ಆವೃತ್ತಿಗಳು
Kannada

ಗಾನ ಗಾರುಡಿಗನ ಕಲಾ ತಪಸ್ಸು... ಸ್ವರ ಮಾಂತ್ರಿಕರಿಗೆ ದಾರಿದೀಪ `ಇಂಡಿಯನ್ ರಾಗಾ'

ಟೀಮ್​ ವೈ.ಎಸ್​​.

15th Oct 2015
Add to
Shares
3
Comments
Share This
Add to
Shares
3
Comments
Share

ಇವರೊಬ್ಬ ಗಾನ ಗಾರುಡಿಗ. ತಂತ್ರಜ್ಞ..ಜೊತೆಗೆ ಆಡಳಿತ ನಿರ್ವಹಣೆಯಲ್ಲೂ ನಿಪುಣ. ಬಹುಮುಖ ಪ್ರತಿಭೆ ಶ್ರೀರಾಮ್ ಎಮಾನಿ ಅವರ ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆಯೇ. ಇಂಡಿಯನ್ ರಾಗಾ ಎಂಬ ಸಂಸ್ಥೆಯ ಮೂಲಕ ತಮ್ಮ ಸಂಗೀತ ಪಯಣವನ್ನು ಆರಂಭಿಸಿರುವ ಶ್ರೀರಾಮ್, ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಐಐಟಿ ಬಾಂಬೆಯಲ್ಲಿ ಓದಿರುವ ಶ್ರೀರಾಮ್ ಸದ್ಯ ಎಂಬಿಎ ಮಾಡ್ತಿದ್ದಾರೆ. ಪ್ರತಿಭೆಯ ಜೊತೆಗೆ ಅವಕಾಶಗಳನ್ನು ಬೆಸೆಯುತ್ತ ಯಶಸ್ವಿ ಕಲಾವಿದ ಹಾಗೂ ಉದ್ಯಮಿ ಎನಿಸಿಕೊಂಡಿದ್ದಾರೆ. ಇಂಡಿಯನ್ ರಾಗಾ ಮೂಲಕ ನಾದಲೋಕಕ್ಕೆ ಹೊಸದೊಂದು ಕೊಡುಗೆ ಕೊಡುವ ಕನಸು ಅವರದ್ದು.

image


ಸ್ವರ ಸಾಧಕನ ಗುರಿ ಮತ್ತು ಕನಸು..

ಶ್ರೀರಾಮ್ ಎಮಾನಿ ಬೆಳೆದಿದ್ದೆಲ್ಲ ಮುಂಬೈನಲ್ಲಿ. ಮೊದಲಿನಿಂದ್ಲೂ ಸಂಗೀತ ಅಂದ್ರೆ ಅವರಿಗೆ ಅಪಾರ ಆಸಕ್ತಿ. ಓದಿನ ಜೊತೆಜೊತೆಗೆ ಸಂಗೀತದಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ಸುಮಾರು 12 ವರ್ಷಗಳ ಕಾಲ ಶ್ರೀರಾಮ್ ಕರ್ನಾಟಿಕ್ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. ಸದ್ಯ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಬಿಟ್ರೆ ಎಂಜಿನಿಯರಿಂಗ್ ಮಾಡುವವರೇ ಹೆಚ್ಚು. ಕಲೆಯ ಬಗ್ಗೆ ಆಸಕ್ತಿ ತೋರುವವರ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಕಲಾ ಶ್ರೀಮಂತಿಕೆಗೆ ಹೆಸರಾದ ಭಾರತದಲ್ಲಿ ಕಲೆಯನ್ನೇ ಶಿಕ್ಷಣವನ್ನಾಗಿ ಸ್ವೀಕರಿಸಿ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುವವರಿಗೆ ವಿಪುಲ ಅವಕಾಶಗಳಿವೆ. ಶ್ರೀರಾಮ್ ಎಮಾನಿ ಅವರ ಇಂಡಿಯನ್ ರಾಗಾ ಕೂಡ ಕಲಾವಿದರನ್ನು ಅವಕಾಶದ ಜೊತೆಗೆ ಜೋಡಿಸುವ ಕೆಲಸ ಮಾಡುತ್ತಿದೆ.

ಸಾಲು ಸಾಲು ಸವಾಲುಗಳು..

ಶ್ರೀರಾಮ್ ಎಮಾನಿ ಅವರಿಗೆ ಪ್ರತಿಭೆಗಳ ಹುಡುಕಾಟ ನಿಜಕ್ಕೂ ಸವಾಲಿನ ಕೆಲಸವೇ ಆಗಿರಲಿಲ್ಲ. ಪ್ರತಿಭಾವಂತರಿಗೆ ಪ್ರೋತ್ಸಾಹದ ಜೊತೆಗೆ ಉತ್ತಮ ಅವಕಾಶ ಕಲ್ಪಿಸುವುದೇ ಚಾಲೆಂಜ್ ಆಗಿತ್ತು. ಸಂಗೀತಾರರು ಮತ್ತು ಗಾನಗೋಷ್ಠಿಗಳ ನಿರ್ವಾಹಕರು ಈ ನಿಟ್ಟಿನಲ್ಲಿ ಶ್ರೀರಾಮ್ ಅವರಿಗೆ ನೆರವಾಗಿದ್ದಾರೆ. ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಕೊಡುಗೆ ಅಪಾರ ಎನ್ನುತ್ತಾರೆ ಶ್ರೀರಾಮ್ ಎಮಾನಿ.

ಪೈಪೋಟಿಯ ಲಾಭ..!

ಒಳ್ಳೆಯ ಪ್ರತಿಫಲ ಸಿಗುವಂತಹ ಅವಕಾಶಗಳಿರುವುದು ಪಶ್ಚಿಮ ರಾಷ್ಟ್ರಗಳಲ್ಲಿ. ಹಾಗಾಗಿ ಜಾಗತಿಕ ಮಟ್ಟದ ಮಾರುಕಟ್ಟೆಯನ್ನೇ ಇಂಡಿಯನ್ ರಾಗಾ ಟಾರ್ಗೆಟ್ ಮಾಡಿದೆ. ವಿವಿಧ ರಾಷ್ಟ್ರಗಳ ಮಧ್ಯೆ ಸಾಂಸ್ಕøತಿಕ ಸಹಯೋಗ ಕೂಡ ಉತ್ತಮವಾಗಿರುವುದರಿಂದ ಕಲಾವಿದರನ್ನು ಅಂತರಾಷ್ಟ್ರೀಯ ಮಟ್ಟದ ಅವಕಾಶಗಳೊಂದಿಗೆ ಬೆಸೆಯುತ್ತಿದೆ. ಪ್ರತಿಭೆಗಳಿಗೆ ಇಂಡಿಯನ್ ರಾಗಾ ವೆಬ್‍ಸೈಟ್‍ನಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗಾಗಿ ಪ್ರೇಕ್ಷಕರು ಕೂಡ ಇಂಡಿಯನ್ ರಾಗಾ ಬಗ್ಗೆ ಅಪಾರ ಅಭಿಮಾನ ವ್ಯಕ್ತಪಡಿಸ್ತಾರೆ. ಸಂಗೀತ ಕ್ಷೇತ್ರದಲ್ಲಿ ಅವಕಾಶ ಗಿಟ್ಟಿಸಲು ಇಂಡಿಯನ್ ರಾಗಾದ ವಿದ್ವತ್ ಪದವಿ ಬೇಕು. ಅತಿ ಉತ್ತಮ ಸಂಗೀತಗಾರರನ್ನೇ ಪ್ರೋತ್ಸಾಹಿಸಿ ಸಂಸ್ಥೆ ಬೆಳೆಸುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಸಂಗೀತಗಾರರು ಮತ್ತು ಭಾರತೀಯ ಶಾಸ್ತ್ರೀಯ ಸಂಗೀತ ವಿಧ್ವಾಂಸರು ಅವರನ್ನು ಆಯ್ಕೆ ಮಾಡುತ್ತಾರೆ. ಅವಕಾಶಗಳು ಹೆಚ್ಚಿದಂತೆಲ್ಲ ಅದಕ್ಕೆ ಸೂಕ್ತ ವೇದಿಕೆಯನ್ನು ಇಂಡಿಯನ್ ರಾಗಾ ಕಲ್ಪಿಸಿಕೊಡುತ್ತದೆ. ಹಾಗೆಯೇ ಅತ್ಯುತ್ತಮ ಸಂಗೀತಗಾರರ ತಂಡವೇ ಸಿದ್ಧವಾಗುತ್ತದೆ. ಗುಣಮಟ್ಟ ಹಾಗೂ ಪ್ರಮಾಣ ಎರಡಲ್ಲೂ ಪ್ರೇಕ್ಷಕರಿಗೆ ಮೋಸವಿಲ್ಲ. ಇಂಪಾದ ತಂಪಾದ ಸಂಗೀತ ಕೇಳುತ್ತ ಅವರು ಕರ್ಣಾನಂದ ಅನುಭವಿಸಬಹುದು.

ಆದಾಯದ ಲೆಕ್ಕಾಚಾರ..

ಸಂಗೀತಗಾರರು ಇಂಡಿಯನ್ ರಾಗಾಕ್ಕೆ ವಾರ್ಷಿಕ ಚಂದಾದಾರರಾಗಬಹುದು. ಗಾನಗೋಷ್ಟಿಗಳ ಆಯೋಜಕರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಕಮಿಷನ್ ಆಧಾರದ ಮೇಲೂ ಪ್ರೋತ್ಸಾಹ ಧನ ನೀಡಲಾಗುತ್ತದೆ.

ಸಂಗೀತವೇ ಸ್ಪೂರ್ತಿ..

ಶ್ರೀರಾಮ್ ಅವರಿಗೆ ಇಷ್ಟೆಲ್ಲ ಸಾಧನೆ ಮಾಡಲು ಸಂಗೀತವೇ ಪ್ರೇರಣೆ. ನಮ್ಮ ಬದುಕನ್ನು ರೂಪಿಸುವುದೇ ಸಂಗೀತ, ಸಾಧನೆಗೆ ಸಂಗೀತವೇ ದಾರಿ ದೀಪ ಎನ್ನುತ್ತಾರೆ ಅವರು. ಭಾರತದಲ್ಲಿ ಅದೆಷ್ಟೋ ಮಕ್ಕಳು ಗಾಯನ, ನೃತ್ಯ ತರಬೇತಿ ಪಡೆದಿರುತ್ತಾರೆ. ಇದೇ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲವಿದ್ದರೂ ನಾನಾ ಕಾರಣಗಳಿಂದ ಸಾಧ್ಯವಾಗೋದಿಲ್ಲ. ತಮಗೆ ತಂತ್ರಜ್ಞಾನ ವಿಷಯದಲ್ಲಿ ಅತ್ಯಂತ ಆಸಕ್ತಿಯಿದ್ದರೂ ಸಂಗೀತವನ್ನು ಬಿಟ್ಟಿಲ್ಲ ಅನ್ನೋದು ಶ್ರೀರಾಮ್ ಅವರ ಹೆಮ್ಮೆಯ ನುಡಿ.

ಇಂಡಿಯನ್ ರಾಗಾ ತಂಡ..

ವಿಶ್ವದ ಜನಪ್ರಿಯ ವಿಶ್ವವಿದ್ಯಾನಿಲಯಗಳು ಹಾಗೂ ಸಂಸ್ಥೆಗಳ ಕಲೆ, ತಂತ್ರಜ್ಞಾನ ಹಾಗೂ ಆಡಳಿತ ವಲಯದಿಂದ ಇಂಡಿಯನ್ ರಾಗಾ ತಂಡ ಅನುಭವವೆಂಬ ಆಸ್ತಿಯನ್ನು ಸಂಗ್ರಹಿಸುತ್ತಿದೆ. ಇಂಡಿಯನ್ ರಾಗಾದ ಸಿಬ್ಬಂದಿಯೆಲ್ಲ ಪ್ರತಿಭಾನ್ವಿತರೇ. ಎಂಐಟಿ, ಐಐಟಿಗಳಲ್ಲಿ ಪದವಿ ಪಡೆದವರು. ಸಂಗೀತ ಕ್ಷೇತ್ರದಲ್ಲಿ ಹೊಸ ಬಗೆಯ ಉದ್ಯಮದ ಆವಿಷ್ಕಾರಕ್ಕೆ ಶ್ರೀರಾಮ್ ಅವರಿಗೆ ಪ್ರೇರಣೆಯಾಗಿದ್ದು ಕೂಡ ಎಂಐಟಿ. ಎಂಐಟಿ ಐಡಿಯಾಸ್ ಗ್ಲೋಬಲ್ ಚಾಲೆಂಜ್, ಯುಎಸ್ ಕ್ರಿಯೇಟಿವ್ ಬ್ಯುಸಿನೆಸ್ ಕಪ್ ಹೀಗೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಶ್ರೀರಾಮ್ ಅವರಿಗೆ ಕೈಗಾರಿಕೋದ್ಯಮಿಗಳ ಒಡನಾಟದಿಂದಾದ ಅನುಭವ ನಿಜಕ್ಕೂ ಸಹಕಾರಿಯಾಗಿತ್ತು.

ಇಂಡಿಯನ್ ರಾಗಾ ಭವಿಷ್ಯ..

ಯುವ ಜನತೆಯನ್ನು ಆಕರ್ಷಿಸುವಂತಹ ಹೊಸ ಬಗೆಯ ಮೂರು ಮ್ಯೂಸಿಕ್ ವಿಡಿಯೋಗಳನ್ನು ಇಂಡಿಯನ್ ರಾಗಾ ಹೊರತಂದಿದೆ. ಸಂಸ್ಥೆಯ ಮೊದಲ ವಿದ್ವತ್ ತಂಡಕ್ಕೆ ಅದು ಉತ್ತಮ ಪ್ರಾಜೆಕ್ಟ್ ಎನಿಸಿದೆ. ಇಂಡಿಯನ್ ರಾಗಾದ ಯೂಟ್ಯೂಬ್ ಚಾನಲ್‍ನಲ್ಲೂ ಅವು ಲಭ್ಯವಿವೆ. ವೆಬ್‍ಸೈಟನ್ನು ಪುನರ್ ವಿನ್ಯಾಸ ಮಾಡಲಾಗುತ್ತಿದ್ದು ಅನುಭವಿ ಗಾಯಕರ ಅನುಭವಗಳನ್ನು ಕೂಡ ಸಂಸ್ಥೆ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತಿದೆ. ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಆಶಾವಾದ ವ್ಯಕ್ತಪಡಿಸಿರೋ ಶ್ರೀರಾಮ್ ಭಾರತ ಹಾಗೂ ಅಮೆರಿಕದಲ್ಲಿ ವಿಶ್ವಸನೀಯ ಸಲಹೆಗಾರರು ಮತ್ತು ಹೂಡಿಕೆದಾರರ ಹುಡುಕಾಟದಲ್ಲಿದ್ದಾರೆ.

Add to
Shares
3
Comments
Share This
Add to
Shares
3
Comments
Share
Report an issue
Authors

Related Tags