50,000 ತಾತ್ಕಾಲಿಕ ಉದ್ಯೋಗಗಳನ್ನು ಘೋಷಿಸಿದ ಅಮೇಜಾನ್‌ ಇಂಡಿಯಾ

ಅಮೇಜಾನ್‌ ಇಂಡಿಯಾದ ಹೊಸ ಉದ್ಯೋಗಗಳು ಪೂರೈಕೆ ಕೇಂದ್ರಗಳಲ್ಲಿ, ಡೆಲಿವರಿ ಜಾಲಗಳಲ್ಲಿ ಮತ್ತು ಅರೆ ಕಾಲಿಕ ವೃತ್ತಿ ಅವಕಾಶಗಳನ್ನು ಹೊಂದಿವೆ.

50,000 ತಾತ್ಕಾಲಿಕ ಉದ್ಯೋಗಗಳನ್ನು ಘೋಷಿಸಿದ ಅಮೇಜಾನ್‌ ಇಂಡಿಯಾ

Friday May 22, 2020,

1 min Read

ಪ್ರಸಿದ್ಧ ಇ-ಕಾಮರ್ಸ್‌ ವೇದಿಕೆಯಾದ ಅಮೇಜಾನ್‌ ಇಂಡಿಯಾ 50,000 ತಾತ್ಕಾಲಿಕ ಹುದ್ದೆಗಳನ್ನು ಘೋಷಿಸಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಘೋಷಿಸಿರುವ ಈ ಹುದ್ದೆಗಳು ಪೂರೈಕೆ ಕೇಂದ್ರಗಳಲ್ಲಿ, ಡೆಲಿವರಿ ಜಾಲಗಳಲ್ಲಿ ಮತ್ತು ಅರೆ ಕಾಲಿಕ ವೃತ್ತಿ ಅವಕಾಶಗಳನ್ನು ಹೊಂದಿವೆ.


ಅಮೇಜಾನ್‌ ಇಂಡಿಯಾ ಪ್ರಕಾರ ಈ ಹುದ್ದೆಗಳು ಪಿಕ್‌, ಪ್ಯಾಕ್‌, ಶಿಪ್‌ ಮತ್ತು ಡೆಲಿವರಿ ವಲಯಗಳಲ್ಲಿರುತ್ತವೆ.


ಅಮೇಜಾನ್‌ ಸೈಟ್‌ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿರುವುದು




ಅಮೇಜಾನ್‌ ಗ್ರಾಹಕ ಪೂರೈಕೆ ಕಾರ್ಯಚರಣೆಯ ಉಪಾಧ್ಯಕ್ಷರಾದ ಅಖಿನ ಸಕ್ಸೆನಾ ಮಾತನಾಡಿ, “ಕೋವಿಡ್‌-19 ಬಿಕ್ಕಟ್ಟಿನಿಂದ ನಮಗೆ ತಿಳಿದ ಒಂದು ವಿಷಯವೆಂದರೆ ಗ್ರಾಹಕರಿಗೆ, ಅಲ್ಲದೆ ಸಣ್ಣ ಉದ್ಯಿಮೆಗಳಿಗೆ ಮತ್ತು ಆರ್ಥಿಕತೆಗೆ ಅಮೇಜಾನ್‌ ಮತ್ತು ಇ-ಕಾಮರ್ಸ್‌ನ ಪಾತ್ರ ಎಷ್ಟು ಮುಖ್ಯವೆಂಬುದು. ಈ ಜವಾಬ್ದಾರಿಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಸಣ್ಣ ಹಾಗೂ ಇತರ ಉದ್ಯಮಗಳಿಗೆ ತಮ್ಮ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಕೆಲಸ ಮಾಡುತ್ತಿರುವ ನಮ್ಮ ತಂಡದ ಬಗ್ಗೆ ನಮಗೆ ಹೆಮ್ಮೆಯಿದೆ,” ಎಂದರು.


ಕೊರೊನಾವೈರಸ್‌ ನಮ್ಮ ಸುತ್ತಲೂ ಇರುವ ಈ ಸಮಯದಲ್ಲಿ ಆರೋಗ್ಯ ಮತ್ತು ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿರಬೇಕು. ಈ ನಿಟ್ಟಿನಲ್ಲಿ ಅಮೇಜಾನ್‌ ತನ್ನ ಸಿಬ್ಬಂದಿಗಳ ಕ್ಷೇಮಕ್ಕಾಗಿ 100 ಮುಖ್ಯವಾದ ಹೊಸ ಬದಲಾವಣೆಗಳನ್ನು ತಂದಿದೆ ಎಂದು ಹೇಳಿದೆ. ಅವುಗಳಲ್ಲಿ ಕಡ್ಡಾಯವಾಗಿ ಫೇಸ್‌ ಮಾಸ್ಕ್‌ ಧರಿಸುವುದು, ಸಿಬ್ಬಂದಿಗಳ ತಾಪಮಾನ ಪರೀಕ್ಷೆ, ಕಟ್ಟಡದೊಳಗಿನ ಜಾಗಗಳನ್ನು ಆಗಾಗ ಶುಚಿಗೊಳಿಸುವುದು ಮತ್ತು ಸುರಕ್ಷತಾ ಕ್ರಮಗಳು ಹಾಗೂ ಕೈ ತೊಳೆದುಕೊಳ್ಳುವುದರ ಬಗ್ಗೆ ಸಿಬ್ಬಂದಿಗಳಲ್ಲಿ ಜಾಗೃತಿ ಮೂಡಿಸುವುದು ಸೇರಿದೆ.


“ಗ್ರಾಹಕರಿಗೆ ಏನು ಬೇಕೊ ಅದೆಲ್ಲವನ್ನೂ ತಲುಪಿಸುವುದನ್ನು ನಾವು ಮುಂದುವರೆಸುತ್ತೇವೆ, ಅವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಿ. ಇದನ್ನು ಪೂರೈಸಲು ನಾವು 50,000 ತಾತ್ಕಾಲಿಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿದ್ದೇವೆ. ಇದು ಸಾಧ್ಯವಾದಷ್ಟು ಜನರಿಗೆ ಬಿಕ್ಕಟ್ಟಿನಲ್ಲಿಯೂ ಸುರಕ್ಷತೆಯೊಂದಿಗೆ ಕೆಲಸ ಮಾಡಲು ಸಹಾಯ ಮಾಡುತ್ತದೆ,” ಎಂದರು ಅಖಿಲ್.‌


ದೇಶದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದ ಇ-ಕಾಮರ್ಸ್‌ ವಲಯವು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿತ್ತು. ಅಲ್ಲದೆ ವಸ್ತುಗಳನ್ನು ಅಗತ್ಯ ಮತ್ತು ಅಗತ್ಯವಲ್ಲದ ವಿಭಾಗಗಳ ವಿಂಗಡಣೆಯಲ್ಲೂ ತುಸು ಗೊಂದಲವಿತ್ತು. ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಮೊದಲು ಅವಕಾಶ ನೀಡಲಾಗಿತ್ತು, ಆದರೆ ಈಗ ಎಲ್ಲ ವಸ್ತುಗಳನ್ನು ಇ-ಕಾಮರ್ಸ್‌ ವಲಯ ಡಿಲೆವರಿ ಮಾಡುತ್ತಿದೆ.