ಕೊರೊನಾ ಗೆದ್ದುಬಂದ ಕೇರಳದ 105 ವರ್ಷದ ಅಜ್ಜಿ

105ರ ಅಸ್ಮಾ ಬೀವಿ ಎಂಬ ಅಜ್ಜಿಯೊಬ್ಬರು ಮೂರು ತಿಂಗಳ ಸುದೀರ್ಘ ಯುದ್ಧದ ನಂತರ ಕೋವಿಡ್‌-19 ನಿಂದ ಗುಣಮುಖರಾಗಿದ್ದಾರೆ.

31st Jul 2020
  • +0
Share on
close
  • +0
Share on
close
Share on
close

ಕೊರೊನಾ ಮಹಾಮಾರಿಯು ಜಗತ್ತಿನಾದ್ಯಂತ ಜನರ ಜೀವಗಳನ್ನು ಬಲಿತೆಗೆದುಕೊಳ್ಳುತ್ತಾ, ಜನರಲ್ಲಿ ಭಯವನ್ನು ಹುಟ್ಟಿಸಿದೆ. ಆದರೆ ಇದರ ನಡುವೆ 80 ಕ್ಕೂ ಹೆಚ್ಚು ವರ್ಷದ ವೃದ್ಧರು ಸೇರಿದಂತೆ ಜನರು ಸೋಂಕಿನಿಂದ ಗುಣಮುಖರಾಗುತ್ತಿರುವುದು ಕತ್ತಲ ನಡುವೆ ಆಶಾಕಿರಣದಂತಿದೆ.


105ರ ಅಸ್ಮಾ ಬೀವಿ ಎಂಬ ಅಜ್ಜಿಯೊಬ್ಬರು ಮೂರು ತಿಂಗಳ ಸುದೀರ್ಘ ಯುದ್ಧದ ನಂತರ ಕೋವಿಡ್‌-19 ನಿಂದ ಗುಣಮುಖರಾಗಿ, ಕೇರಳದ ಸರ್ಕಾರಿ ಆಸ್ಪತ್ರೆಯಿಂದ ಬುಧವಾರ ಬಿಡುಗಡೆಗೊಂಡಿದ್ದಾರೆ. ಕೇರಳದಲ್ಲಿ ಕೋವಿಡ್‌ನಿಂದ ಗುಣಮುಖರಾದವರಲ್ಲಿ ಇವರು ಅತ್ಯಂತ ಹಿರಿಯರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.


ಅಸ್ಮಾ ಬೀವಿ (ಚಿತ್ರಕೃಪೆ: ಶೀದಿಪೀಪಲ್‌)
ಕೊಲ್ಲಮ ಜಿಲ್ಲೆಯ ಅಂಚಲ್‌ ನಗರದ ನಿವಾಸಿಯಾದ ಅಸ್ಮಾ ಬೀವಿಯವರು ತಮ್ಮ ಮಗಳ ಮೂಲಕ ಕೊರೊನಾ ಸೋಂಕಿಗೆ ಒಳಗಾದ ನಂತರ ಏಪ್ರಿಲ್‌ 20 ರಂದು ಅವರನ್ನು ಕೊಲ್ಲಮ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆಯ ವೇಳೆಯಲ್ಲಿ ಅವರು ಅಪಾರ ಶಕ್ತಿಯಿಂದಿದ್ದರು ಎಂದು ಇಲಾಖೆ ತಿಳಿಸಿದೆ.


ಅವರು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದರು ಮತ್ತು ಅವರ ಚಿಕಿತ್ಸೆಯನ್ನು ವೈದ್ಯಕೀಯ ಮಂಡಳಿಯು ಮೇಲ್ವಿಚಾರಣೆ ಮಾಡುತ್ತಿತ್ತು.


"ಅಂಚಲ್-ಮೂಲದ 105ರ ಅಸ್ಮಾ ಬೀವಿಯವರನ್ನು ಕೋವಿಡ್‌-19 ನಿಂದ ಗುಣವಾದ ಬಳಿಕ ಬಿಡುಗಡೆ ಮಾಡಲಾಯಿತು. ಕೊರೊನಾವೈರಸ್‌ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ರಾಜ್ಯದ ಅತ್ಯಂತ ಹಿರಿಯ ವ್ಯಕ್ತಿ ಇವರು," ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


ಏಪ್ರಿಲ್‌ನಲ್ಲಿ ಪಥನಮ್‌ಥಿಟ್ಟ ನಗರದ ರಾಣಿ ಹಳ್ಳಿಯ 93 ರ ಥಾಮಸ್‌ ಅಬ್ರಹಾಂ ಕೋವಿಡ್‌-19 ನಿಂದ ಗುಣಮುಖರಾದ ದೇಶದ ಅತೀ ಹಿರಿಯರಾಗಿದ್ದರು. ನಂತರದ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಲವು ಶತಾಯುಷಿಗಳು ಗುಣಮುಖರಾಗಿದ್ದಾರೆ.


ರೈತ ಅಬ್ರಹಾಂ ಮತ್ತು ಅವರ ಪತ್ನಿ ಮಾರಿಯಮ್ಮ(88) ಅವರನ್ನು ಕೊಟ್ಟಯುಮ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಿಡುಗಡೆಗೊಳಿಸಲಾಗಿತ್ತು.


ಬೀವಿಯವರು ತಮ್ಮ ಇಳಿ ವಯಸ್ಸಿನಲ್ಲಿಯೂ ಸಹ ಅಪಾರ ಶಕ್ತಿಯನ್ನು ತೋರಿಸಿದ್ದಾರೆ ಎಂದು ಆರೋಗ್ಯ ಸಚಿವೆ ಕೆ ಕೆ ಶೈಲಾಜಾ ಅವರನ್ನು ಕೊಂಡಾಡಿದ್ದಾರೆ.


ವೃದ್ಧರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ದಾದಿಯರು ಮತ್ತು ಇತರೆ ವೈದ್ಯಕೀಯ ಕಾರ್ಯಕರ್ತರನ್ನು ಅವರು ಹೊಗಳಿದ್ದಾರೆ.


ಕೇರಳದಲ್ಲಿ 30 ಆರೋಗ್ಯ ಕಾರ್ಯಕರ್ತರು ಸೇರಿದಂತೆ 903 ಸಕಾರಾತ್ಮಕ ಪ್ರಕರಣಗಳು ಬುಧವಾರ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 21,797 ಕ್ಕೆ ತಲುಪಿದೆ ಮತ್ತು 68 ಸಾವುಗಳು ಸಂಭವಿಸಿದೆ.

Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

  • +0
Share on
close
  • +0
Share on
close
Share on
close

Our Partner Events

Hustle across India