ಆವೃತ್ತಿಗಳು
Kannada

ಯಶಸ್ವಿ ಉದ್ಯಮಿ ರೋಹಿನಾ ನಾಗ್‍ಪಾಲ್

ಟೀಮ್​​ ವೈ.ಎಸ್​. ಕನ್ನಡ

YourStory Kannada
6th Dec 2015
Add to
Shares
1
Comments
Share This
Add to
Shares
1
Comments
Share

ಪ್ರತಿಯೊಂದು ಸವಾಲು ನಮಗೆ ದೊಡ್ಡದೆನಿಸುತ್ತದೆ. ಆದ್ರೆ ಪ್ರತಿ ಸವಾಲಿಗೂ ಒಂದು ಪರಿಹಾರವಿದ್ದೇ ಇರುತ್ತೆ. ಆಗ ಯಾವುದೇ ಸಮಸ್ಯೆಗಳು ದೊಡ್ಡದೆನಿಸೋಲ್ಲ. ಇದನ್ನ ನಂಬಿದವರು ಎ ಟೈಲರ್ ಮತ್ತು ಎಲಾರೆಂಜ್ ಸಂಸ್ಥೆಯ ಸಂಸ್ಥಾಪಕಿ ರೋಹಿನಾ ನಾಗ್‍ಪಾಲ್. ಇದೇ ನಂಬಿಕೆ ರೋಹಿನಾರನ್ನ ಉದ್ಯಮಿಯಾಗಿಸಿದ್ದು, ಆಕಾಶದೆತ್ತರಕ್ಕೆ ಬೆಳೆಯುವಂತೆ ಮಾಡಿದ್ದು.

ರೋಹಿನಾ ನಾಗ್‍ಪಾಲ್‍ ತಂದೆ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ರು. ಹೀಗಾಗಿ ರೋಹಿನಾಗ್​ಗೆ ದೇಶ ಸುತ್ತಿದ ಅನುಭವಿತ್ತು.ಈ ಅನುಭವಗಳೇ ಅವರ ಜೀವನದಲ್ಲಿ ಒಂದು ರೀತಿಯ ಪಾಠವಾಗಿತ್ತು.

ರೋಹಿನಾ ತಮ್ಮ ಮೊದಲ ಕೆಲಸ ಆರಂಭಿಸಿದ್ದು ಹದಿನೈದನೇ ವಯಸ್ಸಿನಲ್ಲಿ. ಅದು ಬಿರು ಬೇಸಿಗೆಯಲ್ಲಿ ಬೀದಿ ಬೀದಿ ಸುತ್ತಿ ಕ್ರೆಡಿಟ್‍ಕಾರ್ಡ್ ಮಾರಾಟ ಮಾಡೋ ಕೆಲಸ. ಇದು ಎಂಬಿಎ ಪ್ರಾಜೆಕ್ಟ್​​​ನ ಒಂದು ಭಾಗವಾಗಿತ್ತು. 21 ರಿಂದ24 ವಯಸ್ಸಿನವರಿದ್ದ 18 ತಂಡಗಳಲ್ಲಿ ರೋಹಿನಾ ನಾಗ್‍ಪಾಲ್‍ ಅತ್ಯಂತ ಕಿರಿಯ ಉದ್ಯೋಗಿಯಾಗಿದ್ರು.

image


ತರಬೇತಿಯ ಆ ಮೊದಲ ದಿನವನ್ನು ನಾನೆಂದು ಮರೆಯಲು ಸಾಧ್ಯವಿಲ್ಲ ಅಂತಾರೆ ರೋಹಿನಾ. ಅಂದು ನಮ್ಮ ಬಾಸ್ ನನ್ನನ್ನ ಫೀಲ್ಡ್​​​ಗೆ ಕಳುಹಿಸಿದ್ರು. ಅಲ್ಲಿ ಯಾವುದೇ ಸಮಸ್ಯೆ ಬಂದ್ರೂ ನನಗೆ ಕರೆಮಾಡು ಅಂತಾ ಧೈರ್ಯ ತುಂಬಿ ಕಳಿಸಿದನ್ನ ನೆನಪಿಸಿಕೊಳ್ತಾರೆ ರೋಹಿನಾ.

ಆದ್ರೆ ಇಂದಿನಂತೆ ಆ ದಿನಗಳಲ್ಲಿ ಮೊಬೈಲ್‍ ಇರಲಿಲ್ಲ. ಬರೀ ಲ್ಯಾಂಡ್‍ಲೈನ್‍ ಇದ್ದ ಕಾಲವದು. ಹೊರಗಡೆ ಕೆಲಸ ಮುಗಿಸಿಕೊಂಡು ಕಚೇರಿಗೆ ಬಂದ ರೋಹಿನಾ ತಮ್ಮ ಬಾಸ್ ಬಳಿ ಹೋಗಿ ತನ್ನ ಸಮಸ್ಯೆಗಳ ಮಹಾಪೂರವನ್ನೇ ಹೇಳಿಕೊಂಡಳು. ಇದನ್ನೆಲ್ಲಾ ತಾಳ್ಮೆಯಿಂದ ಕೇಳ್ತಿದ್ದ ಬಾಸ್ ನೀನು ಎಲ್ಲವನ್ನೂ ಸರಿಯಾಗಿ ನಿಭಾಯಿಸಿದ್ದೀಯ ಅಂತಾ ತಿಳಿಸಿದ್ರು.

ಅಂದೇ ಕೊನೆ ರೋಹಿನಾ ಮತ್ತೆಂದು ದೂರು ತೆಗೆದುಕೊಂಡು ಬಾಸ್ ಬಳಿ ಹೋಗಲಿಲ್ಲ

ತನ್ನ ಕೆಲಸದಲ್ಲಿ ರೋಹಿನಾಗಿದಿದ್ದು ಕೇವಲ 2500ರೂಪಾಯಿ ಸಂಬಳ. ಜೊತೆಗೆ ಪ್ರೋತ್ಸಾಹ ಧನ ಕೂಡಾ ಸಿಕ್ತು. ಆ ಎರಡು ತಿಂಗಳ ರೋಹಿನಾ 15,500 ರೂಪಾಯಿ ಪಡೆಯೋ ಮೂಲಕ ಉತ್ತಮ ಕಾರ್ಯನಿರ್ವಹಿಸಿದ ಹೆಗ್ಗಳಿಗೆ ಪಾತ್ರರಾಗಿದ್ರು. ಜೊತೆಗೆ 60 ದಿನಗಳ ಆ ಬೇಸಿಗೆ ಕೆಲಸವು ಅಂತ್ಯಗೊಂಡಿತು.

ಈ ಮಧ್ಯೆ ರೋಹಿನಾ ವಿದ್ಯಾಭ್ಯಾಸದ ಕಡೆಗೂ ಹೆಚ್ಚಿನ ಆಸಕ್ತಿ ವಹಿಸಿದ್ರು. ಹೀಗಾಗಿ ಪುಣೆಯಲ್ಲಿಅವರು ಬ್ಯಾಂಕಿಂಗ್ ಮತ್ತು ಫೈನಾನ್ಸ್​​​ನಲ್ಲಿ ಪದವಿ ಪಡೆದ್ರು. ಇದ್ರ ಜೊತೆಗೆ ಅಹಮದಾಬಾದ್‍ನ ನ್ಯಾಷನಲ್‍ ಡಿಸೈನ್‍ ಆಫ್‍ ಇನ್ಸ್​​​ಟಿಟ್ಯೂಟ್‍ನಲ್ಲಿ ಇಂಟೀರಿಯರ್‍ ಡಿಸೈನ್, ಲೈಟಿಂಗ್‍ಡಿಸೈನ್, ರಿಟೈಲ್​​ ಡಿಸೈನ್ ಹೀಗೆ ತಮ್ಮ ವೃತ್ತಿಗೆ ಅನುಕೂಲವಾಗುವಂತೆ ಹಲವಾರು ಕೋರ್ಸ್‍ಗಳನ್ನ ರೋಹಿನಾ ಮಾಡಿಕೊಂಡ್ರು.

2005ರಲ್ಲಿ ರೋಹಿನಾ ಕನಸಿನ ಕೂಸಾಗಿದ್ದ `ಇಂಟರ್ನೋ ಮೋಡಾ' ಎಂಬ ಇಂಟೀರಿಯರ್‍ ಡಿಸೈನರ್ ಸಂಸ್ಥೆಯೊಂದನ್ನ ಸ್ಥಾಪಿಸಿದ್ರು. ನಂತರ 2008ರಲ್ಲಿ ಪುಣೆಯ ಹೊರವಲಯದ ಲಾನೆಯಲ್ಲಿ ಸಾವಿರ ಚದರಡಿಯ ಅಂಗಡಿಯೊಂದನ್ನು ಸ್ಥಾಪಿಸಿದ್ರು. ಈಗದು ಪುಣೆಯ ಪ್ರತಿಷ್ಠಿತ ಪ್ರದೇಶದಲ್ಲಿ 5 ಸಾವಿರ ಸ್ಕೈಯರ್ ಫೀಟ್‍ನಲ್ಲಿ ಬೊಟಿಕ್‍ ಆಗಿ ರೂಪಗೊಂಡಿದೆ.

ಸದಾ ಕ್ರಿಯಾಶೀಲರಾಗಿರುತ್ತಿದ್ದ ರೋಹಿನಾಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಇದಕ್ಕೆ ಉದಾಹರಣೆಯಂದ್ರೆ, ದಕ್ಷಿಣ ಚೀನಾ ಸಮುದ್ರದಲ್ಲಿ ಸುಂದರ ಸೂರ್ಯೋದಯದ ಚಿತ್ರಣದ ವಿನ್ಯಾಸ ರೋಹಿನಾ ಸೃಜನಶೀಲತೆಗೆ ಹಿಡಿದ ಕನ್ನಡಿಯಾಗಿತ್ತು. ಇಂತಹ ಹಲವಾರುಇಂಟೀರಿಯರ್ ವಿನ್ಯಾಸಗಳು ರೋಹಿನಾಗೆ ಜನಪ್ರೀಯತೆ ತಂದುಕೊಟ್ಟವು.

ಇಂಟಿರಿಯರ್‍ ಡಿಸೈನರ್‍ ರೋಹಿನಾ ತಾಯಿಯಾದ್ರು. ನಂತರ ತಮ್ಮ ಮಗುವಿನ ಕೋಣೆಯನ್ನ ವಿನ್ಯಾಸ ಮಾಡಲು ಯೋಚಿಸಿದ ರೋಹಿನಾಗೆ ಮಾರುಕಟ್ಟೆಯಲ್ಲಿ ಮಕ್ಕಳ ಕೋಣೆ ವಿನ್ಯಾಸಕ್ಕೆ ಯಾವುದೇ ವಸ್ತುಗಳು ಸಿಗದಿದ್ದಾಗ ಕೊಂಚ ಬೇಸರಗೊಂಡ್ರು. ಆಗ ರೋಹಿನಾ ತಲೆಗೆ ಹೊಳೆದಿದ್ದು ಮಕ್ಕಳಿಗಾಗಿಯೇ ಉತ್ಪನ್ನಗಳನ್ನ ಸಿದ್ಧಪಡಿಸ ಬೇಕೆಂಬ ಯೋಚನೆ. ಯಾರೊಬ್ಬರು ಕೂಡಾ ಮಕ್ಕಳಿಗಾಗಿಯೇ ಉತ್ಪನ್ನಗಳನ್ನು ತಯಾರಿಸೋಯಾವುದೇ ಶಾಪ್‍ಗಳನ್ನ ಮಾಡಿರಲಿಲ್ಲ. ಹೀಗಾಗಿ ಮುಂದೊಂದು ದಿನ ಮಕ್ಕಳ ವಸ್ತುಗಳಿಗಾಗೇ ಒಂದು ಶಾಪ್‍ ತೆರೆಯಬೇಕೆಂದಾಗ ಹುಟ್ಟಿಕೊಂಡಿದ್ದೇ `ಎಲ್‍ಆರೆಂಜ್' ಸಂಸ್ಥೆ.

ಈ ಎಲ್.ಆರೆಂಜ್ ಸಂಸ್ಥೆಯಲ್ಲಿ ಮಕ್ಕಳಿಗಾಗಿ ಮೆತ್ತನೆ ಹಾಸಿಗೆ, ಕುಷನ್ಸ್, ರಗ್ಗುಗಳು, ಮಕ್ಕಳಿಗೆ ಬೇಕಾದಎಲ್ಲಾ ಪ್ರಾಡಕ್ಟ್‍ಗಳಜೊತೆಗೆ ಮಕ್ಕಳ ಕೊಠಡಿಗಳನ್ನು ವಿನ್ಯಾಸ ಮಾಡುವಎಲ್ಲಾ ವಸ್ತುಗಳು ಈ ಎಲ್.ಆರೆಂಜ್‍ಲ್ಲೇ ಸಿಗಲಾರಂಭಿಸಿದವು.

ಇಷ್ಟೆಲ್ಲಾ ಸಾಧಿಸಿದ ರೋಹಿನಾ ಜೀವನಒಂದುರೀತಿಯ ಸವಾಲಿನದ್ದಾಗಿತ್ತು. ಜೀವನದಲ್ಲಿ ಏರಿಳಿತಗಳು ಮಾಮೂಲಾಗಿತ್ತು. ಸಮಾಜದಲ್ಲಿಒಂದು ಬ್ರಾಂಡ್ ಬಿಲ್ಡ್ ಮಾಡ್ಬೇಕಾದ್ರೆ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿತ್ತು. ದೂರದೃಷ್ಟಿ, ಜೊತೆಗೆ ನಮ್ಮಯೋಜನೆಗಳು ಓರ್ವ ಯಶಸ್ವಿ ಉದ್ಯಮಿಯಾಗಲು ಅಷ್ಟೇ ಮಹತ್ವದ್ದಾಗಿರುತ್ತವೆಅಂತಾರೆರೋಹಿನಾ..

ಎಲ್‍ಆರೆಂಜ್ ಮೊದಲ ಮಕ್ಕಳ ಬ್ರಾಂಡ್‍ಗಳ ಸಂಸ್ಥೆಯಾಗಿದೆ. ಹೀಗಾಗೆ ಈ ಸಂಸ್ಥೆ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಸಣ್ಣಉದ್ದಿಮೆದಾರಿಗೆ ಹೊಸ ಬ್ರಾಂಡ್ ಪರಿಚಯಿಸುವಾಗಎಲ್ಲಾ ಮಾಹಿತಿಯನ್ನ ನೀಡಬೇಕಾಯಿತು.

ರೋಹಿನಾ ಫ್ಯೂಚರ್ ಫ್ಲಾನ್

ಶಿಸ್ತು, ಸಮಯ ಪಾಲನೆ, ಹಾರ್ಡ್ ವರ್ಕ್, ಜವಾಬ್ದಾರಿಗಳನ್ನ ಸಮತೋಲನವಾಗಿ ನಿರ್ವಹಿಸುವ ಕಲೆ, ಉತ್ಪನ್ನಗಳಲ್ಲಿ ವಿಭಿನ್ನತೆ, ಮಾರುಕಟ್ಟಿ ಮತ್ತು ವ್ಯಾಪಾರತಂತ್ರ ಈ ಬಗ್ಗೆ ಸರಿಯಾಗಿ ಅರಿತಿದ್ದಲ್ಲಿ ಉದ್ಯಮದಲ್ಲಿ ಒಳ್ಳೆಯ ಯಶಸ್ಸು ಕಾಣ್ಬಹುದು ಅಂತಾರೆ ರೋಹಿನಾ ನಾಗ್‍ಪಾಲ್.

ಮುಂಬೈ ಮತ್ತು ಪುಣೆಯಲ್ಲಿರುವ ಎಲ್‍ ಆರೆಂಜ್ ಸ್ಟೋರ್‍ಗಳನ್ನ ರೋಹಿನಾ ದೆಹಲಿಯಲ್ಲೂ ತೆರೆಯಲು ನಿರ್ಧರಿಸಿದ್ದಾರೆ. ಪ್ರತಿಯೊಂದು ಮಗುವಿನ ಕೋಣೆಯೂ ನೈಜತೆಗೆ ಹತ್ತಿರವಾಗಿರಬೇಕುಅದಕ್ಕೆ ಬೇಕಾದ ಪ್ರಾಡಕ್ಟ್ಸ್​​ಗ​ಳು ಎಲ್‍ಆರೆಂಜ್ ಸಂಸ್ಥೆ ಒದಗಿಸಲಿದೆ.ಇನ್ನು ನಾಲ್ಕೈದು ವರ್ಷದಲ್ಲಿ ದೇಶಾದ್ಯಂತ ಬರೋಬ್ಬರಿ 100 ಎಲ್.ಆರೆಂಜ್ ಶಾಪ್‍ಗಳನ್ನ ತೆಗೆಯಬೇಕೆಂಬುದು ರೋಹಿನಾ ಮಹಾದಾಸೆ. ವಿದೇಶಗಳಲ್ಲೂ ತನ್ನಎಲ್‍ಆರೆಂಜ್ ಶಾಪ್‍ ತೆರೆಯಲು ರೋಹಿನಾ ನಿರ್ಧರಿಸಿದ್ದಾರೆ.

`ಮಹಿಳೆಯರಿಗೆ ರೋಹಿನಾ ಮಂತ್ರ'

ಯಾವುದೇ ಕೆಲಸದಲ್ಲೂ ಕೀಳರಿಮೆ ಬೇಡ, ಕೆಲಸ ಮತ್ತುಕುಟುಂಬ ಎರಡಕ್ಕೂ ಸರಿಯಾದ ಪ್ರಾಧಾನ್ಯತೆ ನೀಡಬೇಕು. ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ. ಉದ್ಯಮ ಆರಂಭಿಸಿದಾಗ ಅದ್ರಲ್ಲಿ ವಿಭಿನ್ನತೆ ಇರಲಿ. ಪ್ರತಿದಿನಾ ನಿಮ್ಮಉದ್ಯಮದ ಬಗ್ಗೆ ನಿಮಗೆ ಯೋಚನೆ ಇರಲಿ. ಅಲ್ಲದೆ ಕೆಲಸಕ್ಕೆ ಬಾರದ ಯೋಚನೆ ಮಾಡ್ತಾ ಸಮಯ ವ್ಯರ್ಥ ಮಾಡದಿರಿ ಅಂತಾ ಯಶಸ್ವಿ ಉದ್ಯಮಿ ರೋಹಿನಾ ನಾಗ್‍ಪಾಲ್ ಮಹಿಳೆಯರಿಗೆ ಸಲಹೆ ನೀಡಿದ್ದಾರೆ.

ಲೇಖಕರು: ತಾನ್ವಿ ದುಬೇ

ಅನುವಾದಕರು: ಟಿಎಎ

Add to
Shares
1
Comments
Share This
Add to
Shares
1
Comments
Share
Report an issue
Authors

Related Tags