ಆವೃತ್ತಿಗಳು
Kannada

ಎಲ್ಲಿಯ ಅರ್ಥಶಾಸ್ತ್ರ..? ಎಲ್ಲಿಯ ಫ್ಯಾಷನ್..?

ಟೀಮ್​​ ವೈ.ಎಸ್​​.

YourStory Kannada
20th Oct 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಅನಕಾ ನಾರಾಯಣನ್ ಓದಿದ್ದು ಅರ್ಥಶಾಸ್ತ್ರ. ದಶಕದ ಹಿಂದೆ ಅಮೆರಿಕಾದ ಒರೆಗಾನ್ ಪೋರ್ಟ್​ಲೆಂಡ್​​ನ ರೀಡ್ ಕಾಲೇಜಿನಿಂದ ಅರ್ಥಶಾಸ್ತ್ರ ಪದವಿ ಪಡೆದಿದ್ದರು. ಅನಕಾಗೆ ಅಭಿವೃದ್ಧಿ ಅರ್ಥಶಾಸ್ತ್ರದ ಬಗ್ಗೆ ಆಸಕ್ತಿ ಇತ್ತು. ಅಲ್ಲಿಯವರೆಗೆ ಎಲ್ಲಾ ಶೈಕ್ಷಣಿಕ ತರಬೇತಿಗಳನ್ನು ಅರ್ಥಶಾಸ್ತ್ರದಲ್ಲೇ ಮಾಡಿದ್ದರು, ಭಾರತದಲ್ಲಿ ಗ್ರಾಮೀಣಾಭಿವೃದ್ಧಿ ವಿಷಯವನ್ನೂ ಅಭ್ಯಾಸ ಮಾಡಿದ್ದರು. ಕಾಲೇಜು ಮುಗಿಸಿದ ಬಳಿಕ, ನ್ಯೂಯಾರ್ಕ್​ನ ಆರ್ಥಿಕ ವಿಶ್ಲೇಷಣಾ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು.

“ಅಲ್ಲಿ ನಾನು ಮಾಡುತ್ತಿದ್ದ ಕೆಲಸದ ಬಗ್ಗೆ ನನಗೆ ಆಸಕ್ತಿ ಇರಲಿಲ್ಲ. ಆದರೆ, ಆ ನಗರವನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ನಾನು ಮೊತ್ತಮೊದಲ ಬಾರಿಗೆ ಸಂಬಳ ಪಡೆಯುತ್ತಿದ್ದೇನೆ. ಸಂಬಳ ಪಡೆಯಲು ಆರಂಭಿಸಿದ ಬಳಿಕ, ನಾನು ನನ್ನ ಡ್ರೆಸ್ಸಿಂಗ್ ಬಗ್ಗೆ ಹೆಚ್ಚಿನ ಗಮನ ಹರಿಸಲು ಆರಂಭಿಸಿದೆ,” ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ ಅನಕಾ.

ಅನಕಾ ನಾರಾಯಣ್​​​

ಅನಕಾ ನಾರಾಯಣ್​​​


ಅದು 2004ರ ಬೇಸಿಗೆ. ಆ ಸಂದರ್ಭದಲ್ಲೇ ಫ್ಯಾಷನ್ ಲೇಬಲ್ ಒಂದನ್ನು ಆರಂಭಿಸಬೇಕು ಎನ್ನುವ ಐಡಿಯಾ ಅನಕಾ ತಲೆಗೆ ಹೊಕ್ಕಿತ್ತು. ತನ್ನ ಸ್ವಂತ ಬಳಕೆಯ ಅನಿವಾರ್ಯತೆಯಿಂದಾಗಿಯೇ ಈ ಐಡಿಯಾ ಹುಟ್ಟಿಕೊಂಡಿತ್ತು. “ನ್ಯೂಯಾರ್ಕ್​ನಲ್ಲಿ ಶಾಪಿಂಗ್​​ಗೆ ಅಂತ ಹೋಗಿದ್ದೆ. ಅಲ್ಲಿ ನಾನು ಸಿಲ್ಹೌಟ್​ಗಳನ್ನು ನೋಡಿದೆ. ತುಂಬಾ ಇಷ್ಟ ಆಯಿತು. ಸ್ಪಷ್ಟವಾದ ಗೆರೆಗಳು ಮತ್ತು ಟೈಲರಿಂಗ್ ನನಗೆ ಖುಷಿ ಕೊಟ್ಟಿತು. ಆದರೆ, ಕೈಯಿಂದ ನೇಯ್ದ ಕರಕುಶಲ ನೇಯ್ಗೆಗಳನ್ನು ಕಾಣಲು ತುಂಬಾ ವರ್ಷವೇ ಹಿಡಿಯಿತು.”ಎನ್ನುತ್ತಾರೆ ಅನಕಾ.

ಅನಕಾ ಅವರಿಗೆ ಚಿಲ್ಲರೆ ವ್ಯಾಪಾರದಲ್ಲೂ ಅನುಭವವಿತ್ತು. ಅನಕಾ ಚಿಕ್ಕವಳಿದ್ದಾಗ, ಅವರ ಅಮ್ಮ ಸಾರಿ ಅಂಗಡಿಯೊಂದನ್ನು ಆರಂಭಿಸಿದ್ದರು. ಕೈಮಗ್ಗದಲ್ಲಿ, ಬ್ಲಾಕ್ ಪ್ರಿಂಟೆಡ್ ಮತ್ತು ಇಕಾತ್ ಸಾರಿಗಳಲ್ಲಿ ಅಮ್ಮನಿಗಿದ್ದ ಆಸಕ್ತಿಯಿಂದಾಗಿ, ಅನಕಾ ಜವಳಿ ಮತ್ತು ಫ್ಯಾಷನ್​​ನತ್ತ ಮನಸ್ಸು ಮಾಡುವಂತೆ ಮಾಡಿತು.

“ನಾನು ನ್ಯೂಯಾರ್ಕ್​ನಿಂದ ಚೆನ್ನೈಗೆ ಹೋದಾಗಲೆಲ್ಲಾ ಆಧುನಿಕ ಸಿಲ್ಹಾಟ್​​ಗಳ ಭಾರತೀಯ ಜವಳಿ ಬ್ರಾಂಡ್​​ಗಳು ಇಲ್ಲ ಎನ್ನುವುದನ್ನು ಗಮನಿಸಿದೆ. ಒಂದೆರಡು ಬ್ರಾಂಡ್​​ಗಳಿದ್ದರೂ, ಅವು ಜನಸಾಮಾನ್ಯರ ಕೈಗೆಟಕುವಂತೆ ಇರಲಿಲ್ಲ.” ಎನ್ನುತ್ತಾರೆ ಅನಕಾ. ಅಲ್ಲಿ ಸಿಗುತ್ತಿದ್ದ ಎಲ್ಲಾ ಸಿಲ್ಹೌಟ್​​ಗಳು ಒಂದೋ ದೊಗಳೆಯಾಗಿರುತ್ತಿದ್ದವು ಅಥವಾ ಶೇಪ್ ಇಲ್ಲದೇ ಇರುತ್ತಿದ್ದವು. ಇದನ್ನೆಲ್ಲಾ ಗಮನಿಸಿದ ಬಳಿಕ, ಸಿಲ್ಹೌಟ್ ಬ್ರಾಂಡ್ ಒಂದನ್ನು ಸ್ಥಾಪಿಸಲೇ ಬೇಕು ಎಂದು ನಿರ್ಧರಿಸಿಬಿಟ್ಟರು. ಅದರ ಪರಿಣಾಮವೇ ಬ್ರಾಸ್ ಟಾಕ್ಸ್.

2006ರ ಬೇಸಿಗೆಯಲ್ಲಿ ಅನಕಾ ಚೆನ್ನೈಗೆ ವಾಪಸ್ ಆದರು. ಈ ಬಾರಿ ಅವರು ಶಾಶ್ವತವಾಗಿ ಅಲ್ಲೇ ನೆಲೆಸಬೇಕೆಂಬ ದೃಢ ನಿರ್ಧಾರದೊಂದಿಗೆ ಬಂದಿದ್ದರು. ಬ್ರಾಸ್ ಟಾಕ್ಸ್ ಎಂಬ ಹೆಸರಿನಲ್ಲಿ ಫ್ಯಾಷನ್ ಲೇಬಲ್ ಉದ್ಯಮ ಆರಂಭಿಸಿದರು. ತಮ್ಮ ಜೊತೆ ಒಬ್ಬ ಡಿಸೈನರ್ ನೇಮಿಸಿಕೊಂಡು, ತಾವು ವ್ಯವಹಾರ ನೋಡಿಕೊಳ್ಳಲು ಆರಂಭದಲ್ಲಿ ನಿರ್ಧರಿಸಿದ್ದರು. ಆದರೆ ಗೆಳೆಯರೊಬ್ಬರ ಮಾತಿನಂತೆ ತಾವೇ ಡಿಸೈನರ್ ಆಗಿ ಕೆಲಸ ಆರಂಭಿಸಿದರು. ಈಗ ಅವರು ಸಂಪೂರ್ಣವಾಗಿ ಡಿಸೈನ್ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಕಳೆದ ಆರು ವರ್ಷಗಳಿಂದಲೂ ಡಿಸೈನ್ ಮತ್ತು ವ್ಯವಹಾರ ಎರಡನ್ನೂ ತಾವೇ ನಿಭಾಯಿಸುತ್ತಿದ್ದಾರೆ. ಸದ್ಯ ಬ್ರಾಸ್ ಟಾಕ್ಸ್​​ನಲ್ಲಿ 25 ಜನ ಕೆಲಸ ಮಾಡುತ್ತಿದ್ದಾರೆ.

ಬ್ರಾಸ್ ಟಾಕ್ಸ್ ಸದ್ಯ ಚೆನ್ನೈನಲ್ಲಿ ದೊಡ್ಡದೊಂದು ಮಳಿಗೆ ಹೊಂದಿದೆ. ಮುಂದಿನ ಆರು ತಿಂಗಳಲ್ಲಿ ಮತ್ತೊಂದು ಮಳಿಗೆ ಆರಂಭಿಸುವ ಉದ್ದೇಶವಿದೆ. ಗೋವಾ ಮತ್ತು ಬೆಂಗಳೂರಿನಲ್ಲಿ ಹಾಗೂ ಆನ್​ಲೈನ್ ಮೂಲಕ ಬೊಟಿಕ್ ಆರಂಭಿಸಿರುವ ಸಂಸ್ಥೆ ತನ್ನ ವಹಿವಾಟನ್ನು ವೃದ್ಧಿಸಿಕೊಂಡಿದೆ. “ನಾವು ಈಗ ಉದ್ಯಮ ವಿಸ್ತರಿಸುವ ಅನಿವಾರ್ಯತೆಯಲ್ಲಿದ್ದೇವೆ. ಆನ್​​ಲೈನ್ ಸ್ಟೋರ್ ಮೂಲಕ ಬೆಳೆಯುತ್ತಿದ್ದರೂ, ನಾವು ಮತ್ತೊಂದು ಹಾದಿಯನ್ನು ಹುಡುಕಿಕೊಳ್ಳಬೇಕಿದೆ. ನಾವು ಪುರುಷರ ಶರ್ಟ್​ಗಳ ಮೇಲೂ ಪ್ರಯೋಗ ಮಾಡಲು ಚಿಂತನೆ ನಡೆಸಿದ್ದೇವೆ,” ಎನ್ನುತ್ತಾರೆ ಅನಕಾ.

ಈ ಸೀಸನ್​​ನಲ್ಲಿ, ಬ್ರಾಸ್ ಟಾಕ್ಸ್ ತಂಡವು ತನ್ನ ಮೂಲ ತತ್ವ, ಕೈಯಿಂದ ನೇಯ್ದ ಜವಳಿಯನ್ನು ಕಾಸ್ಮೋಪಾಲಿಟನ್ ಸಿಲ್ಹೌಟ್​​ಗಳನ್ನು ತಯಾರಿಸುತ್ತಿದೆ. ಜವಳಿ ಉದ್ಯಮದಲ್ಲಿ ಈ ಕಲೆಗೆ ಭಾರೀ ಬೇಡಿಕೆ ಇದೆ. ಅದಕ್ಕಾಗಿ ನಾವು ಇದನ್ನು ಮತ್ತೆ ಆರಂಭಿಸಿದ್ದೇವೆ ಎನ್ನುತ್ತಾರೆ ಅನಕಾ. ಬ್ರಾಸ್ ಟಾಕ್ಸ್​​ನ ಆನ್​ಲೈನ್ ಸ್ಟೋರ್​​ಗೆ ಹೋದರೆ ನೀವು ವಿಭಿನ್ನವಾದ ಡಿಸೈನ್​​ಗಳನ್ನು ವೀಕ್ಷಿಸಿ, ಖರೀದಿಸಬಹುದು.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories