ಆವೃತ್ತಿಗಳು
Kannada

ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌ಗಳ ನಿರ್ಮಾಣ ಮಾಡುತ್ತಿದೆ ಸಾಥಿ ಸಂಸ್ಥೆ

ಟೀಮ್​ ವೈ.ಎಸ್​​.

1st Oct 2015
Add to
Shares
4
Comments
Share This
Add to
Shares
4
Comments
Share

ಭಾರತದಲ್ಲಿ ಗ್ರಾಮೀಣ ಭಾಗದಲ್ಲಿರುವ ಮಹಿಳೆಯರು ತಮ್ಮ ಋತುಚಕ್ರದ ದಿನಗಳಲ್ಲಿ ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಆರ್ಥಿಕ ಪರಿಸ್ಥಿತಿಗಳು ಅವರಿಗೆ ಅನುಕೂಲವಾಗಿರುವುದಿಲ್ಲ. ಇದರ ಪರಿಣಾಮವಾಗಿ ಮಹಿಳೆಯರು ಮತ್ತು ಹುಡುಗಿಯರು ತಮ್ಮ ಕೆಲಸಕ್ಕೆ, ಶಾಲೆಗೆ ಪ್ರತಿವರ್ಷ 50 ದಿನಗಳ ಕಾಲ ರಜೆ ಹಾಕಬೇಕಾಗಿರುತ್ತದೆ. ಒಂದು ವರದಿಯ ಪ್ರಕಾರ ಋತುಸ್ರಾವದ ದಿನಗಳಲ್ಲಿ ಅಸಮರ್ಪಕ ರಕ್ಷಣೆಯಿಂದ ಹುಡುಗಿಯರು( 12ರಿಂದ 18 ವರ್ಷ ವಯೋಮಿತಿ) ಪ್ರತಿ ತಿಂಗಳು 5 ದಿನಗಳ ಕಾಲ ಶಾಲೆಗೆ ರಜೆ ಹಾಕುತ್ತಾರೆ. ಸುಮಾರು ಶೇ.12ರಷ್ಟು ಬಾಲಕಿಯರು ಋತುಸ್ರಾವ ಆರಂಭವಾದ ಬಳಿಕ ಶಾಲೆಯನ್ನೇ ತೊರೆಯುತ್ತಾರೆ.

ಗ್ರಾಮೀಣ ಭಾರತದಲ್ಲಿ ಆರ್ಥಿಕ ಸವಾಲುಗಳು ಹಾಗೂ ಸಾಂಪ್ರದಾಯಿಕ ರೂಢಿಗಳಿಂದಾಗಿ ಋತುಸ್ರಾವದ ಸಮಯಲ್ಲಿ ಪ್ಯಾಡ್‌ಗಳ ಬಳಕೆ ಇನ್ನೂ ಪೂರ್ಣವಾಗಿ ಪ್ರವೇಶಿಸಿಲ್ಲ. ಇದರಿಂದಾಗಿ ವಿವಿಧ ಸೋಂಕುಗಳು ಹಾಗೂ ಬಂಜೆತನ ಮಹಿಳೆಯರನ್ನು ಕಾಡುತ್ತಿದೆ.

image


ಇಂಥ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿಯೇ ಹುಟ್ಟಿಕೊಂಡಿದೆ ಸಾಥಿ ಸಂಸ್ಥೆ. ಈ ಸಂಸ್ಥೆಯ ಸಂಸ್ಥಾಪಕರು ಕ್ರಿಸ್ಟಿನ್ ಕಾಗೆತ್ಸು, ಅಮೃತಾ ಸೈಗಲ್, ಗ್ರೇಸ್ ಕೇನ್, ಅಶುತೋಷ್ ಕುಮಾರ್ ಮತ್ತು ಝಚರಿ ರೋಸ್.

ಬಾಳೆಮರದ ಸಿಪ್ಪೆ ಮೂಲಕ ಉತ್ತಮ ನೈರ್ಮಲ್ಯ ರಕ್ಷಣೆ ಒದಗಿಸುವ ಸಣ್ಣ ಪ್ರಮಾಣದ ಸ್ಯಾನಿಟರಿ ಪ್ಯಾಡ್​​ಗಳ ಉತ್ಪಾದನೆ ಮಾಡಿ ಅದನ್ನು ಗ್ರಾಮೀಣ ಭಾರತದ ಮಹಿಳೆಯರಿಗೆ ತಲುಪಿಸುವುದು ಈ ಸಂಸ್ಥೆಯ ಗುರಿ.

‘ಸಾಥಿ’ಯ ಕಥೆ

image


ಎಂಜಿನಿಯರಿಂಗ್ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ನನಗೆ ಆಸಕ್ತಿಯಿತ್ತು. ಎಂಐಟಿಯಿಂದ ನನಗೆ ಈ ಎರಡೂ ವಿಷಯಗಳನ್ನು ಒಟ್ಟಿಗೆ ಸೇರಿಸಲು ಸಾಧ್ಯವಾಯಿತು. ಇದರಿಂದ ನನಗೆ ಸಾಮಾಜಿಕ ಉದ್ಯಮದ ಬಗ್ಗೆ ತಿಳುವಳಿಕೆ ಉಂಟಾಯ್ತು ಅನ್ನುತ್ತಾರೆ ಕ್ರಿಸ್ಟೀನ್. ಸ್ವಾಭಾವಿಕ ಕ್ರೆಯಾನ್ಸ್​​ಗಳ ಬಗ್ಗೆ ಅಧ್ಯಯನ ನಡೆಸಲು ಕ್ರಿಸ್ಟೀನ್ ಅಮೆರಿಕಾದಿಂದ ಭಾರತಕ್ಕೆ ಬಂದರು. ಹೊಸ ವಸ್ತುವನ್ನು ಉತ್ಪಾದಿಸಲು ಹಾಗೂ ಸಂರಕ್ಷಿಸಲು ಅವರಿಗೆ ತುಂಬಾ ಆಸಕ್ತಿ ಇತ್ತು. ಅವರ ಪ್ರಾಜೆಕ್ಟ್ ಮುಗಿದ ಬಳಿಕ ಅವರಿಗೆ ಉತ್ತರಾಖಂಡ್‌ನ ಎನ್‌ಜಿಓ ಆವಂತಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಬಳಿಕ ಯುಎಸ್‌ನ ಒರಾಕಲ್ ಕಂಪನಿಗೆ ವಾಪಸ್ ತೆರಳಿದ ಅವರಿಗೆ ತಾವು ಮಾಡುತ್ತಿರುವ ಕೆಲಸದಲ್ಲಿ ಆಸಕ್ತಿಹುಟ್ಟಲಿಲ್ಲ. ಜನರ ಜೀವನಕ್ಕೆ ಅವಶ್ಯಕವಾದುದು ಏನಾದರೂ ಮಾಡಬೇಕೆಂದು ಅವರು ತೀವ್ರವಾಗಿ ಭಾವಿಸುತ್ತಿದ್ದರು.

ಅಮೃತಾ ಸೈಗಲ್ ಮತ್ತು ಕ್ರಿಸ್ಟೀನ್ ಇಬ್ಬರೂ ಒಟ್ಟಿಗೆ ಎಂಐಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಗ್ರಾಮೀಣ ಭಾಗದ ಮಹಿಳೆಯರಿಗಾಗಿ ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್​​ಗಳನ್ನು ಒದಗಿಸುವ ಕುರಿತು ಅಮೃತಾ ಒಂದು ಯೋಜನೆ ಸಿದ್ಧಪಡಿಸಿಕೊಂಡಿದ್ದರು. ಆ ಯೋಜನೆಯೇ ಸಾಥಿ. ಇದನ್ನು ಮುಂದುವರೆಸಲು ಅಮೃತಾರಿಗೆ ಒಂದು ಸಂಘಟನೆ ಕಟ್ಟುವುದು ಅವಶ್ಯಕವಾಗಿತ್ತು. ಕ್ರಿಸ್ಟೀನ್ ಕೂಡ ಮಹಿಳಾ ಸಬಲೀಕರಣದ ಕುರಿತು ಆಸಕ್ತರಾಗಿದ್ದರು. 2014ರಲ್ಲಿ ಹಾರ್ವರ್ಡ್ ವಿವಿ ತಮ್ಮ ಹಳೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಸಾಥಿ ಸಂಸ್ಥೆಗೆ ಸಾಮಾಜಿಕ ಉದ್ಯಮ ವಿಭಾಗದಲ್ಲಿ ಅಮೃತಾ ಹಾಗೂ ಕ್ರಿಸ್ಟೀನ್50,000 ಡಾಲರ್ ಮೊತ್ತದ ಪ್ರಶಸ್ತಿಯನ್ನು ಸ್ವೀಕರಿಸಿದರು.

ಯೋಜನೆಗಳಲ್ಲಿ ಬದಲಾವಣೆ

ಗ್ರಾಮೀಣ ಭಾಗದ ಮಹಿಳೆಯರಿಗೆ ಕಡಿಮೆಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್​​ಗಳನ್ನು ಒದಗಿಸುವುದು ಸಾಥಿಯ ಯೋಜನೆ. ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್‌ಗಳಷ್ಟೇ ಅಲ್ಲದೇ ಅದನ್ನು ಬಳಸಿ ಎಸೆದ ಮೇಲೆ ಪರಿಸರದ ಮೇಲೆ ಆಗುವ ಪರಿಣಾಮಗಳ ಕುರಿತೂ ಚಿಂತಿಸಬೇಕಿತ್ತು. ಹೀಗಾಗಿ ಯೋಜನೆಯ ಸ್ವರೂಪ ಸ್ವಲ್ಪ ಬದಲಾಯಿತು ಎನ್ನುತ್ತಾರೆ ಕ್ರಿಸ್ಟೀನ್.

ಭಾರತದಲ್ಲಿ ಶೇ. 12ರಷ್ಟು ಮಹಿಳೆಯರು ಮಾತ್ರ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಿದ್ದಾರೆ. ಇದು ತುಂಬಾ ಕಡಿಮೆ ಸಂಖ್ಯೆಯಾದರೂ ಪ್ರತಿ ತಿಂಗಳು 9000 ಟನ್ ಸ್ಯಾನಿಟರಿ ವೇಸ್ಟ್ ನಿರ್ಮಾಣವಾಗುತ್ತಿದೆ. ಎಲ್ಲಾ ವಿಭಾಗದ ಸ್ಯಾನಿಟರಿ ಪ್ಯಾಡ್‌ಗಳಲ್ಲೂ ಒಂದೇ ಮೂಲವಸ್ತುವಿರುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಹೀರಿಕೊಳ್ಳುವ ಮತ್ತು ರಾಸಾಯನಿಕ ವಸ್ತುಗಳನ್ನು ಬಳಸಿ ಮಾಡಲ್ಪಡುವ ಈ ಪ್ಯಾಡ್‌ಗಳು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ ಎನ್ನುತ್ತಾರೆ ಕ್ರಿಸ್ಟೀನ್.

image


ಕಡಿಮೆ ಬೆಲೆ ಸ್ಯಾನಿಟರಿ ಪ್ಯಾಡ್‌ ನೀಡುವುದರಿಂದ ಕೇವಲ ಗ್ರಾಮೀಣ ಭಾಗದ ಮಹಿಳೆಯರ ಸಮಸ್ಯೆ ಬಗೆಹರಿಯಬಹುದು. ಆದರೆ ಪರಿಸರದ ಸಮಸ್ಯೆ ಹಾಗೆಯೇ ಉಳಿದುಬಿಡುತ್ತದೆ. ಹೀಗಾಗಿ ಕಡಿಮೆ ದರದಲ್ಲಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ನೀಡುವುದಲ್ಲದೇ ಪರಿಸರ ರಕ್ಷಣೆಯನ್ನೂ ಗಮನದಲ್ಲಿರಿಸಿಕೊಂಡು ಹೊಸ ಉತ್ಪನ್ನ ಸೃಷ್ಟಿಸಲು ಸಾಥಿ ಸಂಸ್ಥೆ ಯೋಜನೆ ರೂಪಿಸಿತು.

ಒಂದು ಸುದೀರ್ಘ ಸಕಾರಾತ್ಮಕ ಹಾದಿ

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹೇರಳವಾಗಿ ಸಿಗುವ ಬಾಳೆಮರದ ಸಿಪ್ಪೆಯನ್ನು ಬಳಸಿಕೊಂಡು ಶೇ.100ರಷ್ಟು ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ತಯಾರಿಸುವಲ್ಲಿ ಯಶಸ್ವಿಯಾಗಿದೆ ಸಾಥಿ ಸಂಸ್ಥೆ. ನಗರ ಪ್ರದೇಶಗಳ ಮಹಿಳೆಯರಿಗೆ ಬೇರೆ ಕಂಪನಿಯ ಪ್ಯಾಡ್‌ಗಳ ಸಾಮಾನ್ಯದರದಲ್ಲಿ ದೊರೆಯುವ ಈ ಸಾಥಿ ಸಂಸ್ಥೆಯ ಪ್ಯಾಡ್‌ಗಳು ಗ್ರಾಮೀಣ ಭಾಗದ ಮಹಿಳೆಯರಿಗೆ ತೀರಾ ಕಡಿಮೆ ದರದಲ್ಲಿ ದೊರೆಯುತ್ತಿದೆ. ಈ ಮೂಲಕ ಗ್ರಾಮೀಣ ಭಾಗದ ಮಹಿಳೆಯರು ಋತುಸ್ರಾವದ ದಿನಗಳಲ್ಲಿ ಪರದಾಡುವುದು ತಪ್ಪುವಂತಾಗುತ್ತಿದೆ ಎನ್ನುತ್ತಾರೆ ಕ್ರಿಸ್ಟೀನ್.

ಮುಂದಿನ ಯೋಜನೆ

ಅಹಮದಾಬಾದ್ ಬಳಿಯ ಬಾಳೆಹಣ್ಣಿನ ತೋಟದಿಂದ ಬಾಳೆಹಣ್ಣಿನ ಮರದ ಸಿಪ್ಪೆಯನ್ನು ಸಾಥಿ ಸಂಸ್ಥೆ ಪಡೆದುಕೊಳ್ತಿದೆ. ಸಾಮಾನ್ಯವಾಗಿ ರೈತರಿಗೆ ಬಾಳೆಹಣ್ಣಿನ ಮರದ ಸಿಪ್ಪೆ ಅನುಪಯುಕ್ತ. ಆದರೆ ಸಾಥಿ ಸಂಸ್ಥೆ ಈ ಬಾಳೆಹಣ್ಣಿನ ಮರದ ಸಿಪ್ಪೆಗಳನ್ನು ಕೊಳ್ಳುತ್ತಿರುವುದರಿಂದ ರೈತರಿಗೆ ಆದಾಯದ ಹೊಸ ದಾರಿ ಗೋಚರಿಸಿದೆ.

ಕಡಿಮೆ ಆದಾಯವಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಉದ್ಯೋಗ ಮತ್ತು ತರಬೇತಿ ನೀಡಿ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದೆ ಸಾಥಿ ಸಂಸ್ಥೆ. ಕೈಗೆಟುಕುವ ದರದಲ್ಲಿ, ಸಲಭವಾದ, ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌ಗಳನ್ನು ಗ್ರಾಮೀಣ ಭಾಗದ ಮಹಿಳೆಯರು ಬಳಸುವಂತಾಗಬೇಕು ಎಂಬುದೇ ಸಾಥಿ ಸಂಸ್ಥೆಯ ಕನಸು. ಸಾಥಿ ಪ್ಯಾಡ್‌ಗಳ ಬಳಕೆಯಿಂದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳಿಗೆ ಹೋಗಿ ತಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದು ಎನ್ನುತ್ತಾರೆ ಕ್ರಿಸ್ಟೀನಾ.

ಹಲವು ದೊಡ್ಡ ತಯಾರಿಕಾ ಘಟಕ ಸ್ಥಾಪನೆ, ಸರಬರಾಜು ಘಟಕದ ನಿರ್ಮಾಣ ಸಾಥಿ ಸಂಸ್ಥೆಯ ಮುಂದಿರುವ ದೊಡ್ಡ ಸವಾಲು. ಗ್ರಾಮೀಣ ಭಾಗದ ಎಲ್ಲಾ ಮಹಿಳೆಯರನ್ನು ತಲುಪುವುದೇ ಸಾಥಿ ಸಂಸ್ಥೆಯ ಗುರಿ.

Add to
Shares
4
Comments
Share This
Add to
Shares
4
Comments
Share
Report an issue
Authors

Related Tags