ಕೊಚ್ಚಿಯ ಆಟೋ ಚಾಲಕ 10,000ಕ್ಕೂ ಹೆಚ್ಚಿನ ನಿರ್ಗತಿಕರನ್ನು ರಕ್ಷಿಸಿದ್ದಾರೆ

ಕೊಚ್ಚಿಯ ಆಟೋ ಚಾಲಕ ಮುರುಗನ್ ಎಸ್ ಥೆರುವೊರಂರವರು ಕಳೆದ 20 ವರ್ಷಗಳಿಂದ 10,000ಕ್ಕೂ ಹೆಚ್ಚು ಮನೆಯಿಲ್ಲದ ಜನರನ್ನು ರಕ್ಷಿಸಿದ್ದಾರೆ. ಇದಕ್ಕಾಗಿ ಅವರು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳಿಂದ ಪ್ರಶಸ್ತಿ ಸಹ ಸ್ವೀಕರಿಸಿದ್ದಾರೆ.

4th Dec 2019
  • +0
Share on
close
  • +0
Share on
close
Share on
close

ಆಟೋ ಚಾಲಕ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಮುರುಗನ್ ಎಸ್ ಥೆರೊವೊರಂ 20 ವರ್ಷಗಳಲ್ಲಿ 10,000ಕ್ಕೂ ಹೆಚ್ಚಿನ ಬೀದಿಗೆ ಬಿದ್ದ ಜನರನ್ನು ರಕ್ಷಣೆ ಮಾಡಿದ್ದಾರೆ.


ಕೇರಳದ ಕೊಚ್ಚಿಯ ಕೊಳಗೇರಿಯಿಂದ ಬಂದ‌ 37 ವರ್ಷದ ಮುರುಗನ್ ಅವರು ತಮ್ಮ ಈ ಕಾರ್ಯಕ್ಕೆ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳಿಂದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಥೆರೊವೊರಂ (ಮಲೆಯಾಳಂನಲ್ಲಿ ಬೀದಿ ಮೂಲೆಯಲ್ಲಿ ಎಂದರ್ಥ) ಎಂಬ ಎನ್.ಜಿ.ಓ ಒಂದನ್ನು ಜನವರಿ 2007ರಲ್ಲಿ ತಮ್ಮ ಸಮಾಜ ಸೇವೆಯಯನ್ನು ಕೈಗೊಳ್ಳುವುದಕ್ಕಾಗಿ ಸ್ಥಾಪಿಸಿದರು, ವರದಿ ಮಿಲಾಪ್.


ಮುರುಗನ್ ಅವರು ತಮ್ಮ ಆಟೋವನ್ನು ನಗರದ ಸುತ್ತ ಓಡಾಡಲು ಹಾಗೂ ನಿರ್ಗತಿಕರನ್ನು ರಕ್ಷಿಸಲು ಬಳಸುತ್ತಾರೆ. ಇದರಿಂದಾಗಿ ಅವರು ತಿಂಗಳಿಗೆ 5,000 ರೂ ಗಳಿಸುತ್ತಾರೆ ಹಾಗೂ ವರ್ಷಕ್ಕೆ ಕನಿಷ್ಟ 400 ಜನರನ್ನು ರಕ್ಷಿಸುತ್ತಾರೆ.


ಮುರುಗನ್ ಮನೆಯಿಲ್ಲದ ವ್ಯಕ್ತಿಯೊಬ್ಬರನ್ನು ರಕ್ಷಿಸುತ್ತಿರುವುದು (ಚಿತ್ರಕೃಪೆ: ಎಡೆಕ್ಸ್ ಲೈವ್)
ತಮ್ಮ ಆರಂಭಿಕ ದಿನಗಳ ಕುರಿತಾಗಿ ಎಡೆಕ್ಸ್ ಲೈವ್ ಜೊತೆಗೆ ಮಾತನಾಡಿದ ಮುರುಗನ್,


"ಬಾಲ್ಯದಲ್ಲಿ ನಾನು ಜೀವಿಸುವುದಕ್ಕಾಗಿ ಎಲ್ಲ ತರಹದ ಕೆಲಸಗಳನ್ನು ಮಾಡಿದ್ದೇನೆ. ಹಸಿವನ್ನು ನೀಗಿಸುವುದಕ್ಕಾಗಿ ಕಸದ ಡಬ್ಬಗಳಲ್ಲಿ ಆಹಾರಕ್ಕಾಗಿ ಹುಡುಕುತ್ತ ವಾಗ್ದಾಳಿ ನಡೆಸಿದ್ದೇನೆ‌. ನಂತರ ನನ್ನನ್ನು ಸ್ನೇಹ ಭವನ ಎಂಬ ಅನಾಥಾಶ್ರಮಕ್ಕೆ ಸೇರಿಸಿದರು. ಅಲ್ಲಿ ನಾನು ೧೦ ವರ್ಷ ಕಳೆದೆ."


ಒಬ್ಬ ವ್ಯಕ್ತಿಯನ್ನು ರಕ್ಷಿಸಿದಾಗ, ಅವನ/ಅವಳ ಸ್ಥಳವನ್ನು ಆಧರಿಸಿ ಅವರನ್ನು ಗುರುತಿಸಲಾಗುತ್ತದೆ. ನಂತರ ಥೆರೊವೊರಂ ತಂಡವು ಪೋಲಿಸ್ ಠಾಣೆಗೆ ರಕ್ಷಿಸಿದ ವ್ಯಕ್ತಿಯನ್ನು ಕರೆದೊಯ್ಯುತ್ತಾರೆ. ಅಲ್ಲಿ ಅಧಿಕಾರಿಯೊಬ್ಬರು ಸಂಸ್ಥೆಗೆ ಒಂದು ಉಲ್ಲೇಖ ಸಂಖ್ಯೆಯನ್ನು ನೀಡುತ್ತಾರೆ‌.


ಈ ಪ್ರಕ್ರಿಯೆಯು ವ್ಯಕ್ತಿಯ ಮಾನಸಿಕ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಲು ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿದೆ‌. ಈ ಸಮಯದಲ್ಲಿ ಅವನು/ಅವಳು ಸುಮಾರು ಎರಡು ವಾರಗಳ ಕಾಲ ಸಂಘಟನೆಯಲ್ಲಿ ಇರುತ್ತಾರೆ. ನಂತರ ಅವನು/ಅವಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತದೆ.‌ ಆ ವ್ಯಕ್ತಿಯನ್ನು ತ್ರಿಶೂರ್ ಸರ್ಕಾರಿ ಮಾನಸಿಕ ಆಸ್ಪತ್ರೆಗೆ ಕರೆದೊಯ್ಯಬೇಕು ಅಥವಾ ಇಲ್ಲ ಎಂಬುದರ ಕುರಿತಾಗಿ ವ್ಯಕ್ತಿಯ ಮಾನಸಿಕ ಆರೋಗ್ಯದ ಕುರಿತಾಗಿ ಕಾನೂನು ಕರೆ ತೆಗೆದುಕೊಳ್ಳುತ್ತದೆ‌.


(ಚಿತ್ರಕೃಪೆ: ಎಡೆಕ್ಸ್ ಲೈವ್)


ಮುರುಗನ್ ಹೇಳುತ್ತಾರೆ,


"ಅವರಿಗೆ ಯಾವ ಸಹಾಯ ಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಅವರು ಎಲ್ಲಿಂದ ಬಂದಿದ್ದಾರೆ ಅವರ್ಯಾರು ಎಂದೇ ಅವರಿಗೆ ನೆನಪಿರುವುದಿಲ್ಲ. ನಾವು ಇಲ್ಲಿಗೆ ಕರೆ ತರುವ ಎಷ್ಟೋ ಜನರು ತಮ್ಮ‌ ಜೀವನದಲ್ಲಿ ಒಂದು ಬಾರಿಯೂ ಸ್ನಾನ ಮಾಡಿರುವುದಿಲ್ಲ ಅಥವ ಹಲ್ಲುಜಿರುವುದಿಲ್ಲ. ನಾವು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಅವರಿಗೆ ಹಲ್ಲುಜುವುದು ಅಥವಾ ಬಟ್ಟೆ ಬದಲಾಯಿಸುವುದು ಹೇಗೆ ಎಂಬುದು ತಿಳಿಯದೇ ಇರುವುದರಿಂದಾಗಿದೆ,” ವರದಿ ಎಡೆಕ್ಸ್ ಲೈವ್.


"ವೈದ್ಯಕೀಯ ಪರೀಕ್ಷೆಗಳ ನಂತರ ಅವರಲ್ಲಿ ಹಲವರಿಗೆ ಕ್ಯಾನ್ಸರ್ ಅಥವಾ ಟಿಬಿ ರೋಗಗಳನ್ನು ಹೊಂದಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ಕೆಲವೊಮ್ಮೆ, ನಾವು ಅವರನ್ನು ನೋಡಿಕೊಳ್ಳುವುದರಿಂದ ನಮಗೆ ಆ ಸೋಂಕುಗಳು ಬರುತ್ತವೆ. ಆದರೆ,‌‌ ನಾವು ಪುಟ್ಟ ಪಾಪುವಿಗೆ ನೀಡುವ ಅದೇ ಪ್ರೀತಿ ಹಾಗೂ ಕಾಳಜಿಯಿಂದಲೇ ಅವರನ್ನು ಗಮನಿಸುತ್ತೇವೆ."


ಸಮಾಜದ ಹಿಂದುಳಿದ ವರ್ಗಗಳಿಗೆ ದಣಿವರಿಯದೆ ಕೆಲಸ ಮಾಡಿದ ಅಂಬೇಡ್ಕರ್ ಮತ್ತು ಮದರ್ ಥೆರೆಸಾ ಅವರ ಜೀವನದಿಂದ ಸ್ಪೂರ್ತಿ ಪಡೆದಿರುವೆ ಎಂದು ಮುರುಗನ್ ಹೇಳುತ್ತಾರೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, kannada.ys@yourstory.com ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.
  • +0
Share on
close
  • +0
Share on
close
Share on
close
Report an issue
Authors

Related Tags

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India