ಆವೃತ್ತಿಗಳು
Kannada

ಕನ್ನಡದ ಖ್ಯಾತ ಲೇಖಕಿ ತ್ರಿವೇಣಿ

ಟೀಮ್​​ ವೈ.ಎಸ್​.

Team YS Kannada
23rd Jul 2015
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಕನ್ನಡದ ಕಾದಂಬರಿ ಪ್ರೀಯರಿಗೆ ತ್ರಿವೇಣಿ ಅನ್ನೋ ಹೆಸರು ಚಿರಪರಿಚಿತ. ಅದ್ಭುತ ಕಾದಂಬರಿಗಳು ತ್ರಿವೇಣಿಯವರನ್ನು ಓದುಗರ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಿತ್ತು. ಸುಲಭವಾದ ಬರವಣಿಗೆಯ ವಿಧಾನ ಮತ್ತು ಮನಸ್ಸಿಗೆ ಮುಟ್ಟುವಂತೆ ತ್ರಿವೇಣಿ ಕಾದಂಬರಿಗಳನ್ನು ಬರೆಯುತ್ತಿದ್ರು.

ತ್ರಿವೇಣಿ ಅವರ ನಿಜನಾಮ ಅನಸೂಯಾ ಶಂಕರ್. ಕನ್ನಡದ ಪ್ರಖ್ಯಾತ ಲೇಖಕರಲ್ಲಿ ತ್ರಿವೇಣಿ ಕೂಡ ಒಬ್ಬರು. ತ್ರಿವೇಣಿ ಅವರು ಮಹಿಳೆಯರಿಗೆ ಸಂಬಧಿಸಿದಂತೆ ಹಲವು ಕಾದಂಬರಿಗಳನ್ನು ಬರೆದಿದ್ದರು. ತ್ರಿವೇಣಿಯವರ ಹಲವು ಕಾದಂಬರಿಗಳು ಸಿನಿಮಾ ಕೂಡ ಆಗಿವೆ.

image


ಅನಸೂಯಾ ಶಂಕರ್ ಸೆಪ್ಟೆಂಬರ್ 1928 ರಂದು ಮಂಡ್ಯದಲ್ಲಿ ಜನಿಸಿದರು. ಅವರ ತಂದೆ ಕೃಷ್ಣಸ್ವಾಮಿ ಮತ್ತು ತಾಯಿ ತಂಗಮ್ಮ. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬಿಎ ಪದವಿಯನ್ನು ಪಡೆದಿದ್ದರು. ಬಿಎ ಪದವಿಯಲ್ಲಿ ಚಿನ್ನದ ಪದಕ ತ್ರಿವೇಣಿ ಪಾಲಾಗಿತ್ತು. ಅನಸೂಯಾ ಇಂಗ್ಲೀಷ್ ಪ್ರಾಧ್ಯಾಪಕ ಶಂಕರ್ ಅವರನ್ನು ಮದುವೆ ಆದರು.

ತ್ರಿವೇಣಿ ಅವರ ಮೊದಲ ಕಾದಂಬರಿಯನ್ನು 1953 ರಲ್ಲಿ ಪ್ರಕಟಿಸಿದರು. ನಂತರ 3 ಸಣ್ಣಕಥೆಗಳು ಮತ್ತು 20 ಕಾದಂಬರಿಗಳನ್ನು ಪ್ರಕಟ ಮಾಡಿದರು. ಅವರ ಕಾದಂಬರಿಗಳು ಮಹಿಳೆಯರ ಮಾನಸಿಕ ಸ್ಥಿತಿಗೆ ಸಂಬಧಿಸಿದಂತೆ ಇರುತ್ತಿದ್ದವು.

ದೂರದ ಬೆಟ್ಟ, ಶರಪಂಜರ, ಬೆಳ್ಳಿಮೋಡ,ಹೃದಯ ಗೀತ, ಮೊದಲ ಹೆಜ್ಜೆ, ಬೆಕ್ಕಿನ ಕಣ್ಣು, ಮುಕ್ತಿ ಮುಂತಾದವು ಅವರ ಪ್ರಮುಖ ಕಾದಂಬರಿಗಳು.

ಸಣ್ಣ ಕಥೆಗಳು

ಹೆಂಡತಿಯ ಹೆಸರು,ಎರಡು ಮನಸು,ಸಮಸ್ಯೆಯ ಮಗು

ಸಿನಿಮಾ ಆದ ಕಾದಂಬರಿಗಳು

ಬೆಳ್ಳಿಮೋಡ, ಶರಪಂಜರ, ಹೂವು ಹಣ್ಣು, ಮುಕ್ತಿ , ಹಣ್ಣೆಲೆ ಚಿಗುರಿದಾಗ,ಕಂಕಣ.

ತ್ರಿವೇಣಿ ಅವರ ಅವಳ ಮನೆ ಕಾದಂಬರಿಗೆ 1960 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅವಾರ್ಡ್ ಕೂಡ ಸಿಕ್ಕಿದೆ. ತ್ರಿವೇಣಿ 1963 ರಲ್ಲಿ ತನ್ನ 35 ನೇ ವಯಸ್ಸಿನಲ್ಲಿ ನಿಧನ ಹೊಂದಿದರು.

1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags