ಆವೃತ್ತಿಗಳು
Kannada

ಕೆಲಸ ಬೇಕಿರುವವರಿಗೆ, ಕೆಲಸ ಕೊಡುವವರಿಗೆ- ಎಲ್ಲರಿಗೂ ಆಪತ್ಭಾಂಧವ ವಿಸ್ಡಮ್​ ಜಾಬ್ಸ್​​

ಟೀಮ್​ ವೈ.ಎಸ್​. ಕನ್ನಡ

16th Mar 2017
Add to
Shares
21
Comments
Share This
Add to
Shares
21
Comments
Share

ಇದು Wisdom Jobs.ಪ್ರಾಯೋಜಿತ ಲೇಖನ 

ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ ಪಡೆಯಲು ಬಯಸುವವರು ನಿರಂತರವಾಗಿ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲೇಬೇಕು. ಅಷ್ಟೇ ಅಲ್ಲ ಸ್ಪರ್ಧೆಯಲ್ಲಿ ಗೆಲ್ಲಲು ವಿಶೇಷ ಪರಿಣಿತಿ ಹಾಗೂ ಕೆಲಸಕ್ಕೆ ನೇಮಕ ಮಾಡಿಕೊಳ್ಳುವವರ ಮನ ಗೆಲ್ಲುವ ವಿಶೇಷ ಕೌಶಲ್ಯವನ್ನು ಹೊಂದಿರಬೇಕು.

ಒಂದು ವೇಳೆ ನೀವು ಕೆಲಸಗಾರರನ್ನು ನೇಮಿಸಿಕೊಳ್ಳುವ ಸ್ಥಾನದಲ್ಲಿದ್ದರೂ ಸವಾಲುಗಳು ಎದುರಾಗುವುದು ಖಚಿತ. ನಿಮ್ಮ ಮುಂದೆ ಬರುವ ಸಾವಿರಾರು ರೆಸ್ಯೂಮ್​ಗಳ ಪೈಕಿ ನಿಮ್ಮ ಕಂಪನಿಗೆ ಸೂಟ್​ ಆಗುವ ಮತ್ತು ಕಂಪನಿಯ ಕನಸುಗಳನ್ನು ನನಸು ಮಾಡಬಲ್ಲ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಕೂಡ ಅಷ್ಟು ಸುಲಭದ ಮಾತಲ್ಲ. ಒಂದರ್ಥದಲ್ಲಿ ಕೆಲಸ ಹುಡುಕುವುದು ಮತ್ತು ಸೂಕ್ತ ಅಭ್ಯರ್ಥಿಗೆ ಕೆಲಸ ಕೊಡುವುದು ಎರಡೂ ಕೂಡ ಒಂದೇ ತಕ್ಕಡಿಯಲ್ಲಿ ತೂಗಬಲ್ಲ ವಿಷಯಗಳು.

ಆದ್ರೆ ಹಳೆಯ ವಿಷಯಗಳನ್ನು ಮರೆತು ಬಿಡೋಣ. ಈಗ Wisdom jobs ನಿಮ್ಮ ಆಯ್ಕೆಗೆ ತಕ್ಕಂತಹ ಕೆಲಸ ಕೊಡಿಸಬಲ್ಲದು. ಅಷ್ಟೇ ಅಲ್ಲ ಈ ಸ್ಟಾರ್ಟ್​ ಅಪ್​ ಕೆಲಸ ನೀಡುವವರಿಗೆ ಸೂಕ್ತ ಅಭ್ಯರ್ಥಿಗಳನ್ನು ಒದಗಿಸಿಕೊಡಬಲ್ಲದು. ತನ್ನ ನೆಟ್​ವರ್ಕ್​ ಮೂಲಕ ಕೆಲಸಗಾರರಿಗೆ ಮತ್ತು ಕೆಲಸ ಕೊಡುವವರ ನಡುವಿನ ಕೊಂಡಿಯಾಗಬಲ್ಲದು.

Wisdom jobs ಕೆಲಸ ನೀಡುವವರ ಮತ್ತು ಕೆಲಸ ಹುಡುಕವವರ ನಡುವಿನ ನಡುವೆ ಸೇತುವೆಯಾಗಿ ಕೆಲಸ ಮಾಡಬಲ್ಲದು. ಕೆಲಸ ಹುಡುಕುವಲ್ಲಿಂದ ಹಿಡಿದು, ಕೌಶಲ್ಯ ಪರೀಕ್ಷೆ, ಕೌಶಲ್ಯ ಅಭಿವೃದ್ಧಿ, ರೆಸ್ಯೂಮ್​ ಬರೆವಣಿಗೆಯಂತಹ ಸೇವೆಗಳನ್ನು ನೀಡುತ್ತಿದೆ. ನಿಮ್ಮ ಬ್ರೌಸರ್​ನಲ್ಲಿ www.wisdomjobs.com ಎಂದು ಟೈಪ್​ ಮಾಡಿ. ನಿಮಗೆ ಗೊತ್ತಾಗುತ್ತದೆ. Wisdom jobsಭಾರತದಲ್ಲಿ ಯಾಕೆ ಫೇಮಸ್​ ಆಗಿದೆ ಅನ್ನುವುದು ನಿಮಗೇ ಗೊತ್ತಾಗುತ್ತದೆ. Wisdom jobsಆರಂಭವಾಗಿ ಕೇವಲ 6 ವರ್ಷಗಳಾಗಿದ್ದರೂ, 30 ಮಿಲಿಯನ್​ ಅಭ್ಯರ್ಥಿಗಳು ಇಲ್ಲಿ ರಿಜಿಸ್ಟ್ರೇಷನ್​ ಮಾಡಿಸಿಕೊಂಡಿದ್ದಾರೆ. 14 ಮಿಲಿಯನ್​ ಅಭ್ಯರ್ಥಿಗಳ ಕೌಶಲ್ಯ ಪರೀಕ್ಷೆ ನಡೆಸಿದೆ.

ಸೂಕ್ತ ಅಭ್ಯರ್ಥಿಗಳ ಹುಡುಕಾಟ

ಇವತ್ತು Wisdom jobsಕೆಲಸ ಹುಡುಕುವವರ ಮತ್ತು ಕೆಲಸ ಕೊಡುವವರ ಉದ್ದೇಶ ಮತ್ತು ಕನಸುಗಳನ್ನು ಅರ್ಥಮಾಡಿಕೊಂಡಿದೆ. ಉದಾಹರಣೆ ಪ್ರಗ್ಯಾ ಮೀಟರ್​, ಇನ್​ ಹೌಸ್​ನಲ್ಲಿ ಅಭಿವೃದ್ಧಿ ಮಾಡಲ್ಪಟ್ಟ ಸಾಧನದ ಮೂಲಕ ಪ್ಲಾಟ್​​ ಫಾರ್ಮ್​ ಸರ್ವೀಸ್​ ಮಾಡೆಲ್​ ಅನ್ನು ಮಾಡಲಾಗಿದೆ. ಈ ಮೂಲಕ ಕಂಪನಿಯ ರಿಕ್ರೂಟ್​ಮೆಂಟ್​ ಎಂಜಿನ್​ಗಳು ಉತ್ಕೃಷ್ಟವಾಗಿ ಕೆಲಸ ಮಾಡುವಂತೆ ಮಾಡಲಾಗಿದೆ.

ಪ್ರಗ್ಯಾ ಮೂಲಕ ಸುಮಾರು 6000 ಕೌಶಲ್ಯಗಳ, ಸಾಮರ್ಥ್ಯಗಳ ಪರೀಕ್ಷೆ ಮಾಡಬಹುದು. ಇದು ಭಾಷೆ, ಸಂಹವನ ಸಾಮರ್ಥ್ಯ, ಯೋಗ್ಯತೆ ಮತ್ತು ಪ್ರೋಗ್ರಾಮಿಂಗ್​ ಕೌಶಲ್ಯಗಳ ಸಾಮರ್ಥ್ಯವನ್ನು ಅಳೆಯಬಹುದು. ಕೆಲಸಕ್ಕೆ ತೆಗೆದುಕೊಳ್ಳುವವರು ತಾವೇ ಪ್ರಶ್ನೆಗಳನ್ನು ತಯಾರು ಮಾಡಬಹುದು. ಅಷ್ಟೇ ಅಲ್ಲದೆ ಡೇಟಾ ಬೇಸ್​ನಲ್ಲಿರುವ Wisdomjobs​ ಸಿದ್ಧಪಡಿಸಿರುವ 5 ಕೋಟಿಗೂ ಅಧಿಕ ಪ್ರಶ್ನೆಗಳನ್ನು ಉಪಯೋಗಿಸಿಕೊಳ್ಳಬಹುದು. ವೆಬ್​ಕ್ಯಾಮ್​ ರೆಕಾರ್ಡಿಂಗ್​, ಸ್ಕ್ರೀನ್​ ಮಾನಿಟರಿಂಗ್​, ಬ್ರೌಸರ್​ ಟೊಲರನ್ಸ್​ ಕಂಟ್ರೋಲ್​ ಮತ್ತು IP ರಿಸ್ಟ್ರಿಕ್ಷನ್​ ಹೆಲ್ಪ್​ ಗಳಂತ ಸೌಲಭ್ಯಗಳನ್ನು ಕೂಡ ಪಡೆದುಕೊಳ್ಳಬಹುದು. ಡ್ಯಾಶ್​ಬೋರ್ಡ್​ನಲ್ಲಿ ಉದ್ಯೋಗದಾತರು, ಕಂಪ್ಲೀಟ್​ ಆಗಿರುವ, ಚಾಲ್ತಿಯಲ್ಲಿರುವ ಮತ್ತು ನಿಗದಿ ಮಾಡಿರುವ ಮೌಲ್ಯ ಮಾಪನಗಳ ಬಗ್ಗೆ ತಿಳಿದುಕೊಳ್ಳಬಹುದು.

" ನಮ್ಮ ಫ್ಲಾಟ್​​ಫಾರಂನಲ್ಲಿ ಉದ್ಯೋಗದಾತರು ಪರಿಶೀಲನೆ ನಡೆಸಿದಾಗ ನಾವು ಅಭ್ಯರ್ಥಿಗಳ ಕೌಶಲ್ಯ ಮತ್ತು ಸಾಮರ್ಥ್ಯದ ಬಗ್ಗೆ ನೀಡಿದ ಅಂಕಗಳನ್ನು ಕೂಡ ತಿಳಿಸುತ್ತೇವೆ. ಒಂದು ವೇಳೆ ಉದ್ಯೋಗದಾತರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದರೆ, ಅವರಿಗೆ ಪ್ರಗ್ಯಾ ಮೀಟರ್​ ಮೂಲಕ ಮೊದಲ ಹಂತದ ಸ್ಕ್ರೀನಿಂಗ್, ಆನ್​ಲೈನ್​ ಪರೀಕ್ಷೆಗಳನ್ನು ನೀಡಲು ಸಹಾಯ ಮಾಡುತ್ತೇವೆ. ಒಂದು ಹುದ್ದೆಗೆ ಅಭ್ಯರ್ಥಿಯನ್ನು ಹುಡುಕುವಾಗ ಅವರಿಗೆ ನಾವು ಎರಡೂ ರೀತಿಯಲ್ಲೂ ಸಹಾಯ ಮಾಡಬಲ್ಲೆವು​ "
- ಅಜಯ್​ ಕೊಲ್ಲ, ಸಂಸ್ಥಾಪಕ ಮತ್ತು ಸಿಇಒ ವಿಸ್ಡಮ್​ ಜಾಬ್ಸ್​​

ಉದ್ಯೋಗಾಕಾಂಕ್ಷಿಗಳು ಕೂಡ ಪ್ರಗ್ಯಾ ಮೀಟರ್​ ಅಸಾಸ್​ಮೆಂಟ್​ ಅನ್ನು, ಸೈಟ್​ಗೆ ಲಾಗಿನ್​ ಆದ ಮೇಲೆ ಡ್ಯಾಶ್​ಬೋರ್ಡ್​ನಲ್ಲೇ ಪಡೆಯಬಹುದು. ಪ್ರಗ್ಯಾ ಮೀಟರ್ ಅರ್ಹ ಉದ್ಯೋಗಾಕಾಂಕ್ಷಿಗಳ ಸಾಮರ್ಥ್ಯವನ್ನು ಬಹುಬೇಗನೆ ತಿಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. " ಅಭ್ಯರ್ಥಿಗಳ ಕೌಶಲ್ಯ ಮತ್ತು ಸಾಮರ್ಥ್ಯ ಪ್ರಗ್ಯಾ ಮೂಲಕ ಉದ್ಯೋಗದಾತರಿಗೆ ಬೇಗನೆ ಸಿಗುತ್ತದೆ. ಅಭ್ಯರ್ಥಿಗಳ ಅಂಕಗಳು ಮತ್ತು ಸಾಮರ್ಥ್ಯದ ಪಟ್ಟಿಯನ್ನು ಕೂಡ ನೀಡಲಾಗುತ್ತದೆ. ಇದು ಅಭ್ಯರ್ಥಿಗಳಿಗೆ ಮತ್ತು ಉದ್ಯೋಗದಾತರಿಗೆ ಸಾಕಷ್ಟು ನೆರವು ನೀಡುತ್ತದೆ. ಅಷ್ಟೇ ಅಲ್ಲ ಅಭ್ಯರ್ಥಿಗಳು ಯಾವೆಲ್ಲಾ ವಿಚಾರದಲ್ಲಿ ಅಭಿವೃದ್ಧಿ ಆಗಬೇಕು ಅನ್ನುವುದನ್ನು ತಿಳಿಸಿಕೊಡುತ್ತದೆ. "

image


Wisdomjobs.com ಉದ್ಯೋಗಾಕಾಕ್ಷಿಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಸಾಕಷ್ಟು ನೆರವು ನೀಡುತ್ತದೆ. ಒಂದು ನಿಗದಿತ ಹುದ್ದೆಯ ಆಯ್ಕೆಯಿಂದ ಹಿಡಿದು, ಇಂಟರ್​ವೀವ್ಯೂ ಶೆಡ್ಯೂಲ್, ಇಂಟರ್​ವೀವ್ಯೂನಲ್ಲಿ ಏನೇನು ಮಾಡಬೇಕು, ಯಾವ ಕೌಶಲ್ಯವನ್ನು ತೋರಿಸಬೇಕು, ಡಾಕ್ಯುಮೆಂಟ್​ಗಳ ಚೆಕ್​ಲಿಸ್ಟ್​ ಸೇರಿದಂತೆ ಅಭ್ಯರ್ಥಿಗೆ ಕೆಲಸಗಿಟ್ಟಿಸಲು ಬೇಕಾದ ಎಲ್ಲಾ​ ಮಾರ್ಗದರ್ಶವನ್ನು ನೀಡುತ್ತದೆ. ಧ್ವನಿ ಆಧಾರಿತ ಟೂಲ್​ ಮೂಲಕ ನಡೆಯುವ ಈ ಪ್ರಕ್ರಿಯೆ ಕಡಿಮೆ ಸಮಯದಲ್ಲಿ ಅಭ್ಯರ್ಥಿಗಳನ್ನು ಸೇರುವುದಲ್ಲದೆ, ಅಭ್ಯರ್ಥಿಗಳಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತದೆ.

ಅಜಯ್​ ಪ್ರಕಾರ, ಪ್ರಗ್ಯಾ ಮೀಟರ್​ ಮತ್ತು ವಿ ಕನೆಕ್ಟ್​ ಟೂಲ್​ಗಳು ಮಧ್ಯಮ ಮತ್ತು ದೊಡ್ಡ ಕಂಪನಿಗಳ ಕೆಲಸಗಾರರ ವೇತನ ಮೌಲ್ಯಮಾಪನದ ವೇಳೆ ಮತ್ತು ನೌಕರರ ಕೆಲಸದ ಬಗ್ಗೆಯೂ ಮಾಹಿತಿ ನೀಡುತ್ತದೆ.

ಸರಿಯಾದ ಕೆಲಸ ಸಿಕ್ಕಿದ ಮೇಲೆ..?

" ನಾವು ಅಭ್ಯರ್ಥಿಗಳ ಕೆಲಸ ಹುಡುಕುವ ವಿಚಾರದಲ್ಲಿ ಸಾಕಷ್ಟು ನೆರವು ನೀಡುತ್ತೇವೆ. ಉದ್ಯೋಗದಾತರ ಬಳಿ ಕೌಶಲ್ಯ ತೋರಿಸಿ ಕೆಲಸಗಿಟ್ಟಿಸಿಕೊಳ್ಳಲು ಅನಿವಾರ್ಯವಾಗಿರುವ ಮೌಲ್ಯಮಾಪನಗಳನ್ನು ಕೂಡ ಹೇಳಿಕೊಡುತ್ತೇವೆ" ಅಂತ ಹೇಳುತ್ತಾರೆ ಅಜಯ್​. ಈಗ ಇ- ಯುನಿವರ್ಸಿಟಿ online tutorials ಮೂಲಕ ಅಭ್ಯರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿಗೆ ಮತ್ತು ಸಂದರ್ಶನಕ್ಕೆ ಬೇಕಾದ ಟಿಪ್ಸ್​ಗಳನ್ನು ಕೂಡ ಹೇಳಿಕೊಡಲಾಗುತ್ತದೆ. ವಿಸ್ಡಮ್​ ಜಾಬ್ಸ್​ನಲ್ಲಿ ಕೆಲಸಕ್ಕಾಗಿ ರಿಜಿಸ್ಟರ್​ ಮಾಡಿಕೊಂಡವರಿಗೆ ಇ- ಯೂನಿವರ್ಸಿಟಿ ಮೂಲಕ ಉಚಿತ ಸೌಲಭ್ಯ ನೀಡಲಾಗುತ್ತದೆ. ಇ- ಯೂನಿವರ್ಸಿಟಿ ಮೂಲಕ ಕಂಟೆಂಟ್​, ಸಂದರ್ಶನದಲ್ಲಿ ಕೇಳಬಹುದಾದ ಸಾಮಾನ್ಯ ಪ್ರಶ್ನೆ ಮತ್ತು ಉತ್ತರ ಮತ್ತು 4000ಕ್ಕೂ ಅಧಿಕ ಕೌಶಲ್ಯ ಅಭಿವೃದ್ಧಿ ಪ್ರಾಕ್ಟೀಸ್​ಗಳನ್ನು ಹೇಳಲಾಗುತ್ತದೆ. ಈ ಆನ್​ಲೈನ್​ ಡೇಟಾಬೇಸ್​ ಕಾಲಕಾಲಕ್ಕೆ ಅಪ್​ಡೇಟ್​ ಆಗಿರುತ್ತದೆ.

ಇನ್​ಫಾರ್ಮೆಷನ್​ ಟೆಕ್ನಾಲಜಿ ಮ್ಯಾನೇಜ್​ಮೆಂಟ್​ ನಿಂದ ಹಿಡಿದು, ಬ್ಯುಸಿನೆಸ್​ ಸ್ಕಿಲ್​ ಅಂಡ್​ ಕಮ್ಯೂನಿಕೇಷನ್​ ತನಕ ವಿಸ್ಡಮ್​ ಜಾಬ್​ ತನ್ನ ವಿಸ್ತೀರ್ಣ ಹೊಂದಿದೆ. ಅಷ್ಟೇ ಅಲ್ಲ ತಾಂತ್ರಿಕವಾಗಿಯೂ Wisdom jobs ಸಾಕಷ್ಟು ಮುಂದಿದೆ. ಅಜಯ್​ ಹೇಳುವಂತೆ, "ಇ- ಯೂನಿವರ್ಸಿಟಿಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದಕ್ಕೆ ಹೆಚ್ಚು ಹೆಚ್ಚು ಕೋರ್ಸ್​ಗಳನ್ನು ಸೇರಿಸಿಕೊಳ್ಳಲಾಗುತ್ತಿದೆ. ಅಪ್​ಡೇಟ್​ಗಳು ಕೂಡ ನಡೆಯುತ್ತಿದೆ. ಮಾರ್ಕೆಟ್​ನಲ್ಲಿರುವ ಡಿಮ್ಯಾಂಡ್​ ಮತ್ತು ಟ್ರೆಂಡ್​ಗಳನ್ನು ಗಮನದಲ್ಲಿಟ್ಟುಕೊಂಡು ಅಪ್​ಡೇಟ್​ಗಳನ್ನು ಮಾಡಲಾಗುತ್ತಿದೆ. ಪ್ರತಿಯೊಂದು ಡೊಮೈನ್​ಗೂ ವಿಭಿನ್ನ ಕೋರ್ಸ್​ಗಳನ್ನು ನೀಡುವ ಬಗ್ಗೆ ಯೋಚನೆಗಳು ನಡೆಯುತ್ತಿದೆ. ಇ-ಯೂನಿವರ್ಸಿಟಿ ಪೇಜ್​ಗಳು ತಿಂಗಳೊಂದಕ್ಕೆ ಸುಮಾರು ಒಂದು ಮಿಲಿಯನ್​ ಯೂಸರ್​ಗಳನ್ನು ಪಡೆದುಕೊಳ್ಳುತ್ತದೆ.

ಇದೆಲ್ಲದರ ಜೊತೆಗೆ Wisdom jobs ನಲ್ಲಿ ಸಾಕಷ್ಟು ವಿಭಾಗಗಳಿವೆ. Wisdom jobs ​​ನಲ್ಲಿ ಕೃಷಿ ಯಿಂದ ಶಿಕ್ಷಣದ ತನಕ ಸೇರಿದಂತೆ govt jobs ಆಯ್ಕೆಗಳಿವೆ. sarkari result ಗಾಗಿ ಬೇರೆಯೇ ವಿಭಾಗಗಳಿದೆ. ಉದ್ಯೋಗ ಹುಡುಕುವಾಗ ಸ್ಥಳ ಕೂಡ ತುಂಬಾ ಮುಖ್ಯವಾಗಿರುತ್ತದೆ. ಹೀಗಾಗಿ ಅಭ್ಯರ್ಥಿ ಯಾವ ಸ್ಥಳದಲ್ಲಿ ಕೆಲಸ ಪಡೆಯಲು ಇಚ್ಛಿಸುತ್ತಾನೆ ಅನ್ನುವ ಕೆಟಗರಿಯನ್ನು ಕೂಡ ನೀಡಲಾಗಿದೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶವನ್ನು ಹುಡುಕಲು ಸುಲಭವಾಗುವಂತೆ ಮಾಡಲಾಘಿದೆ. ಅಷ್ಟೇ ಅಲ್ಲ free job alert ಗಳ ಮೂಲಕ ಎಲ್ಲಿ ಕೆಲಸದ ಅವಕಾಶ ಇದೆ ಅನ್ನುವುದನ್ನು ಅಭ್ಯರ್ಥಿಗಳಿಗೆ ತಿಳಿಸಲಾಗುತ್ತದೆ.

_________________________________________________________________________________

ನೀವು ನಿಮ್ಮ ನಗರದಲ್ಲೇ ಅವಕಾಶ ಪಡೆಯುವ ಬಗ್ಗೆ ಯೋಚನೆ ಮಾಡುತ್ತಿದ್ದೀರಾ? ಹೊಸ ಪ್ರದೇಶಗಳಲ್ಲಿ ಕೆಲಸ ಹುಡುಕುತ್ತಿದ್ದೀರಾ..? Wisdom jobs ನಲ್ಲಿ ನಿಮಗಿಷ್ಟವಾದ ಕೆಲಸವನ್ನು ಹುಡುಕಿ

Jobs in DelhiJobs in MumbaiJobs in Pune/ Jobs in BangloreJobs in Chennai/ Jobs in Hyderbad

_________________________________________________________________________________

ರಿಕ್ರೂಟ್​ಮೆಂಟ್​ನಲ್ಲಿರುವ "T" ಬಗ್ಗೆ

ಕೆಳೆದ ಕೆಲ ವರ್ಷಗಳಲ್ಲಿ ತಾಂತ್ರಿಕತೆ ಸಾಕಷ್ಟು ಅಭಿವೃದ್ಧಿ ಕಂಡಿದೆ. ಹೀಗಾಗಿ ತಾಂತ್ರಿಕ ಅಂಶಗಳು ಕೂಡ ಕಾಲ ಕಾಲಕ್ಕೆ ಅಭಿವೃದ್ಧಿ ಆಗಬೇಕಿದೆ. ಕಂಪನಿಗಳು ಕ್ಲೌಡ್​ ತಂತ್ರಜ್ಞಾನದ ಮೊರೆ ಹೋಗುತ್ತಿವೆ. ಉದ್ಯೋಗಾಕಾಂಕ್ಷಿಗಳು ಪ್ರೊಫೈಲ್​ಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ ಡೇಟಾ ಅನಾಲಿಟಿಕ್ಸ್​ಗಳ ಪಾತ್ರ ಬಹಳ ಮುಖ್ಯವಾಗಿದೆ. ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರು ಮೊಬೈಲ್ ಮೊರೆ ಹೋಗಿರುವುದರಿಂದ ಮೊಬೈಲ್​ ಟಾರ್ಗೆಟೆಡ್​ ಇಂಟರ್​ಫೇಸ್​ಗಳಾದ ಮೊಬೈಲ್​ ವರ್ಷ್​ನ ವೆಬ್​ಸೈಟ್​ಗಳು ಮತ್ತು ಆ್ಯಪ್​ಗಳನ್ನು ಹೊಂದುವುದು ಅನಿವಾರ್ಯವಾಗಿದೆ.

" ತಾಂತ್ರಿಕತೆ ಉದ್ಯೋಗದಾತರ ಕೆಲಸಗಳನ್ನು ಹೆಚ್ಚು ಸುಲಭಮಾಡಿದೆ. ಉದಾಹರಣೆಗೆ ಉದ್ಯೋಗದಾತರು Wisdomjobs.com ಹ್ಯಾಂಡೂಪ್​/ ಬಿಗ್​ ಡೇಟಾ ಮೂಲಕ ಹೆಚ್ಚು ವೇಗವಾಗಿ ಮತ್ತು ​ ನಿಖರವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು. ಅಷ್ಟೇ ಅಲ್ಲ ತನಗೆ ಅಗತ್ಯವಿರುವ ಮತ್ತು ಸೂಕ್ತವಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು."

ಪ್ರಗ್ಯಾ ಮೀಟರ್​ ಮತ್ತು ವಿಕನೆಕ್ಟ್​ಗೆ ಕೂಡ ಇದು ಅನ್ವಯವಾಗುತ್ತದೆ. ಪ್ರತಿನಿತ್ಯ ತಾಂತ್ರಿಕವಾಗಿ ಅಭಿವೃದ್ಧಿಯಾಗುವುದನ್ನು ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳು ಬಯಸುತ್ತಾರೆ. " ವಿಸ್ಡಮ್​ ಜಾಬ್ಸ್​ ಪ್ರತಿನಿತ್ಯ ನೇಮಕಾತಿಯ ವಿಕಾಸವನ್ನು ಬಯಸುತ್ತಿದೆ. ಅಷ್ಟೇ ಅಲ್ಲ ತಾಂತ್ರಿಕವಾಗಿ ಅಭಿವೃದ್ಧಿಯಾಗುವ ಪ್ರಯತ್ನವನ್ನು ಮಾಡುತ್ತದೆ. ಸರ್ಚ್​ ಎಂಜಿನ್​ಗಳಲ್ಲಿ, ಬಿಗ್​ ಡೇಟಾ ಮತ್ತು ಡೇಟಾ ಅನಾಲಿಕ್ಸ್​ಗಳಲ್ಲಿ, ಮೊಬೈಲ್​ ಆ್ಯಪ್​ಗಳಲ್ಲಿ ಸೇರಿದಂತೆ ಎಲ್ಲಾ ಕಡೆಯೂ ಅಭಿವೃದ್ಧಿ ಮಂತ್ರವನ್ನು ಪಠಿಸುತ್ತಿದೆ. ಯೂಸರ್​ ಫ್ರೆಂಡ್ಲಿ ಆಗಿರುವುದು ನಮ್ಮ ಮೊದಲ ಉದ್ದೇಶ " ಅಂತ ಹೇಳುತ್ತಾರೆ ಅಜಯ್​

ಸ್ಟಾರ್ಟ್​ ಅಪ್​​ ಮತ್ತು ನೇಮಕಾತಿಯ ಸವಾಲುಗಳು

ಭಾರತ ಸ್ಟಾರ್ಟ್​ ಅಪ್​ ಲೋಕದಲ್ಲಿ ವೇಗವಾಗಿ ಬೆಳೆಯತ್ತಿರುವ ದೇಶ. ಹೀಗಾಗಿ ಸ್ಟಾರ್ಟ್​ಅಪ್​ಗಳು ನೇಮಕಾತಿಯ ವಿಚಾರದಲ್ಲಿ ನಿರ್ದಿಷ್ಟವಾದ ಉದ್ದೇಶಗಳನ್ನು ಹೊಂದಿರುತ್ತವೆ. ಇದಕ್ಕೂ ಇಲ್ಲಿ ಅವಕಾಶವಿದೆ. ಸ್ಟಾರ್ಟ್​ ಅಪ್​ಗಾಗಿಯೇ ಕ್ವಿಕ್​ ಸೋರ್ಸ್​, ಅನ್ನುವ ವಿಭಾಗವಿದೆ. ಹೆಚ್​.ಆರ್​. ಇಲ್ಲದ ಚಿಕ್ಕ ಕಂಪನಿಗಳು ಕೂಡ ಇದರ ಲಾಭ ಪಡೆಯಬಹುದು. ಈ ಮೂಲಕ ನಿರ್ಧಿಷ್ಟ ಮತ್ತು ಸೂಕ್ತ ಅಭ್ಯರ್ಥಿಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ಸೂಕ್ತ ಹುದ್ದೆಗೆ ಸೂಕ್ತ ಅಭ್ಯರ್ಥಿಯ ಆಯ್ಕೆ ಕಂಪನಿಯ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಸ್ಟಾರ್ಟ್​ ಅಪ್​ ಲೋಕದಲ್ಲಂತೂ ಇದು ನಿಜಕ್ಕೂ ದೊಡ್ಡ ಹೆಜ್ಜೆಯೇ ಆಗಿರುತ್ತದೆ. ಅಜಯ್​ ಹೇಳುವಂತೆ, " ಸ್ಟಾರ್ಟ್​ ಅಪ್​ಗಳು ರಿಜಿಡ್​​ ಆಗಿರಬಾರದು. ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಿದರೆ ಅವರ ಆಸಕ್ತಿ ಕೂಡ ಹೆಚ್ಚುತ್ತದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆಯೇ ಅವರನ್ನು ಬಳಸಿಕೊಳ್ಳಬೇಕು. ಸಂಸ್ಥೆಯ ಕನಸುಗಳಿಗೆ ಕೆಲಸಗಾರರು ಕೂಡ ಸಾಥ್​ ನೀಡಬೇಕು. ಧನಾತ್ಮಕತೆಯನ್ನು ಸ್ವಾಗತಿಸುವ ಸಂಸ್ಕೃತಿ ಒಬ್ಬ ಕಂಪನಿಗೆ ಒಬ್ಬ ಉತ್ತಮ ರಾಯಭಾರಿಯನ್ನು ಸೃಷ್ಟಿಸಬಹುದು. "

Add to
Shares
21
Comments
Share This
Add to
Shares
21
Comments
Share
Report an issue
Authors

Related Tags