ಆವೃತ್ತಿಗಳು
Kannada

ಐಐಟಿ ಎಂಜಿನಿಯರ್​​ಗಳಿಂದ ಮಹಿಳಾ ರಕ್ಷಣೆಗೆ ಹೊಸ ಆ್ಯಪ್

ಉಷಾ ಹರೀಶ್​​

5th Nov 2015
Add to
Shares
1
Comments
Share This
Add to
Shares
1
Comments
Share

ಭಾರತ ಎಂದರೆ ಶಾಂತಿಯ ನಾಡು, ಹಲವು ಸಂಸ್ಕೃತಿಗಳು ಬೀಡು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ವಿಚಾರಗಳಲ್ಲಿ ಅದರಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯದ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ.

ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಗಾಗ್ಗೆ ನಡೆಯುತ್ತಿರುವ ಸಾಮೂಹಿಕ ಅತ್ಯಾಚಾರಗಳು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆದ ಮಹಿಳಾ ದೌರ್ಜನ್ಯ ಪ್ರಕರಣಗಳಿಂದಾಗಿ ಮಹಿಳೆಯುರು ಒಬ್ಬಂಟಿಯಾಗಿ ಓಡಾಡಲು ಹೆದರುವ ಪರಿಸ್ಥಿತಿ ಕೆಲವೆಡೆ ನಿರ್ಮಾಣವಾಗಿದೆ.

image


"ಲೀಫ್​​​​​​​" ಅಂದರೇನು..?

ಸರ್ಕಾರಗಳು ಈ ನಿಟ್ಟಿನಲ್ಲಿ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದೆಯಾದರೂ, ಸಾಕಷ್ಟು ಪ್ರಕರಣಗಳಲ್ಲಿ ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ದೆಹಲಿಯ ಐಐಟಿಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಹಿಳೆಯರ ಸುರಕ್ಷತೆಗಾಗಿ ಮೊಬೈಲ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಟ್ರಾನ್ಸಿಸ್ಟರ್ ಮತ್ತು ಆ್ಯಪ್ ತಂತ್ರಜ್ಞಾನವುಳ್ಳ ಸಾಧನವಾಗಿದೆ. ಈ ಸಾಧನವನ್ನು ಕೊಂಡು ಇದಕ್ಕೆ ಸಂಬಂಧಿಸಿದ ಆ್ಯಪ್​​ನ್ನು ಡೌನ್ ಲೋಡ್ ಮಾಡಿಕೊಂಡರೆ ಸಾಕು. ಈಗ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇರುತ್ತದೆ. ಅಂತಹ ಸ್ಮಾರ್ಟ್ ಫೋನ್​​ಗಳಿಗಾಗಿಯೇ ಸಿದ್ಧಪಡಿಸಿದ ಆ್ಯಪ್ ಹೆಸರು ‘ಲೀಫ್’. ಈ ಆ್ಯಪ್ ಅಳವಡಿಸಿಕೊಂಡರೆ ಮಹಿಳೆಯರು ಅಪಾಯದಲ್ಲಿದ್ದಾಗ ಪಾರು ಮಾಡುತ್ತದೆ.

image


"ಲೀಫ್"​​ ಹೇಗೆ ಕೆಲಸ ಮಾಡುತ್ತದೆ..?

ಈ ಆ್ಯಪ್​​ಮೂಲಕ ಮಹಿಳೆಯರು ಅಪಾಯದಲ್ಲಿರುವ ಸ್ಥಳವನ್ನು ನಿಖರವಾಗಿ ಜಿಪಿಆರ್​​ಎಸ್ ಮೂಲಕ ಅತ್ಯಂತ ಸುಲಭವಾಗಿ ಪತ್ತೆ ಹಚ್ಚಬಹುದು. ಇದರ ಮತ್ತೊಂದು ವಿಶೇಷವೆಂದರೆ ಯುವತಿಯರು ತಮ್ಮ ಆಭರಣಗಳಲ್ಲಿ ಈ ಸಾಧನವನ್ನು ಅಡಗಿಸಿಟ್ಟುಕೊಳ್ಳಬಹುದು. ಅಷ್ಟು ಕಿರು ಗಾತ್ರದ ಸಾಧನವಿದು. ನೆಕ್ಲೆಸ್ ಡಾಲರ್​​ಗಳಲ್ಲಿ ಯಾರಿಗೂ ತಿಳಿಯದಂತೆ ಇದನ್ನು ಇಟ್ಟುಕೊಳ್ಳಬಹುದು. ಇದರ ಆ್ಯಪ್ ಅನ್ನು ತಮ್ಮ ಪಾಲಕರು, ಅಥವಾ ಗೆಳತಿ, ಗೆಳಯರು ಅವರ ಮೊಬೈಲ್​​ನಲ್ಲಿ ಡೌನ್​ಲೋಡ್ ಮಾಡಿಕೊಂಡು ಈ ಸಾಧನಕ್ಕೆ ಸಂಪರ್ಕ ಕಲ್ಪಿಸಿಕೊಂಡಿರಬೇಕು. ಅಪಾಯದಲ್ಲಿರುವವರು ತಮ್ಮ ಆಭರಣಗಳಲ್ಲಿ ಅಡಗಿಸಿಟ್ಟುಕೊಂಡಿರುವ ಸಾಧನವನ್ನು ಮೂರು ಸೆಕೆಂಡ್ ಒತ್ತಿ ಹಿಡಿದುಕೊಂಡರೆ ಸಾಕು ಅದು ಆ್ಯಪ್ ಮೂಲಕ ಅವರ ಗೆಳೆಯರಿಗೆ ಮತ್ತು ಪಾಲಕರಿಗೆ ಮೆಸೆಜ್ ಹೋಗುತ್ತದೆ. ನಂತರ ಅಪಾಯದಲ್ಲಿರುವ ಸ್ಥಳವನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

image


ಈ ಸಾಧನವನ್ನು ಅಭಿವೃದ್ಧಿಪಡಿಸಿ ಮಹಿಳಾ ಸುರಕ್ಷತೆ ಬಗ್ಗೆ ಕಾಳಜಿ ತೋರಿದ ದೆಹಲಿ ಐಐಟಿಯ ಎಂಜಿನಿಯರ್​ಗಳಾದ ಅವಿನಾಶ್, ಆಯುಶ್, ಚಿರಾಗ್, ಮಾಣಿಕ್, ಮತ್ತು ಪರಾಸ್ ಅವರನ್ನು ಕೇಂದ್ರ ತಂತ್ರಜ್ಞಾನ ಇಲಾಖೆ ಗೌರವಿಸಿದೆ.

ಮಹಿಳೆಯರ ಪಾಲಿನ ರಕ್ಷಕನಂತಿರುವ ಈ ಆ್ಯಪ್​​ನ್ನು ಅಭಿವೃದ್ಧಿಪಡಿಸಿದ ಖುಷಿ ಪರಾಸ್​​ ತಂಡಕ್ಕಿದೆ. "ಈ ಆ್ಯಪ್ ಅಭಿವೃದ್ಧಿಯಾಗಿ ಕೆಲವೇ ದಿನಗಳಾಗಿದ್ದರೂ ಇಲ್ಲಿಯವರೆಗೂ ದೆಹಲಿ ಸೇರಿದಂತೆ ಭಾರತದ ವಿವಿಧೆಡೆಗಳಲ್ಲಿ ಎಷ್ಟೋ ಮಹಿಳೆಯರನ್ನು ಈ ಇದರ ಮೂಲಕ ರಕ್ಷಣೆ ಮಾಡಲಾಗಿದೆ". ಅಂತ ಪರಾಸ್ ಬಾತ್ರ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

image


ಮೂರು ಲಕ್ಷ ಮಾರಾಟ

ಈ ಆ್ಯಪ್ ಅಭಿವೃದ್ಧಿ ಆಗಿ ಕೆಲವೇ ದಿನಗಳಲ್ಲಿ ಮೂರು ಲಕ್ಷ ಸಾಧನಗಳು ಮಾರಾಟವಾಗಿದೆ. ಇದರಿಂದ ಇದರ ನಿರ್ಮಾತೃಗಳಿಗೆ ಸಂತಸವಾಗಿದೆ. ಇದರ ಬೆಲೆ ಕೇವಲ ಮೂರು ಸಾವಿರ ರೂಪಾಯಿ. ಗ್ರಾಹಕರು ಈ ಸಾಧನದ ಆ್ಯಪ್ ಅನ್ನು ಉಚಿತವಾಗಿ ಡೌನ್​​ಲೋಡ್​​​ ಮಾಡಿಕೊಳ್ಳಬಹುದು. ಇನ್ಯಾಕೆ ತಡ ಈ ಆ್ಯಪ್ ಡೌನ್​ಲೋಡ್ ಮಾಡಿ ಮತ್ತು ಸಾಧನ ಕೊಳ್ಳಿ, ನಿಮ್ಮ ಮನೆಯ ಮಹಿಳೆಯರನ್ನು ರಕ್ಷಿಸಿಕೊಳ್ಳಿ

ಹೆಚ್ಚಿನ ವಿವರಗಳಿಗೆ: www.leafwearables.com/ ವೆಬ್ ಸೈಟ್​​ಗೆ ಲಾಗ್ ಇನ್ ಆಗಿ


Add to
Shares
1
Comments
Share This
Add to
Shares
1
Comments
Share
Report an issue
Authors

Related Tags