ವಿಕಲಚೇತನರಿಗೆ ವಾಹನ ಚಲಾಯಿಸುವುದನ್ನು ಕಲಿಯುವಲ್ಲಿ ಸಹಾಯ ಮಾಡುತ್ತಿರುವ ಅನನ್ಯ ಮಹಿಳೆ ಅನಿತಾ ಶರ್ಮಾ

ಭಾರತದಾದ್ಯಂತ ಇರುವ 2,000ಕ್ಕೂ ಹೆಚ್ಚು ಡ್ರೈವಿಂಗ್ ತರಬೇತಿ ಶಾಲೆಗಳ ಪೈಕಿ ಒಂದೂ ಸಹ ವಿಕಲಚೇತನರಿಗಾಗಿ ಇಲ್ಲವೆಂದು ಅರಿತುಕೊಂಡ ಅನಿತಾ, ವಿಕಲಚೇತನರಿಗಾಗಿಯೇ ‘ಆನ್ ಮೈ ಓನ್’ ಎಂಬ ಡ್ರೈವಿಂಗ್ ತರಬೇತಿ ಶಾಲೆಯನ್ನು ತೆರೆದು ಅವರಿಗೂ ಸಹ ಡ್ರೈವಿಂಗ್ ಲೈಸೆನ್ಸಿನ ಜೊತೆಗೆ ಕಸ್ಟಮೈಸ್ಡ್ ಕಾರುಗಳನ್ನು ಕೊಡಿಸಲು ಸಹಾಯ ಮಾಡುತ್ತಿದ್ದಾರೆ.

ವಿಕಲಚೇತನರಿಗೆ ವಾಹನ ಚಲಾಯಿಸುವುದನ್ನು ಕಲಿಯುವಲ್ಲಿ ಸಹಾಯ ಮಾಡುತ್ತಿರುವ ಅನನ್ಯ ಮಹಿಳೆ ಅನಿತಾ ಶರ್ಮಾ

Sunday August 11, 2019,

3 min Read

ಕೇವಲ ಆರು ತಿಂಗಳಿನ ಮಗುವಾಗಿದ್ದಾಗಲೇ ಸೊಂಟದಿಂದ ಕಾಲುಗಳವರೆಗೂ ಪಾರ್ಶ್ವವಾಯುವಿಗೆ ಒಳಗಾದ ಅನಿತಾ ಶರ್ಮಾ ಒಂಬತ್ತು ಶಸ್ತ್ರಚಿಕಿತ್ಸೆಗಳ ನಂತರ, ಇದೀಗ ಊರುಗೋಲುಗಳ ಸಹಾಯದಿಂದ ನಡೆಯುತ್ತಿದ್ದಾರೆ.


ಜೈಪುರ್ ಮೂಲದವರಾದ ಅನಿತಾ ಇತ್ತೀಚಿಗೆ ಐಐಎಂ ಇಂಡೋರ್‌ ನಿಂದ ‘ಅಂಗವೈಕಲ್ಯ ಮತ್ತು ಉದ್ಯಮಶೀಲತೆ’ ಎಂಬ ವಿಷಯ ಮಂಡನೆಗೆ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪೋಲಿಯೊದಿಂದ ಪಾರಾಗಿದ್ದ ಅವರಿಗೆ, ವಿಕಲಚೇತನರು (ಪಿಡಬ್ಲ್ಯುಡಿ) ಆಶಿಸಿದದ್ದೆನ್ನೆಲ್ಲಾ ಮಾಡಲಾಗದ ಕೆಲ ವಿಷಯಗಳಲ್ಲಿ ಡ್ರೈವಿಂಗ್ ಸಹ ಒಂದು ಎಂಬುದು ಚೆನ್ನಾಗಿ ಗೊತ್ತು. ಹೀಗಾಗಿ, ಬ್ರೇಕ್ ಮತ್ತು ಎಕ್ಸಲರೇಟರಗಳು ಕೆಳಗೆ ಇರುವ ಬದಲಿಗೆ ಸ್ಟೀರಿಂಗ್ ಬಳಿಯೇ ಇರುವಂಥ ರೆಟ್ರೋಪಿಟ್ಟೆಡ್ ಕಾರನ್ನು ಅನಿತಾ ಓಡಿಸಲು ಶುರುಮಾಡಿದರು.


ಕ

ಅನಿತಾ ಶರ್ಮಾ, ಮೂಲ : ಶೀ ದ ಪೀಪಲ್


ಅನಿತಾ ಕಾರು ಓಡಿಸುವುದು ಇತರೆ ಅಂಗವಿಕಲರಿಗೆಲ್ಲಾ ಆಶ್ಚರ್ಯಕರವಾದ ಸಂಗತಿಯಾಗಿತ್ತು. ಅಂಗಿಲವಿಕಲನಾಗಿ ಹುಟ್ಟಿದವರಿಗೆ ಕಾರು ಓಡಿಸುವುದು ಎಂದಿಗೂ ಸಾಧ್ಯವಿಲ್ಲ ಎಂದೇ ಅವರೆಲ್ಲಾ ಭಾವಿಸಿದ್ದರು. ಅನಿತಾ ಇದನ್ನು ಸ್ವತಃ ಸಾಧಿಸಿತೋರಿಸಿದ ಮೇಲೆ, ಅಂಗವೈಕಲ್ಯದಿಂದ ಬಳಲುತ್ತಿರುವ ಅನೇಕರು ಅವರ ಬಳಿ ಡ್ರೈವಿಂಗ್ ತರಬೇತಿಗಾಗಿ ಸಾಲುಗಟ್ಟಿದರು.


ಹೀಗೆ ವಿಕಲಚೇತನರಿಗೆ ಡ್ರೈವಿಂಗ್ ಕಲಿಸುವುದು ‘ಆನ್ ಮೈ ಓನ್’ ನ ಆರಂಭಿಕ ಕಾರ್ಯವಾಯಿತು. ಅನಿತಾ ವಿಕಲಚೇತನರಿಗಾಗಿ ಡ್ರೈವಿಂಗ್ ತರಗತಿಗಳನ್ನು ತೆಗೆದುಕೊಳ್ಳತೊಡಗಿದರು. ಹೀಗಾಗಿ ಅವರಿಗೆಲ್ಲಾ ಬೇಕೆನ್ನುವ ಸ್ಥಳಕ್ಕೆ ಹೋಗುವುದು ತುಂಬಾ ಸುಲಭವಾಯಿತು. ದೈನಂದಿನ ಪ್ರಯಾಣ, ದಿನಸಿಗಳನ್ನು ಮಾರುವುದಕ್ಕೂ ಸಹಾಯವಾಯಿತು. ಹೀಗೆ ಡ್ರೈವಿಂಗ್ ತರಬೇತಿಯಿಂದಾಗಿ ಸ್ಪಷ್ಟವಾದ ಪರಿಣಾಮವು ವಿಕಲಚೇತನರೊಳಗೆ ಕಂಡುಬಂದಿದೆಯೆಂದು ಟ್ರಿಬ್ಯೂನ್ ಇಂಡಿಯಾ ವರದಿ ಮಾಡಿದೆ.


ಶೀ ದ ಪೀಪಲ್, ಜೊತೆ ಮಾತನಾಡಿದ ಅನಿತಾ,


ನಾನು ಭಾರತದಲ್ಲಿ ವಿಕಲಚೇತನರಿಗಾಗಿಯೇ ಪ್ರತ್ಯೇಕವಾದ ಡ್ರೈವಿಂಗ್ ತರಬೇತಿ ಶಾಲೆಗಳು ಇವೆಯೋ ಇಲ್ಲವೋ ಎಂದು ಹುಡುಕಿದೆ. ಸುಮಾರು 2,000 ಕ್ಕೂ ಅಧಿಕ ಶಾಲೆಗಳಿಗೆ ಫೋನ್‌ ಮಾಡಿದೆ. ಆದರೆ ಅವುಗಳಲ್ಲಿ ಯಾವ ಶಾಲೆಯಲ್ಲೂ ವಿಕಲಚೇತನರಿಗೆ ಡ್ರೈವಿಂಗ್ ತರಬೇತಿಯನ್ನು ನೀಡುವ ಸೌಲಭ್ಯವಿರಲಿಲ್ಲ. ವಿಕಲಚೇತನರಿಗೆ ಓಡಿಸಲು ಸುಲಭವಾಗಬಲ್ಲ ಯಾವುದೇ ರೆಟ್ರೊಫಿಟ್ಟೆಡ್ ಕಾರುಗಳು ಅವರ ಬಳಿ ಇರಲಿಲ್ಲ (ಕೈಗಳ ನಿಯಂತ್ರಣದಲ್ಲಿರುವಂತೆ ನಿರ್ಮಿಸಿದ ಕಾರುಗಳು)


ಇದಲ್ಲದೆ, ಡ್ರೈವಿಂಗ್ ಕಲಿಸುವ ಶಾಲೆಗಳಿಗೆ, ಪಿಡಬ್ಲ್ಯೂಡಿಗೆ ಡ್ರೈವಿಂಗ್ ಕಲಿಸಲು ವಿಶೇಷ ಲೈಸೆನ್ಸ್ ಬೇಕಾಗುತ್ತದೆ, ಆದರೆ ಅನಿತಾ ಸಂಪರ್ಕಿಸಿದ ಯಾವುದೇ ಶಾಲೆಗಳು ಅದನ್ನು ಹೊಂದಿರಲಿಲ್ಲ.


ಈ ನೂನ್ಯತೆಯನ್ನು ಭರ್ತಿ ಮಾಡಬೇಕಾಗಿದೆ ಎಂದು ಅರಿತ ಅನಿತಾ ಮೇ 2017 ರಂದು ಪಂಜಾಬಿನ ಅಮೃತಸರದಲ್ಲಿ ‘ಆನ್ ಮೈ ಓನ್’ ಅನ್ನು ಆರಂಭಿಸಿದರು. ವಿಕಲಚೇತನರಿಗಾಗಿಯೇ ಇರುವ ಈ ಡ್ರೈವಿಂಗ್ ಶಾಲೆಯಲ್ಲಿ ಎರಡು ರೆಟ್ರೋಫಿಟ್ಟೆಡ್ವ ಕಾರುಗಳಿವೆ.


ಕ

ಡ್ರೈವಿಂಗ್ ಕಲಿಯುತ್ತಿರುವ ಅನಿತಾ ಅವರ ವಿದ್ಯಾರ್ಥಿಗಳು, ಮೂಲ : ಶೀ ದ ಪೀಪಲ್


ವಿಕಲಚೇತನರಿಗೆ ಮತ್ತು ಅವರ ಕುಟುಂಬಗಳಿಗೆ ಡ್ರೈವಿಂಗ್ ಕಲಿಯಲು ಅವಕಾಶ ನೀಡುವಂತೆ ಮನವೊಲಿಸುವುದು ಅನಿತಾರಿಗೆ ಮೊದಮೊದಲಿಗೆ ತುಂಬಾ ಕಠಿಣವಾಗಿತ್ತು. ತಮ್ಮ ಈ ಯೋಜನೆಯನ್ನು ಚಾರಿಟೇಬಲ್ ಟ್ರಸ್ಟಾಗಿ ಮಾಡುವ ಉದ್ದೇಶವಿಲ್ಲದ ಕಾರಣ, ಅನಿತಾ ಡ್ರೈವಿಂಗ್ ತರಬೇತಿ ನೀಡಲು ಅತ್ಯಲ್ಪ ಶುಲ್ಕವನ್ನು ತಗೆದುಕೊಳ್ಳುತ್ತಾರೆ. ಇದಲ್ಲದೆ, ಶುಲ್ಕದ ಒಂದು ಭಾಗವನ್ನು ಅಗತ್ಯವಿರುವವರಿಗೆ ವ್ಹೀಲ್ ಚೇರ್ ಗಳನ್ನು ದಾನ ಮಾಡಲು ಅವರು ಬಳಸುತ್ತಾರೆ. ಅವುಗಳನ್ನು ಅಂತರರಾಷ್ಟ್ರೀಯ ಅಂಗವೈಕಲ್ಯ ದಿನಾಚರಣೆಯಂತಹ ದಿನಗಳಂದು ವಿತರಿಸುತ್ತಾರೆ.


ಈ ಬಗ್ಗೆ ಯುವರ್ ಸ್ಟೋರಿ ಜೊತೆಗೆ ಮತ್ತಷ್ಟು ವಿವರಿಸುತ್ತಾ


"ಅಂಗವೈಕಲ್ಯ ಉಳ್ಳವರಲ್ಲಿ ಸಾಮಾನ್ಯವಾಗಿ ಆತ್ಮವಿಶ್ವಾಸದ ಕೊರತೆಯಿರುತ್ತದೆ. ಹೀಗಾಗಿ ಅವರಿಗೆ ಸ್ವತಂತ್ರರಾಗಿಸುವುದು ಕಷ್ಟವೇ ಸರಿ. ಆದರೆ ದೇಹದಲ್ಲಿನ ಬದಲಾವಣೆಗಳನ್ನು ಸ್ವೀಕರಿಸಲು ಆತ್ಮವಿಶ್ವಾಸದ ಅಗತ್ಯತೆ ಬೇಕೇ ಬೇಕು. ಇದಕ್ಕಾಗಿ, ಅವರ ಜೀವನಶೈಲಿಯಲ್ಲಿನ ದೈಹಿಕ ಬದಲಾವಣೆಗಳ ಬಗ್ಗೆ ಮಾನಸಿಕವಾಗಿ ದೃಢವಾಗಿರಲು ನಾನವರಿಗೆ ಸಹಾಯ ಮಾಡುತ್ತೇನೆ. ”


ಡ್ರೈವಿಂಗ್ ಕಲಿಸುವುದರ ಜೊತೆಜೊತೆಗೆ, ಕಾಫೀ ಟೈಮಿಗೆ ವಿಕಲಚೇತನರೊಂದಿಗೆ ನಿಯಮಿತವಾಗಿ ಸಂಭಾಷಣೆಗಳನ್ನು ನಡೆಸುತ್ತಾರೆ. ಡ್ರೈವಿಂಗ್ ಲೈಸೆನ್ಸ್ ಮತ್ತು ಕಸ್ಟಮೈಸ್ಡ್ ಕಾರುಗಳನ್ನು ಕೊಡಿಸಲೂ ಸಹ ಅನಿತಾ ಸಹಾಯ ಮಾಡುತ್ತಾರೆ


ಕ

ಮೂಲ : ಶೀ ದ ಪೀಪಲ್


ಇಲ್ಲಿಯವರೆಗೆ, ಅನಿತಾ ಎರಡು ಕಾರ್ಯಾಗಾರಗಳನ್ನು ನಡೆಸಿದ್ದು, 16 ಜನರಿಗೆ ತರಬೇತಿ ನೀಡಿದ್ದಾರೆ, ಅವರೆಲ್ಲರೂ ಈಗ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು ಬೇರೆ ಬೇರೆ ಅಂಗವೈಕಲ್ಯವನ್ನು ಹೊಂದಿದ್ದರಿಂದ, ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ತರಬೇತಿ ನೀಡಲು ಅವರು ಮುಂದಾಗಿದ್ದಾರೆ. ಸದ್ಯ ತಮ್ಮ 17ನೆಯ ವಿದ್ಯಾರ್ಥಿಗೆ ಈ ವಿದ್ಯೆ ಕಲಿಸುತ್ತಿದ್ದಾರೆ.


ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಮಾತನಾಡುತ್ತಾ


ಅಮೃತಸರದ ಒಂದು ಸ್ಥಳೀಯ ಎನ್‌ಜಿಒ ಜೊತೆ ಕೈಜೋಡಿಸಿ, ನಾವು ವಿಕಲಚೇತನರಿಗಾಗಿ ಜಾಗೃತಿ ಅಭಿಯಾನವನ್ನು ಆಯೋಜಿಸುತ್ತಿದ್ದೇವೆ. ಸಾರ್ವಜನಿಕ ಸಾರಿಗೆ, ಡ್ರೈವಿಂಗ್ ಲೈಸೆನ್ಸ್, ಇಂಧನ ರಿಯಾಯಿತಿಗಳ ಸಹಾಯದಿಂದ ನಡೆಯುವ ಈ ಅಭಿಯಾನದಲ್ಲಿ ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳ ಮೇಲೆಯೇ ಹೆಚ್ಚು ಬೆಳಕು ಚೆಲ್ಲುತ್ತೇವೆ. ನಾನು ‘ಆನ್ ಮೈ ಓನ್’ ಎಂಬ ಫೇಸ್‌ಬುಕ್‌ ಪುಟದಲ್ಲಿ ಇತರರನ್ನು ಪ್ರೇರೇಪಿಸಲು ವಿಕಲಚೇತನ ಚಾಲಕರ ಸ್ಪೂರ್ತಿದಾಯಕ ಕಥನಗಳನ್ನು ಹಂಚಿಕೊಳ್ಳುತ್ತಲೇ ಇರುತ್ತೇನೆ.


ಮುಂಬರುವ ದಿನಗಳಲಲ್ಲಿ ವ್ಹೀಲ್ ಚೇರ್ ಯಾಂತ್ರಿಕವಾಗಿ ಕಾರೊಳಗೆ ಹೋಗುವಂತೆ, ಕಾರುಗಳನ್ನು ತಾಯಾರಿಸುವ ಮೂಲಕ ವ್ಹೀಲ್ ಚೇರ್ ಬಳಸುವವರ ಬಾಳನ್ನು ಸುಲಭಗೊಳಿಸಬೇಕೆನ್ನುವುದು ಅನಿತಾ ಅವರ ಇಚ್ಛೆಯಾಗಿದೆ.