ಆಂಧ್ರ ಪ್ರದೇಶದ ಬೀಚ್‌ ಸ್ವಚ್ಛಗೊಳಿಸುತ್ತಿರುವ ಮಂದಾಸಾದ ಯುವಕರು

ಆಂಧ್ರ ಪ್ರದೇಶದ ಸ್ರಿಕಕುಲಮ ಜಿಲ್ಲೆಯ ಮಂದಾಸಾದ ಯುವಕರು “ಗ್ರೇಟ್‌ ಮಂದಾಸಾ- ಕ್ಲೀನ್‌ ಮಂದಾಸಾ” ಎಂಬ ಕಾಂಪೇನ್‌ ಮೂಲಕ ಬೀಚ್‌ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಆಂಧ್ರ ಪ್ರದೇಶದ ಬೀಚ್‌ ಸ್ವಚ್ಛಗೊಳಿಸುತ್ತಿರುವ ಮಂದಾಸಾದ ಯುವಕರು

Tuesday January 05, 2021,

1 min Read

ಬಿಸಿ ಮರಳು, ತಣ್ಣನೆಯ ಗಾಳಿ, ಅಲೆಗಳ ಭೋರ್ಗರೆತ ಬೀಚ್‌ಗಳನ್ನು ಮೆಚ್ಚಿನ ತಾಣವಾಗಿಸುತ್ತವೆ. ಆದರೆ ಅಲ್ಲಿ ಕಸ ಕಡ್ಡಿ ತುಂಬಿ ಮಾಲಿನ್ಯಗೊಳ್ಳುವ ಪ್ರಮೇಯಗಳೆ ಜಾಸ್ತಿ. ಕಳೆದ ಹಲವಾರು ವರ್ಷಗಳಲ್ಲಿ ಬೀಚ್‌ಗಳು ಪ್ಲಾಸ್ಟಿಕ್‌ ತ್ಯಾಜ್ಯದಿಂದ ಕಂಗೋಳಿಸುತ್ತಿದ್ದು, ಸಾಗರ ಜೀವನಕ್ಕೆ ಧಕ್ಕೆ ತರುತ್ತಿದೆ.


ಈ ಸಮಸ್ಯೆಯನ್ನು ಕಂಡು ಆಂಧ್ರ ಪ್ರದೇಶದ ಸ್ರಿಕಕುಲಮ ಜಿಲ್ಲೆಯ ಮಂದಾಸಾದ ಯುವಕರು ಕಸ ತೆಗೆದು ಬೀಚ್‌ಗೆ ಮತ್ತೆ ಮೊದಲಿನ ಅಂದ ಚೆಂದ ನೀಡಲು ನಿರ್ಧರಿಸಿದ್ದಾರೆ. ಪ್ರವಾಸಿಗರು ಮಂದಾಸಾದ ರತ್ತಿ ಹಳ್ಳಿಯ ಬೀಚ್‌ ಹೇಗೆ ಕಲುಷಿತಗೊಳಿಸಿದ್ದರೆಂಬುದನ್ನು ಕಂಡ ಯುವಕರು ತಾವೇ ಸ್ವಚ್ಛತೆಗೆ ಮುಂದಾಗಿದ್ದಾರೆ.


“ಆಂಧ್ರ ಪ್ರದೇಶದ ಸ್ರಿಕಕುಲಮ ಜಿಲ್ಲೆಯ ಮಂದಾಸಾದ ಯುವಕರು “ಗ್ರೇಟ್‌ ಮಂದಾಸಾ- ಕ್ಲೀನ್‌ ಮಂದಾಸಾ” ಎಂಬ ಕಾಂಪೇನ್‌ ಮೂಲಕ ಬೀಚ್‌ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ,” ಎಂದು ಮಂದಾಸಾದ ಸಾಮಾಜಿಕ ಅಭಿವೃದ್ಧಿ ಕಾರ್ಯದರ್ಶಿ ದಿಲೀಪ್‌ ಪಾನಿಗ್ರಾಹಿ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳಿದರು.


“ಸ್ವಚ್ಛತೆ ಮತ್ತು ಹಸಿರನ್ನು ಕಾಪಾಡುವುದರ ಬಗ್ಗೆ ನಾವು ಪ್ರವಾಸಿಗರಲ್ಲಿ ಅರಿವು ಮೂಡಿಸುತ್ತಿದ್ದೇವೆ,” ಎಂದರು ಅವರು.

ಬೀಚ್‌ ಸ್ವಚ್ಛಗೊಳಿಸುತ್ತಿರುವ ಯುವಕರು (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)


ಹಲವು ಸ್ವಚ್ಛತಾ ಕಾರ್ಯಗಾರಗಳನ್ನು ಆಯೋಜಿಸುವ ಮೂಲಕ ಈ ಯುವಕರು ಪ್ರವಾಸಿಗರು ಬಿಟ್ಟು ಹೋದ ಪ್ಲಾಸ್ಟಿಕ್‌ ಮತ್ತು ಆಹಾರವನ್ನು ಸ್ವಚ್ಛಮಾಡುತ್ತಾರೆ. ಸಮುದ್ರದಿಂದ ಮೀನು ಹಿಡಿದು ಬೀಚ್‌ ಮೇಲೆ ತರುವ ಮೀನುಗಾರರಿಗೆ ಇದು ಸಹಾಯ ಮಾಡುತ್ತದೆ. ಇದರ ಜತೆ ಜತೆಗೆ ಪ್ರವಾಸಿಗರಲ್ಲಿ ಸ್ವಚ್ಛತೆಯ ಬಗ್ಗೆ ಅರಿವನ್ನೂ ಮೂಡಿಸುತ್ತಿದ್ದಾರೆ.


ಅದಲ್ಲದೆ ವಾರಾಂತ್ಯ ಅಥವಾ ರಜಾ ದಿನಗಳಲ್ಲಿ ಜಾಸ್ತಿ ಜನ ಸೇರುವುದರಿಂದ ಈ ತಂಡ ಆ ದಿನಗಳಲ್ಲಿ ಸ್ವಚ್ಛತೆ ಮಾಡುತ್ತಾರೆ ಎನ್ನುತ್ತಾರೆ ದಿಲೀಪ್‌.


ಸ್ಥಳೀಯ ಯುವಕರಿಗೂ ಸ್ವಚ್ಛತಾ ಕೆಲಸದಲ್ಲಿ ಭಾಗಿಯಾಗುವಂತೆ ಅವರು ಪ್ರೋತ್ಸಾಹಿಸುತ್ತಿದ್ದಾರೆ. ರತ್ತಿ ಹಳ್ಳಿಯ ಸಮೀಪದಲ್ಲಿರುವ ಬೀಚ್‌ ಅನ್ನು ಎರಡು ಬಾರಿ ಸ್ವಚ್ಛಗೊಳಿಸಿದ ನಂತರ ಇವರು ಬರುವಾ ಬೀಚ್‌ ಸ್ವಚ್ಛಮಾಡಬೇಕೆಂದುಕೊಂಡಿದ್ದಾರೆ ಎಂದು ದಿ ಲಾಜಿಕಲ್‌ ಇಂಡಿಯನ್‌ ವರದಿ ಮಾಡಿದೆ.