ಆವೃತ್ತಿಗಳು
Kannada

ರಾಜಸ್ಥಾನಿ ಪುಲ್ಕಾಸ್​​ ಟೇಸ್ಟ್​​ ನೋಡಿ.. ಅಮ್ಮ ಮಗಳ ಕಥೆ ಕೇಳಿ..!

ಉಷಾ ಹರೀಶ್

18th Mar 2016
Add to
Shares
12
Comments
Share This
Add to
Shares
12
Comments
Share

ನಮ್ಮ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಸಾಕಷ್ಟು ಸಹಾಯ ಮಾಡುತ್ತಿದೆ. ಮಹಿಳೆಯರು ಉದ್ಯಮ ಶೀಲರಾಗಬೇಕು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬೇಕೆಂದು ಹಲವು ಯೋಜನೆಗಳನ್ನ ಪ್ರಕಟಿಸಿದೆ. ಈ ಎಲ್ಲಾ ಕಾರಣಗಳಿಂದಾಗಿ ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಉದ್ಯಮದಲ್ಲಿ ಹೆಚ್ಚಿನದಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.ದತೊಡಗಿಸಿಕೊಳ್ಳುವುದರ ಜತೆಗೆ ಅದರಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ.

image


ಆಧುನಿಕ ತಂತ್ರಜ್ಞಾನದ ನೆರವು, ಹೊಸ ಐಡಿಯಾಗಳು ಪೈಪೋಟಿಗಳನ್ನು ಎದುರಿಸುವ ಅವರ ಗುಣ ಸ್ವಭಾವಗಳು ಇದನ್ನು ಸಾಧ್ಯವಾಗಿಸಿದೆ. ಆ ಸಾಲಿಗೆ ಸಿಲಿಕಾನ್ ಸಿಟಿ ಬೆಂಗಳೂರಿನ ವಿಮಲಾ ಮೆಹತಾ ಮತ್ತವರ ಮಗಳು ಪೂಜಾ ಮೆಹತಾ ಸೇರುತ್ತಾರೆ.

ಇದನ್ನು ಓದಿ: ನಗರದ ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಲೆಕ್ಟ್ರಾನಿಕ್ ಸಿಟಿ..!

ಮೊದಲಿನಿಂದಲೂ ಹೊಟೇಲ್ ಉದ್ಯಮ ಪ್ರಾರಂಭಿಸಬೇಕೆಂದು ಕನಸು ಕಂಡಿದ್ದ ವಿಮಲಾ ಮೆಹತಾ ಅದನ್ನು ಇತ್ತಿಚಿಗೆ ನನಸು ಮಾಡಿಕೊಂಡಿದ್ದಾರೆ. ರಾಜಸ್ಥಾನ ಮೂಲದವರಾದ ಇವರು ಸತತ ಪ್ರಯತ್ನದಿಂದಾಗಿ ಸಣ್ಣ ಮಟ್ಟದಲ್ಲಿ ಉದ್ಯಮ ಪ್ರಾರಂಭಿಸಿದ್ದಾರೆ. ಇವರ ಕನಸಿಗೆ ಇವರ ಮಗಳು ನೀರೆರೆದು ಪೋಷಿಸುತ್ತಿದ್ದಾರೆ . ರಾಜಸ್ಥಾನಿ ಪುಲ್ಕಾಸ್ ತಿನಿಸು ಅರಿವೆ ಇಲ್ಲದ ಬೆಂಗಳೂರಿಗರಿಗೆ ಅದನ್ನ ಪರಿಚಿಯಿಸಿದರೆ ಹೇಗೆ ಎಂಬ ಐಡಿಯಾದೊಂದಿಗೆ ಆರಂಭವಾದ ಇವರ ಪುಲ್ಕಾಸ್ ಮಾರಾಟ ಇಂದು ಎರಡೂವರೆ ಸಾವಿರದಿಂದ ಮೂರು ಸಾವಿರ ರಾಜಸ್ಥಾನಿ ಪುಲ್ಕಾಸ್ ಮಾರಾಟವಾಗುತ್ತಿದೆ.

image


ಅಮ್ಮನ ಕನಸಿಗೆ ಕೆಲಸ ಬಿಟ್ಟ ಮಗಳು

ಅಮ್ಮನ ಕನಸನ್ನು ನನಸು ಮಾಡುವ ಉದ್ದೇಶದಿಂದಾಗಿ ತನ್ನ ವಿದ್ಯಾಭ್ಯಾಸದ ಹಂತದಲ್ಲಿದ್ದಾಗ ಪೂಜಾ ಅವರು ಮಾರುಕಟ್ಟೆಯನ್ನು ಸರ್ವೆ ಮಾಡತೊಡಗಿದರು. ಎಂಬಿಎ ವ್ಯಾಸಂಗ ಮಾಡಿದ ಪೂಜಾ ಅವರಿಗೆ ಫ್ಲಿಫ್​ಕಾರ್ಟ್​ನಲ್ಲಿ ಉತ್ತಮ ಸಂಬಳ ಬರುವ ಉದ್ಯೋಗಕ್ಕೆ ಸೇರಿಕೊಂಡರು. ಕೆಲಸ ಮಾಡುತ್ತಲೇ ಹಣ ಸಂಗ್ರಹ ಸೇರಿದಂತೆ ಪುಲ್ಕಾಸ್ ತಯಾರಿಕಾ ಉದ್ಯಮವನ್ನು ಪ್ರಾರಂಭಿಸಲು ಅಗತ್ಯ ತಯಾರಿ ನಡೆಸುತ್ತ ಬಂದರು ಆರಂಭದಲ್ಲಿ ಪುಲ್ಕಗಳನ್ನು ಬೇಕರಿಗಳಿಗೆ ಸಪ್ಲೈ ಮಾಡತೊಡಗಿದರು ದಿನ ಕಳೆದಂತೆ ಇವರು ತಯಾರಿಸಿದ ಪುಲ್ಕಾಗಳಿಗೆ ಬೇಡಿಕೆ ಹೆಚ್ಚುತ್ತಾ ಹೋಯಿತು. ಇದನ್ನು ಕಂಡ ಪೂಜಾ ಮತ್ತು ವಿಮಲಾ ಅವರ ಉತ್ಸಾಹ ಹಿಮ್ಮಡಿಯಾಯಿತು. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಉತ್ತರ ಭಾರತೀಯರು ವಿದೇಶಿಗರು, ಪಂಜಾಬಿಗಳು ಎಲ್ಲರೂ ಇರುವುದರಿಂದ ಪುಲ್ಕಾಸ್ ಗರು ಇವರ ಪುಲ್ಕಾಸ್ನ್ನು ಬಹುವಾಗಿ ಮೆಚ್ಚಿಕೊಂಡರು. ಇದರಿಂದಾಗಿ ವಿಮಲಾ ಮತ್ತವರ ಮಗಳು ಪೂಜಾ ಪುಲ್ಕಾಸ್ ಫ್ಯಾಕ್ಟರಿ ತೆರೆಯಲು ನಿರ್ಧರಿಸಿದರು.

" ಸತತ ನಾಲ್ಕೈದು ವರ್ಷಗಳ ಶ್ರಮದ ಪ್ರತಿಫಲದಿಂದಾಗಿ ನಾವು ಈ ಮೆಹತಾ ಫುಡ್ ಸೆಂಟರ್ ನಿರ್ಮಾಣ ಮಾಡಿದ್ದೇವೆ. ಈ ಕಂಪನಿ ಪ್ರಾರಂಭ ಮಾಡಬೇಕಾದರೆ ಉತ್ತಮ ಗುಣಮಟ್ಟದ ಅಗತ್ಯ ವಸ್ತುಗಳಿಗಾಗಿ ನಾವು ಪಂಜಾಬ್, ಹರಿಯಾಣ, ರಾಜಸ್ಥಾನಗಳನ್ನು ಸುತ್ತಿದ್ದೇವೆ. ಉತ್ತಮ ಗುಣಮಟ್ಟದ ಪುಲ್ಕಾಗಳನ್ನು ಬೆಂಗಳೂರಿಗರಿಗೆ ನೀಡಬೇಕು ಎನ್ನುವುದು ನಮ್ಮ ಅಭಿಲಾಷೆಯಾಗಿತ್ತು. ಅದು ಈಡೇರಿದೆ ಈ ಪ್ರಯತ್ನಕ್ಕೆ ಜಿಲ್ಲಾ ಕೈಗಾರಿಕಾ ಕಾರ್ಪೋರೇಷನ್ ಜಂಟಿ ನಿರ್ದೇಶಕ ಶಿರಿಸ್ಕರ್​, ಗಂಗಾ ನಗರದ ಸಿಂಡಿಕೇಟ್ ಬ್ಯಾಂಕಿನ ಸಿಬ್ಬಂದಿಗಳಾದ ವಿ ಪ್ರಭಾಕರ್, ಎ ಸುಮಿತ್ರಾ ಅವರ ಸಹಕಾರ ಸಾಕಷ್ಟಿದೆ. ನಾಲ್ಕೈದು ಪ್ಯಾಕೆಟ್​​ಗಳ ಮಾರಾಟದಿಂದ ಪ್ರಾರಂಭವಾದ ಸಂಸ್ಥೆ ಇಂದು ಹತ್ತಿರ ಹತ್ತಿರ 3 ಸಾವಿರ ಪುಲ್ಕಾಗಳನ್ನು ಮಾರಾಟ ಮಾಡುತ್ತಿದ್ದೇವೆ."
                              - ವಿಮಲಾ ಮೆಹತಾ, ಮಾಲಕಿ

2015ರ ಮೇ ತಿಂಗಳಿನಲ್ಲಿ ಬೆಂಗಳೂರಿನ ಆರ್ ಟಿ ನಗರದಲ್ಲಿ ಮೆಹತಾ ಫುಡ್ ಸೆಂಟರ್ ತೆರೆಯಲಾಯಿತು. ಆರಂಭದಲ್ಲಿ ತಿಂಡಿಯ ಬಗ್ಗೆ ಈ ಭಾಗದ ಜನರಿಗೆ ಪುಲ್ಕಾಸ್ ಬಗ್ಗೆ ಅಷ್ಟು ಗೊತ್ತಿರದ ಕಾರಣ ಹೆಚ್ಚು ವ್ಯಾಪಾರವಾಗುತ್ತಿರಲಿಲ್ಲ. ಕ್ರಮೇಣ ಜನರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಅದು ಎಷ್ಟರ ಮಟ್ಟಿಗೆ ಎಂದರೆ ಬುಕ್ಕಿಂಗ್ ಮಾಡಿ ಪುಲ್ಕಾಸ್ ಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು. ಬೇಡಿಕೆ ಹೆಚ್ಚಾದಂತೆ ಪುಲ್ಕಾಸ್ ತಯಾರಿಗೆ ಕೆಲಸದವರನ್ನು ನೇಮಿಸಿಕೊಳ್ಳಲಾಗಿದೆ. ಕೇವಲ ಸಣ್ಣ ಉದ್ಯಮವಾಗಿ ಪ್ರಾರಂಭವಾದ ಈ ಪುಲ್ಕಾಸ್ ಉದ್ಯಮ ಒಂದು ವರ್ಷ ಕಳೆಯುದೊರಳಗೆ ಉತ್ತಮ ಲಾಭದತ್ತ ಹೆಜ್ಜೆ ಹಾಕಿದೆ.

image


ಹೋಮ್ ಡೆಲಿವರಿ

ವಿಮಲಾ ಅವರ ಈ ಪುಲ್ಕಾಸ್ ಈಗ ನಿಮ್ಮ ಮನೆ ಬಾಗಿಲಿಗೂ ಬರುತ್ತದೆ. ಇವರ ಪುಲ್ಕಾಸ್ ಸೆಂಟರ್​ನ ಸುತ್ತಮುತ್ತಾ ಐದಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಪುಲ್ಕಗಳನ್ನು ಆರ್ಡರ್ ಮಾಡಿದರೆ ಸಾಕು ರಾಜಸ್ಥಾನಿ ಪುಲ್ಕಾಸ್ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಅಷ್ಟೇ ಅಲ್ಲದೆ ಸಭೆ ಸಮಾರಂಭ,ಔತಣಕೂಟಗಳದ್ದಿಲ್ಲಿ ಅಲ್ಲಿಗೆ ಹೋಗಿ ಸರ್ವ ಮಾಡಿ ಕೂಡಾ ಬರುತ್ತಾರೆ. ಕೆಎಸ್​ಬಿ ಮುಖ್ಯರಸ್ತೆಯಲ್ಲಿರುವ ಭವಾನಿ ಸ್ಟೀಲ್ಸ್ ಎದುರಿಗಿನ ಕಾವಲ್ ಬೈರಸಂದ್ರ ಎಕ್ಸ್​​ಟೆನ್ಷನ್​ನ ಪಟಿಯಾಲಮ್ಮ ಕಾಂಪ್ಲೆಕ್ಸ್​ನಲ್ಲಿರುವ ಮೆಹತಾ ಫುಡ್ಸ್ ಗೆ ಹೋದರೆ ನಿಮಗೆ ಪುಲ್ಕಾಸ್ ಲಭ್ಯವಿರುತ್ತದೆ. ಒಟ್ಟಿನಲ್ಲಿ ಕನಸುಗಳೇ ಯಶಸ್ಸಿನ ಸಾಧನಗಳು. ಕನಸನ್ನು ಸಾಕಾರಗೊಳಿಸುವ ದೃಢತೆ ಇದ್ದರೆ ಏನನ್ನು ಬೇಕಾದರೂ ಸಾಸಬಹುದು ಎಂಬುದಕ್ಕೆ ವಿಮಲಾ ಮೆಹತಾ ಸಾಕ್ಷಿಯಾಗಿದ್ದಾರೆ.

ಇದನ್ನು ಓದಿ:

1. ಗಾರ್ಡನ್​ ಸಿಟಿಯಲ್ಲಿ ಇ-ಟಾಯ್ಲೆಟ್​​ ಮ್ಯಾಜಿಕ್​​

2. ಸೆಲೆಬ್ರೆಟಿಗಳ ನೆಚ್ಚಿನ ತಾಣ ಶಿವಣ್ಣ ಗುಲ್ಕನ್ ಸೆಂಟರ್

3. 14ರ ಹರೆಯದಲ್ಲೇ ವಿಮಾನ ತಯಾರಿಸುವ ಸಾಹಸದಲ್ಲಿ ಜೂನಿಯರ್ ಐನ್ ಸ್ಟೀನ್...!

Add to
Shares
12
Comments
Share This
Add to
Shares
12
Comments
Share
Report an issue
Authors

Related Tags