ಆರೋಗ್ಯಕ್ಕೆ ಹಾನಿಕಾರಕ- ಪರಿಸರಕ್ಕೆ ಮಾರಕ-ಪ್ಲಾಸ್ಟಿಕ್​ಗೆ ಗುಡ್​ ಬೈ ಹೇಳಲು ಸ್ಯಾನ್​ಫ್ರಾನ್ಸಿಸ್ಕೋ ನಿರ್ಧಾರ

ಟೀಮ್​ ವೈ.ಎಸ್. ಕನ್ನಡ
5 CLAPS
0

ಪ್ಲಾಸ್ಟಿಕ್ ಪರಿಸರವನ್ನು ಅದೆಷ್ಟರ ಮಟ್ಟಿಗೆ ಹಾಳು ಮಾಡಿದೆ ಅಂದ್ರೆ, ಮನುಕುಲವೇ ಪ್ಲಾಸ್ಟಿಕ್ ವಿರುದ್ಧ ಸಿಡಿದು ನಿಲ್ಲುವ ದಿನ ದೂರವಿಲ್ಲದಂತೆ ಆಗಿದೆ. ಈಗಾಗಲೇ ಪ್ಲಾಸ್ಟಿಕ್ ವಿರುದ್ಧ ಜನಜಾಗೃತಿ ಆರಂಭವಾಗಿದೆ. ಆದ್ರೆ ಅಮೆರಿಕಾದ ಸ್ಯಾನ್​ಫ್ರಾನ್ಸಿಸ್ಕೋದಲ್ಲಿ ಪ್ಲಾಸ್ಟಿಕ್ ಚೀಲಗಳಿಗೆ ಮಾತ್ರವಲ್ಲ, ಪ್ಲಾಸ್ಟಿಕ್ ಬಾಟಲ್​ಗಳಿಗೂ ನಿಷೇಧ ಹೇರಲಾಗಿದೆ.

ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗುವುದಿಲ್ಲ. ಅಷ್ಟೇ ಅಲ್ಲ ಇದು ಅಜೈವಿಕ. ಒಂದುವೇಳೆ ಪ್ಲಾಸ್ಟಿಕ್​ ಅನ್ನು ಸುಟ್ರೆ, ಟಾಕ್ಸಿಕ್ ಮೂಲಕ ಪರಿಸರವನ್ನು ಹಾಳುಮಾಡುತ್ತಿದೆ. ಹಸಿ ಮಣ್ಣಿನ ಜೊತೆ ಬೆರೆಸಿದ್ರೆ ಅಮೋನಿಯ ಗ್ಯಾಸ್​ನ್ನು ರಿಲೀಸ್ ಮಾಡಿ, ಹಸಿರು ಮನೆ ಪರಿಣಾಮದ(Greenhouse effect) ವೇಳೆ ಮಿಥೇನ್ ಜೊತೆ ಸೇರಿಕೊಂಡು ಕೆಟ್ಟವಾಸನೆಯನ್ನು ಹರಡುತ್ತದೆ.


ಇಕೋ ವಾಚ್ ವರದಿ ಪ್ರಕಾರ ಅಮೆರಿಕನ್ನರು ಪ್ರತೀ ವರ್ಷ 35 ಬಿಲಿಯನ್ ಪ್ಲಾಸ್ಟಿಕ್ ವಾಟರ್ ಬಾಟಲ್​ಗಳನ್ನು ಬಳಸಿ ಎಸೆಯುತ್ತಾರೆ. ಪ್ರತೀ ವರ್ಷ ಇದು ಹೆಚ್ಚಾಗುತ್ತಲೇ ಇದೆ. ಇದು ಲೆಕ್ಕಾಚಾರದ ಪ್ರಕಾರ ಅಮೆರಿಕನ್ನರು ಎಸೆಯುವ ಪ್ಲಾಸ್ಟಿಕ್ ಬಾಟಲಿಗಳಿಂದಲೇ ಸುಮಾರು 4 ಬಾರಿ ಭೂಮಿಗೆ ಬೇಲಿ ಹಾಕುವಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಕಳೆದ 1 ದಶಕದಲ್ಲಿ ಉತ್ಪತ್ತಿಯಾದ ಪ್ಲಾಸ್ಟಿಕ್ ತ್ಯಾಜ್ಯಗಳು, ಕಳೆದ ಒಂದು ಶತಮಾನದಲ್ಲಿ ಉತ್ಪತ್ತಿಯಾದ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹಕ್ಕೆ ಸಮವಾಗಿದೆ.

ಇದನ್ನು ಓದಿ: ಮಳೆಯಲಿ ಹೊಸ ಪರಿಚಿತರ ಜೊತೆಯಲ್ಲಿ..! 

ಈಗಾಗಲೇ ಪ್ಲಾಸ್ಟಿಕ್ ನಿಷೇಧದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿದೆ. ರಾಂಡ್ವಾ, ಎರಿಟ್ರಿಯಾ, ಕೀನ್ಯಾ, ಮೌರಿಷಿಯಸ್, ತಾಂಜ್ಹಾನಿಯಾ, ಚೀನಾ, ತೈವಾನ್ ಮತ್ತು ಮಸೆಡೊನಿಯಾ ದೇಶಗಳಲ್ಲಿ ಪ್ಲಾಸ್ಟಿಕ್​ನ್ನು ಸಂಪೂರ್ಣವಾಗಿಸ ನಿಷೇಧಿಸಲಾಗಿದೆ. ಇನ್ನು ಕೆಲವು ದೇಶಗಳಲ್ಲಿ ಈ ಬಗ್ಗೆ ಭಾರೀ ಚರ್ಚೆಯೂ ನಡೆಯುತ್ತಿದೆ. ಇಂದಲ್ಲ ನಾಳೆ ಪ್ಲಾಸ್ಟಿಕ್​ಗಳಿಗೆ ಹಲವು ದೇಶಗಳು ಗುಡ್ ಬೈ ಹೇಳೋದು ಖಚಿತ.

ಪ್ಲಾಸ್ಟಿಕ್ ನಿಷೇಧದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಸ್ಯಾನ್​ಫ್ರಾನ್ಸಿಸ್ಕೋ ಒಂದು ಹೆಜ್ಜೆ ಮುಂದೆ ಹೋಗಿದೆ. ಅಲ್ಲಿ ಎಲ್ಲಾ ತರಹದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 2020ರ ಹೊತ್ತಿಗೆ ಸ್ಯಾನ್​ಫ್ರಾನ್ಸಿಸ್ಕೋದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಇರಲೇಬಾರದು ಅನ್ನೋ ಕಡೆ ಹೆಜ್ಜೆ ಇಡಲಾಗಿದೆ.

“ ಪರಿಸರ ಹಾನಿ ವಿರುದ್ಧ ಸ್ಯಾನ್​ಫ್ರಾನ್ಸಿಸ್ಕೋ ಮೊದಲ ಹೆಜ್ಜೆ ಇಡುತ್ತಿದೆ. ಬದಲಾಗುತ್ತಿರುವ ವಾತಾವರಣವನ್ನು ಉಳಿಸಿಕೊಳ್ಳುವ ಬಗ್ಗೆ ದೊಡ್ಡ ಪ್ರಯತ್ನಗಳು ನಡೆಯುತ್ತಿದೆ. ಸ್ಯಾನ್​ಫ್ರಾನ್ಸಿಸ್ಕೋ ಅದನ್ನು ಮುನ್ನಡೆಸಲಿದೆ. ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತಗ್ಗಿಸುವ ಕೆಲಸಕ್ಕೆ ನೀವು ಸಹಕರಿಸಿ”

ಒಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಈ ಹಿಂದೆಯೇ ಸಾಕಷ್ಟು ಎಚ್ಚರಿಕೆಗಳನ್ನು ನೀಡಿದ್ದರೂ, ಅದ್ರ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ ಪರಿಸ್ಥಿತಿ ಹೀಗೇ ಮುಂದುವರಿದರೆ ಉಳಿಗಾಲವಿಲ್ಲ ಅನ್ನೋದು ಗೊತ್ತಾಗುತ್ತಲೇ ಪ್ಲಾಸ್ಟಿಕ್ ಹೆಮ್ಮಾರಿಯನ್ನು ನಿಷೇಧಿಸಲು ಕಾರ್ಯತಂತ್ರ ನಡೆಯುತ್ತಿದೆ.

ಇದನ್ನು ಓದಿ:

1. ಪರ್ವತಗಳಲ್ಲೂ ಬೈಕ್ ಓಡಿಸೋ ಚತುರ – ಲಂಕಾ ರೇಸ್​ನಲ್ಲಿ ಪಾಲ್ಗೊಳ್ತಿದ್ದಾನೆ ಭಾರತದ ಕಿರಿಯ ಕುವರ

2. ವೃತ್ತಿಯಲ್ಲಿ ಆಟೋ ಚಾಲಕ- ಆದ್ರೆ 5000 ಸಸಿಗಳನ್ನು ನೆಟ್ಟ ಅಪ್ಪಟ ಪರಿಸರ ಪ್ರೇಮಿ

3. ಭಾರತೀಯ ಮಹಿಳಾ ಉದ್ಯಮಿಗಳಿಗೆ ಇಸ್ರೇಲ್ ನೀಡುತ್ತೆ ಸುವರ್ಣಾವಕಾಶ- ಗಮನ ಸೆಳೆಯುತ್ತಿದೆ ಸ್ಟಾರ್ಟ್ ಟಿಎಲ್​​ವಿ ಬೂಸ್ಟ್ ಕ್ಯಾಂಪ್

Latest

Updates from around the world