ಆವೃತ್ತಿಗಳು
Kannada

ಫಿಜ್ಝಾ ಡೆಲಿವರಿಯಿಂದ ಕೇಬಲ್ ನ್ಯೂಸ್ ಚಾನೆಲ್ ಕಟ್ಟುವ ತನಕ…

ಟೀಮ್​ ವೈ.ಎಸ್​. ಕನ್ನಡ

YourStory Kannada
2nd Dec 2016
Add to
Shares
4
Comments
Share This
Add to
Shares
4
Comments
Share

ಮೊಹಮ್ಮದ್ ಹುಸೈನ್ ಐಬಿನ್ ಖಾಲೊ. ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಹಿಂಸೆ ಪೀಡಿತ ಕಾರ್ಗಿಲ್​ನಲ್ಲಿ. ಆರಂಭದಲ್ಲಿ ಕುಟುಂಬವನ್ನು ಸಲುಹುವ ಸಲುವಾಗಿ ಲೋಕಲ್ ರೆಸ್ಟೋರೆಂಟ್ ಒಂದರಲ್ಲಿ ಪಿಜ್ಝಾ ಡೆಲಿವರಿ ಹುಡುಗನಾಗಿ ಕೆಲಸ ಆರಂಭಿಸಿದ್ರು. ಆದ್ರೆ ಇದ್ದ ಕೆಲಸದಲ್ಲೇ ಹುಸೈನ್​ಗೆ ಖುಷಿ ಇರಲಿಲ್ಲ. ಹೀಗಾಗಿ ಕನಸುಗಳು ದೊಡ್ಡದಾಗೇ ಇತ್ತು. ಆದ್ರೆ ಇವತ್ತು ಈ ಹುಸೈನ್ ಕೇಬಲ್ ನ್ಯೂಸ್ ನೆಟ್​ವರ್ಕ್​ನ ಮಾಲೀಕ. ಕಾರ್ಗಿಲ್ ಮತ್ತು ಲಡಾಖ್​ನಲ್ಲಿ ಈ ಕೇಬಲ್ ನ್ಯೂಸ್ ನೆಟ್​ವರ್ಕ್ ಜನರ ಮನಸ್ಸು ಗೆದ್ದಿದೆ.

image


ಹುಸೈನ್ ಓದಿದ್ದು ಕಾರ್ಗಿಲ್​ನ ಸರ್ಕಾರಿ ಶಾಲೆಯಲ್ಲಿ. ಓದಿನ ಅರ್ಧದಲ್ಲೇ ಕುಟುಂಬವನ್ನು ಸಲುಹುವ ಸಲುವಾಗಿ ಪಿಜ್ಝಾ ಡೆಲಿವರಿ ಹುಡುಗನಾಗಿ ಕೆಲಸಕ್ಕೆ ಸೇರಿಕೊಂಡರು. ಕೆಲಸ ಮಾಡಿಕೊಂಡೇ ಹುಸೈನ್ ಓದನ್ನು ಮುಂದುವರೆಸಿದ್ರು. 2011ರಲ್ಲಿ ಹುಸೈನ್ ಫಿರೋಜ್ ಖಾನ್ ಅನ್ನೋ ಗೆಳೆಯನ ಜೊತೆ ಸೇರಿಕೊಂಡರು. ಆರಂಭದಲ್ಲಿ "ಕಾರ್ಗಿಲ್ ಟುಡೇ" ಅನ್ನೋ ಯೂ ಟ್ಯೂಬ್ ಚಾನೆಲ್ ಮೂಲಕ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಶುರುಮಾಡಿದರು.

ಇದನ್ನು ಓದಿ: ಇವರು ಕೇವಲ ಆಟೋ ಡ್ರೈವರ್​ ಅಲ್ಲ- ಎಲ್ಲರಿಗೂ ಮಾದರಿ ವ್ಯಕ್ತಿ..!

ಆರಂಭದಲ್ಲಿ "ಕಾರ್ಗಿಲ್ ಟುಡೇ" ಚಿಕ್ಕ ಚಿಕ್ಕ ಹೆಜ್ಜೆಗಳನ್ನಿಟ್ರೂ ಇವತ್ತು ಕಾರ್ಗಿಲ್ ವಲಯದ ಅತೀ ದೊಡ್ಡ ಕೇಬಲ್ ನ್ಯೂಸ್ ನೆಟ್ವರ್ಕ್ ಆಗಿ ಬೆಳೆದು ಬಿಟ್ಟಿದೆ. ಕಾರ್ಗಿಲ್ ಟುಡೇ, ಕಾರ್ಗಿಲ್ ಮತ್ತು ಲಡಾಖ್ ವಲಯದ ಸಂಸ್ಕೃತಿ, ಧಾರ್ಮಿಕ ಮತ್ತು ಸುದ್ದಿಗಳನ್ನು ಭಿತ್ತರಿಸುತ್ತಿದೆ.

“ ನಾನು ಈ ರೀತಿಯ ಚಾನೆಲ್ ಅನ್ನು ಮಾಡಿದ ಬಳಿಕ ಈಗ ಕಾರ್ಗಿಲ್ ವಲಯದಲ್ಲಿ ಇಂತಹ ಹಲವು ಚಾನೆಲ್​ಗಳು ತಲೆ ಎತ್ತಿವೆ. ಸ್ಥಳೀಯರು ತಮ್ಮ ಅಭಿಪ್ರಾಯಗಳನ್ನು ಈ ಚಾನಲ್​ಗಳ ಮೂಲಕ ಹೊರಹಾಕುತ್ತಿದ್ದಾರೆ.”
- ಹುಸೈನ್, ಕಾರ್ಗಿಲ್ ಟುಡೇ ಮಾಲೀಕ

ಹುಸೈನ್ ಸಾಧನೆ ಬಗ್ಗೆ ಸ್ಥಳೀಯ ಜನರಿಗೂ ಹೆಮ್ಮೆ ಇದೆ. ಹುಸೈನ್​ ಅವರನ್ನು ಲಡಾಖ್ ಮತ್ತು ಕಾರ್ಗಿಲ್ ವಲಯದಲ್ಲಿ ಕೇಬಲ್ ಚಾನೆಲ್​ಗಳ ಪಿತಾಮಹ ಅಂತ ಕರೆಯುತ್ತಿದ್ದಾರೆ. ಕೇವಲ ನಾಲ್ಕೈದು ವರ್ಷಗಳ ಹಿಂದೆ ಆರಂಭವಾದ ಈ ಚಾನೆಲ್ ಈಗ ಅದ್ಭುತವಾಗಿ ಬೆಳೆದು ಬಿಟ್ಟಿದೆ. ಒಟ್ಟಿನಲ್ಲಿ ಹುಸೈನ್ ಸಾಹಸ ಎಲ್ಲರಿಗೂ ಮಾದರಿ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. ಬೆಂಗಳೂರಿನಲ್ಲೊಂದು ದೀವಟಿಗೆ ಗ್ರೂಪ್..!

2. "ಹಿಮಾಲಯನ್​ ಸಾಲ್ಟ್​" ಸಖತ್​ ಡಿಮ್ಯಾಂಡ್​- ಸಿಲಿಕಾನ್​ ಸಿಟಿಯಲ್ಲಿ ಸದ್ದು ಮಾಡಿದ ಸ್ಪೆಷಲ್​ ಉಪ್ಪು

3. ಸ್ಯಾಂಡಲ್​ವುಡ್​ನಲ್ಲಿ ಟೆಕ್ಕಿಗಳ ಹವಾ- ಎಂಜಿನಿರಿಂಗ್​ ಕಲಿತ್ರೂ ಕಲೆಯೇ ಜೀವ..!

Add to
Shares
4
Comments
Share This
Add to
Shares
4
Comments
Share
Report an issue
Authors

Related Tags