ಆವೃತ್ತಿಗಳು
Kannada

....ಯಾಕೆಂದ್ರೆ ಇದು Free Kaa Maal ..?

ಟೀಮ್​ ವೈ.ಎಸ್​​. ಕನ್ನಡ

27th Feb 2016
Add to
Shares
2
Comments
Share This
Add to
Shares
2
Comments
Share

ಸಾಮಾನ್ಯ ಮನೆತನದ ರವಿ ಕುಮಾರ್ 2009ರಲ್ಲಿ ಜೆಎಸ್ ಎಸ್ ಅಕಾಡಮಿ ಆಫ್ ಟೆಕ್ನಿಕಲ್ ಎಜುಕೇಶನ್ ನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದಾರೆ. ಒಂದು ವರ್ಷಗಳ ಕಾಲ ವೆಬ್ ಡೆವಲಪರ್ ಆಗಿ ಕೆಲಸ ಮಾಡಿದ್ರು. ಮುಂಬೈನ NITIE ಯಲ್ಲಿ ಎಂಬಿಎ ಶಿಕ್ಷಣಕ್ಕೆ ಪ್ರವೇಶ ಪಡೆದ್ರು. 2010 ಸಮಯ. ಆಗ ಭಾರತದಲ್ಲಿ ಇ-ಕಾಮರ್ಸ್ ಉತ್ತುಂಗದಲ್ಲಿತ್ತು. ಈ ಮಧ್ಯೆ ರವಿ ಇ-ಕಾಮರ್ಸ್ ಜೊತೆ ಸೇರಿರುವ ಸೆಕೆಂಡರಿ ಇಂಡಸ್ಟ್ರಿ ಅರ್ಥಾತ್ ಉದ್ಯಮ ಮತ್ತು ಕೂಪನ್ ಬಗ್ಗೆ ಅರಿತರು. ಹಾಗೆ Free Kaa Maal ಅಸ್ಥಿತ್ವಕ್ಕೆ ಬಂತು.ಈ ಕ್ಷೇತ್ರದಲ್ಲಿ CashKaro, CouponRani ಸೇರಿದಂತೆ ಕೆಲ ಪ್ರತಿಸ್ಪರ್ಧಿಗಳಿದ್ದರು. ಆದ್ರೆ ಪ್ರತಿಸ್ಪರ್ಧಿಗಳ ನಡುವೆ ರವಿ ಹೇಗೆ ಸಾಧಿಸಿ ತೋರಿಸಿದ್ರು ನೋಡೋಣ.

ವೈಎಸ್: ನೀವು ಈ ಕ್ಷೇತ್ರವನ್ನು ಹೇಗೆ ಪ್ರವೇಶ ಮಾಡಿದ್ರಿ?

ರವಿ ಕುಮಾರ್: ನನಗೆ ಮೊದಲಿನಿಂದಲೂ ಏನೇದ್ರೂ ಹೊಸದನ್ನು ಮಾಡಬೇಕೆಂಬ ಅಭಿಲಾಷೆಯಿತ್ತು. 2010ರಲ್ಲಿ ಇ-ಕಾಮರ್ಸ್ ಬೂಮ್ ಆಗ್ತಾ ಇತ್ತು. ದೈನಂದಿನ ವ್ಯವಹಾರ ಹಾಗೂ ಗುಂಪು ಖರೀದಿ ಬಗ್ಗೆ ಚರ್ಚೆಯಾಗ್ತಾ ಇತ್ತು. ಈ ಸಮಯದಲ್ಲಿ ನಾನು ಕಡಿಮೆ ವೆಚ್ಚದ ವ್ಯವಹಾರ,ಆಫರ್ಸ್ ಒದಗಿಸಲು Free Kaa Maal.com ಆರಂಭಿಸಿದೆ. 1500 ಹೂಡಿಕೆಯಲ್ಲಿ ಸರಳವಾಗಿ ಬ್ಲಾಗ್ ಓಪನ್ ಆಯ್ತು. ವರ್ಷದೊಳಗೆ ಒಂದು ಪೋರ್ಟಲ್ ರೂಪ ಪಡೆಯಿತು. ಪ್ರತಿದಿನ 50,000 + ಬಳಕೆದಾರರಿಗೆ ಸೇವೆ ನೀಡಲು ಶುರುಮಾಡಿತು.

ಎಂಬಿಎ ಫೈನಲ್ ನಲ್ಲದ್ದಾಗ ಎಸ್ ಸಿಎಂ ಕನ್ಸಲ್ಟೆಂಟ್ ರೂಪದಲ್ಲಿ ಕೆಲಸಕ್ಕೆ ಆಫರ್ ಬಂತು. ಆದ್ರೆ ನಾನು ಕೆಲಸಕ್ಕೆ ಸೇರಲಿಲ್ಲ. ಕಾರ್ಪೋರೇಟ್ ಕಂಪನಿಯೊಂದರ ಆಫರ್ ಬಿಟ್ಟು ಎಂಬಿಎ ಪೂರ್ಣಗೊಳಿಸಿದೆ. ಮೇ 2,20112ರಲ್ಲಿ ನಾನು ಗ್ರೇಟಿಕಾ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಶುರುಮಾಡಿದೆ. ಸಿಬ್ಬಂದಿ ನೇಮಕ ಮಾಡಿಕೊಂಡೆ.

ವೈಎಸ್ : ಕೆಲಸದ ಮಾದರಿ ಹೇಗೆ ಹೊರಹೊಮ್ಮಿತು?

ರವಿ ಕುಮಾರ್:ನಮ್ಮಲ್ಲಿ 17 ಜನ ಪ್ರತಿಭಾಶಾಲಿಗಳ ತಂಡವಿದೆ. ಈ ತಂಡ ಎಲ್ಲ ಕೆಲಸವನ್ನು ಮಾಡುತ್ತದೆ. ಐಡಿಯಾ, ಮಾನ್ಸ್ಟರ್ಸ್ ವಿವಿಧ ಎಂಎನ್ ಸಿಗಳ ವೃತ್ತಿಪರರು ಮತ್ತು ಐಐಟಿ, ಡಿಸಿಇಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪದವಿ ಪಡೆದವರನ್ನು ತಂಡ ಒಳಗೊಂಡಿದೆ.

image


ಭಾರದಲ್ಲಿ ಇ-ಕಾಮರ್ಸ್ ಬಗ್ಗೆ ಮಾತನಾಡುತ್ತಿದ್ದ ವೇಳೆ Free Kaa Maal.com ಹೆಸರಿನ ಉದಯವಾಯ್ತು.ಆದ್ರೆ ಇ-ಕಾಮರ್ಸ್ ಹೊರತಾಗಿ ಡೀಲ್ಸ್ ಮತ್ತು ಕೂಪನ್ ನ ಸೆಕೆಂಡರಿ ಇಂಡಸ್ಟ್ರಿ ಕೂಡ ಇತ್ತು. ಆರಂಭದಲ್ಲಿ FreeKaaMaal.com ಉದ್ದೇಶ ಕೇವಲ FMCG ಕಂಪನಿಗಳ ಉಚಿತ ಮಾದರಿಗಳ ಪ್ರಚಾರದ ಬಗ್ಗೆ ಮಾಹಿತಿ ನೀಡುವುದಾಗಿತ್ತು. ಇ-ಕಾಮರ್ಸ್ ಉತ್ತುಂಗದಲ್ಲಿದ್ದ ಕಾರಣ ಕಡಿಮೆ ವೆಚ್ಚದ ವ್ಯವಹಾರ ಹಾಗೂ ಕೂಪನ್ ಗಳ ಬಗ್ಗೆ ಮಾಹಿತಿ ನೀಡಲಾರಂಭಿಸಿದೆವು. ಡೀಲರ್ ನಮ್ಮ ಜೊತೆ ಆಫರ್ ಗಳ ಬಗ್ಗೆ ಮಾತುಕತೆ ನಡೆಸ್ತಾರೆ. ಅದ್ರಲ್ಲಿ ಬೆಸ್ಟ್ ಎನ್ನಿಸಿದ್ದನ್ನು ನಾವು ಹೋಮ್ ಪೇಜ್ ಗೆ ಹಾಕುತ್ತೇವೆ.

ಈಗ FreeKaaMaal.com ಮೂರುವರೆ ವರ್ಷಗಳನ್ನು ಪೂರೈಸಿದೆ. 45 ಲಕ್ಷ ವಿಸಿಟರ್ ಸೈಟ್ ವಿಜಿಟ್ ಮಾಡ್ತಾರೆ.

ವೈಎಸ್ : ಭಾರತದ ಇ-ಕಾಮರ್ಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

ರವಿ ಕುಮಾರ್: ಕೆಲ ವರ್ಷಗಳಿಂದ ಭಾರತದಲ್ಲಿ ಇ-ಕಾಮರ್ಸ್ ಮಾರುಕಟ್ಟೆ ಕ್ಷಿಪ್ರವಾಗಿ ಬೆಳವಣಿಗೆ ಹೊಂದುತ್ತಿದೆ.ಪ್ರಸ್ತುತ ಭಾರತದಲ್ಲಿ ಶೇಕಡಾ 11 ರಷ್ಟು ಜನ ಮಾತ್ರ ಇಂಟರ್ ನೆಟ್ ಬಳಸುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಇದರ ಸಮಖ್ಯೆ ಗಣನೀಯವಾಗಿ ಏರಲಿದೆ. ಹಾಗೆ ಇ-ಕಾಮರ್ಸ್ ಮಾರುಕಟ್ಟೆ ಕೂಡ ಬೆಳೆಯಲಿದೆ. ನಮ್ಮ ವ್ಯವಹಾರ ಮಾದರಿ ಇ-ಕಾಮರ್ಸ್ ಮಾದರಿಗೆ ಸಮನಾಗಿ ಚಲಿಸುತ್ತಿದೆ. ಇ-ಕಾಮರ್ಸ್ ಅಭಿವೃದ್ಧಿಯಾದ್ರೆ ನಮ್ಮ ವಿಕಾಸವೂ ಆಗಲಿದೆ.

ಜಾಗತಿಕ ಉದ್ಯಮದಾರರ ಪ್ರವೇಶದಿಂದಾಗಿ ಇ-ಕಾಮರ್ಸ್ ಮಾರುಕಟ್ಟೆ ಅಭಿವೃದ್ಧಿಹೊಂದುತ್ತಿದೆ. ಅಮೇಜಾನ್ .ಇನ್ ಎಂಟ್ರಿಯಿಂದಾಗಿ ನಾವು ನಮ್ಮ ಆದಾಯದಲ್ಲಿ ಶೇಕಡಾ 20ರಷ್ಟು ಏರಿಕೆ ಕಂಡಿದ್ದೇವೆ. ಜಾಗತಿಕ ಮಟ್ಟದಲ್ಲಿ ಇ-ಕಾಮರ್ಸ್ ಉದ್ಯಮದಾರರ ಸ್ಪರ್ಧೆ ಹೆಚ್ಚಾಗಿರುವುದರಿಂದ ಮಾರುಕಟ್ಟೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿರುವ ಉದ್ಯಮಿಗಳು ಸಣ್ಣ ಹಾಗೂ ದೊಡ್ಡ ಸೈಟ್ ಗಳನ್ನು ಖರೀದಿ ಮಾಡುತ್ತಿದ್ದಾರೆ. ಸಣ್ಣ ಸೈಟ್ ಗಳಿಂದ ಲಾಭ ಪಡೆಯುತ್ತಿದ್ದಾರೆ. ಅವರಿಂದಾಗಿ ತಮ್ಮ ತರಹದ ಸೈಟ್ ಗಳಿಗೆ ನೇರಾನೇರ ಲಾಭವಾಗ್ತಿದೆ

ವೈಎಸ್ : ನಿಮ್ಮ ಕಂಪನಿಯನ್ನು ಹೇಗೆ ಉಳಿಸಿಕೊಂಡಿದ್ದೀರಿ?

ರವಿ ಕುಮಾರ್ : FreeKaaMaal.com ಯಾವುದೇ ಹೂಡಿಕೆದಾರರು ಹಾಗೂ ಕುಟುಂಬದಿಂದ ಹಣವನ್ನು ಸಂಗ್ರಹಿಸಿಲ್ಲ. ನಾವು ಮಾರಾಟದ ಹಣವನ್ನೇ ಹೂಡಿಕೆ ಮಾಡುತ್ತಿದ್ದೇವೆ. ಸಮಯದ ಜೊತೆ ಇದರ ಪ್ರಮಾಣ ಹೆಚ್ಚಾಗುತ್ತ ಹೋಗಿದೆ. ಅಲ್ಪಾವಧಿಯಲ್ಲಿಯೇ ಪ್ರತಿದಿನ ಐದು ರೂಪಾಯಿ ಇದ್ದ ವಹಿವಾಟು 1500+ ಆಯಿತು. ನಾವು ಮೊದಲ ದಿನದಿಂದಲೂ ಲಾಭ ಪಡೆಯುತ್ತಿದ್ದೇವೆ. ಪ್ರತಿ ತಿಂಗಳು 45 ಲಕ್ಷ ಹಿಟ್ ಬರ್ತಾ ಇದೆ. ಈಗ ನಾವು 450+ ವ್ಯಾಪಾರಿಗಳೊಂದಿಗೆ ಕೆಲಸ ಮಾಡ್ತಿದ್ದೇವೆ.

ಲೇಖಕರು :ಸಹಿಲ್ 

ಅನುವಾದಕರು: ರೂಪಾ ಹೆಗಡೆ

Add to
Shares
2
Comments
Share This
Add to
Shares
2
Comments
Share
Report an issue
Authors

Related Tags