ಆವೃತ್ತಿಗಳು
Kannada

ಬ್ಯಾಲೆ ನೃತ್ಯ ಪ್ರಪಂಚದಲ್ಲಿ ಸಾಹಸೀ ‘ ಯಾನ..!’

ಟೀಮ್​​ ವೈ.ಎಸ್​. ಕನ್ನಡ

11th Apr 2016
Add to
Shares
3
Comments
Share This
Add to
Shares
3
Comments
Share

ಬ್ಯಾಲೆ ಡ್ಯಾನ್ಸ್.. ಇತ್ತೀಚೆಗೆ ಯುವಕ ಯುವಕ ಯುವತಿಯನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿರುವ ನೃತ್ಯ ಪ್ರಕಾರವಿದು. ಪಾಶ್ಚಾತ್ಯ ದೇಶದಿಂದ ಉಡುಗೊರೆಯಾಗಿ ಬಂದಿರುವ ಈ ಡ್ಯಾನ್ಸ್ ಇದೀಗ ವಿಶ್ವದಾದ್ಯಂತ ಹೆಚ್ಚು ಜನಪ್ರಿಯಗೊಳ್ಳುತ್ತಿರೋದು ವಿಶೇಷ. ಇನ್ನು ಭಾರತದಲ್ಲೂ ಈ ಅತ್ಯಮೋಘ ಬ್ಯಾಲೆಗೆ ಇನ್ನಿಲ್ಲದ ಬೇಡಿಕೆ ಸೃಷ್ಠಿಯಾಗಿದೆ. ಇನ್ನು ಅದೆಷ್ಟೋ ಮಂದಿ ಈ ಬ್ಯಾಲೆ ಡ್ಯಾನ್ಸ್ ಕಲಿಸಲು ಹೊರದೇಶದಿಂದ ಭಾರತಕ್ಕೆ ಬಂದು ಇಲ್ಲಿ ನಮ್ಮವರೇ ಆಗಿ ನೆಲೆಸಿ ಗಮನ ಸೆಳೆದಿದ್ದಾರೆ. ಅಂತಹವರ ಪೈಕಿ ಲಂಡನ್ ಮೂಲದ ಯಾನಾ ಲೂಯಿಸ್ ಕೂಡ ಒಬ್ರು. 1998ರಲ್ಲಿ ಲಂಡನ್ ನಿಂದ ಬಂದ ಯಾನಾ ಇದೀಗ ಬ್ಯಾಲೆ ಡ್ಯಾನ್ಸ್ ನಿಂದಾಗಿ ಭಾರತದಲ್ಲೇ ನೆಲೆಸಿರೋದು ವಿಶೇಷ. ಆದ್ರೆ ಯಾನ ಭಾರತಕ್ಕೆ ಬಂದಿರೋದ್ರ ಹಿಂದೆ ಒಂದು ವಿಶೇಷ ಕಥೆ ಇದೆ. ತಮ್ಮ ಯೋಗ ಗುರುಗಳಾದ ಬಿಕೆಎಸ್ ಐಯ್ಯಂಗಾರ್ ಅವರ 80ನೇ ಹುಟ್ಟುಹಬ್ಬವನ್ನ ಆಚರಿಸಲು ಚೆನ್ನೈ, ಬೆಂಗಳೂರು ಮೂಲಕ ಪುಣೆಗೆ ಆಗಮಿಸಿದ್ರು. ಆದ್ರೆ ಬರುವ ಮೊದ್ಲೆ ಭಾರತೀಯರು ವಿವಿಧ ನೃತ್ಯಗಳ ಬಗ್ಗೆ ಹೊಂದಿರುವ ಒಲವು ಹಾಗೂ ದೃಷ್ಠಿಕೋನಗಳ ಬಗ್ಗೆ ತಿಳಿದುಕೊಂಡೇ ಆಗಮಿಸಿದ್ರು. ಆರಂಭದಲ್ಲಿ ಇಲ್ಲಿನ ಕ್ಲಾಸಿಕಲ್ ಡ್ಯಾನ್ಸ್ ಹಾಗೂ ಇತರೆ ಸಾಂಪ್ರದಾಯಿಕ ನೃತ್ಯಗಳಿಗೆ ಮಾರುಹೋದ್ರು. ಆದ್ರೆ ನಂತ್ರ ಇವೇ ನೃತ್ಯಗಳ ಅವರನ್ನ ಹಿಡಿದಿಟ್ಟಿದ್ದು ವಿಶೇಷ.

image


ಭಾರತದಲ್ಲಿ ವೆಸ್ಟರ್ನ್ ಡ್ಯಾನ್ ಅನ್ನೋ ಹೆಸರಿನಲ್ಲಿ ಪಾಶ್ಚಾತ್ಯ ನೃತ್ಯ ಶೈಲಿಗಳನ್ನ ಕಲಿಯುತ್ತಿದ್ದಾರೆ. ವಿಶೇಷ ಅಂದ್ರೆ ಭಾರತದ ಕ್ಲಾಸಿಕಲ್ ಡ್ಯಾನ್ಸ್ ನ ಮೂಲವೂ ವೆಸ್ಟರ್ನ್ ದೇಶಗಳೇ ಅನ್ನೋದು ಯಾನ ವಾದ. ಪಾಶ್ಚಾತ್ಯ ರಾಷ್ಟ್ರಗಳ ಬ್ಯಾಲೆ ಡ್ಯಾನ್ಸ್ ರೂಪಾಂತರವಾಗಿ ಭಾರತದಲ್ಲಿ ಕ್ಲಾಸಿಕಲ್ ಡ್ಯಾನ್ಸ್ ಆಗಿ ಬದಲಾಗಿದೆ ಅಂತ ಅವರು ಹೇಳುತ್ತಾರೆ. ಇನ್ನು ನೃತ್ಯ ತರಬೇತು ಕಾರ್ಯಕ್ರಮಗಳಲ್ಲೇ ಹೆಚ್ಚು ತೊಡಗಿಸಿಕೊಂಡಿರುವ ಯಾನ, ತಾಂತ್ರಿಕವಾಗಿ ತರಬೇತಿ ನೀಡುವುದರಲ್ಲೂ ಹೆಸರುಗಳಿಸಿದ್ದಾರೆ.

ಬ್ಯಾಲೆ ಮತ್ತು ಯಾನಾ..

ಯಾನಾ ತಮ್ಮಿಷ್ಟದ ಬ್ಯಾಲೆ ನೃತ್ಯವನ್ನ ಕಲಿಯಲು ಆರಂಭಿಸಿದ್ದು ತಮ್ಮ 2ನೇ ವರ್ಷದಲ್ಲಿ. ಆದ್ರೆ ಅದು ಅವರ ಬದುಕನ್ನ ಬದಲಾಯಿಸಿತು ಅನ್ನೋದು ವಿಶೇಷ. ಇದೀಗ 35 ವರ್ಷಗಳ ಅನುಭವ ಹೊಂದಿರುವನ ಯಾನಾ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಬ್ಯಾಲೆ ಕಲಿಸುವುದರಲ್ಲಿ ತಮ್ಮನ್ನು ಕಾವು ತೊಡಗಿಸಿಕೊಂಡಿದ್ದಾರೆ. “ ಭಾರತದಲ್ಲಿ ಮೊದಲು ನೃತ್ಯವನ್ನ ಕಲಿಸಲು ಯೋಜಿಸಿದಾಗ ನಾನು ಆಯ್ದುಕೊಂಡಿದ್ದು ಬೀದಿ ಬದಿಯ ಮಕ್ಕಳನ್ನ. ಅವರಲ್ಲಿ ಅಡಗಿದ್ದ ಅದ್ಭುತ ಚೈತನ್ಯ ಹಾಗೂ ಶಕ್ತಿ ನನ್ನಲ್ಲಿ ಅಚ್ಚರಿ ಮೂಡಿಸಿತ್ತು. ಹೀಗಾಗಿ ಅವರಲ್ಲಿ ಅಡಗಿರುವ ಆ ಅದ್ಭುತ ಚೈತನ್ಯವನ್ನ ಸರಿಯಾದ ದಾರಿಯಲ್ಲಿ ಬಳಸಿಕೊಳ್ಳಲು ನಿರ್ಧರಿಸಿದೆ. ಡ್ಯಾನ್ಸ್ ನ ಮೂಲಕ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಗೆಳೆಯಲು ಪ್ರಯತ್ನಿಸಿದೆ. ಅವರು ವೇಗವಾಗಿ ಕಲಿಯುವ ಸಾಮರ್ಥ್ಯ ಹೊಂದಿರುವುರ ಜೊತೆಗೆ ತಮ್ಮನ್ನು ತಾವು ಗುರುತಿಸಿಕೊಳ್ಳುವ ಶಕ್ತಿ ಹೊಂದಿದ್ದಾರೆ ” ಅಂತ ಯಾನ ಲೂಯಿಸ್ ಹೇಳುತ್ತಾರೆ. ಇನ್ನು ಬೆಂಗಳೂರಿನಲ್ಲಿ ಮೊದಲು ಈ ಪ್ರಯೋಗ ನಡೆಸಿದ ಅವರು ಅಲ್ಲಿ ಸಿಕ್ಕ ಬೆಂಬಲವನ್ನ ಕಂಡು ಅಚ್ಚರಿ ವ್ಯಕ್ತಪಡಿಸಿದ್ರು. ಹೀಗಾಗಿ ಅವರು 2006ರಲ್ಲಿ ದಿ ಲೂಯಿಸ್ ಫೌಂಡೇಶನ್ ಆಫ್ ಕ್ಯಾಸಿಕಲ್ ಬ್ಯಾಲೆ ಸಂಸ್ಥೆಯನ್ನ ಹುಟ್ಟು ಹಾಕಿದ್ರು.

ಇದನ್ನು ಓದಿ: ಸಾಂಸ್ಕೃತಿಕ ನಗರಿಯ ಹೊಸ ಶೈಕ್ಷಣಿಕ ಸಾಧನೆ

ತರಬೇತು ಹೊಂದಿದ ಬ್ಯಾಲೆ ಡ್ಯಾನ್ಸರ್

ಲಂಡನ್ ನಲ್ಲಿ ನೆಲೆಸಿರುವಾಗ ಯಾನಾ ಲೂಯಿಸ್ ಹಲವು ಟಿವಿ ಶೋಗಳಿಗೆ ಕಾರ್ಯಕ್ರಮಗಳನ್ನ ನಿರ್ದೇಶಿಸಿದ್ರು. ಹಲವು ಕಾರ್ಯಕ್ರಮಗಳನ್ನ ತಾವೇ ನೀಡಿದ್ರು. ಆಧುನಿಕ ಶೈಲಿಯ ಡ್ಯಾನ್ಸ್ ಗಳ ಭರಟೆಯ ನಡುವೆಯೂ ಇಂಗ್ಲೆಂಡ್ ನ ಸಾಂಪ್ರದಾಯಿಕ ಬ್ಯಾಲೆಯನ್ನ ಇನ್ನಷ್ಟು ಶ್ರೀಮಂತಗೊಳಿಸಲು ಯತ್ನಿಸಿದ್ರು. ಹೀಗಾಗಿ ಬ್ಯಾಲೆ ಕುರಿತ ವಿಡಿಯೋಗಳು, ಡಾಕ್ಯುಮೆಂಟರಿಗಳು, ಟ್ರೈನಿಂಗ್ ಫಿಲ್ಮ್ ಗಳು ಹಾಗೂ ಜಾಹೀರಾತುಗಳನ್ನ ತಯಾರಿಸಿದ್ರು. ಅಲ್ಲದೆ ಶಾಲಾ ಮಕ್ಕಳಿಗೆ ಸಂಬಂಧಿಸಿದ ಆಲ್ಬಂಗಳನ್ನೂ ಹೊರತಂದ್ರು.

image


ಶುರುವಾದ ಹೊಸ ಬದುಕು..

ಹೊಸ ಸಂಸ್ಥೆ ಶುರುವಾದಾಗ ಯಾನ ಜೊತೆಗೆ ಹಲವು ಮಂದಿ ಕೈ ಜೋಡಿಸಿದ್ರು. ಬಾರತದ ಐಟಿ ವಲಯದಲ್ಲಿ ಉದ್ಯೋಗಿಯಾಗಿರುವ ಅವರ ಪತಿ ಕೂಡ ಯಾನಾ ಸಾಹಸಕ್ಕೆ ಸಾಥ್ ನೀಡಿದ್ರು.. ಫೌಂಡೇಶನ್ ನ ಕಾರ್ಯಕ್ರಮಗಳ ರೂಪುರೇಷೆಗಳನ್ನ ತಯಾರಿಸುವುದು ಯಾನಾ ಅವರ ಪತಿ ಅನ್ನೋದು ವಿಶೇಷ. ನೃತ್ಯವನ್ನ ತಮ್ಮ ಬದುಕಾಗಿ ಸ್ವೀಕರಿಸಿದ ಬಳಿಕ ಅದು ತಮ್ಮ ಜೀವನದ ಭಾಗವಾಗಿದೆ ಅಂತಾರೆ ಯಾನಾ ಲೂಯಿಸ್. ಇದೀಗ 53ರ ಹರೆಯದ ಯಾನಾ ಈಗಲೂ ಬ್ಯಾಲೆ ಬಗ್ಗೆ ಇನ್ನಿಲ್ಲದ ಹೊಸ ಸಂಶೋಧನೆಗಳನ್ನ ನಡೆಸುತ್ತಿರುತ್ತಾರೆ. 7 ವರ್ಷದ ಮಗಳನ್ನ ಹೊಂದಿರುವ ಯಾನಾ ಆಕೆಗೆ ಈಗಾಗಲೇ ಬ್ಯಾಲೆ ನೃತ್ಯದ ತರಬೇತಿ ನೀಡಿದ್ದು ಆಕೆಯ ಮೂಲಕ ಹೊಸ ಬದುಕಿನ ಕನಸು ಕಾಣುತ್ತಿದ್ದಾರೆ.

ಬೆಂಗಳೂರಿನಲ್ಲೇ 900ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಹೊಂದಿರುವ ಯಾನಾ ಲೂಯಿಸ್ ತಮ್ಮ ಫೌಂಡೇಶನ್ ಅನ್ನು ಇನ್ನಷ್ಟು ಬಲಗೊಳಿಸುವ ಲೆಕ್ಕಾಚಾರದಲ್ಲಿದ್ದಾರೆ. ಶಾಲೆ ಹಾಗೂ ವಿಶ್ವವಿದ್ಯಾಲಯಗಳನ್ನೂ ಬ್ಯಾಲೆಯನ್ನ ಪಠ್ಯೇತರ ಚಟುವಟಿಗೆಯ ಭಾಗವಾಗಿ ಕಲಿಸಬೇಕು ಅನ್ನೋದು ಇವರ ಕನಸು.

ಲೇಖಕರು – ಸಾಸ್ವತಿ ಮುಖರ್ಜಿ

ಅನುವಾದ – ಸ್ವಾತಿ

ಇದನ್ನು ಓದಿ:

1. ರೈತನ ಸಮಸ್ಯೆಗೆ ಸ್ಪಂದಿಸುವ ಜಿಕೆವಿಕೆಯ ಆ್ಯಪ್

2. ವೈದ್ಯರ ಮಾಹಿತಿಗಾಗಿ ಇದೆ ಪ್ರಾಕ್ಟೋ ಆ್ಯಪ್

3. ಸ್ಟಾರ್ಟಪ್ ನಿರ್ಮಾಣದಲ್ಲಿ ನಾನು ಎದುರಿಸಿದ 5 ಸವಾಲುಗಳು..

Add to
Shares
3
Comments
Share This
Add to
Shares
3
Comments
Share
Report an issue
Authors

Related Tags