ಭಾರತದಲ್ಲಿ ವಾಯುಮಾಲಿನ್ಯವು 5 ಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ, ಅದರಲ್ಲಿ 97 ಸಾವಿರ ಸಾವುಗಳು ಕಲ್ಲಿದ್ದಲು ಸುಡುವಿಕೆಯಿಂದಾಗಿವೆ

ಅಪಾಯಕಾರಿ ವಾಯುಮಾಲಿನ್ಯದಿಂದಾಗಿ 2016 ರಲ್ಲಿ ಭಾರತದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ ಮತ್ತು ಅವರಲ್ಲಿ 97,000 ಕ್ಕೂ ಹೆಚ್ಚು ಜನರು ಕಲ್ಲಿದ್ದಲು ಸುಡುವಿಕೆಯಿಂದ ಉಂಟಾದ ಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಹೊಸ ವರದಿಯೊಂದು ಗುರುವಾರ ಬಹಿರಂಗಪಡಿಸಿದೆ.

ಭಾರತದಲ್ಲಿ ವಾಯುಮಾಲಿನ್ಯವು 5 ಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ, ಅದರಲ್ಲಿ 97 ಸಾವಿರ ಸಾವುಗಳು ಕಲ್ಲಿದ್ದಲು ಸುಡುವಿಕೆಯಿಂದಾಗಿವೆ

Wednesday November 20, 2019,

2 min Read

ಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಲ್ಯಾನ್ಸೆಟ್ ಕೌಂಟ್‌ ಡೌನ್ 2019 ದೇಶವು ಕಲ್ಲಿದ್ದಲು ಬಳಕೆಯನ್ನು ನಿಲ್ಲಿಸದಿದ್ದರೆ ಭಾರತದಲ್ಲಿ ವಾಯುಮಾಲಿನ್ಯದ ಪರಿಣಾಮವು ಕೆಟ್ಟದಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.


ಕಲ್ಲಿದ್ದಲು ಬಳಕೆಯನ್ನು ಶೂನ್ಯಕ್ಕೆ ಇಳಿಸುವ ಪ್ರಯತ್ನಕ್ಕೆ ಇದು ಒತ್ತು ನೀಡಿದೇ ಹಾಗೂ, ಪ್ಯಾರಿಸ್ ಒಪ್ಪಂದದ ನಿಯಮಗಳನ್ನು ಪಾಲಿಸುವಲ್ಲಿ ಇದು ನಿರ್ಣಾಯಕವಾಗಿದೆ ಎಂದು ಹೇಳಿದರು.


"ಕಲ್ಲಿದ್ದಲಿನಿಂದ ಒಟ್ಟು ಇಂಧನ ಪೂರೈಕೆ 2016 ರಿಂದ 2018 ರವರೆಗೆ ಭಾರತದಲ್ಲಿ ಶೇಕಡಾ 11 ರಷ್ಟು ಹೆಚ್ಚಾಗಿದೆ ಮತ್ತು ಅಪಾಯಕಾರಿ ವಾಯುಮಾಲಿನ್ಯದಿಂದ (ಪಿಎಂ 2.5) 2016 ರಲ್ಲಿ 5.29 ಲಕ್ಷ ಅಕಾಲಿಕ ಸಾವುಗಳಲ್ಲಿ 97,400 ಕ್ಕೂ ಹೆಚ್ಚು ಸಾವುಗಳು ಕಲ್ಲಿದ್ದಲಿನಿಂದ ಸಂಭವಿಸಿವೆ.”

“ಶಕ್ತಿಯ ಪ್ರಭಾವವು ತೀವ್ರವಾಗಿ ಬದಲಾಗಬೇಕಾಗುತ್ತದೆ, ಮತ್ತು ಪಳೆಯುಳಿಕೆ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ವರ್ಷದಿಂದ ವರ್ಷಕ್ಕೆ 7.4 ಶೇಕಡಕ್ಕೆ ಕಡಿತಗೊಳಿಸುವುದಕ್ಕಿಂತ ಬೇರೆ ಮಾರ್ಗವಿಲ್ಲ, ಹೀಗೆ ಮಾಡಿದ್ದಲ್ಲಿ 2019 ರಿಂದ 2050 ರ ಒಳಗೆ ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ನ ಹೆಚ್ಚು ಮಹತ್ವಾಕಾಂಕ್ಷೆಯ ಗುರಿಗೆ ಸೀಮಿತಗೊಳಿಸಬಹುದು" ಎಂದು, ವಿಶ್ವಾದ್ಯಂತ 35 ಸಂಸ್ಥೆಗಳಿಂದ ಬರೆಯಲ್ಪಟ್ಟಿದೆ ಎಂಬುದನ್ನು ವರದಿ ಬಹಿರಂಗ ಪಡಿಸಿದೆ.


ಹವಾಮಾನ ಬದಲಾವಣೆಯನ್ನು ಕಡಿಮೆಗೊಳಿಸಲು ಮತ್ತು ವಾಯುಮಾಲಿನ್ಯದಿಂದ ಉಂಟಾಗುವ ಕಾಯಿಲೆ ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಕಲ್ಲಿದ್ದಲು ಬಳಕೆಯನ್ನು ಕಡಿಮೆ ಮಾಡುವುದು ಅತ್ಯಗತ್ಯ ಎಂದು ವರದಿ ಹೇಳಿದೆ.


"ಕಲ್ಲಿದ್ದಲು ಜಾಗತಿಕ ಪ್ರಾಥಮಿಕ ಇಂಧನ ಪೂರೈಕೆಯಲ್ಲಿ (ತೈಲದ ನಂತರ) ಎರಡನೇ ಅತಿದೊಡ್ಡ ಸ್ಥಾನದಲ್ಲಿ ಮುಂದುವರೆದಿದೆ ಮತ್ತು ಅತಿದೊಡ್ಡ ವಿದ್ಯುತ್ ಉತ್ಪಾದನೆಯ ಮೂಲವಾಗಿದೆ. (ಶೇಕಡಾ 38 ರಷ್ಟು, ಗ್ಯಾಸ್ ಗೆ ಹೋಲಿಸಿದರೆ, ಗರಿಷ್ಠ ಶೇಕಡಾ 23)" ಎಂದು ವರದಿ ತಿಳಿಸಿದೆ. ಕಲ್ಲಿದ್ದಲಿನ ಒಟ್ಟು ಪ್ರಾಥಮಿಕ ಇಂಧನ ಪೂರೈಕೆ ಹೆಚ್ಚು ನಡೆಯುವುದು ಏಷ್ಯಾದಲ್ಲಿದೆ, ಮುಖ್ಯವಾಗಿ ಚೀನಾ, ಭಾರತ ಮತ್ತು ಆಗ್ನೇಯ ಏಷ್ಯಾಗಳಲ್ಲಿ.


ಒಟ್ಟಾರೆಯಾಗಿ, ಪಳೆಯುಳಿಕೆ ಇಂಧನಗಳಿಂದ ಹೊರಸೂಸುವ ಇಂಗಾಲದ ಡೈಆಕ್ಸೈಡ್ ಪ್ರಮಾಣವು 2016 ರಿಂದ 2018 ರವರೆಗೆ ಶೇಕಡಾ 2.6 ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.


ಈ ವರ್ಷದ ಆರಂಭದಲ್ಲಿ ನಡೆದ ಸ್ವಿಟ್ಜರ್ಲೆಂಡ್‌ನ ಮತ್ತೊಂದು ಜಾಗತಿಕ ಅಧ್ಯಯನವು ಚೀನಾ ಮತ್ತು ಯುಎಸ್ ಹೆಚ್ಚು ಕಲ್ಲಿದ್ದಲು ವಿದ್ಯುತ್ ಉತ್ಪಾದಿಸುತ್ತದೆ ಎಂದು ಬಹಿರಂಗಪಡಿಸಿದೆ, ಆದರೆ ಭಾರತದ ಕಲ್ಲಿದ್ದಲಿನ ವಿದ್ಯುತ್ ಸ್ಥಾವರಗಳು ವಿಶ್ವದಲ್ಲೇ ಅತಿ ಹೆಚ್ಚು ನಷ್ಟವನ್ನು ಅನುಭವಿಸುತ್ತವೆ. ಅದರಲ್ಲೂ ಆರೋಗ್ಯದ ವಿಷಯಕ್ಕೆ ಬಂದಾಗ ಕಲ್ಲಿದ್ದಲಿನ ವಿದ್ಯುತ್ ಸ್ಥಾವರಗಳು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಇಂಗಾಲದ ಡೈ ಆಕ್ಸೈಡ್‌ಗಿಂತ ಹೆಚ್ಚು ವಿಷವನ್ನು ಹೊರಸೂಸುತ್ತವೆ.

ಕಲ್ಲಿದ್ದಲು ಸುಡುವಿಕೆಯು ಸಲ್ಫರ್ ಡೈ ಆಕ್ಸೈಡ್, ಸಾರಜನಕ ಆಕ್ಸೈಡ್ ಮತ್ತು ಪಾದರಸವನ್ನು ಸಹ ಬಿಡುಗಡೆ ಮಾಡುತ್ತದೆ - ಇದರಿಂದಾಗಿ ಪ್ರಪಂಚದಾದ್ಯಂತದ ಅನೇಕ ಜನರ ಆರೋಗ್ಯಕ್ಕೆ ಹಾನಿಯಾಗುತ್ತದೆ.


ಲ್ಯಾನ್ಸೆಟ್ ಪ್ರಕಾರ, "ಕಲ್ಲಿದ್ದಲು ಪೂರೈಕೆಯಲ್ಲಿ ಹಿಂದಿನ ಕೆಳಮುಖ ದಿಕ್ಕು ವ್ಯತಿರಿಕ್ತವಾಗಿದೆ, 2016 ರಿಂದ 2018 ರವರೆಗೆ ಒಟ್ಟು ಪ್ರಾಥಮಿಕ ಇಂಧನ ಪೂರೈಕೆಯಲ್ಲಿ ಶೇ 1.7 ರಷ್ಟು ಹೆಚ್ಚಳವಾಗಿದೆ."


ವಿವಿಧ ದೇಶಗಳ ಕಾರ್ಮಿಕ ಸಾಮರ್ಥ್ಯವನ್ನು ಸೀಮಿತಗೊಳಿಸುವ ಶಾಖದ ಅಲೆಗಳ ಬಗ್ಗೆಯೂ ವರದಿಯಲ್ಲಿ ಮಾತನಾಡಲಾಗಿದೆ.


ತಾಪಮಾನ ಏರಿಕೆ ಮತ್ತು ಶಾಖವು ಜನರ ಕೆಲಸದ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತಿವೆ. 2018 ರಲ್ಲಿ, ಜಾಗತಿಕವಾಗಿ 133.6 ಬಿಲಿಯನ್ ಕೆಲಸದ ಸಮಯ ಕಡಿಮೆಯಾಗಿದೆ, 2000 ರ ಬೇಸ್‌ಲೈನ್‌ಗಿಂತ 45 ಬಿಲಿಯನ್ ಮತ್ತು ಯುಎಸ್‌ಎನ ದಕ್ಷಿಣ ಭಾಗಗಳಲ್ಲಿ 2018 ರ ಬೇಸಿಗೆಯ ಸಮಯದಲ್ಲಿ ಹಗಲಿನಲ್ಲಿ ಕೆಲಸ ಮಾಡುವ ಸಾಮರ್ಥ್ಯವು 15-20 ಶೇಕಡಾವನ್ನು ಕಡಿಮೆಯಾಗಿವೆ ಎಂದು ವರದಿ ತಿಳಿಸಿದೆ.


2019 ರ ಲ್ಯಾನ್ಸೆಟ್ ವರದಿಯು ಐದು ಪ್ರಮುಖ ಡೊಮೇನ್‌ಗಳಲ್ಲಿ 41 ಸೂಚಕಗಳನ್ನು ನೀಡುತ್ತದೆ. ಹವಾಮಾನ ಬದಲಾವಣೆಯ ಪರಿಣಾಮಗಳು, ಮಾನ್ಯತೆಗಳು ಮತ್ತು ದುರ್ಬಲತೆ; ಹೊಂದಾಣಿಕೆ, ಯೋಜನೆ ಮತ್ತು ಆರೋಗ್ಯದ ಕೆಲ ಕ್ರಮಗಳು ಮತ್ತು ಆರೋಗ್ಯ ಸಹ-ಪ್ರಯೋಜನಗಳು; ಅರ್ಥಶಾಸ್ತ್ರ ಮತ್ತು ಹಣಕಾಸು; ಮತ್ತು ಸಮಾಜ ಮತ್ತು ರಾಜಕೀಯ.


ವರದಿಯು ಪ್ರತಿ ಖಂಡದ 35 ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಮತ್ತು ಯುಎನ್ ಏಜೆನ್ಸಿಗಳ ಆವಿಷ್ಕಾರಗಳು ಮತ್ತು ನಿಯಮಗಳನ್ನು ಪ್ರತಿನಿಧಿಸುತ್ತದೆ.