ಆವೃತ್ತಿಗಳು
Kannada

ವಾಣಿಜ್ಯ ನಗರಿಯಲ್ಲಿ ಮತ್ತೊಂದು ಐಟಿ ಹಬ್ಬ 'ಐಂಡಿಯಾ ಐಟಿ ಶೋ'ಗೆ ಬೆಂಗಳೂರಲ್ಲಿ ತಾಲೀಮು

ಟೀಮ್ ವೈ.ಎಸ್.ಕನ್ನಡ 

21st Feb 2016
Add to
Shares
1
Comments
Share This
Add to
Shares
1
Comments
Share

ಮೇಕ್ ಇನ್ ಇಂಡಿಯಾ ವೀಕ್ ಕಾರ್ಯಕ್ರಮದ ಬೆನ್ನಲ್ಲೇ ಮತ್ತೊಂದು ಐಟಿ ಹಬ್ಬಕ್ಕೆ ವಾಣಿಜ್ಯ ನಗರಿ ಮುಂಬೈ ಸಜ್ಜಾಗಿದೆ. ಭಾರತದ ಅತಿ ದೊಡ್ಡ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ವ್ಯಾಪಾರ ಸೌಲಭ್ಯ ಸಂಸ್ಥೆ ದಿ ಎಲೆಕ್ಟ್ರಾನಿಕ್ಸ್ & ಸಾಫ್ಟ್​ವೇರ್​ ಎಕ್ಸ್​ಪೋಟ್​ರ್ ಪ್ರಮೋಷನ್ ಕೌನ್ಸಿಲ್, ದೇಶದಲ್ಲಿ ವ್ಯಾಪಾರ ಕೊಂಡಿ ಸ್ಥಾಪಿಸುವ ಆಸಕ್ತಿ ಹೊಂದಿರುವ ವಿದೇಶಿ ಕಂಪನಿಗಳ ಜಾಗತಿಕ ಹಿತಾಸಕ್ತಿಯನ್ನು ಸುಗಮಗೊಳಿಸುತ್ತದೆ. ESCಯ ಅದ್ಭುತ ಮ್ಯಾಚ್ ಮೇಕಿಂಗ್ ಸೇವೆ, ತಮ್ಮ ಉದ್ಯಮ ಅವಶ್ಯಕತೆಗಳಿಗಾಗಿ ಭಾರತದಲ್ಲಿ ಒಂದು ವಿಶ್ವಾಸಾರ್ಹ ಪಾಲುದಾರರನ್ನು ಪತ್ತೆ ಮಾಡುವ ಆಸಕ್ತಿ ಹೊಂದಿರುವ ಐಟಿಸಿ ಕಂಪನಿಗಳಿಗೆ ನೆರವಾಗುತ್ತದೆ. ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೂ ಇದು ಸಹಕಾರಿಯಾಗಲಿದೆ. ಭಾರತ ಸರ್ಕಾರ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮತ್ತು ವಾಣಿಜ್ಯ ಇಲಾಖೆಯ ನೆರವಿನೊಂದಿಗೆ 'ಇಂಡಿಯಾ ಐಟಿ ಶೋ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಂಬೈನ ಕನ್ವೆಷನ್ ಸೆಂಟರ್ನಲ್ಲಿ ಮಾರ್ಚ್ 3 ಹಾಗೂ 4ರಂದು 'ಇಂಡಿಯಾ ಐಟಿ ಶೋ' ಕಾರ್ಯಕ್ರಮ ನಡೆಯಲಿದೆ.

image


ಈ ಕಾರ್ಯಕ್ರಮವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ರೋಡ್ ಶೋ ಒಂದನ್ನು ಆಯೋಜಿಸಲಾಗಿತ್ತು. ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ, ಹಾಗೂ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.STPI ಬೆಂಗಳೂರಿನ ನಿರ್ದೇಶಕ ಪಿ.ಕೆ.ದಾಸ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರೋಡ್ ಶೋನಲ್ಲಿ ಮಾತನಾಡಿದ ಕೆ.ರತ್ನ ಪ್ರಭಾ ಮಾಹಿತಿ ತಂತ್ರಜ್ಞಾನ ವಲಯದ ಬೆಳವಣಿಗೆಗೆ ESC ನೀಡಿದ ಕೊಡುಗೆಯನ್ನು ಶ್ಲಾಘಿಸಿದ್ರು. ಖರೀದಿದಾರರ ಸಭೆ ಮತ್ತು ಟ್ರೇಡ್ ಶೋ ಕಾರ್ಯಕ್ರಮದ ಅತ್ಯಧಿಕ ಲಾಭವನ್ನು ಪಡೆದುಕೊಳ್ಳುವಂತೆ MSME ಗಳಲ್ಲಿ ಮನವಿ ಮಾಡಿದ್ರು. ಐಟಿ ರಫ್ತಿನಲ್ಲಿ MSME ಗಳ ಕೊಡುಗೆಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಅಷ್ಟೇ ಅಲ್ಲ ತಮ್ಮ ಗುರಿ ಸಾಧಿಸಲು ಈ ಅನನ್ಯ ವೇದಿಕೆಯನ್ನು ಬಳಸಿಕೊಳ್ಳುವಂತೆ ರತ್ನ ಪ್ರಭಾ ಮನವಿ ಮಾಡಿದರು.

ಇದನ್ನೂ ಓದಿ...

ಕಲಾವಿದೆ, ಕ್ಯುರೇಟರ್ ಮತ್ತು ಉದ್ಯಮಿ : ಕಲೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬಹುಮುಖ ಪ್ರತಿಭೆ 

ಇನ್ನು ಇಂಡಿಯಾ ಐಟಿ ಶೋ 2016ರ ಮುಖ್ಯಸ್ಥ ನಳಿನ್ ಕೊಹ್ಲಿ ಮಾತನಾಡಿ, ಈ ಪ್ರದರ್ಶನದಲ್ಲಿ ಭಾಗವಹಿಸುವುದರಿಂದ ವಿಶೇಷವಾಗಿ MSME ಕಂಪನಿಗಳಿಗೆ ಆಗುವ ಲಾಭವನ್ನು ವಿವರಿಸಿದ್ರು. ಸುಮಾರು 60 ದೇಶಗಳ 400ಕ್ಕೂ ಹೆಚ್ಚು ಕಂಪನಿಗಳನ್ನು ಇಂಡಿಯಾ ಐಟಿ ಶೋ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಭಾರತದ ಸರ್ಕಾರದ ಅನುದಾನದ ಅಡಿಯಲ್ಲಿ ಅವರ ವಿಮಾನ ಪ್ರಯಾಣದ ವೆಚ್ಚವನ್ನು ಭರಿಸಲಾಗುತ್ತದೆ. ಅಷ್ಟೇ ಅಲ್ಲ ಬೂತ್ಗಳ ವೆಚ್ಚದಲ್ಲೂ ಸಹಾಯಧನ ನೀಡಲಾಗುತ್ತದೆ ಅಂತಾ ನಳಿನ್ ಕೊಹ್ಲಿ ಮಾಹಿತಿ ನೀಡಿದ್ದಾರೆ.

ESC ಕಾರ್ಯನಿರ್ವಾಹಕ ನಿರ್ದೇಶಕ ದೀಪಕ್ ಸರೀನ್, ಉತ್ತಮ ಅಮೆರಿಕ, ಯುರೋಪ್, ಏಷಿಯಾನ್, ಆಫ್ರಿಕಾ, ಮಧ್ಯ ಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಿಮದ ಆಗಮಿಸುವ ಖರೀದಿದಾರರ ನಿಯೋಗಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ರು. ಸ್ಟಾರ್ಟ್ಅಪ್ಗಳು ಮತ್ತು ಸಾಫ್ಟ್​ವೇರ್​ ಕಂಪನಿಗಳಿಗಾಗಿ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ. ಇಂಡಿಯಾ ಐಟಿ 2016ರಲ್ಲಿ ಕರ್ನಾಟಕಕ್ಕೂ ಮಹತ್ವದ ಹೊಣೆಗಾರಿಕೆ ನೀಡಲಾಗಿದೆ. ಭಾರತದ ಅನನ್ಯ ಮಾರುಕಟ್ಟೆಯಲ್ಲಿರುವ ರಫ್ತು ಅವಕಾಶಗಳನ್ನು ಅನ್ವೇಷಿಸುವ ಜವಾಬ್ಧಾರಿ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ್ಕೆ ಆಹ್ವಾನ ಬಂದಿದೆ. ಒಟ್ಟಿನಲ್ಲಿ 'ಇಂಡಿಯಾ ಐಟಿ ಶೋ' ಕಾರ್ಯಕ್ರಮದಿಂದ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸುಧಾರಣೆಗೆ ಇನ್ನಷ್ಟು ಅವಕಾಶಗಳು ದೊರೆಯಲಿವೆ.  

ಇದನ್ನೂ ಓದಿ...

ಹೆಲ್ತಿ ಆರೋಗ್ಯಕ್ಕೆ ಟೆಸ್ಟಿ ಜ್ಯೂಸ್.. ಜ್ಯೂಸ್​​​ಗೆ ಸಾಥ್ ನೀಡೋಕೆ ಹೆಲ್ತಿ ಬೀಡಾ 

ಸಮಾಜದಲ್ಲಿ ಕಂಡೂ ಕಾಣಿಸದ ಪ್ರತಿಭಾ ಸಂಪನ್ನರು

Add to
Shares
1
Comments
Share This
Add to
Shares
1
Comments
Share
Report an issue
Authors

Related Tags