ಭಾರತದಲ್ಲಿ ತಲೆಯೆತ್ತಲಿವೆ ಒರಾಕಲ್ ಸ್ಟಾರ್ಟ್​ಅಪ್ ಇನ್‍ಕ್ಯುಬೇಟರ್‍ಗಳು...

ಟೀಮ್​ ವೈ.ಎಸ್​. ಕನ್ನಡ

ಭಾರತದಲ್ಲಿ ತಲೆಯೆತ್ತಲಿವೆ ಒರಾಕಲ್ ಸ್ಟಾರ್ಟ್​ಅಪ್ ಇನ್‍ಕ್ಯುಬೇಟರ್‍ಗಳು...

Saturday April 09, 2016,

2 min Read

ಐಟಿ ದಿಗ್ಗಜ ಎನಿಸಿಕೊಂಡಿರುವ ಒರಾಕಲ್ ಕಂಪನಿ ಉದ್ಯಮ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಉದಯೋನ್ಮುಖ ಉದ್ಯಮಿಗಳಿಗೆ ಸಲಹೆ ನೀಡುವ ಹಾಗೂ ಹೊಸ ಸಂಸ್ಥೆಗಳು ಅತ್ಯುತ್ತಮ ತಂತ್ರಜ್ಞಾನ ಪ್ರವೇಶಿಸಲು ನೆರವಾಗುವ ನಿಟ್ಟಿನಲ್ಲಿ ಸ್ಟಾರ್ಟ್‍ಅಪ್ ಇನ್‍ಕ್ಯುಬೇಟರ್‍ಗಳನ್ನು ಆರಂಭಿಸುತ್ತಿದೆ. ದೇಶಾದ್ಯಂತ ಒಟ್ಟು 9 ಸ್ಟಾರ್ಟ್‍ಅಪ್ ಇನ್‍ಕ್ಯುಬೇಟರ್‍ಗಳನ್ನು ಸ್ಥಾಪಿಸುವುದಾಗಿ ಒರಾಕಲ್‍ನ ಅಧ್ಯಕ್ಷ ಥಾಮಸ್ ಕುರಿಯನ್ ತಿಳಿಸಿದ್ದಾರೆ. 

 " ಜನರು ಅತ್ಯಂತ ಸುಲಭವಾಗಿ ಕ್ಲೌಡ್‍ಗೆ ಪ್ರವೇಶ ಪಡೆಯುವಂತೆ ಮಾಡುವುದು ನಮ್ಮ ಉದ್ದೇಶ. ಕೇವಲ ದೊಡ್ಡ ಕಂಪನಿಗಳು ಮಾತ್ರವಲ್ಲ ಪ್ರತಿಯೊಬ್ಬರಲ್ಲೂ ಬ್ಯುಸಿನೆಸ್‍ನ ಹೊಸ ಹೊಸ ಪರಿಕಲ್ಪನೆಯಿದೆ. ಅದರಿಂದ ದೇಶದಲ್ಲಿ ಮಹತ್ತರ ಬದಲಾವಣೆ ತರಬಹುದು''
                     - ಥಾಮಸ್ ಕುರಿಯನ್

ಈ ಯೋಜನೆಯ ಪ್ರಮುಖ ಉದ್ದೇಶ ಮಾರ್ಗದರ್ಶನ. ಸಾಹಸೋದ್ಯಮ ಬಂಡವಾಳ ನಿಧಿಗಳನ್ನು ಕಲಿಯಲು ಇನ್‍ಕ್ಯುಬೇಟರ್ ಕಂಪನಿಗಳಿಗೆ ನೆರವಾಗಲಿದೆ. ಯಶಸ್ವಿ ಉದ್ಯಮಗಳ ಮಾಜಿ ಮುಖ್ಯಕಾರ್ಯದರ್ಶಿಗಳು ಮಾರ್ಗದರ್ಶನ ಮಾಡಲಿದ್ದಾರೆ ಅಂತಾ ಮುಂಬೈನಲ್ಲಿ ಥಾಮಸ್ ಕುರಿಯನ್ ತಿಳಿಸಿದ್ದಾರೆ. ಕಂಪನಿ ವಿಶ್ವದಾದ್ಯಂತ ತಂತ್ರಾಂಶ ಪರಿಸರ ವ್ಯವಸ್ಥೆಯಲ್ಲಿ ಕೆಲಸ ಮಾಡಿದ್ದರೂ ಸಹ ಇನ್ಕ್ಯುಬೇಟರ್‍ಗಳಿಗೆ ಮೀಸಲಾಗಿರುವ ಏಕೈಕ ಸಂಸ್ಥೆ ಅಂದ್ರೆ ಒರಾಕಲ್ ಅನ್ನೋದು ಕುರಿಯನ್ ಅವರ ಅಭಿಪ್ರಾಯ. `ಒರಾಕಲ್ ಸ್ಟಾರ್ಟ್‍ಅಪ್ ಕ್ಲೌಡ್ ಎಕ್ಸೆಲರೇಟರ್' ಅನ್ನು ಮೊದಲು ಬೆಂಗಳೂರಲ್ಲಿ ಆರಂಭಿಸಲಾಗುತ್ತದೆ. ಅಮೆರಿಕದಿಂದಾಚೆಗೆ ವಿಶ್ವದಲ್ಲಿ ಅತ್ಯುತ್ತಮ ಬಂಡವಾಳ ಗಳಿಸಿರುವ ಏಕೈಕ ಕಂಪನಿ ಎಂಬ ಹೆಗ್ಗಳಿಕೆಯೂ ಒರಾಕಲ್‍ನದ್ದು ಎನ್ನುತ್ತಾರೆ ಥಾಮಸ್ ಕುರಿಯನ್. ಮುಂದಿನ 12 ತಿಂಗಳುಗಳಲ್ಲಿ ದೇಶಾದ್ಯಂತ ಇರುವ ಎಲ್ಲ ಕೇಂದ್ರಗಳು ಕೂಡ ಇದನ್ನೇ ಅನುಸರಿಸಲಿವೆ.

image


ಆದ್ರೆ ಈ ಯೋಜನೆಗಾಗಿ ಎಷ್ಟು ಹಣ ಹೂಡಿಕೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಥಾಮಸ್ ಕುರಿಯನ್ ನೀಡಿಲ್ಲ. ಇದಕ್ಕಾಗಿ ಒರಾಕಲ್ ಹಲವು ಮಿಲಿಯನ್ ಡಾಲರ್ ವ್ಯಯಿಸುತ್ತಿದೆ ಎಂದಷ್ಟೆ ಹೇಳಿದ್ದಾರೆ. ಒರಾಕಲ್ ಕಂಪನಿಯ ವೈಸ್ ಪ್ರೆಸಿಡೆಂಟ್ ಆಪ್ ಡೆವಲಪ್‍ಮೆಂಟ್ ಸಂಕೇತ್ ಅಟಲ್, ಈ ಯೋಜನೆಯನ್ನು ಮುನ್ನಡೆಸಲಿದ್ದಾರೆ. ಬೆಂಗಳೂರು, ಮುಂಬೈ, ಪುಣೆ, ಚೆನ್ನೈ, ಗುರ್ಗಾಂವ್, ಹೈದ್ರಾಬಾದ್, ತಿರುವನಂತಪುರಂ ಮತ್ತು ವಿಜಯವಾಡದಲ್ಲಿ ಒರಾಕಲ್ ಸ್ಟಾರ್ಟ್‍ಅಪ್ ಇನ್‍ಕ್ಯುಬೇಟರ್‍ಗಳನ್ನು ಆರಂಭಿಸಲಿದೆ.

ಇದನ್ನು ಓದಿ: ಮಹಿಳೆಯರ ಸ್ವಯಂ ಅನುಭೂತಿಯ ಪರಿಕಲ್ಪನೆ : ಇದು ಬ್ಯುಸಿನೆಸ್​​ನಲ್ಲೂ ಅಡಕವಾದ ಚಿಂತನೆ

ದೇಶದ ಉದ್ಯಮ ಪರಿಸರದ ಅಭಿವೃದ್ಧಿ ಮತ್ತು ಸ್ಟಾರ್ಟ್‍ಅಪ್‍ಗಳನ್ನು ಪ್ರೋತ್ಸಾಹಿಸಲು ಸರ್ಕಾರ ಪ್ರಮುಖ ಯೋಜನೆಗಳನ್ನು ಹಮ್ಮಿಕೊಂಡ ಬೆನ್ನಲ್ಲೇ ಒರಾಕಲ್ ಕಂಪನಿ ಈ ಘೋಷಣೆ ಮಾಡಿದೆ. ಎಕ್ಸೆಲರೇಟರ್‍ಗಳು ಆರಂಭಿಕ ಹಂತದ ತಂತ್ರಜ್ಞಾನಕ್ಕೆ ತೆರೆದಿರುತ್ತವೆ. ಅಷ್ಟೇ ಅಲ್ಲ ಬಳಕೆಯ ವೆಚ್ಚವನ್ನೂ ಕಡಿಮೆ ಮಾಡುವಂತಹ ಪರಿಣಾಮಕಾರಿ ಉತ್ಪನ್ನಗಳನ್ನು ಸೃಷ್ಟಿಸುವ ಮತ್ತು ಸೇವೆ ಒದಗಿಸುತ್ತಿರುವ ತಂತ್ರಜ್ಞಾನ ಶಕ್ತ ಉದ್ಯಮಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ ಅಂತಾ ಥಾಮಸ್ ಕುರಿಯನ್ ವಿವರಿಸಿದ್ದಾರೆ. ಈ ಎಕ್ಸಲರೇಟರ್‍ನ ಭಾಗವಾಗಲು ಸ್ಟಾರ್ಟ್‍ಅಪ್‍ಗಳು ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಕಂಪನಿಗಳು 6 ತಿಂಗಳುಗಳ ಕಾಲ ಎಕ್ಸೆಲರೇಟರ್ ಪ್ರೋಗ್ರಾಮ್‍ನಲ್ಲಿ ಪಾಲ್ಗೊಳ್ಳುತ್ತವೆ. ಆಯ್ಕೆಯಾಗಿರುವ ಸ್ಟಾರ್ಟ್‍ಅಪ್‍ಗಳು ಒರಾಕಲ್ ತಂತ್ರಜ್ಞಾನಕ್ಕೆ ಪ್ರವೇಶ ಪಡೆಯಬಹುದು. ಕ್ಲೌಡ್ ಮೂಲಕ ಅಪ್ಲಿಕೇಷನ್ ಹಾಗೂ ಸಾಫ್ಟ್‍ವೇರ್‍ಗಳಿಗೆ ಪ್ರವೇಶ ಪಡೆಯುವ ಅವಕಾಶವಿರುತ್ತದೆ. ಅಷ್ಟೇ ಅಲ್ಲ ವಿನ್ಯಾಸಗಾರರು ಹಾಗೂ ಎಂಜಿನಿಯರ್‍ಗಳ ಜೊತೆಗೂ ಸಂಪರ್ಕ ಸಾಧಿಸಬಹುದು.

ಈಗಾಗ್ಲೇ ಒರಾಕಲ್ ವೆಂಚರ್ ಫಂಡ್ ಒಂದನ್ನು ಮುನ್ನಡೆಸುತ್ತಿದೆ. ಹಾಗಾಗಿ ಸ್ಟಾರ್ಟ್‍ಅಪ್ ಇನ್‍ಕ್ಯುಬೇಟರ್‍ಗಳ ಆರಂಭದ ಹಿಂದೆ ವೆಂಚರ್ ಹೂಡಿಕೆಯ ಉದ್ದೇಶವಿಲ್ಲ ಎಂದು ಥಾಮಸ್ ಕುರಿಯನ್ ಸ್ಪಷ್ಟಪಡಿಸಿದ್ದಾರೆ. 

ಅನುವಾದಕರು: ಭಾರತಿ ಭಟ್​​

ಇದನ್ನು ಓದಿ:

1. ದೇಶಕ್ಕೆ ಮಾದರಿ ಬನ್ನೇರುಘಟ್ಟ ಜೈವಿಕ ಉದ್ಯಾನವನ

2. ವಿಶ್ವದ 6 ಸ್ತ್ರೀಸಮಾನತಾವಾದಿಗಳು...!

3. ವಯಸ್ಸಾದರೂ ಛಲ ಬಿಡದ ಸಾಹಸಿ