ಸುಸ್ಥಿರ ಪ್ಯಾಕೇಜಿಂಗ್: ಪ್ಯಾಕೇಜಿಂಗ್‌ ಮುಕ್ತ ರವಾನೆಯನ್ನು 100 ನಗರಗಳಿಗೆ ವಿಸ್ತರಿಸಿದ ಅಮೆಜಾನ್‌

ಅಮೆಜಾನ್‌ ಇಂಡಿಯಾದ ಶೇ. 40 ಕ್ಕೂ ಅಧಿಕ ಆರ್ಡರ್‌ಗಳನ್ನು ನೆರವೆರಿಕೆ ಕೇಂದ್ರದಿಂದ ಪ್ಯಾಕೇಜಿಂಗ್‌ ಮುಕ್ತವಾಗಿ ಅಥವಾ ಹೆಚ್ಚುವರಿ ಪ್ಯಾಕೇಜಿಂಗ್‌ ತ್ಯಾಜ್ಯವಿಲ್ಲದೆಯೆ ಗ್ರಾಹಕರಿಗೆ ರವಾನಿಸಲಾಗುತ್ತಿದೆ.

ಸುಸ್ಥಿರ ಪ್ಯಾಕೇಜಿಂಗ್: ಪ್ಯಾಕೇಜಿಂಗ್‌ ಮುಕ್ತ ರವಾನೆಯನ್ನು 100 ನಗರಗಳಿಗೆ ವಿಸ್ತರಿಸಿದ ಅಮೆಜಾನ್‌

Thursday June 04, 2020,

2 min Read

ತ್ಯಾಜ್ಯ ಉತ್ಪಾದನೆ ಕಡಿಮೆ ಮಾಡಲು ಹಾಗೂ ಸುಸ್ಥಿರ ಅಭ್ಯಾಸಗಳನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಇಕಾಮರ್ಸ್‌ ಮಾರುಕಟ್ಟೆ ಅಮೆಜಾನ್‌ ಇಂಡಿಯಾ ತನ್ನ ಪ್ಯಾಕೇಜಿಂಗ್‌ ಮುಕ್ತ ರವಾನೆ(ಪಿಎಫ್‌ಎಸ್‌) ಉಪಕ್ರಮವನ್ನು ಮತ್ತೆ 100 ನಗರಗಳಿಗೆ ವಿಸ್ತರಿಸಿದೆ.


ಪತ್ರಿಕಾ ಪ್ರಕಟನೆಯಲ್ಲಿ ಅಮೆಜಾನ್‌, ಪ್ಯಾಕೇಜಿಂಗ್‌ ಮುಕ್ತ ರವಾನೆ ಅಥವಾ ಪಿಎಫ್‌ಎಸ್‌ ಒಂದು ಸುಸ್ಥಿರ ಪ್ಯಾಕೇಜಿಂಗ ತಂತ್ರವಾಗಿದ್ದು, ಇಲ್ಲಿ ಗ್ರಾಹಕರು ಆರ್ಡರ್‌ ಮಾಡಿದ ವಸ್ತುಗಳಿಗೆ ಯಾವುದೇ ತರಹದ ಹೆಚ್ಚುವರಿ ಪ್ಯಾಕೇಜಿಂಗ್‌ ಮಾಡದೆ, ಅದರ ಮೂಲ ಪ್ಯಾಕೇಜ್‌‌ನೊಂದಿಗೆ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಈ ವಿಧಾನದಿಂದ ಗಣನೀಯ ಪ್ರಮಾಣದ ತ್ಯಾಜ್ಯವನ್ನು ಕಡಿಮೆಮಾಡಬಹುದು. ಜೂನ್‌ 2019 ರಲ್ಲಿ ಮೊದಲ ಬಾರಿಗೆ ಭಾರತದ 9 ನಗರಗಳಲ್ಲಿ ಪಿಎಫ್‌ಎಸ್‌(ಪ್ಯಾಕೇಜ್‌ ಫ್ರೀ ಶಿಪ್ಪಿಂಗ್) ಉಪಕ್ರಮವನ್ನು ಪ್ರಾರಂಭಿಸಲಾಗಿತ್ತು.


ಅಮೆಜಾನ್‌ ಇಂಡಿಯಾದ ಪ್ಯಾಕೇಜಿಂಗ್‌ ಮುಕ್ತ ರವಾನೆ



"ಪ್ಯಾಕೇಜಿಂಗ್‌ ಮುಕ್ತ ರವಾನೆಯ ವಿಸ್ತರಣೆಯೊಂದಿಗೆ, ಅಮೆಜಾನ್ ಇಂಡಿಯಾದ ನೆರವೇರಿಕೆ ಕೇಂದ್ರಗಳಿಂದ ರವಾನೆಯಾದ ಗ್ರಾಹಕರ ಆರ್ಡರ್‌ಗಳಲ್ಲಿ 40 ಪ್ರತಿಶತಕ್ಕಿಂತಲೂ ಹೆಚ್ಚಿನವು ಈಗ ಪ್ಯಾಕೇಜಿಂಗ್ ಮುಕ್ತವಾಗಿವೆ ಅಥವಾ ಪ್ಯಾಕೇಜಿಂಗ್ ತ್ಯಾಜ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ," ಎಂದು ಹೇಳಿಕೆ ತಿಳಿಸಿದೆ.


ಅಮೆಜಾನ್‌ ಪ್ರಕಾರ, ಪಿಎಫ್‌ಎಸ್‌ ಕ್ರಮಾವಳಿ ತಂತ್ರಾಂಶ ಬಳಸಿ, ಅದನ್ನು ಗ್ರಾಹಕರ ಸ್ಥಳ, ಅದನ್ನು ತಲುಪಲು ಪ್ರಯಾಣಿಸಬೇಕಾದ ದೂರ ಮತ್ತು ಆರ್ಡರ್‌ ಮಾಡಿದ ವಸ್ತುವಿನ ವಿಭಾಗದಂತಹ ನಿಯತಾಂಕಗಳನ್ನು ಆಧರಿಸಿ ಆರ್ಡರ್‌ಗಳಿಗೆ ಅನ್ವಯಿಸುತ್ತದೆ. ಇಲ್ಲಿ, ವಸ್ತು ಮತ್ತು ಸಾರಿಗೆ ಪರಿಸ್ಥಿತಿಗಳನ್ನು ಅವಲಂಬಿಸಿ ಪ್ಯಾಕೇಜಿಂಗ್ ಮಾಡಲು ಮಶಿನ್‌ ಲರ್ನಿಂಗ್‌ ಕ್ರಮಾವಳಿಗಳನ್ನು ಬಳಸಲಾಗುತ್ತದೆ.


ಪ್ಯಾಕೇಜಿಂಗ್ ಮುಕ್ತವಾಗಿ ರವಾನೆಯಾಗುವ ಉತ್ಪನ್ನಗಳಲ್ಲಿ ಟೆಕ್ ಪರಿಕರಗಳು, ಮನೆ ಮತ್ತು ಮನೆ ಸುಧಾರಣಾ ಉತ್ಪನ್ನಗಳು, ಬೂಟುಗಳು, ಸಾಮಾನುಗಳು ಮತ್ತು ಹೆಚ್ಚಿನವು ಸೇರಿವೆ. ಸಾರಿಗೆ ಸಮಯದಲ್ಲಿ ಹೆಚ್ಚುವರಿಯ ರಕ್ಷಣೆ ಅಗತ್ಯವಿರುವ ದ್ರವಗಳು, ದುರ್ಬಲವಾದ ವಸ್ತುಗಳು ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಪ್ಯಾಕೇಜಿಂಗ್‌ನೊಂದಿಗೆ ಸಾಗಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.


“ಇಕಾಮರ್ಸ್ ಸ್ನೇಹಿ ಪ್ಯಾಕೇಜಿಂಗ್ ಒದಗಿಸಿ, ದ್ವಿತೀಯ ಪ್ಯಾಕೇಜಿಂಗ್ ಅನ್ನು ಮತ್ತಷ್ಟು ಕಡಿಮೆ ಮಾಡುವುದಕ್ಕಾಗಿ ನಾವು ಹಲವಾರು ಬ್ರಾಂಡ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಒಂದು ವರ್ಷದೊಳಗೆ 100 ನಗರಗಳಿಗೆ ಪಿಎಫ್‌ಎಸ್ ವಿಸ್ತರಿಸಿರುವುದು ಸುಸ್ಥಿರತೆಯ ಬಗೆಗಿನ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ,” ಎಂದು ಅಮೆಜಾನ್ ಇಂಡಿಯಾದ ಗ್ರಾಹಕ ಪೂರೈಸುವಿಕೆ ಮತ್ತು ಸರಬರಾಜು ಸರಪಳಿಯ ನಿರ್ದೇಶಕ ಪ್ರಕಾಶ್ ಕುಮಾರ್ ದತ್ತಾ ಹೇಳಿದರು.


2030 ರ ವೇಳೆಗೆ ಜಾಗತಿಕವಾಗಿ 50 ಪ್ರತಿಶತದಷ್ಟು ನಿವ್ವಳ-ಶೂನ್ಯ ಇಂಗಾಲವನ್ನು ಮಾಡುವ ಮೂಲಕ ಅಮೆಜಾನ್ ಎಲ್ಲಾ ಸಾಗಣೆಯನ್ನು ನಿವ್ವಳ-ಶೂನ್ಯ ಇಂಗಾಲವನ್ನಾಗಿ ಮಾಡುವ ಗುರಿ ಹೊಂದಿದೆ. ‘ಪ್ರಸ್ಟ್ರೆಷನ್‌ ಫ್ರೀ ಪ್ಯಾಕೇಜಿಂಗ್ ಮತ್ತು ಶೀಪ್‌ ಇನ್‌ ಒವ್ನ್‌ ಕಂಟೇನರ್' ನಂತಹ ಸುಸ್ಥಿರ ಪ್ಯಾಕೇಜಿಂಗ್ ಉಪಕ್ರಮಗಳು ಪ್ಯಾಕೇಜಿಂಗ್ ತ್ಯಾಜ್ಯವನ್ನು 2015 ರಿಂದ 25 ಪ್ರತಿಶತದಷ್ಟು ಕಡಿಮೆ ಮಾಡಿವೆ.