ಆವೃತ್ತಿಗಳು
Kannada

ಗೃಹ ಅಲಂಕಾರದ ಪಂಚಶಕ್ತಿಗಳು

ಟೀಮ್​​ ವೈ.ಎಸ್​​. ಕನ್ನಡ

20th Nov 2015
Add to
Shares
2
Comments
Share This
Add to
Shares
2
Comments
Share

“ಯಾರೂ ಕೂಡಾ ಉದ್ಯಮವನ್ನು ಬದುಕುವ ಹಾದಿಯಾಗಿ ಸ್ವೀಕರಿಸುವುದಿಲ್ಲ. ಆದರೆ ಅದೇ ಬದುಕಿಗೆ ದಾರಿಯಾಗುತ್ತದೆ. ಇದು ಕ್ರಿಯೇಟಿವ್ ಯೋಚನೆಗಳನ್ನೂ ಬೆಳೆಸುತ್ತದೆ. ನನ್ನ ಮೊದಲ ಮಳಿಗೆ ನನಗೆ ವ್ಯವಹಾರವನ್ನು ಕಲಿಸಿತು. ವ್ಯವಹಾರ ಎನ್ನುವುದು ಆರ್ಥಿಕ ವಿಜಾನವಲ್ಲ. ಇದು ವ್ಯಾಪಾರ, ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ್ದು,” ಎನ್ನುವುದು ದಿ ಬಾಡಿ ಶಾಪ್​​ನ ಸಂಸ್ಥಾಪಕಿ ಅನಿತಾ ರೋಡಿಕ್ ಅವರ ಅಭಿಪ್ರಾಯ.

image


ಅದು ವಾಣಿಜ್ಯ ಕಚೇರಿಯೇ ಆಗಿರಲಿ, ನಿವಾಸದ ಕ್ಷೇತ್ರವೇ ಆಗಿರಲಿ, ಇಂಟೀರಿಯರ್ ಡಿಸೈನ್ ಮತ್ತು ಗೃಹಾಲಂಕಾರಕ್ಕೆ ಯಾವಾಗಲೂ ಮಾನ್ಯತೆ ಇದ್ದೇ ಇರುತ್ತದೆ. ಬಹುತೇಕ ಮಹಿಳೆಯರಿಗೆ ಮನೆ ಎನ್ನುವುದು ಅವರ ಜೀವನದ ಮುಂದುವರಿದ ಭಾಗ. ದೇಹಸೌಂದರ್ಯದಂತೆ, ಗೃಹ ಅಲಂಕಾರವು ಈಗ ವ್ಯಕ್ತಿಯನ್ನು, ವ್ಯಕ್ತಿತ್ವವನ್ನು ಅಳೆಯುವ ಸಾಧನವಾಗಿದೆ. ಫ್ಯಾಷನ್ ಅಲಂಕಾರಗಳ ಆನ್​ಲೈನ್ ಶಾಪ್​​ಗಳು ಹೊಸ ಪೀಳಿಗೆಯನ್ನು ಗೃಹಾಲಂಕಾರಕ್ಕೆ ಹೆಚ್ಚು ಒತ್ತುಕೊಡುವಂತೆ ಮಾಡಿವೆ.

ಭಾರೀ ಪ್ರಮಾಣದಲ್ಲಿ ಮಹಿಳೆಯರು ಈ ಕ್ಷೇತ್ರದತ್ತ ಆಸಕ್ತರಾಗುತ್ತಿದ್ದಾರೆ. ಮಿಲಿಯನ್ ಡಾಲರ್ ಮಹಿಳಾ ಜಾಗತಿಕ ಆರ್ಥಿಕತೆಗೆ ಸೇರ್ಪಡೆಯಾಗುತ್ತಿದ್ದಾರೆ. ಓಡಾಡುವುದನ್ನು ಹೆಚ್ಚು ಇಷ್ಟ ಪಡದ ಮಹಿಳೆಯರು ಕುಳಿತಲ್ಲಿಯೇ ಎಲ್ಲವನ್ನೂ ಸಾಧಿಸಲಾರಂಭಿಸಿದ್ದಾರೆ.

ಗ್ರೀನ್ ಡ್ರಾಪ್ಸ್ : ಸುಪ್ರಿಯಾ ನಿಕುಂಭ್ ಮತ್ತು ಭೈರವಿ ಶೇವಡೆ

ಸುಪ್ರಿಯಾ ನಿಕುಂಭ್ ಮತ್ತು ಭೈರವಿ ಶೇವಡೆಯವರು ಲಲಿತಕಲೆಯಲ್ಲಿ ಪದವಿ ಪಡೆದಿದ್ದಾರೆ. ಗ್ರೀನ್ವಾಲ್ವ್​ಗಳಲ್ಲಿ ಹೊಸ ಡಿಸೈನ್​​ಗಳನ್ನು ರಚಿಸಿದ್ದಾರೆ. ವರ್ಟಿಕಲ್ ಗಾರ್ಡನ್​ಗಳು ಹೆಚ್ಚಿನ ಆಮ್ಲಜನಕ ಸೃಷ್ಟಿಗೆ ಕಾರಣವಾಗಿ, ವಾತಾವರಣದಲ್ಲಿ ಉಷ್ಣತೆಯನ್ನೂ ಕಡಿಮೆ ಮಾಡುತ್ತದೆ. ಅಲ್ಲದೆ ಸುಂದರವಾಗಿಯೂ ಕಾಣುತ್ತವೆ. 2013ರಲ್ಲಿ ಅವರು ಗ್ರೀನ್ ಡ್ರಾಪ್ಸ್ ಎಂಬ ಸಂಸ್ಥೆ ಸ್ಥಾಪಿಸಿದರು. ಸುಪ್ರಿಯಾರಿಗೆ ತೋಟಗಾರಿಕೆ ಎಂದರೆ ಪ್ರಾಣ. ಅವರು ನೀರಾವರಿ ವ್ಯವಸ್ಥೆಯನ್ನು ನೋಡಿಕೊಂಡರೆ, ಭೈರವಿಯವರು ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಗ್ರೀಲ್​​ವಾಲ್​​ನ ತೋಟಗಾರಿಕೆ ಮತ್ತು ಫ್ಯಾಬ್ರಿಕೇಷನ್ ಮಾಡಿಕೊಡುತ್ತಾರೆ. ಆರಂಭದಲ್ಲಿ ಸಂಬಂಧಿಕರು, ಗೆಳೆಯರಿಗೆ ಇದನ್ನು ಮಾಡಿಕೊಟ್ಟ ಇವರು ಈಗ ಇಂಟರ್ನೆಟ್ ಮಾರ್ಕೆಟಿಂಗ್ ಮೂಲಕ ತಮ್ಮ ಗ್ರಾಹಕರ ಸಂಖ್ಯೆಯನ್ನು ವೃದ್ಧಿಸಿಕೊಂಡಿದ್ದಾರೆ.

ಸೋಡಾ – ಸಾಯಿ ಸಂಗೀತ್ ಪಾಲಿವಾಲ್

ಸಾಯಿ ಸಂಗೀತ ಪಾಲಿವಾಲ್ ಅವರು 2007ರಲ್ಲಿ ಸೋಡಾ ಸ್ಥಾಪಿಸಿದರು. ಈ ಸಂಸ್ಥೆಯು ಮೂಲಕ ಬೋಲ್ಡ್ ಲೈಫ್​​ಸ್ಟೈಲ್​​​​ಗಳನ್ನು ಗೃಹಾಲಂಕಾರಕ್ಕಾಗಿ ಕೊಡುವುದು ಅವರ ಉದ್ದೇಶವಾಗಿತ್ತು. ತಮ್ಮ ಕಲ್ಪನೆಯ ಡಿಸೈನ್ ಸೃಷ್ಟಿಸುವಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಸಾಂಪ್ರದಾಯಿಕ ಮನೆಗಳಿಗೂ ಅವರವರ ಭಾವಕ್ಕೆ ತಕ್ಕಂತೆ ಆಧುನಿಕ ಡಿಸೈನ್ ನೀಡುತ್ತಿದ್ದಾರೆ. ಸೋಡಾದ ಮೂಲಕ ಅವರು ವ್ಯಕ್ತಿಗತ ಮತ್ತು ಗ್ರಾಹಕ ಕೇಂದ್ರಿತ ಡಿಸೈನ್ಗಳನ್ನು ತಯಾರಿಸುತ್ತಿದ್ದಾರೆ. ಕುಷನ್ ಕವರ್​​ಗಳು, ಕೋಸ್ಟರ್​​ಗಳು, ಲ್ಯಾಂಪ್​​ಗಳು, ಗಡಿಯಾರಗಳು ಎಲ್ಲವೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೋಡಾದಲ್ಲಿ ಸೃಷ್ಟಿಯಾಗುತ್ತವೆ.

ಗುಡ್ ಅರ್ಥ್​ : ಅನಿತಾ ಲಾಲ್

ಅನಿತಾ ಲಾಲ್ ಅವರು ಗುಡ್ ಅರ್ಥ್​ನ ಸಂಸ್ಥಾಪಕರು ಮತ್ತು ಕ್ರಿಯೇಟಿವ್ ನಿರ್ದೇಶಕರು. 1996ರಲ್ಲಿ ಸ್ಥಾಪನೆಯಾದ ಗುಡ್ಅರ್ಥ್ ಮುಂಬೈನ ಕೆಂಪ್ಸ್ ಕಾರ್ನರ್ನಲ್ಲಿ ತನ್ನ ಮೊದಲ ಮಳಿಗೆ ಆರಂಭಿಸಿತು. ಭಾರತದ ಸಾಂಪ್ರದಾಯವನ್ನು ಮತ್ತಷ್ಟು ಲಕ್ಸುರಿ ಸ್ಟೈಲಿಶ್ ಐಟಂಗಳ ಮೂಲಕ ಮನೆಯೊಳಗೆ ತರುವುದು ಗುಡ್ ಅರ್ಥ್ ವಿಶೇಷತೆ. ನಿಜವಾದ ಲಕ್ಸುರಿ ಎಂದರೆ ದಿನನಿತ್ಯ ನಮಗೆ ಬೇಕಾದಂತೆ ಬದುಕುವುದು ಎನ್ನುವುದು ಅನಿತಾ ನಂಬಿಕೆ. ಸುಸ್ಥಿರ ಸಂಪ್ರದಾಯ ಮತ್ತು ಪರಿಸರವನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ ಕರಕೌಶಲ್ಯದ ಮೂಲಕ ಭಾರತೀಯ ಪರಂಪರೆಯನ್ನು ಪುನರುತ್ಥಾನ ಮಾಡಲು ಇವರು ಶ್ರಮಿಸುತ್ತಿದ್ದಾರೆ.

ಡಾರ್ಕ್ ರೆಫ್ಲೆಕ್ಷನ್ಸ್ – ಸಿದ್ಧಿ ಶಾ

ಡ್ರೀಂ ಕ್ಯಾಚರ್ಸ್, ಹಿಪ್ಪಿ ಜ್ಯುವೆಲ್ಲರಿ, ಗೃಹಾಲಂಕಾರ, ವಿಂಡ್ ಚಿಮ್ನಿ, ಕೇಶಾಲಂಕಾರ ಸಾಮಗ್ರಿಗಳು ಹೀಗೆ ನಾನಾ ತರಹದ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತದೆ ಡಾರ್ಕ್ ರೆಫ್ಲೆಕ್ಷನ್ಸ್. ಇದನ್ನು ಸ್ಥಾಪಿಸಿದ್ದು ಸಿದ್ಧಿ ಶಾ. ಮಾನವನ ಮೂಲಬೇರುಗಳಾದ ಬುಡಕಟ್ಟು ಶೈಲಿಯ ಆಭರಣಗಳು ಇವರ ಬ್ರ್ಯಾಂಡ್ನ ಟ್ರೇಡ್ಮಾರ್ಕ್. ಅವರ ಧನಾತ್ಮಕತೆಯನ್ನು ತೋರಿಸಲೆಂದೇ ಬುಡಕಟ್ಟು ಶೈಲಿಯ ಆಭರಗಳನ್ನು ಇವರು ಹೆಚ್ಚು ತಯಾರಿಸುತ್ತಿದ್ದಾರೆ. ಖುದ್ದು ಕಲಾವಿದರಾಗಿದ್ದ ಅಮ್ಮನಿಂದ ಸ್ಫೂರ್ತಿ ಪಡೆದ ಅನಿತಾ ಕಲೆ ಮತ್ತು ಕರಕುಶಲ ಕ್ಷೇತ್ರದಲ್ಲಿ ತಮ್ಮ ಉದ್ಯಮ ಆರಂಭಿಸಿದ್ದಾರೆ.

ಆನ್ಲೈನ್ನಲ್ಲಿ ಡ್ರೀಂ ಕ್ಯಾಚರ್ ಒಂದು ಇವರ ಗಮನವನ್ನು ತೀವ್ರವಾಗಿ ಸೆಳೆದಿತ್ತು. ಮನೆಯ ಅಕ್ಕಪಕ್ಕದಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಂಡು ಅವರೂ ಒಂದು ಡ್ರೀಂ ಕ್ಯಾಚರ್ ತಯಾರಿಸಿದರು. ಇಂತಹದ್ದೇ ವಸ್ತುಗಳನ್ನು ಅವರು ಗೆಳೆಯರಿಗೆ ಕೊಡಲು ಆರಂಭಿಸಿದರು. ನೋಡಿದವರು, ತಮಗೂ ತಯಾರಿಸಿ ಕೊಡುವಂತೆ ಅನಿತಾರನ್ನು ಸಂಪರ್ಕಿಸಿದರು. ಹಾಗೆ ಶುರುವಾದ ಹವ್ಯಾಸವೊಂದು ದೊಡ್ಡ ಉದ್ಯಮವಾಗಿ ಇಂದು ಬೆಳೆದು ನಿಂತಿದೆ. ಪುಣೆಯಲ್ಲಿ ಇವರ ಕೇಂದ್ರ ಕಚೇರಿ ಇದೆ.

ಬೀಜ – ಮೇಘನಾ ಅಜಿತ್

ಸುಸ್ಥಿರ ಜೀವನವನ್ನು ಒಗ್ಗೂಡಿಸಿ, ನಿಸರ್ಗ ಸ್ನೇಹಿ ವಸ್ತುಗಳಿಂದ ಉತ್ಪನ್ನಗಳನ್ನು ತಯಾರಿಸುವ ಸಂಸ್ಕೃತಿಯೊಂದನ್ನು ಹುಟ್ಟುಹಾಕಲು ಶುರುವಾಗಿದ್ದೇ ಬೀಜ. ಇದನ್ನು ಸ್ಥಾಪಿಸಿದ್ದು ಮೇಘನಾ ಅಜಿತ್, ಗಾಜಿಯಾಬಾದ್ ನಿವಾಸಿ. ಇಲ್ಲಿನ ಕುಶಲಕರ್ಮಿಗಳು, ಬಿದಿರು , ಬೆತ್ತ ಮತ್ತಿತರ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಪೀಠೋಪಕರಣ, ದೀಪಗಳು, ಕೈಮಗ್ಗದ ಖಾದಿ ಮೊದಲಾದ ವಸ್ತುಗಳನ್ನು ತಯಾರಿಸುತ್ತಾರೆ. ತರಬೇತಿ ಕಾರ್ಯಗಾರದಲ್ಲಿ ಚರ್ಚೆಯಿಂದ ಹೊರಹೊಮ್ಮುವ ಕಾಲ್ಪನಿಕ ಡಿಸೈನ್ಗಳೇ ಇವರ ಟ್ರಂಪ್ ಕಾರ್ಡ್. ಹಲವು ಕಲಾವಿದರು ಸೇರಿಕೊಂಡು ಇಲ್ಲಿ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಪರಿಸರಕ್ಕೆ ಹತ್ತಿರವಾಗಿ ಬದುಕುವ ಇವರು, ಜನರಲ್ಲೂ ಅದೇ ಭಾವನೆಯನ್ನು ಬಿತ್ತಲು ಶ್ರಮಿಸುತ್ತಿದ್ದಾರೆ.

ಕಾರ್ಯಕ್ರಮ, ಮನಸ್ಥಿತಿ, ಪರ್ಸನಾಲಿಟಿಗಳು ಸುಂದರವಾದ ಮನೆಯನ್ನು ಅಲಂಕರಿಸಲು ನೆರವಾಗುತ್ತವೆ. ಕೇವಲ ಕಾರ್ಯಕ್ರಮಗಳಲ್ಲಷ್ಟೇ ಅಲ್ಲ, ಬೇರೆ ಸಮಯದಲ್ಲೂ ಮನೆಯನ್ನು ಅಲಂಕರಿಸುವುದರಿಂದ ಅದು ಅಲ್ಲಿ ವಾಸಿಸುವ ಜನರ ಮನಸ್ಥಿತಿ, ಅಭಿರುಚಿಯನ್ನು ಪ್ರತಿಬಿಂಬಿಸುತ್ತದೆ. ಗೃಹಾಲಂಕಾರಕ್ಕೆ ಹೆಚ್ಚಿನ ಗಮನ, ಹಣ ವ್ಯಯಿಸುತ್ತಿರುವ ಹೊಸ ಪೀಳಿಗೆಯ ಜನರಿಗೆ, ಈ 5 ನವ್ಯೋದ್ಯಮಗಳು ಖಚಿತವಾಗಿಯೂ ನೆರವಿಗೆ ಬರಲಿವೆ.

ಲೇಖಕರು: ದಿವ್ಯಾಚಂದ್ರ

ಅನುವಾದಕರು: ಪ್ರೀತಮ್​​

Add to
Shares
2
Comments
Share This
Add to
Shares
2
Comments
Share
Report an issue
Authors

Related Tags