ಕೊರೊನಾ ನಡುವೆ ವೈದ್ಯರಾಗಿ ಗಮನ ಸೆಳೆಯುತ್ತಿರುವ ಅಸ್ಸಾಂನ ಪೊಲೀಸ್‌ ವರಿಷ್ಠಾಧಿಕಾರಿ

ಬರ್ಪೆಟಾ ಪೊಲೀಸ್‌ ವರಿಷ್ಠಾಧಿಕಾರಿ ರಾಬಿನ್‌ ಕುಮಾರ್‌ ಕೋವಿಡ್‌-19 ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ತಮ್ಮ ಪೊಲೀಸ್‌ ಕೆಲಸದ ಜತೆಗೆ ವೈದ್ಯರಾಗಿಯೂ ಸೇವೆ ಮಾಡುತ್ತಿದ್ದಾರೆ.
0 CLAPS
0

ಅಸ್ಸಾಂನ ಯುವ ಐಪಿಎಸ್‌ ಅಧಿಕಾರಿಯೊಬ್ಬರು ಕೊರೊನಾವೈರಸ್‌ ಬಿಕ್ಕಟ್ಟಿನ ನಡುವೆ ಪೊಲೀಸ್‌ ಸಮವಸ್ತ್ರದ ಜತೆಗೆ ಸ್ಟೆತೊಸ್ಕೋಪ್‌ ಹಿಡಿದು ವೈದ್ಯರಾಗಿಯೂ ಕಾರ್ಯನಿರ್ವಹಿಸುತ್ತಾ ಹಲವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣದಿಂದ ಇವರು ಈ ಕೆಲಸಕ್ಕೆ ಮುಂದಾಗಿದ್ದಾರೆ.

2013 ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಕುಮಾರ್‌ ಓದಿದ್ದು ವೈದ್ಯಕೀಯ (ಎಮ್‌ಬಿಬಿಎಸ್‌, ಎಮ್‌ಡಿ), ಇದು ಅವರಿಗೂ ತುರ್ತು ವೈದ್ಯಕೀಯ ಸೇವೆಯ ಅವಷ್ಯಕತೆಯಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಅವಕಾಶ ಮಾಡಿಕೊಟ್ಟಿದೆ.

ಬರ್ಪೆಟಾ ಪೊಲೀಸ್‌ ವರಿಷ್ಠಾಧಿಕಾರಿ ರಾಬಿನ್‌ ಕುಮಾರ್‌ ಇತರ ಪೊಲೀಸ್‌ ಸಿಬ್ಬಂದಿಗಳಿಗೆ ಚಿಕಿತ್ಸೆ ನೀಡುತ್ತಿರುವುದು. (ಚಿತ್ರಕೃಪೆ: ಟ್ವಿಟ್ಟರ್)

ಜಿಲ್ಲೆಯ ಪೊಲೀಸ್‌ ಇಲಾಖೆಯ ಮುಖ್ಯಸ್ಥರಾಗಿರುವುದರ ಜತೆಗೆ ಕುಮಾರ್‌ ಅವರು ಬರ್ಪೆಟಾ ಪೊಲೀಸ್‌ ರಿಸರ್ವ್‌ನಲ್ಲಿ ಪೊಲೀಸ್‌ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗಾಗಿ 50 ಬೆಡ್‌ ಮತ್ತು 4 ಐಸಿಯು ಬೆಡ್‌ಗಳಿರುವ ಕೋವಿಡ್‌-19 ಆರೈಕೆ ಕೇಂದ್ರವನ್ನು ನಡೆಸುತ್ತಿದ್ದಾರೆ. ಮಹಿಳೆಯರು ಮತ್ತು ಹಿರಿಯರಿಗಾಗಿ ಆರೋಗ್ಯ ಶಿಬಿರಗಳನ್ನು ನಡೆಸಬೇಕು ಎಂದು ಅವರು ಯೋಚಿಸಿದ್ದಾರೆ.

“ಜಿಲ್ಲೆಯ ಪೊಲೀಸ್‌ ವರಿಷ್ಠಧಿಕಾರಿ ಮತ್ತು ವೈದ್ಯನ ಸ್ಥಾನದಲ್ಲಿರುವುದು ನನ್ನ ಅದೃಷ್ಟ. ಇದು ನನಗೆ ತೃಪ್ತಿ ನೀಡುತ್ತದೆ,” ಎಂದು ಕುಮಾರ್‌ ಫೋನಿನಲ್ಲಿ ಪಿಟಿಐಗೆ ತಿಳಿಸಿದರು.

ಬಾರ್ಪೆಟಾದಲ್ಲಿ 50 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಗಳಿಗೆ ಎಸ್‌ಪಿ ಆರೋಗ್ಯ ಶಿಬಿರವನ್ನು ನಡೆಸಿದ್ದಾರೆ.

ಉತ್ತರ ಪ್ರದೇಶದ ಘಜಿಯಾಬಾದ್ ಮೂಲದ ಕುಮಾರ್, ಅಸ್ಸಾಂ ಪೊಲೀಸ್‌ ಇಲಾಖೆಯನ್ನು ಸೇರಿದ ನಂತರ, ಕೆಲವು ವರ್ಷಗಳ ಹಿಂದೆ ಸೋನಿತ್‌ಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ತೇಜ್‌ಪುರದಲ್ಲಿ ಮೊದಲ ಬಾರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದರು.

“ಕೊರೊನಾ ಬಂದಾಗ, ನಾನು ಅಸ್ಸಾಂನ ಡಿಜಿಪಿ ಭಾಸ್ಕರ್‌ ಜ್ಯೋರಿ ಮಹಾಂತಾ ಅವರಿಂದ ಅನುಮತಿ ಪಡೆದು ಕೋವಿಡ್‌-19 ಆರೈಕೆ ಕೇಂದ್ರವನ್ನು ಬರ್ಪೆಟಾದಲ್ಲಿ ಆರಂಭಿಸಿದೆ. ಈಗ ಕೇಂದ್ರ ಚೆನ್ನಾಗಿ ಕೆಲಸ ಮಾಡುತ್ತಿದೆ,” ಎಂದರು ಅವರು.

COVID ಆರೈಕೆ ಕೇಂದ್ರದಲ್ಲಿ ನಾಲ್ಕು ಐಸಿಯು ಬೆಡ್ಗಳು, 32 ಸಾಮಾನ್ಯ ಬೆಡ್‌ಗಳು ಮತ್ತು 14 ಆಫ್ಟರ್ ಕೇರ್ ಬೆಡ್‌ಗಳಿವೆ.

ಕುಮಾರ್ ಅವರ ಈ ಕೆಲಸಕ್ಕೆ ಹಲವರು ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ಎಸ್‌ಪಿ ಅವರ ಈ ಕಾರ್ಯವನ್ನು "ಮಾನವೀಯತೆಯ ಸೇವೆಯ ದೊಡ್ಡ ಸೂಚಕ" ಎಂದು ಬಣ್ಣಿಸಿದ್ದಾರೆ.

Latest

Updates from around the world