ಆವೃತ್ತಿಗಳು
Kannada

ಈ ಕಥೆಗಳನ್ನು ನೀವು ಓದಿದ್ದೀರಾ..?

ಟೀಮ್​​ ವೈ.ಎಸ್​​.ಕನ್ನಡ

YourStory Kannada
25th Nov 2015
Add to
Shares
18
Comments
Share This
Add to
Shares
18
Comments
Share

ಸಾಮಾಜಿಕ ಉದ್ಯಮಶೀಲತೆಗೆ ಭಾರತದಲ್ಲಿ ವಿಶೇಷ ಸ್ಥಾನವಿದೆ. ಏಕೆಂದರೆ ಮೊಟ್ಟ ಮೊದಲ ಬಾರಿಗೆ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (CSR) ಕಡ್ಡಾಯವಾಯ್ತು. ಸೆಕ್ಯುರಿಟಿ ಎಕ್ಸ್​​​​ಚೇಂಜ್ ಬೋರ್ಡ್ ಆಫ್ ಇಂಡಿಯಾ (SEI)ನೊಂದಿಗೆ, ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ (DICCI) ಮೊದಲ ಸಾಮಾಜಿಕ ನಿಧಿ ಪಡೆಯುವಲ್ಲಿ ದಾಖಲೆ ಮಾಡಿತು. ಇಂಡಿಯನ್ ಇಂಪ್ಯಾಕ್ಟ್ ಇನ್ವೆಸ್ಟರ್ ಕೌನ್ಸಿಲ್(IIIC)ನ ಸ್ಥಾಪನೆ ಬಂಡವಾಳ ಉದ್ಯಮಕ್ಕೆ ಅತ್ಯುತ್ತಮವಾಯ್ತು. ಹಾಗಾಗಿ ಹೊಸ ಹಣವನ್ನು ಪ್ರಕಟಿಸಲಾಗಿದೆ. ಒಮಿಡಿಯರ್ ನೆಟ್ವರ್ಕ್ ಹಾಗು ರಾಕ್‍ಫೆಲ್ಲರ್ ಫೌಂಡೇಶನ್ ನೀಡಿದ ಅನುದಾನವನ್ನು ಬಳಸಿಕೊಂಡು ಸೋಶಿಯಲ್ ಸ್ಟೋರಿ ತನ್ನ ವ್ಯಾಪಾರವನ್ನು ಅಭಿವೃದ್ಧಿಪಡಿಸಿತು.

11) 5ನೇ ಇಡಿಯಾ ಚಾಲೆಂಜ್, ಐಎಸ್‍ಬಿಯ ಸಾಮಾಜಿಕ ಕೆಲಸಕ್ಕಾಗಿ ಸ್ಪರ್ಧೆ ಆಯೋಜಿಸಲಾಗಿದ್ದು, ಅದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

image


ಐಡಿಯಾ ಎಂದರೆ, ಅದೊಂದು ರಾಷ್ಟ್ರೀಯ ಸಾಮಾಜಿಕ ಉದ್ಯಮಕ್ಕಾಗಿ ಉತ್ತಮ ಆಲೋಚನೆಗಳನ್ನು ನೀಡುವ ಸ್ಪರ್ಧೆ. ಆರಂಭಿಕ ಹಂತದಲ್ಲಿರುವ ಸಾಮಾಜಿಕ ಉದ್ದಿಮೆಗಳು, ಉದಯೋನ್ಮುಖ ಉದ್ಯಮಿಗಳಿಗೆ ಇದೊಂದು ಒಳ್ಳೆಯ ವೇದಿಕೆ.

ಇದಲ್ಲದೆ, ಬಹುಮಾನದ ಹಣದಿಂದ ಮೊದಲ 10 ತಂಡಗಳಿಗೆ ಒಂದು ವಾರದ ಬೂಟ್ ಕ್ಯಾಂಪ್ ಅಧಿವೇಶನದಲ್ಲಿ ಭಾಗವಹಿಸುವ ಅವಕಾಶ ಕೊಡಲಾಗುತ್ತದೆ. ಜೊತೆಗೆ ಅವರ ಉದ್ಯಮಗಳಿಗೆ ಮಾರ್ಗದರ್ಶನ ನೀಡಿ, ಅವರ ಕನಸನ್ನು ನನಸಾಗಿಸಿಕೊಳ್ಳಲು ಬೆಂಬಲಿಸಲಾಗುತ್ತದೆ.

  • ಗ್ರಾಮೀಣ ಭಾರತದ ಒಬ್ಬ ಸಿಟಿಬ್ಯಾಂಕರ್‍ನ ಕಥೆ- ಅಜಯ್ ಚತುರ್ವೇದಿ ವಾರ್ಟನ್ & ಪೆನ್‍ನಿಂದ ಇಂಜಿನಿಯರಿಂಗ್ ಪದವಿ ಪಡೆದು ಸಿಟಿಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ಅವರು ಹಿಮಾಲಯಕ್ಕೆ ಹೋಗುವ ನಿರ್ಧಾರ ಮಾಡಿದರು. ಅವರಿಗೆ ಕಡ್ಡಾಯವಾಗಿ 2 ವಾರಗಳ ಕಾಲ ಕೆಲಸಕ್ಕೆ ರಜೆ ಮಾತ್ರ ಇತ್ತು. ಆದ್ರೆ ಹಿಮಾಲಯಕ್ಕೆ ಹೋಗುವುದು ಅವರಿಗೆ ಬಾಲ್ಯದ ಕನಸಾಗಿತ್ತು. ಹೀಗಾಗಿಯೇ ಸುದೀರ್ಘ ರಜೆ ಪಡೆದು, ಹಿಮಾಲಯಕ್ಕೆ ಹೋದ ನಂತರ, ಅವರು ಅಲ್ಲೇ 6 ತಿಂಗಳು ಕಾಲ ಕಳೆದರು
  • ಮಹಿಳೆಯರ ಸಮಾಜಸೇವೆ - ಮಹಿಳೆಯರ ಮೇಲಿನ ದೌರ್ಜನ್ಯ - ಕತ್ತಲಿನಿಂದ ಬೆಳಕಿನತ್ತ : ಭಾರತದಲ್ಲಿ ಸಾಕಷ್ಟು ಹೆಣ್ಣು ಭ್ರೂಣ ಹತ್ಯೆ, ಶಿಶು ಹತ್ಯೆ, ವರದಕ್ಷಿಣೆ ಸಾವು, ಅತ್ಯಾಚಾರ ನಡೆಯುತ್ತಲೇಯಿದೆ. ಪುರುಷಪ್ರಧಾನ ಸಮಾಜವಾದ್ದರಿಂದ ಮಹಿಳೆಯರ ಮೇಲೆ ಸಾಕಷ್ಟು ದೌರ್ಜನ್ಯ ನಡೆಯುತ್ತದೆ. ಈ ಅಂಶಗಳು ನಮ್ಮ ನೈತಿಕ ಮತ್ತು ಸಾಮಾಜಿಕ ಹಿನ್ನೆಡೆಗೆ ಮಾತ್ರವಲ್ಲ, ಆರ್ಥಿಕವಾಗಿಯೂ ದೇಶದ ಹಿನ್ನೆಡೆಗೆ ಕಾರಣವಾಗುತ್ತದೆ. ಭಾರತ ಶೇ 39 ರಷ್ಟು ಮಹಿಳಾ ಕಾರ್ಮಿಕರನ್ನು ಮಾತ್ರ ಬಳಸಿಕೊಳ್ಳುತ್ತ್ತಿದೆ. ಹಾಗೆ ನೋಡಿದರೆ ಚೀನಾದಲ್ಲಿ ಶೇ 71 ರಷ್ಟು ಮಹಿಳೆಯರು ಉದ್ಯೋಗಸ್ಥರಾಗಿದ್ದಾರೆ. ಹೀಗಾಗಿ, ಮಹಿಳಾ ಉದ್ಯಮಿಗಳಿಗೆ ಭಾರತದಲ್ಲಿ ಸ್ಥಾನ ಮಾಡಿಕೊಡಬೇಕಾದ ಅನಿವಾರ್ಯತೆಯಿದೆ.
  • ವಿಶ್ವ ಸ್ತನಪಾನ್ಯ ವಾರ World Breastfeeding Week (WBW) (ಆಗಸ್ಟ್ 1-7) ಧ್ವನಿ ಮತ್ತು ಡಿಇಎಫ್‍ನೊಂದಿಗೆ ಜಾಗೃತಿ ಹರಡುವುದು.

ತಾಯಿ ಹಾಲು ಮಗುವಿಗೆ ಬೇಕಾದ ಎಲ್ಲಾ ಪೌಷ್ಠಿಕಾಂಶಗಳಿಂದ ಕೂಡಿರುತ್ತದೆ. ಹೀಗಾಗಿಯೇ ಮಗುವಿಗೆ ತಪ್ಪದೆ ಮೊದಲ 6 ತಿಂಗಳು ಎದೆ ಹಾಲು ಕುಡಿಸುವುದು ಅತ್ಯವಶ್ಯ. 1991ರಲ್ಲಿ ಮೊಟ್ಟಮೊದಲ ಬಾರಿಗೆ ಮಕ್ಕಳಲ್ಲಿ ನ್ಯುಮೋನಿಯಾ ಮತ್ತು ದೈಹಿಕ ಬೆಳವಣಿಗೆಯಲ್ಲಿ ತೊಂದರೆ, ಮಾರಣಾಂತಿಕ ರೋಗಗಳೂ ಕಂಡುಬಂದಿತ್ತು. ಹಾಗಾಗಿ ಒಟ್ಟಾರೆ 120 ದೇಶಗಳಲ್ಲಿ ಆಗಸ್ಟ್ ತಿಂಗಳ ಮೊದಲ ವಾರದಂದು ಎದೆ ಹಾಲು ಕುಡಿಸುವುದರ ಬಗ್ಗೆ ಜಾಗೃತಿ ಹರಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ.

  • ಭಾರತದ ಶಿಕ್ಷಣಾಭಿವೃದ್ಧಿಗಾಗಿ ಶುರುವಾದ 8 ಸಹಾಯಕ ಉದ್ಯಮಗಳು.

ಭಾರತದಲ್ಲಿ ಈಗಲೂ ಶೇ4% ರಷ್ಟು ಮಕ್ಕಳಿಗೆ ಶಾಲೆಗೆ ಹೋಗಲು ಅವಕಾಶವಿಲ್ಲ. ಶೇ58%ರಷ್ಟು ಮಕ್ಕಳು ಶಾಲೆಗೆ ಸೇರಿದರೂ ವ್ಯಾಸಂಗ ಮಾಡಲಾಗುತ್ತಿಲ್ಲ, ಅವರಲ್ಲಿ ಶೇ90% ರಷ್ಟು ಮಕ್ಕಳು ವಿದ್ಯೆ ಪೂರ್ಣಗೊಳಿಸಲಾಗುತ್ತಿಲ್ಲ. ಇದಕ್ಕೆ ಕಾರಣ ಶಾಲೆಗಳು ದೂರದ ಪ್ರದೇಶದಲ್ಲಿರುವುದು, ಕಡಿಮೆ ಆದಾಯ, ಬಾಲ ಕಾರ್ಮಿಕ ಪದ್ಧತಿ. ಸಾಮಥ್ರ್ಯ ಇಲ್ಲದೆ ಇರುವುದು ಇದಕ್ಕೆ ಒಂದು ಕಾರಣವಾದರೆ ಇನ್ನೊಂದು ಕಾರಣ ಶಾಲೆಗಳಲ್ಲಿ ಶುಚಿತ್ವ ಇಲ್ಲದಿರುವುದಾಗಿದೆ. ಹೀಗಾಗಿಯೇ 11ರಿಂದ 14 ವಯಸ್ಸಿನ ಪ್ರೌಢಾವಸ್ತೆಯಲ್ಲಿರುವ ಹೆಣ್ಣುಮಕ್ಕಳು ಶಾಲೆಯ ಶೌಚಾಲಯಗಳು ಶುಚಿ ಇಲ್ಲದ ಕಾರಣ ಶಾಲೆಯನ್ನು ಅರ್ಧಕ್ಕೇ ಬಿಡುತ್ತಾರೆ.

  • 'ಕ್ಯಾಬಿನ್ ಸೂಸೈಡ್'ನಿಂದ ಹೊರಬರಲು ಗೌರಿಯ ಪ್ರಯತ್ನ.

'ಕ್ಯಾಬಿನ್ ಸೂಸೈಡ್' - ಈ ಪದವನ್ನು ನೀವು ಎಲ್ಲಿಯೂ ಕೇಳಿರುವುದಕ್ಕೆ ಸಾಧ್ಯವಿಲ್ಲ. ಇದು ಬಹುಶಃ ಗೂಗಲ್‍ನಲ್ಲೂ ದೊರೆಯುವುದಿಲ್ಲ. ಡಿಕ್ಷನರಿ, ಪದಕೋಶಗಳಲ್ಲಿ ಹುಡುಕಿದರೂ ಕೆಲವೊಮ್ಮೆ ಸಿಗುವುದಿಲ್ಲ. ಆದರೆ ಇದೊಂದು ತಮಾಷೆಯ ಬಾಯಿ ಮಾತು ಅಷ್ಟೆ. ಗೌರಿ ಅಗರ್ವಾಲ್ ಹೂಡಿಕೆ ಬ್ಯಾಂಕಿನಲ್ಲಿ ಕೆಲಸ ಮಾಡಿದ ನಂತರ ಸತತ 2 ವರ್ಷಗಳಕಾಲ 'ಕ್ಯಾಬಿನ್ ಸೂಸೈಡ್'ಅನ್ನು ಸ್ಥಾಪನೆ ಮಾಡಲು ದುಡಿದರು.

  • ವಿದ್ಯಾಭ್ಯಾಸವನ್ನು ಪೂರ್ಣಗೊಳಿಸದೆ ವಿದ್ಯಾಲಯದಿಂದ ಹೊರಬಂದು, ಒಬ್ಬ ಅಮೆರಿಕನ್ ಭಾರತದಲ್ಲಿನ ಜಲಪೂರೈಕೆ ಸಮಸ್ಯೆಯನ್ನು ಪರಿಹರಿಸಿದ ಕಥೆ.

ಪ್ರತಿ ವರ್ಷ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಭಾರತದ ಉದ್ಯೋಗಿಗಳು ಸುಮಾರು 20 ಬಿಲಿಯನ್ ಡಾಲರ್‍ನಷ್ಟು ಸಂಬಳ ಪಡೆಯುತ್ತಾರೆ (ಅಂದರೆ ವಿಶ್ವದ ಶೇ10%). ಇತ್ತೀಚೆಗೆ, ಭಾರತದ ಪದವೀಧರರು ಅಮೇರಿಕಾಕ್ಕೆ ಹೋಗಿ ಅಲ್ಲಿ ಮುಂದಿನ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಅಲ್ಲಿನ ಸಿಲಿಕಾನ್ ವ್ಯಾಲಿ ಮತ್ತು ನ್ಯೂ ಯಾರ್ಕ್‍ನಲ್ಲಿ ಕೆಲಸ ಗಿಟ್ಟಿಸಿಕೊಂಡು ನೆಲೆಸಿದ್ದಾರೆ. ಆದರೆ ಈಗಿನ ಕಥೆ ವಿಭಿನ್ನವಾದುದು. ಕ್ಯಾಲಿಫೋರ್ನಿಯಾ ಮಹಾವಿದ್ಯಾಲಯದಿಂದ ಹೊರಬಂದು ಭಾರತದಲ್ಲಿ ಸಿಲಿಕಾನ್ ನ್ಯಾಲಿ ಕಂಡುಕೊಂಡ ಒಬ್ಬ ವ್ಯಕ್ತಿಯ ಕಥೆಯಿದು.

  • ಶೇ12%ರಷ್ಟು ಭಾರತೀಯ ಮಹಿಳೆಯರು ಮಾತ್ರ ನೈರ್ಮಲ್ಯ ಕರವಸ್ತ್ರ (ಸ್ಯಾನಿಟರಿ ನ್ಯಾಪ್ಕಿನ್) ಬಳಸುತ್ತಾರೆ. ಹೀಗಾಗಿಯೇ ಅದರ ಅವಶ್ಯಕತೆ ಮತ್ತು ಉಪಯೋಗಗಳ ಕುರಿತು ಹೆಣ್ಣುಮಕ್ಕಳಲಿ ಅರಿವು ಮೂಡಿಸಲು ಅರುಣಾಚಲಂ ಮುರುಗಾನಂತಂ ಮುಂದಾಗಿದ್ದಾರೆ.

ಅರುಣಾಚಲಂ ಮುರುಗಾನಂತಂ ಅವರ ಬಗ್ಗೆ ನೀವು ಕೇಳಿಯೇ ಇರಬಹುದು. ಏಕೆಂದರೆ ಇವರು ಟಿಇಡಿ ಮತ್ತು ಇಂಕ್‍ನ ಮುಖಾಂತರ ಅನೇಕ ಶಾಲೆ, ಕಾಲೇಜು ಹಾಗೂ ಇತರೆ ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾಣಿಸಿಕೊಂಡಿದ್ದಾರೆ. ಜಯಶ್ರೀ ಎಂಟರ್‍ಪ್ರೈಸಸ್ ಇವರ ಕಂಪನಿ. ಕಂಪನಿಯ ಬಗ್ಗೆ ಕೇಳಿದಾಗ "ದಯವಿಟ್ಟು ಇದನ್ನು ಕಂಪನಿ ಎಂದು ಕರೆಯಬೇಡಿ ಇದೊಂದು ಚಲನೆ, ಕಂಪನಿಯಲ್ಲ" ಎಂದು ಹೇಳುತ್ತಾರೆ.

  • 3 ಚಕ್ರಗಳ ಯೂನಿಯನ್ - ಬೆಂಗಳೂರಿನ ಆಟೋಚಾಲಕರಿಗೆ ಪರಿಸರದ ಜ್ಞಾನಾರ್ಜನೆ ಹಾಗೂ ಅದರಿಂದ ಹೆಚ್ಚು ಹಣ ದುಡಿಮೆಯ ದಾರಿ.

40 ವರ್ಷದ ಜಿ. ಮಲ್ಲಿಗೆ ಬೆಂಗಳೂರಿನ ಮಹಿಳಾ ಆಟೋ ಚಾಲಕರಲ್ಲಿ ಒಬ್ಬರು. ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಅವರ ಸಮುದಾಯದ ಸಹಾಯದಿಂದ ಬ್ಯಾಂಕ್ ಸಾಲ ತೆಗೆದು 2000ನೇ ಇಸವಿಯಲ್ಲಿ ಸ್ವಂತ ಆಟೋ ಖರೀದಿ ಮಾಡಿ, 16 ವರ್ಷಗಳಿಂದ ಆಟೋ ಚಾಲಕಿಯಾಗಿ ಕೆಲಸ ಮಾಡುತ್ತಿದ್ದಾರೆ. 2008ರಲ್ಲಿ ಪರಿಸರದ ಮಲಿನತೆಯಿಂದ ಹೊರಬರಲು ಸರ್ಕಾರ 2-ಸ್ಟ್ರೋಕ್ ಆಟೋಗಳನ್ನು ನಿಷೇಧಿಸಿತು.

  • 7 ಸಾಮಾಜಿಕ ವ್ಯಾಪಾರ ಇಂಕ್ಯುಬೇಟರ್‍ಗಳಿಂದ ಹೊಸ ಉದ್ಯಮಗಳಿಗೆ ಸಹಾಯ.

ಹೊಸ ಉದ್ಯಮಗಳಿಗೆ ಪ್ರಗತಿಯ ನೆರವು ಏಕೆ ಬೇಕು? ಸ್ಪಷ್ಟ ಯೋಜನೆ, ದುರ್ಬಲ ಸಾಂಸ್ಥಿಕ ರಚನೆ, ಅಸಮರ್ಪಕ ರಚನೆ, ಪ್ರಕ್ರಿಯೆಗಳ ಕೊರತೆ, ಹಣದ ಕೊರತೆ, ನುರಿತ ಸಿಬ್ಬಂದಿ ಮತ್ತಿತರ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ, ಇಂಕ್ಯುಬೇಷನ್ ಪ್ರಕ್ರಿಯೆ ಹೊಸ ಉದ್ಯಮಗಳಿಗೆ ಪರಿಣಾಮಕಾರಿ ಹಾಗೂ ಸಹಾಯ ನೀಡುತ್ತದೆ.

ಲೇಖಕರು: ನೆಲ್ಸನ್​​ ವಿನೋದ್​​ ಮೊಸೆಸ್​​

ಅನುವಾದಕರು: ವಿಶಾಂತ್​​

Add to
Shares
18
Comments
Share This
Add to
Shares
18
Comments
Share
Report an issue
Authors

Related Tags