ಆವೃತ್ತಿಗಳು
Kannada

ಝೆಬುಗೇಮ್ಸ್ ಯಶಸ್ಸಿನ ಕಥೆ ಹಾಗೂ ಮಕ್ಕಳ ಸ್ಫೂರ್ತಿ

ಟೀಮ್​​ ವೈ.ಎಸ್​​.

YourStory Kannada
4th Nov 2015
Add to
Shares
12
Comments
Share This
Add to
Shares
12
Comments
Share

ಸ್ಟ್ಯಾನ್​​​ ಫೋರ್ಡ್​ ನಿಂದ ಪದವಿ ಪಡೆದ ಝಾಕ್ ಗೋಲ್ಡ್ ತನ್ನ ಇತರ ಹಿರಿಯ ವಿದ್ಯಾರ್ಥಿಗಳ ಹಾಗೆ ಬೇಸಿಗೆಯಲ್ಲಿ ಆಗ್ನೇಯ ಏಷಿಯಾ (ಸೌತ್ ಈಸ್ಟ್ ಏಷಿಯಾ)ದ ತಿರುಗಾಟಕ್ಕೆ ತೆರಳಿದ. ಆತ ಹಾಗೂ ಆತನ ಮಿತ್ರ ಅಕ್ಷಯ್, ಥೈಲ್ಯಾಂಡ್, ಇಂಡೋನೇಷಿಯಾ ಮತ್ತು ಭಾರತವನ್ನು ಸುತ್ತಲು ಸಿದ್ಧರಾದರು.

ಅವರ ಪ್ರವಾಸ ಅವರು ಬಯಸಿದಂತೆಯೇ ಆಗಿತ್ತು – ರಮಣೀಯ ಸಮುದ್ರ ತೀರಗಳು, ವನ್ಯಜೀವಿಗಳು, ಅತ್ಯುತ್ತಮ ಊಟ ಹಾಗೂ ಈ ದೇಶಗಳ ವಿಹಂಗಮ ನೋಟ. ಭಾರತದಲ್ಲಿ ಮೈಸೂರು, ಕೊಯಂಬತ್ತೂರು ಹಾಗೂ ಚೆನ್ನೈಗೆ ಭೇಟಿ ನೀಡಿದರು.

image


ಝಾಕ್ ತನ್ನ ಕಾಲೇಜು ದಿನಗಳಲ್ಲಿ ಬೋರ್ಡ್ ಮೇಲೆ ಆಡುವ ಆಟಗಳನ್ನು ಹಾಗೂ ಮೊಬೈಲ್ ನಲ್ಲಿ ಪದಬಂಧದ ರೀತಿಯ ಶಬ್ದಗಳ ಆಟಗಳನ್ನು ಸಾಕಷ್ಟು ಆಡಿದ್ದ. ಆದರೆ ಆತನಿಗೆ ಹೊಸತೇನೋ ಬೇಕು ಎನ್ನಿಸುತ್ತಿತ್ತು. ಅಕ್ಷಯ್, ಝಾಕ್ ಗೆ ಝೆಬು ಗೆಮ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದ ವರ್ಡ್​ಮಿಂಟ್ ಎಂಬ ಆಟವನ್ನು ಪರಿಚಯಿಸಿದ. ಶೀಘ್ರದಲ್ಲಿಯೇ ಈ ಆಟಕ್ಕೇ ತಾನು ಜೋತು ಬೀಳಲಿದ್ದೇನೆ ಎಂಬುದು ಮಾತ್ರ ಝಾಕ್ ಗೆ ಗೊತ್ತಿರಲಿಲ್ಲ.

ಅವರ ಉಳಿದ ಪ್ರವಾಸವೆಲ್ಲ ಕೇವಲ ಯಾರು ಹೆಚ್ಚು ಶಬ್ದಗಳನ್ನು ಮಿಂಟ್ ಮಾಡುತ್ತಾರೆ ಎಂಬ ಸ್ಪರ್ಧೆಯಲ್ಲಿಯೇ ಕಳೆದು ಹೋಯಿತು. ಸ್ಪರ್ಧೆಯ ತೀವ್ರತೆ ಎಷ್ಟರ ಮಟ್ಟಿಗೆ ಹೋಯಿತೆಂದರೆ ತಾವು ಗಳಿಸಿದ ವೈಯಕ್ತಿಕ ಅಂಕಗಳನ್ನು ಲಾಸ್ ಎಂಜಲಿಸ್ ನಲ್ಲಿ ತಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳಲು ಅವರು ಒಂದು ವಾಟ್ಸಾಪ್ ಗ್ರೂಪ್ ಅನ್ನೇ ಆರಂಭಿಸಿದ್ದರು. ಅವರ ಕುಟುಂಬ ಸದಸ್ಯರು ಕೂಡ ಅದಾಗಲೇ ಈ ಆಟವನ್ನು ಆಡಲು ಆರಂಭಿಸಿದ್ದರು.

ಜಾಗತಿಕ ಗೇಮಿಂಗ್ ಉದ್ಯಮದ ಕುರಿತು newzoo.com ಎಂಬ ಸಂಸ್ಥೆ ಅಧ್ಯಯನ ನಡೆಸುತ್ತದೆ. ಆ ಸಂಸ್ಥೆಯ ಪ್ರಕಾರ ಮೊಬೈಲ್ ಗೇಮ್ ಗಳು ಅತಿವೇಗವಾಗಿ ಜನಪ್ರಿಯವಾಗುತ್ತಿದ್ದು ಪ್ರಸ್ತುತ 12 ಬಿಲಿಯನ್ ಯು.ಎಸ್. ಡಾಲರ್ ನಷ್ಟು ಮಾರುಕಟ್ಟೆಯನ್ನು ಹೊಂದಿವೆ.

ಗ್ಲೋಬಲ್ ಮೊಬೈಲ್ ಗೇಮ್ ಕಾನ್ಫಿಡರೇಷನ್ (ಜಿಎಮ್ ಜಿಸಿ) ಎಂಬ ಮತ್ತೊಂದು ಅಧ್ಯಯನ ಸಂಸ್ಥೆಯ ಪ್ರಕಾರ 2014 ರಲ್ಲಿ ಜಾಗತಿಕ ಮೊಬೈಲ್ ಗೇಮಿಂಗ್ ಮಾರುಕಟ್ಟೆ 24.5 ಬಿಲಿಯನ್ ಯುಎಸ್ ಡಾಲರ್ ತಲುಪಿದ್ದರೆ, 2017 ರ ವೇಳೆಗೆ40 ಬಿಲಿಯನ್ ಯುಎಸ್ ಡಾಲರ್ ತಲುಪುವ ನಿರೀಕ್ಷೆ ಇದೆ.

image


ಜನಪ್ರಿಯ ಆಟಗಳಾದ ಆ್ಯಂಗ್ರಿಬರ್ಡ್ಸ್ ಹಾಗೂ ಕ್ಯಾಂಡಿಕ್ರಶ್ ಅತೀ ಹೆಚ್ಚು ಡೌನ್ ಲೋಡ್ ಗಳನ್ನು ದಾಖಲಿಸಿವೆ (100 ರಿಂದ 500 ಮಿಲಿಯನ್ ). ಪದಗಳ ಆಟ (ವರ್ಡ್ ಗೇಮ್) ಗಳಾದಂತಹ ರಜಲ್, ವರ್ಡ್ಸ್​​​ವಿತ್ ಫ್ರೆಂಡ್ಸ್ ಥರದವು 50 ಮಿಲಿಯನ್ ಡೌನ್ ಲೋಡ್ ಗಳನ್ನು ಪಡೆದಿವೆ.

ಮೊಬೈಲ್ ಗೇಮ್ ಉದ್ಯಮದಲ್ಲಿ ಆರಂಭಿಕ ಸಂಸ್ಥೆಯಾದ ಝೆಬು ಗೇಮ್ಸ್​​ನ ಕಥೆ ಇದು. ಈ ರೀತಿಯ ಉದ್ಯಮವನ್ನು ಬಳಸಿಕೊಳ್ಳಲು ಝೆಬು ಗೇಮ್ಸ್ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದೆ.

ಸಾಧಾರಣ 1 ವರ್ಷದ ಹಿಂದೆ ಇಬ್ಬರು ಅಪ್ಪಂದಿರು, ಕೆ. ಶ್ರೀಕೃಷ್ಣ ಹಾಗೂ ಬಿಕಾಶ್ ಚೌಧರಿ, ಬೆಂಗಳೂರಿನಲ್ಲಿ ಮೊಬೈಲ್ ಗೇಮ್ ಸ್ಟುಡಿಯೋ ಆರಂಭಿಸಿಲು ನಿರ್ಧರಿಸಿದರು. ಸ್ಟಾರ್ಟ್ ಅಪ್ ಉದ್ಯಮಕ್ಕೆ ಇಬ್ಬರೂ ಹೊಸಬರಾಗಿರಲಿಲ್ಲ. ಅಷ್ಟೇ ಅಲ್ಲ, ಬಿಕಾಶ್ ಅವರಿಗೆ ಇನ್ ಮೊಬಿ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಇಲ್ಲಿ ಉಪಯೋಗಕ್ಕೆ ಬಂತು.

“2011 ರ ಮಧ್ಯಭಾಗದಲ್ಲಿ ನಮಗೆ ಈ ಆಲೋಚನೆ ಹೊಳೆಯಿತು. ಈ ಉದ್ಯಮ ಪ್ರವೇಶಿಸುತ್ತಿದ್ದಂತೆಯೇ ಮೊಬೈಲ್ ಮಾರುಕಟ್ಟೆಯ ಅಗಾಧ ಅವಕಾಶದ ಬಗ್ಗೆ ಅರಿವಾಯಿತು. ಅನೇಕ ಪಬ್ಲಿಷರ್​​ಗಳು ಸಣ್ಣ ಸಣ್ಣ ತಂಡಗಳನ್ನು ಮಾಡಿಕೊಂಡು ಪ್ರತಿನಿತ್ಯವೂ ಸಾವಿರಾರು ಡಾಲರ್ ಗಳನ್ನು ಹೇಗೆ ಸಂಪಾದಿಸುತ್ತಾರೆ ಎಂಬುದನ್ನು ಕಂಡುಕೊಂಡೆ. ಹಾಗೆಯೇ, ಈ ಕ್ಷೇತ್ರದಲ್ಲಿ ಉತ್ತುಂಗಕ್ಕೇರಬಹುದು ಎಂಬ ವಿಶ್ವಾಸ ನನ್ನಲ್ಲಿತ್ತು” ಎನ್ನುತ್ತಾರೆ ಬಿಕಾಶ್.

ಕಲಿಕೆಯನ್ನು ಮೋಜಾಗಿಸಲು ಪಬ್ಲಿಶಿಂಗ್ ಪ್ಲಾಟ್ ಫಾರ್ಮ್ ಅನ್ನು ಬಳಸುವ ಕುರಿತಂತೆ ಇಬ್ಬರೂ ಯೋಚಿಸುತ್ತಿರುವಾಗ, ಮೊಬೈಲ್ ಗೇಮ್ ನ ಆಲೋಚನೆ ಬಂದಿತು.

ನ್ಯಾಷನಲ್ ಆಂತ್ರಪ್ರಾನುರ್​​ಶಿಪ್​​​​​ ನೆಟ್​​ವರ್ಕ್ ನಲ್ಲಿ ಕಳೆದ ನವೆಂಬರ್ ವರೆಗೆ ಕೆಲಸ ಮಾಡುತ್ತಿದ್ದ ಶ್ರೀಕೃಷ್ಣ, ಅಲ್ಲಿಂದ ಕೊಂಚ ವಿರಾಮ ಪಡೆದು ಈ ಉದ್ಯಮದಲ್ಲಿ ಸಾಗಲು ನಿರ್ಧರಿಸಿದರು. ಬಿಕಾಶ್ ಹಾಗೂ ಶ್ರೀಕೃಷ್ಣ ಒಟ್ಟಿಗೆ ಕೆಲಸ ಮಾಡುತ್ತಿರುವುದು ಇದೇ ಮೊದಲಾಗಿರಲಿಲ್ಲ. ಇಂಪಲ್ಸ್ ಸಾಫ್ಟ್ ಹಾಗೂ ನಂತರ ಸಿರ್ಫ್ ಟೆಕ್ನಾಲಜಿ ಎಂಬ ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. 2000 ನೇ ಇಸವಿಯಲ್ಲಿ ಸಿರ್ಫ್ ಟೆಕ್ನಾಲಜಿ ಅವರ ಸಂಸ್ಥೆಯನ್ನು ಖರೀದಿಸಿತ್ತು.

ತಮ್ಮ ಎಲ್ಲ ಅನುಭವನ್ನು ಬಳಸಿಕೊಂಡು ಕಂಪನಿಯನ್ನು ಪ್ರಾರಂಭಿಸಿದರೆ, ಉಳಿದ ಸ್ಟಾರ್ಟ್ ಅಪ್ ಕಂಪನಿಗಳಿಗಿಂತ ಕಡಿಮೆ ತಪ್ಪುಗಳನ್ನು ಮಾಡಲಿದ್ದೇವೆ ಎಂಬ ವಿಷಯ ಇಬ್ಬರಿಗೂ ತಿಳಿದಿತ್ತು. ಅವರು ಝೆಬು ಗೇಮ್ಸ್ ಅನ್ನು 6 ಲಕ್ಷ ರೂಪಾಯಿ ಬಂಡವಾಳ ಹಾಕಿ ಆರಂಭಿಸಿದರು.

ಅವರ ಆಲೋಚನೆಗಳಿಗೆ ಜೀವ ತುಂಬುವ ಓರ್ವ ಮೊಬೈಲ್ ಗೇಮ್ ಡೆವಲಪರ್ ನ ಕೊರತೆ ಮಾತ್ರ ಬಾಕಿ ಉಳಿದಿತ್ತು.

ಆದರೆ ಅತ್ಯುತ್ತಮ ಗೇಮ್ ಡೆವೆಲಪರ್ ಹಾಗೂ ಮೇಧಾವಿಯಾದ ಕೊಲ್ಲೋಲ್ ದಾಸ್ ಅವರ ತಂಡವನ್ನು ಸೇರುವುದರೊಂದಿಗೆ ಈ ಕೊರತೆ ಕೂಡ ನೀಗಿತು. ಈ ತಂಡ ತಮ್ಮ ಪ್ರಥಮ ಗೇಮ್ ಹೋಮ್ ಬೌಂಡ್ ಅನ್ನು ಡಿಸೆಂಬರ್ ನಲ್ಲಿ ಪರಿಚಯಿಸಿತು.

“ನಮ್ಮಿಂದ ಇದು ಸಾಧ್ಯವೇ ಎಂಬುದನ್ನು ನಾವೇ ಪರೀಕ್ಷಿಸಬೇಕಿತ್ತು. ನಮ್ಮದೇ ಪರೀಕ್ಷೆಯ ಬಳಿಕ, ಅಲ್ಲಿಗೆ ಎಲ್ಲ ಆತಂಕ ಹಾಗೂ ಸಂಶಯಗಳು ದೂರವಾಗಿದ್ದವು” ಎನ್ನುತ್ತಾರೆ ಶ್ರೀಕೃಷ್ಣ.

ಕಳೆದ ತ್ರೈಮಾಸಿಕದಲ್ಲಿ ಝೆಬು ಗೇಮ್ಸ್ ಮತ್ತೆರಡು ಗೇಮ್ ಗಳನ್ನು ಹೊರ ತಂದಿತು – ವರ್ಡ್​ಮಿಂಟ್ ಹಾಗೂ ಫಾಲೋ ದಿ ಡಾಟ್ಸ್. ವರ್ಡ್ ಮಿಂಡ್ ಒಬ್ಬರೇ ಆಡುವ ಆಟವಾಗಿದ್ದು, ಅಕ್ಷರಗಳನ್ನು ಪಡೆಯುತ್ತ ಶಬ್ದಗಳನ್ನು ‘ಮಿಂಟ್’ ಮಾಡಬಹುದು. ಫಾಲೋ ದಿ ಡಾಟ್ಸ್ ಬೆರಳುಗಳ ಸಹಾಯದಿಂದ ಆಡುವ ಗೇಮ್ ಆಗಿದೆ.

ಈ ಎರಡೂ ಆಟಗಳು ಮೋಜಿನ ಆಟಗಳಾಗಿದ್ದರೂ, ಮಕ್ಕಳ ಪದ ಕಲಿಕೆ ಹಾಗೂ ಕಣ್ಣು-ಕೈ ಬಳಕೆಯಲ್ಲಿ ಈ ಆಟಗಳು ಅತ್ಯಂತ ಪ್ರಯೋಜನಕಾರಿಯಾಗಿವೆ ಎಂದು ಹಲವು ಶಿಕ್ಷಕರು ಹಾಗೂ ಪಾಲಕರು ಅಭಿಪ್ರಾಯಪಡುತ್ತಾರೆ.

image


“ಈ ತನಕ ನಮಗೆ ದೊರಕಿರುವ ಪ್ರತಿಕ್ರಿಯೆ ಉತ್ತಮವಾಗಿಯೇ ಇದೆ. ವಿಶಿಷ್ಟ ಚೇತನ ಮಕ್ಕಳು ಕೂಡ ಫಾಲೋ ದಿ ಡಾಟ್ಸ್ ಆಟವನ್ನು ಇಷ್ಟಪಟ್ಟು ಆಡುತ್ತಾರೆ ಎಂದು ಹಲವು ವಿಶೇಷ ಕಲಿಕಾ ಕೇಂದ್ರಗಳ ಪ್ರತಿನಿಧಿಗಳು ಹೇಳಿದ್ದಾರೆ” ಅನ್ನುತ್ತಾರೆ ಬಿಕಾಶ್.

ಸಂಸ್ಥೆಯ ಮೊದಲ ಗೇಮ್ ಹೋಮ್ ಬೌಂಡ್ ಪ್ರಸ್ತುತ ಲಭ್ಯವಿಲ್ಲ. ಆದರೆ ಉಳಿದೆರಡು ಆಟಗಳು ಈತನಕ 10 ಸಾವಿರ ಡೌನ್ ಲೋಡ್ ಗಳನ್ನು ದಾಖಲಿಸಿವೆ.

ಝೆಬುಗೇಮ್ಸ್ ಎಲ್ಲ ಪ್ಲಾಟ್ ಫಾರ್ಮ್ ಗಳಲ್ಲಿ ಉಚಿತ ಆಟಗಳನ್ನು (ಎಫ್2ಪಿ) ಮುಂದುವರೆಸಲಿದೆ. ಬಿಕಾಶ್ ಅವರ ಪ್ರಕಾರ, ಅವರ ಸಂಸ್ಥೆಯು ಇನ್-ಗೇಮ್ ಅಡ್ವಟೈಸ್​​​​​​​ಗಳನ್ನು ಆದಾಯದ ಮೂಲವಾಗಿ ಬಳಸಿಕೊಳ್ಳಲಿದೆ. ಭವಿಷ್ಯದ ಅವರ ದಾರಿ ಸ್ಫಟಿಕದಷ್ಟೇ ನಿಚ್ಚಳವಾಗಿದೆ – ಈ ವರ್ಷದಲ್ಲಿ 5 ಗೇಮ್ ಗಳು ಹಾಗೂ ತದನಂತರ ಪ್ರತಿವರ್ಷ 12 ಗೇಮ್ ಗಳು.

“ಈಗಾಗಲೇ ಮೂರು ಆಟಗಳ ಮಾದರಿ ಸಿದ್ಧವಾಗಿದೆ. ಹೀಗಾಗಿ ಈ ವರ್ಷ 5 ಗೇಮ್ ಗಳನ್ನು ಪರಿಚಯಿಸುವ ಇರಾದೆ ಹೊಂದಿದ್ದೇವೆ. ನಮ್ಮಕೆಲ ಆಟಗಳು, ಇತರ ಪದ ಆಧಾರಿತ ಗೇಮ್ ಗಳ ಮುಂದುವರಿಕೆಯ ಭಾಗವಾಗಲಿವೆ. ಜೊತೆಗೆ, ನಾವು ಉತರ ಭಾಷೆಗಳಲ್ಲಿ ಕೂಡ ಗೇಮ್ ಗಳನ್ನು ಪರಿಯಸುವ ಯೋಜನೆ ಹೊಂದಿದ್ದೇವೆ” ಅನ್ನುತ್ತಾರೆ ಬಿಕಾಶ್.

ಇನ್ನು ಸ್ಫೂರ್ತಿಗೆ ಸಂಬಂಧಿಸಿದಂತೆ, ಇಬ್ಬರೂ ತಂದೆಯರು ಕೂಡ ಏನನ್ನೂ ಕೊಡದೇ ಇರಲು ಸಾಧ್ಯವೇ ಇಲ್ಲ, ಯಾಕೆಂದರೆ ಅವರ ಮಕ್ಕಳೇ ಅವರಿಗೆ ಸ್ಫೂರ್ತಿಯಾಗಿದ್ದಾರೆ. “ಅವರು ಕೇಳುತ್ತಾರೆ, ಯಾವಾಗ ಹೊಸ ಗೇಮ್ ಬರುತ್ತೆ ಅಪ್ಪ? ಅಂತ. ಆಗ ನಮಗೆ ಇದು ಕೆಲಸಕ್ಕೆ ತೆರಳುವ ಸರಿಯಾದ ಸಮಯ ಎಂದು ನಮಗೆ ತಿಳಿಯುತ್ತದೆ” ಎಂದು ಶ್ರೀಕೃಷ್ಣ ಹೇಳುತ್ತಾರೆ.

Add to
Shares
12
Comments
Share This
Add to
Shares
12
Comments
Share
Report an issue
Authors

Related Tags