ಆವೃತ್ತಿಗಳು
Kannada Latest

ಬೆಂಗಳೂರಿನ ಈ ಸಂರಕ್ಷಕನ ಪ್ರಾಣಿಧಾಮವು ಮಕ್ಕಳಿಗೆ ಪ್ರಾಣಿಗಳೊಂದಿಗಿನ ಮನುಷ್ಯನ ಸಹಬಾಳ್ವೆಯನ್ನು ಕಲಿಸಿಕೊಡುತ್ತಿದೆ.

ಬೆಂಗಳೂರು ಮೂಲದ ಪ್ರಾಣಿ ಸಂರಕ್ಷಕ ಸಂಜೀವ್ ಪೆಡ್ನೆಕರ್ ರವರ “ಪ್ರಾಣಿ” ಎನ್ನುವ ಪ್ರಾಣಿಧಾಮದಲ್ಲಿ ಸುಮಾರು 350 ಪ್ರಾಣಿಗಳು ಆಶ್ರಯ ಪಡೆದಿವೆ.

Team YS Kannada
14th Jul 2019
3+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಯಾವುದೇ ಪ್ರಾಣಿಪ್ರಿಯರಿಗೂ ಒಂದು ಸಾರಿಯಾದರೂ ಬೀದಿಯಲ್ಲಿರುವ ನಾಯಿಯನ್ನು ಸಾಕಬೇಕು, ಅದನ್ನು ಮನೆಗೆ ತರಬೇಕು ಎಂದು ಅನಿಸದೆ ಇರಲಾರದು. ಈ ಮನಸ್ಥಿತಿಯುಳ್ಳ ಹಲವಾರು ಜನರು ಪ್ರಾಣಿಗಳ ಬಗ್ಗೆ ಕಾಳಜಿ ತೋರಿಸಿ, ಅದರ ಬದುಕಲ್ಲಿ ಹೊಸ ಬದಲಾವಣೆಗಳನ್ನು ತರಬೇಕೆಂದು ಬಯಸುವವರಿದ್ದಾರೆ. ಆದರೆ ನಮ್ಮ ಈ ದಿನನಿತ್ಯದ ಕೆಲಸದ ಒತ್ತಡಗಳ ನಡುವೆ ಈ ಕನಸನ್ನು ನನಸು ಮಾಡುವವರೆಷ್ಟು ಜನ?


“ಪ್ರಾಣಿಗಳು ಮತ್ತು ಸಹಬಾಳ್ವೆಯ ಮಹತ್ವದ ಜಾಗೃತಿ ಮೂಡಿಸಲು ಸಂಜೀವ ಪೆಡ್ನೆಕರ್ “ಪ್ರಾಣಿ” ಎನ್ನುನ ಪ್ರಾಣಿಧಾಮವನ್ನು 2017 ರಲ್ಲಿ ನಿರ್ಮಿಸಿದ್ದಾರೆ.”


ಬೆಂಗಳೂರಿನ ಕನಕಪುರ ರೋಡ್ ನ ಹತ್ತಿರ 4.5 ಎಕ್ಕರೆಯ ವಿಶಾಲವಾದ ಪ್ರದೇಶದಲ್ಲಿ ಈ ಪ್ರಾಣಿಧಾಮ ಬೀಡುಬಿಟ್ಟಿದೆ.


Sanjeev Pednekar

ಸಂಜೀವ್ ಪೆಡ್ನೆಕರ್ (ಚಿತ್ರಕೃಪೆ: ಎಡೆಕ್ಸ್ ಲೈವ್)

ಸರೀಸ್ರಪ ತಜ್ಞ ಮತ್ತು ಪ್ರಾಣಿ ಸಂರಕ್ಷಕ, 28 ವರ್ಷದ ಸಂಜೀವ ರವರು ಕಾಡಿನ ಬಗೆಗಿನ ತಮ್ಮ ಒಲವನ್ನು 10ನೇ ವಯಸ್ಸಿನಲ್ಲೇ ಕಂಡುಕೊಂಡರು.


“ಇಲ್ಲಿಯವೆರೆ ಪ್ರಾಣಿ ಧಾಮವು ಸುಮಾರು 500 ಶಾಲೆಗಳಿಗೆ ಭೇಟಿ ನೀಡಿ, 3000 ವಿದ್ಯಾರ್ಥಿಗಳಲ್ಲಿ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸಿದೆ”


Sanjeev Pednekar

(ಚಿತ್ರಕೃಪೆ: ಎಡೆಕ್ಸ್ ಲೈವ್)

ಎಡೆಕ್ಸ್ ಲೈವ್ ನೊಂದಿಗೆ ಮಾತನಾಡುತ್ತಾ ಸಂಜೀವ ಹೀಗೆ ಹೇಳುತ್ತಾರೆ,


“ನಾವು ಜನತೆಯಲ್ಲಿ ಪ್ರಾಣಿಗಳ ಬಗ್ಗೆ ಸಹನೆ, ಸಹಬಾಳ್ವೆ ಮತ್ತು ಸಹಾನುಭೂತಿಯನ್ನು ಬೆಳೆಸುವತ್ತ ಗಮನ ಹರಿಸುತ್ತೇವೆ. ಇಲ್ಲಿ ಭೇಟಿಯಾಗಲು ಬರುವ ಜನರು ಪ್ರಾಣಿಧಾಮದಲ್ಲಿ ಎರಡು ಗಂಟೆಗಳವರೆಗೂ ಇರುತ್ತಾರೆ, ನಾವು ಅವರಿಗೆ ಎಲ್ಲ ಪ್ರಾಣಿಗಳ ಕಥೆಯನ್ನು ಧಾಮವನ್ನು ಸುತ್ತುತ್ತಾ ಹೇಳುತ್ತೇವೆ. ನಾವು ಶಾಲೆಗಳ ಜೊತೆ ಸೇರಿ ವಿದ್ಯಾರ್ಥಿಗಳಿಗೆ ಅವರ ಪಠ್ಯಕ್ರಮವನ್ನು ಸಾಂಪ್ರದಾಯಿಕ ವಿಧಾನಗಳನ್ನು ಬಳಸದೆ ಅವರನ್ನು ಪ್ರಾಣಿಧಾಮಕ್ಕೆ ಕರೆತಂದು ಪ್ರಾಣಿಗಳ ಪ್ರತಿಯೊಂದು ವೈಜ್ಞಾನಿಕ ಅಂಶಗಳನ್ನು ವಿವರಿಸುತ್ತೇವೆ.”


ಕಳೆದ ಹತ್ತು ವರ್ಷಗಳಲ್ಲಿ, ಸಂಜೀವ ರವರು ಸುಮಾರು 150 ಪ್ರಾಣಿಗಳನ್ನ ಕಾಪಾಡಿದ್ದಾರೆ ಹಾಗು ಅವುಗಳು ಪ್ರಾಣಿಧಾಮದಲ್ಲಿ ಹೊಸ ಬದುಕನ್ನು ಕಂಡುಕೊಂಡಿವೆ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ವರದಿಯಲ್ಲಿ ಪ್ರಾಣಿಧಾಮವು ಹೇಗೆ ಮಕ್ಕಳಿಗೆ, ಪರಿಸರ ಮತ್ತು ಪ್ರಾಣಿಗಳ ಬಗ್ಗೆ ಮೆಚ್ಚುಗೆಯ ಪಾಠವನ್ನು ಮಾಡುತ್ತದೆ ಎನ್ನುವುದರ ಬಗ್ಗೆ ಸಂಜೀವ ರವರು,


“5 ಅಥವಾ 6 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೀಟಗಳ ಜೀವನಚಕ್ರದ ಮೇಲೆ ಪಾಠವಿದ್ದೆ ಇರುತ್ತದೆ, ಆ ವಿದ್ಯಾರ್ಥಿಗಳನ್ನು ನಾವು ನಮ್ಮ ಪಾತರಗಿತ್ತಿಯ ಉದ್ಯಾನವನಕ್ಕೆ ಕರೆತಂದು ಅದರ ಜೀವನಚಕ್ರವನ್ನು ನೈಜ ಉದಾಹರಣೆಗಳೊಂದಿಗೆ ವಿವರಿಸುತ್ತೇವೆ. ಈ ವಿಧಾನವು ಪ್ರಾಯೋಗಿಕವಾಗಿರುವುದರಿಂದ ಕೇವಲ ಪುಸ್ತಕ ಓದಿ ತಿಳಿದುಕೊಳ್ಳುವುದಕ್ಕಿಂತಲೂ ಸುಲಭವಾಗಿ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಸಹಾಯ ಮಾಡುತ್ತದೆ.”


Sanjeev Pednekar

(ಚಿತ್ರಕೃಪೆ: ಎಡೆಕ್ಸ್ ಲೈವ್)

ಪ್ರಸ್ತುತವಾಗಿ, ಸಂಜೀವರವರ ಪ್ರಾಣಿಧಾಮದಲ್ಲಿ ಹ್ಯಾಮ್ ಸ್ಟರ್, ಆಮೆ ಮತ್ತು ಎಮುಗಳು ಸೇರಿ ಸುಮರು 350 ಪ್ರಾಣಿಗಳಿವೆ. ಇದಲ್ಲದೆ ನೀವಲ್ಲಿ ಮುಳ್ಳುಹಂದಿ, ಈನು, ಕಾಗೆ, ಕುರಿ, ಮೇಕೆ, ಮೊಲ, ಜರ್ಬಿಲ್, ಚೀನಾದ ಕುಬ್ಜ ಹ್ಯಾಮ್ ಸ್ಟರ್, ಟರ್ಕಿ, ಗುನಿಯಾ ಕೋಳಿ, ಬೆಳ್ಳಿ ಫಿಸಂಟ್, ಬಂಗಾರ ಬಾಲದ ಪಿಸಂಟ್, ಕ್ವಿಲ್, ಬಾತುಕೋಳಿ, ಹೆಬ್ಬಾತುಕೋಳಿ, ಹುಂಜ ಮತ್ತು ಕೋಳಿ, ಆಫ್ರಿಕಾದ ಪಂಜದ ಕಪ್ಪೆಗಳು ಮತ್ತು ಎಯರ್ಡ್ ಸ್ಲೈಡರಗಳನ್ನು ಕಾಣಬಹುದು.


ಇಷ್ಟೊಂದು ಪ್ರಾಣಿಗಳನ್ನು ಒಂದೆಡೆ ಸಾಕುವುದು ಅಷ್ಟು ಸುಲಭದ ಮಾತಲ್ಲ, ಅದಲ್ಲದೆ ಅವುಗಳ ಪಾಲನೆಗೆ ಹಣ ಬೇಕಾಗುತ್ತದೆ.


ಸಂಜೀವ ಹೀಗೆ ಹೇಳುತ್ತಾರೆ,


“ನಮ್ಮಲ್ಲಿ ಸುಲಭವಾಗಿ ಕಾರ್ಯಸಾಧ್ಯವಾಗುವ ಘಟಕವಿರುವುದರಿಂದ ಪ್ರಾಣಿಗಳು ಕ್ಷೇಮವಾಗಿ ಮತ್ತು ಸಂತೋಷವಾಗಿ ಇರುವಂತೆ ನೋಡಿಕೊಳ್ಳುತ್ತೇವೆ. ಉತ್ತಮ ಸೇವನೆ ಮತ್ತು ಸಮಯ ಕೊಡುವುದೇ ನಮ್ಮ ಧ್ಯೇಯವಾಗಿದೆ. ಪ್ರಾಣಿಧಾಮವನ್ನು ನಡೆಸಲು ಹಣವು ಇಲ್ಲಿ ಭೇಟಿ ನೀಡುವ ಜನರಿಂದ ಬರುತ್ತದೆ, ನಾವು ಪ್ರತಿಯೊಬ್ಬರಿಗೆ 400 ರೂ ಗಳಂತೆ ಶುಲ್ಕ ತೆಗೆದುಕೊಳ್ಳುತ್ತೇವೆ. ಅವರಿಲ್ಲಿ ಎರಡು ಗಂಟೆಗಳ ವರೆಗೆ ಸಮಯ ಕಳೆಯಬಹುದು, ನಾವು ಅವರನ್ನು ಪ್ರಾಣಿಧಾಮದಲ್ಲಿರುವ ಪ್ರತಿಯೊಂದು ಪ್ರಾಣಿಯ ಹತ್ತಿರ ಕರೆದುಕೊಂಡು ಹೋಗಿ ಸ್ಪರ್ಶ ಮಾಡಿಸಿ, ವಿವರಿಸಿ, ಪ್ರಾಣಿಗಳ ಭಾವನೆಯನ್ನು ತಲುಪಿಸುತ್ತ ಸಣ್ಣ ಮತ್ತು ದೊಡ್ಡ ಜೀವಿಗಳ ಬಗ್ಗೆ ಅರಿವು ಮೂಡಿಸುತ್ತೇವೆ.”
3+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories