ್ ಸಾಕಷ್ಟು ಜನರಿಗೆ ಮೆಚ್ಚಗೆಯಾಗಿದ್ದು ದೆಹಲಿಯ ಹಲವಾರು ಮಾಡೆಲ್ಸ್ ಇಂದಿಗೂ ತಮ್ಮಕಾಸ್ಟ್ಯೂಮ್ಸ್​​ನ್ನ ರೂಪ ಅವ್ರಿಂದ ಡಿಸೈನ್ ಮಾಡಿಸಿಕೊಳ್ತಾರೆ. ಹೋರಾಟದ ಮೂಲಕ ಬದುಕು ಸಾಗಿಸುತ್ತಿರುವ ರೂಪಾಗೆ ಯುವರ್​ಸ್ಟೋರಿಯ ಬೆಂಬಲವೂ ಇದೆ.

ಇದನ್ನು ಓದಿ

1. ಟಾಯ್ಲೆಟ್​ಗೆ ಹೋಗೋದಿಕ್ಕೆ ಅರ್ಜೆಂಟಾ...ಶೌಚಾಲಯ ಹುಡುಕಲೊಂದು ಅಪ್ಲಿಕೇಷನ್..!

2. ಶ್ವಾನಗಳಿಗಾಗಿ ಬೆಸ್ಟ್ ಬೇಕರಿ- ನಿಮ್ಮ ಮುದ್ದುಮರಿ ಬರ್ತಡೇಗೂ ಕೇಕ್‍ಕಟ್ ಮಾಡಿ

3. ಅಂದು ಕಡು ಬಡವ...ಇಂದು ಎರಡು ಕಂಪನಿಗಳ ಮಾಲೀಕ..!


Add to
Shares
5
Comments
Share This
Add to
Shares
5
Comments
Share
Report an issue
Authors

Related Tags