ಆವೃತ್ತಿಗಳು
Kannada

ಖಾಸಗಿ ಶಿಕ್ಷಣ ಸಂಸ್ಥೆಗಲಿಗೆ ಸಾಲಾ ಬೇಕಿದೆಯಾ..? “ವರ್ಥನ”ಕ್ಕೆ ಅರ್ಜಿ ಸಲ್ಲಿಸಿ..!

ಟೀಮ್​ ವೈ.ಎಸ್​​.

22nd Oct 2015
Add to
Shares
9
Comments
Share This
Add to
Shares
9
Comments
Share

ಮಿತವ್ಯಯಿ ಖಾಸಗಿ ಶೈಕ್ಷಣಿಕ ಸಂಸ್ಥೆಗಳಿಗೆ ಅತ್ಯವಶ್ಯಕ ಹೂಡಿಕೆ ಬಂಡವಾಳ ಒದಗಿಸುವುದರ ಮೂಲಕ ಕಡಿಮೆ ಆದಾಯ ಹೊಂದಿರುವ ಭಾರತೀಯ ಯುವ ಪೀಳಿಗೆಗೆ ಮೌಲ್ಯಯುತ ಶಿಕ್ಷಣ ಲಭ್ಯವಾಗುವಂತೆ ಮಾಡುವ ಏಕಮಾತ್ರ ಉದ್ದೇಶದಿಂದ ಹುಟ್ಟಿಕೊಂಡ ಬ್ಯಾಂಕೇತರ ಹಣಕಾಸು ಸಂಸ್ಥೆ ವರ್ಥನ.

ಹಲವು ರೀತಿಯ ಮೂಲಗಳಿಂದ ಬಂಡವಾಳ ಕ್ರೋಢೀಕರಿಸಿಕೊಂಡಿರುವ ವರ್ಥನ ಸಂಸ್ಥೆ 2013ರಲ್ಲಿ ಆರಂಭವಾಯ್ತು. ಆಗ ಕೇವಲ 10 ಸದಸ್ಯರನ್ನು ಹೊಂದಿದ್ದ ವರ್ಥನ ಇಂದು 100 ಸದಸ್ಯರ ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದೆ. ದೇಶಾದ್ಯಂತ 20 ಬೇರೆಬೇರೆ ನಗರಗಳಲ್ಲಿ 800ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಿಗೆ 65 ಕೋಟಿ ರೂಪಾಯಿಗಿಂತ ಅಧಿಕ ಸಾಲ ಒದಗಿಸಿದೆ. ವಿಭಿನ್ನ ವಲಯಗಳಿಗೆ ತಮ್ಮ ಸೇವೆಗಳನ್ನು ವಿಸ್ತರಿಸದೇ ಶಿಕ್ಷಣ ಕ್ಷೇತ್ರವೊಂದರಲ್ಲೇ ತಮ್ಮ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ಮೂಲಧ್ಯೇಯ ವರ್ಥನ ಸಂಸ್ಥೆಯದ್ದಾಗಿದೆ. ತೀವ್ರ ಸವಾಲಿನ ಕ್ಷೇತ್ರದಲ್ಲಿ ಸ್ಟಾರ್ಟ್ಅಪ್ ಸಂಸ್ಥೆ ಆರಂಭಿಸಿದ್ದರಿಂದ ಆಯ್ದ ಕ್ಷೇತ್ರವೊಂದಕ್ಕೇ ಸೇವೆಗಳನ್ನು ಕೇಂದ್ರೀಕರಿಸುವ ಅಗತ್ಯವಿತ್ತು. ಆರಂಭದ ಕೆಲ ವರ್ಷಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ನಮ್ಮ ಸೇವೆಗಳನ್ನು ಕೇಂದ್ರೀಕರಿಸುವ ಮೂಲಕ ನಮ್ಮ ಸೇವೆಗಳು ಮತ್ತು ಕಾರ್ಯವಿಧಾನ ಸರ್ವೋತ್ತಮಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಮತ್ತು ನಾವು ಸರಿಯಾದ ಶಿಕ್ಷಣ ಸಂಸ್ಥೆಗಳನ್ನೇ ಆಯ್ದುಕೊಂಡಿದ್ದೇವೆ ಎಂಬುದು ಸಂಸ್ಥೆಯ ಸಿಇಓ ಆಗಿರುವ ಸ್ಟೀವ್ ಹಾರ್ಡ್​ಗ್ರೇವ್ ಅಭಿಪ್ರಾಯ.

image


ಯಾವೆಲ್ಲ ಶಿಕ್ಷಣ ಸಂಸ್ಥೆಗಳಿಗೆ ಸಾಲ ಲಭ್ಯ?

ಸಾಲ ನೀಡುವ ಮುನ್ನ ಕೆಲವು ಬಿಗಿಯಾದ ನಿಯಮಗಳನ್ನು ವರ್ಥನ ಪಾಲಿಸುತ್ತದೆ. ಹೊಸದಾಗಿ ಆರಂಭಗೋಳ್ಳಲಿರುವ ಸಂಸ್ಥೆಗಳಿಗೆ ವರ್ಥನದ ಸಾಲ ಸೌಲಭ್ಯಗಳು ಅಲಭ್ಯ. ಸಂಸ್ಥೆ ಕನಿಷ್ಟ ಎರಡು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರಬೇಕು ಮತ್ತು ಸಾಲ ಮರುಪಾವತಿಯ ಅರ್ಹತೆ ಹೊಂದಿರಬೇಕು. ಇಂತಹ ಸಂಸ್ಥೆಗಳಿಗೆ ಮಾತ್ರ ವರ್ಥನ ಸಾಲ ಒದಗಿಸುತ್ತದೆ. ಶಾಲಾ ಸಂಸ್ಥೆಗಳ ಆಯ್ಕೆಯಲ್ಲಿ ಅತೀ ಜಾಗರೂಕತೆ ವಹಿಸಲಾಗುತ್ತದೆ. ತಾವು ನಡೆಸುತ್ತಿರುವ ಶಿಕ್ಷಣ ಸಂಸ್ಥೆಯ ಯಶಸ್ಸನ್ನೇ ಪರಮೋಚ್ಚ ಗುರಿಯಾಗಿಸಿಕೊಂಡಿರುವವರಿಗೆ ಮಾತ್ರ ಸಾಲ ನೀಡಲು ಬಯಸುವದಾಗಿ ಸ್ಟೀವ್ ಹೇಳುತ್ತಾರೆ.

5 ರಿಂದ 50 ಲಕ್ಷದವರೆಗಿನ 5 ವರ್ಷ ಅವಧಿಯ ಭದ್ರತಾ ಸಾಲ ಮತ್ತು 5 ಲಕ್ಷದವರೆಗಿನ 3 ವರ್ಷ ಅವಧಿಯ ಭದ್ರತೆ ರಹಿತ ಸಾಲವನ್ನು ವರ್ಥನ ಸಂಸ್ಥೆ ನೀಡುತ್ತದೆ. ಕಂಪ್ಯೂಟರ್ ಲ್ಯಾಬ್ ಸ್ಥಾಪನೆ, ಪೀಠೋಪಕರಣ, ಶಾಲಾ ಬಸ್ ಖರೀದಿ, ಹೊಸ ಕಟ್ಟಡ, ಕೊಠಡಿ ನಿರ್ಮಾಣ, ಶಾಲೆಯ ನವೀಕರಣ ಮುಂತಾದ ವಿಭಿನ್ನ ಅಗತ್ಯಗಳ ಪೂರೈಕೆಗಾಗಿ ಸಾಲ ಒದಗಿಸಲಾಗುತ್ತದೆ. ಸಾಲದ ಗಾತ್ರದ ಆದಾರದ ಮೇಲೆ ಕಟ್ಟಡ ನಿರ್ಮಾಣಕ್ಕೆ ಹಾಗೂ ಬೇಡಿಕೆಗಳ ಸಂಖ್ಯೆಯ ಆದಾರದ ಮೇಲೆ ಕಲಿಕಾ ಸಾಮಗ್ರಿ, ಪೀಠೋಪಕರಣ ಖರೀದಿ, ವಿದ್ಯಾರ್ಥಿನಿಯರಿಗಾಗಿ ಶೌಚಾಲಯ ನಿರ್ಮಾಣ ಮುಂತಾದ ಚಿಕ್ಕ ಯೋಜನೆಗಳಿಗಾಗಿ ಹೆಚ್ಚಿನ ಬೇಡಿಕೆ ಬರುತ್ತದೆ ಎಂದು ಸ್ಟೀವ್ ಹೇಳುತ್ತಾರೆ.

image


ಭಾರತವನ್ನೇ ಆಯ್ದುಕೊಂಡಿದ್ದು ಏಕೆ?

ಜಗತ್ತಿನಾದ್ಯಂತ ಅಷ್ಟೊಂದು ಅಭಿವೃದ್ದಿ ಹೊಂದುತ್ತಿರುವ ದೇಶಗಳಿರುವಾಗ ವರ್ಥನದ ಸಂಸ್ಥಾಪಕರಾದ ಸ್ಟೀವ್ ಮತ್ತು ಬ್ರಿಜೇಶ್ ಭಾರತವನ್ನೇ ಆಯ್ದುಕೊಂಡಿದ್ದು ಏಕೆ ಎಂಬ ಪ್ರಶ್ನೆ ಏಳುವುದು ಸಹಜ. ಸ್ಟೀವ್ ಹೇಳುವ ಪ್ರಕಾರ ಜನಸಂಖ್ಯೆಯ ವಿಷಯದಲ್ಲಿ ಭಾರತವನ್ನು ಇತರ ಯಾವ ದೇಶವೂ ಹಿಂದಿಕ್ಕಲಾರದು. ಚೀನಾ ದೇಶ ಜನಸಂಖ್ಯೆ ವಿಷಯದಲ್ಲಿ ಭಾರತಕ್ಕೆ ಪ್ರತಿಸ್ಪರ್ಧಿ ಎನಿಸಿದರೂ ಅಲ್ಲಿನ ಒಂದೇ ಮಗು ಹೊಂದಿರಬೇಕೆಂಬ ನೀತಿಯಿಂದಾಗಿ ಕಲಿಕೆಯ ವಯಸ್ಸಿನವರ ಸಂಖ್ಯೆ ಭಾರತದಲ್ಲೇ ಅಧಿಕವಾಗಿದೆ. ಭಾರತದಲ್ಲಿ ಸರಿಸುಮಾರು 40 ಕೋಟಿ ಕಲಿಕೆಯ ವಯಸ್ಸಿನ ಜನಸಂಖ್ಯೆಯಿದೆ. ಇದೇ ತಾವು ಭಾರತವನ್ನು ಆಯ್ದುಕೊಂಡಿದ್ದರ ಉದ್ದೇಶ ಎನ್ನುತ್ತಾರೆ. ಇನ್ನೂ ಮುಂದುವರೆದು ಈ 40 ಕೋಟಿಯಲ್ಲಿ ಬಹುತೇಕ ಮಂದಿ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಸೇರಿದವರಾಗಿದ್ದು ಮಿತವ್ಯಯಿ ಖಾಸಗಿ ಶೈಕ್ಷಣಿಕ ಸಂಸ್ಥೆಗಳಿಗೆ ಬೇಡಿಕೆ ಅತಿಯಾಗಿದೆ. ಕಡಿಮೆ ವೆಚ್ಚದ ಶೈಕ್ಷಣಿಕ ಸಂಸ್ಥೆಗಳಿಗೆ ವಿಶ್ವದಲ್ಲಿ ಬೇರೆಲ್ಲೂ ಇಲ್ಲಿರುವಷ್ಟು ಅಪೂರ್ವವಾದ ಬೇಡಿಕೆ ಮತ್ತು ಅವಕಾಶಗಳಿಲ್ಲ ಎಂದು ಸ್ಟೀವ್ ಅಭಿಪ್ರಾಯ ಪಡುತ್ತಾರೆ. ತಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಒದಗಿಸುವ ಇಲ್ಲಿನ ಪಾಲಕರ ನಿರಂತರ ಪ್ರವೃತ್ತಿ, ನಿಯಂತ್ರಿಸಲು ಅಸಾಧ್ಯವಾದ ನೈಸರ್ಗಿಕ ಶಕ್ತಿಯಂತೆ ಎಂದು ಸ್ಟೀವ್ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.

ಮುಂದಿನ ಗುರಿಗಳು

ಶೈಕ್ಷಣಿಕ ಸಂಸ್ಥೆಗಳು ಇನ್ನೂ ವಿಭಿನ್ನವಾದ ಉಪಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವಂತೆ ಪ್ರೇರೇಪಿಸುವ ಮೂಲಕ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶವನ್ನು ವರ್ಥನ ಹೊಂದಿದೆ. ಇದನ್ನು ವಿವರಿಸುತ್ತ ಸ್ಟೀವ್ “ನಾವು ಹುಡುಕಲು ಅಸಾಧ್ಯವೆನಿಸಿದ ಸ್ಥಳಗಳಲ್ಲೂ ಕೂಡ ಉತ್ತಮ ಆಡಳಿತ ಮಂಡಳಿಯಡಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳನ್ನು ಅದಾಗಲೇ ಕಂಡುಕೊಂಡಿದ್ದೇವೆ. ಈಗ ಶಿಕ್ಷಣ ಸಂಸ್ಥೆಗಳಿಗೆ ಮೌಲ್ಯಯುತ ಸಹಾಯ ಕಲ್ಪಿಸುವ ಕ್ಷಮತೆ ಹೊಂದಿರುವ ಶಿಕ್ಷಣಶಾಸ್ತ್ರಜ್ಞರನ್ನು ಹುಡುಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ” ಎಂದು ಹೇಳುತ್ತಾರೆ.

ವರ್ಥನ 2020ರ ವೇಳೆಗೆ ದೇಶದಾದ್ಯಂತ ಇನ್ನಷ್ಟು ಪ್ರದೇಶಗಳಿಗೆ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಕನಿಷ್ಠ 40000 ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಸೇವೆಗಳನ್ನು ಒದಗಿಸುವ ಮತ್ತು ಆ ಮೂಲಕ 20 ಕೋಟಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪ್ರಭಾವ ಬೀರುವ ಉದ್ದೇಶ ಹೊಂದಿದೆ.

Add to
Shares
9
Comments
Share This
Add to
Shares
9
Comments
Share
Report an issue
Authors

Related Tags