ಐಫೋನ್‌ 12 ಸರಣಿ ಬಿಡುಗಡೆ ಮಾಡಿದ ಆ್ಯಪಲ್‌

By Team YS Kannada|14th Oct 2020
ಆ್ಯಪಲ್‌ ವರ್ಚುಅಲ್‌ ಈವೆಂಟ್‌ನಲ್ಲಿ ಐಫೋನ್‌ 12 ಸರಣಿ ಫೋನ್‌ಗಳನ್ನು ಮತ್ತು ಹೋಂ ಪೊಡ್‌ ಅನ್ನು ಬಿಡುಗಡೆಗೊಳಿಸಿದ್ದು, ಅಕ್ಟೋಬರ್‌ 30 ರಿಂದ ಹೊಸ ಫೋನ್‌ಗಳು ಭಾರತದಲ್ಲಿ ಲಭ್ಯವಿರಲಿವೆ.
Clap Icon0 claps
 • +0
  Clap Icon
Share on
close
Clap Icon0 claps
 • +0
  Clap Icon
Share on
close
Share on
close

ಆ್ಯಪಲ್‌ 2020ರ ಸರಣಿಯ ಹೊಸ ಫೋನ್‌ಗಳನ್ನು ಬಿಡುಗಡೆಗೊಳಿಸಿದ್ದು ಐಫೋನ್‌ 12 ಸರಣಿಯಲ್ಲಿ ಐಫೋನ್‌ 12, ಐಫೋನ್‌ 12 ಮಿನಿ, ಐಫೋನ್‌ 12 ಪ್ರೋ ಮತ್ತು ಐಫೋನ್‌ 12 ಪ್ರೋ ಮಾಕ್ಸ್‌ ಫೋನ್‌ಗಳು ಅನಾವರಣಗೊಳಿಸಿದೆ.


ಈ ಹೊಸ ಐಫೋನ್‌ಗಳಲ್ಲಿ ಹೊಸ ಎ14 ಬಯೋನಿಕ್‌ ಚಿಪ್‌ ಇರಲಿದ್ದು, ಇದನ್ನು ಕಳೆದ ತಿಂಗಳು ಬಿಡುಗಡೆಗೊಂಡ ಐಪ್ಯಾಡ್‌ ಏರ್‌ ನಲ್ಲಿ ಮೊದಲು ಬಳಕೆಮಾಡಲಾಗಿತ್ತು ಮತ್ತು ಈ ಚಿಪ್‌ ಅನ್ನು 5 ಎನ್‌ಎಮ್‌ ತಂತ್ರಜ್ಞಾನ ಬಳಸಿಕೊಂಡು ತಯಾರಿಸಲಾಗಿದೆ. ಎ13 ಬಯೋನಿಕ್‌ ಚಿಪ್‌ಗಿಂತ ಹೊಸ ಎ14 ಬಯೋನಿಕ್‌ ಚಿಪ್‌ 70 ಪ್ರತಿಶತದಷ್ಟು ವೇಗವಾಗಿದೆ ಎಂದು ಆ್ಯಪಲ್‌ ಹೇಳಿಕೊಂಡಿದೆ.

ಐಫೋನ್‌ 12 ಸರಣಿಯಲ್ಲಿ ಹೈ ಪವರಡ್‌ ವೈರ್‌ಲೆಸ್‌ ಚಾರ್ಜಿಂಗ್‌ ಮಾಡಲು ಮತ್ತು ಅಕ್ಸೆಸರೀಸ್‌ ಅಟ್ಯಾಚ್‌ ಮಾಡಲು ಮ್ಯಾಗ್‌ಸೇಫ್‌ಅನ್ನು ನೀಡಿದೆ.


ಹೊಸ ಐಫೋನ್‌ಗಳು ಅಕ್ಟೋಬರ್‌ 30 ರಿಂದ ಭಾರತದಲ್ಲಿ ದೊರೆಯಲಿವೆ.


ಈ ವರ್ಷದಿಂದ ಆ್ಯಪಲ್‌ ಪವರ್‌ ಅಡಾಪ್ಟರ್‌ ಮತ್ತು ಇಯರ್‌ಪಾಡ್‌ಗಳನ್ನು ಫೋನ್‌ ಪ್ಯಾಕೆಜಿಂಗ್‌ನಲ್ಲಿ ಸೇರಿಸದಿರಲು ನಿರ್ಧರಿಸಿದ್ದು, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಚಿಕ್ಕ ಪ್ಯಾಕೆಜಿಂಗ್‌ನಲ್ಲಿ ಫೋನ್‌ಗಳು ಸಿಗಲಿವೆ. ಇದರರ್ಥ ಈ ಅಕ್ಸೆಸರಿಸ್‌ಗಳನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ.


6.1-ಇಂಚಿನ ಐಫೋನ್ 12 ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ ಆವರಣದೊಂದಿಗೆ ನಯವಾದ ಹೊಸ ಫ್ಲಾಟ್-ಎಡ್ಜ್ ವಿನ್ಯಾಸವನ್ನು ಹೊಂದಿದೆ ಮತ್ತು ಸೆರಾಮಿಕ್ ಶೀಲ್ಡ್ ಮುಂಭಾಗದ ಕವರ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಐಫೋನ್ 12ನಲ್ಲಿ ಡಾಲ್ಬಿ ವಿಷನ್ ಮತ್ತು ಎಚ್‌ಡಿಆರ್ 10 ಸೌಲಭ್ಯವಿದೆ.


ಐಫೋನ್ 12 ಮಿನಿ ಐಫೋನ್ 12 ನಂತೆಯೆ ಇರಲಿದ್ದು, ಅದೇ ವೈಶಿಷ್ಟ್ಯಗಳನ್ನು ಹೊಂದಿದ್ದು, 5.7-ಇಂಚಿನ ರೆಟಿನಾ ಎಕ್ಸ್‌ಡಿಆರ್ ಡಿಸ್ಪ್ಲೇ ಹೊಂದಿದೆ. ಆ್ಯಪಲ್‌ ಹೇಳುವಂತೆ: “ಐಫೋನ್ 12 ಮಿನಿ ವಿಶ್ವದ ಅತ್ಯಂತ ಚಿಕ್ಕ, ತೆಳ್ಳಗಿನ ಮತ್ತು ಹಗುರವಾದ 5 ಜಿ ಸ್ಮಾರ್ಟ್‌ಫೋನ್ ಆಗಿದೆ. ಐಫೋನ್ 12 ರ ಎಲ್ಲಾ ತಂತ್ರಜ್ಞಾನವನ್ನು ಇದರಲ್ಲಿ ನೀಡಲು ಮರು ವಿನ್ಯಾಸಮಾಡಲಾಗಿದ್ದು, ಆದರೂ ಎಡ್ಜ್‌ ಟು ಎಡ್ಜ್‌ ಡಿಸ್ಪ್ಲೇ ನೀಡಿದ್ದೇವೆ.”


ಎರಡು ಫೋನ್‌ಗಳಲ್ಲಿ 12 ಎಂಪಿ ಡುಯಲ್‌ ಕ್ಯಾಮೆರಾ ಸೆಟಪ್‌ ಇದ್ದು ಅಲ್ಟ್ರಾ ವೈಡ್‌ ಮತ್ತು ವೈಡ್‌ ಕ್ಯಾಮೆರಾಗಳಿವೆ.

ಐಫೋನ್‌ 12 ಮಾಕ್ಸ್‌ ಪ್ರೋ ಮತ್ತು ಪ್ರೋ

ಐಫೋನ್‌ 12 ಪ್ರೋ 6.1 ಇಂಚಿನ ಸ್ಕ್ರೀನ್‌ ಹೊಂದಿದ್ದು, ಐಫೋನ್‌ 12 ಪ್ರೋ ಮ್ಯಾಕ್ಸ್‌ 6.7 ಇಂಚಿನ ರೇಟಿನಾ ಎಕ್ಸ್‌ಡಿಆರ್‌ ಡಿಸ್ಪ್ಲೇ ಹೊಂದಿದೆ. ಎರಡು ಫೋನ್‌ಗಳಲ್ಲಿ 12 ಎಂಪಿ ಅಲ್ಟ್ರಾ ವೈಡ್‌ ಲೆನ್ಸ್‌ ಇದೆ.


ಇದೇ ಮೊದಲ ಬಾರಿಗೆ ಎಚ್‌ಡಿಆರ್‌ ವಿಡಿಯೋ ರೆಕಾರ್ಡಿಂಗ್‌ ಸೌಲಭ್ಯ ಐಫೋನ್‌ಗಳಲ್ಲಿ ಲಭ್ಯವಾಗಿದ್ದು, ಐಫೋನ್‌ 12 ಪ್ರೋ ಡಾಲ್ಬಿ ವಿಷನ್‌ ಎಚ್‌ಡಿಆರ್‌ನಲ್ಲಿ ವಿಡಿಯೋ ರೆಕಾರ್ಡ್‌ ಮಾಡಲು ಅನುವು ಮಾಡಿಕೊಡುತ್ತದೆ.


ಭಾರತದಲ್ಲಿ ಯಾವಾಗ ಲಭ್ಯ?

ಅಕ್ಟೋಬರ್‌ 30 ರಿಂದ ಹೊಸ ಐಫೋನ್‌ಗಳು ಭಾರತದಲ್ಲಿ ಸಿಗಲಿದ್ದು, ಐಫೋನ್‌ 12 ಮತ್ತು ಐಫೋನ್‌ 12 ಮಿನಿ ಲಭ್ಯವಿರಲಿವೆ. ಇನ್ನುಳಿದ ಎರಡು ಫೋನ್‌ಗಳ ಲಭ್ಯತೆಯ ಬಗ್ಗೆ ನಿಖರ ಮಾಹಿತಿ ಇಲ್ಲ.


ಐಫೋನ್ 12 ಮತ್ತು ಐಫೋನ್ 12 ಮಿನಿ 64 ಜಿಬಿ, 128 ಜಿಬಿ, ಮತ್ತು 256 ಜಿಬಿ ಮಾದರಿಗಳಲ್ಲಿ ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳಲ್ಲಿ ಬರುತ್ತವೆ, ಕ್ರಮವಾಗಿ 79,900 ಮತ್ತು 69,900 ರೂಗಳಿಂದ ಅವುಗಳ ಬೆಲೆ ಶುರುವಾಗುತ್ತದೆ.


ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ 128 ಜಿಬಿ, 256 ಜಿಬಿ, ಮತ್ತು 512 ಜಿಬಿ ಮಾದರಿಗಳಲ್ಲಿ ಗ್ರ್ಯಾಫೈಟ್, ಸಿಲ್ವರ್, ಗೋಲ್ಡ್ ಮತ್ತು ಪೆಸಿಫಿಕ್ ಬ್ಲೂಗಳಲ್ಲಿ ಲಭ್ಯವಿದ್ದು, ಕ್ರಮವಾಗಿ 119,900 ಮತ್ತು 129,900 ರೂಗಳಿಂದ ಅವುಗಳ ಬೆಲೆ ಶುರುವಾಗುತ್ತದೆ.


ಬಿಡುಗಡೆಗೊಂಡ ಇತರೆ ಸಾಧನಗಳು

ಆ್ಯಪಲ್‌ ಹೋಮ್‌ಪಾಡ್ ಮಿನಿ ಎಂಬ ಸ್ಮಾರ್ಟ್‌ ಸ್ಪೀಕರ್‌ ಬಿಡುಗಡೆಗೊಳಿಸಿದ್ದು, ಭಾರತದಲ್ಲಿ 9,990 ರೂ, ಲಭ್ಯವಾಗಲಿದೆ. ಹೊಮ್‌ಪಾಡ್‌ನ ಚಿಕ್ಕ ಆವೃತ್ತಿಯಿದಾಗಿದೆ.


ಈ ಸ್ಪೀಕರ್‌ನಲ್ಲಿ ಸ್ಮಾರ್ಟ್‌ ಅಸ್ಸಿಸ್ಟೆಂಟ್‌ ಸಿರಿ ಇರಲಿದ್ದು, ಅದರಲ್ಲಿ ಇಂಟರ್‌ಲಕಾಂ ಫೀಚರ್‌ ಸೇರಿಸಲಾಗಿದೆ, ಇದರಿಂದ ಬಳಕೆದಾರರು ಒಂದು ಹೋಮ್‌ಪಾಡ್‌ನಿಂದ ಇನ್ನೊಂದು ಹೋಮ್‌ಪಾಡ್‌ಗೆ ಸಂದೇಶ ಕಳಿಸಬಹುದಾಗಿದೆ.

Get access to select LIVE keynotes and exhibits at TechSparks 2020. In the 11th edition of TechSparks, we bring you best from the startup world to help you scale & succeed. Join now! #TechSparksFromHome

Clap Icon0 Shares
 • +0
  Clap Icon
Share on
close
Clap Icon0 Shares
 • +0
  Clap Icon
Share on
close
Share on
close

Latest

Updates from around the world