ಆವೃತ್ತಿಗಳು
Kannada

ಮನೆ ಕೆಲಸಗಳ ತಲೆನೋವಿಗೆ "ಐಡೋ" ರೋಬೋದ ಪರಿಹಾರ..!

ಟೀಮ್​ ವೈ.ಎಸ್. ಕನ್ನಡ

23rd Sep 2016
Add to
Shares
7
Comments
Share This
Add to
Shares
7
Comments
Share

ಇತ್ತೀಚಿನ ಬ್ಯುಸಿ ಲೈಫ್​ನಲ್ಲಿ ಮನೆ ಕೆಲಸವೇ ದೊಡ್ಡ ತಲೆನೋವು. ಕೆಲಸಕ್ಕೆ ಹೋಗುವ ಮನೆಗಳಲ್ಲಂತೂ ಮನೆಯಲ್ಲಿನ ಕೆಲವು ಕೆಲಸಗಳು ಜಗಳಕ್ಕೂ ನಾಂದಿ ಹಾಡಿವೆ. ಕೆಲಸಕ್ಕೆ ಜನ ಇಟ್ಟುಕೊಳ್ಳೋಣ ಅಂದ್ರೆ, ಅದಕ್ಕೂ ಸಮಸ್ಯೆ. ಆದ್ರೆ ಕಣ್ಣಿಗೆ ಕಾಣಿಸುವ ಇಂತಹ ಸಮಸ್ಯೆಗಳಿಗೆ ಪರಿಹಾರ ತಂತ್ರಜ್ಞಾನದಲ್ಲಿದೆ. ನಿಮ್ಮೆಲ್ಲಾ ಅಗತ್ಯತೆಗಳನ್ನು ಕಮಾಂಡ್​ಗಳಲ್ಲೇ ಪೂರೈಸುವನ ರೋಬೋ ಒಂದು ರೆಡಿಯಾಗಿದೆ..!

image


ಮನೆ ಕೆಲಸ, ಮನರಂಜನೆ, ಭದ್ರತೆ ಮತ್ತಿತರರ ವಿಷಯಗಳಿಗೆ ಸಂಬಂಧಿಸಿದಂತೆ ನೆರವು ನೀಡಲು ರೋಬೊ ಬಂದಿದೆ. ಅತ್ಯಾಧುನಿಕ ಮತ್ತು ಸಂವಹನ ನಡೆಸುವ ಸಾಮರ್ಥ್ಯ ಹೊಂದಿರುವ ಐಡೊ ರೋಬೊ ಬಳಕೆಗೆ ಬಂದಿದ್ದು, ಹಲವು ವೈಯಕ್ತಿಕ ಮನೆಗೆಲsಗಳನ್ನು ಮಾಡಿಕೊಡುವ ಸಾಮರ್ಥ್ಯವನ್ನು ಈ ಐಡೋ ರೋಬೊ ಹೊಂದಿದೆ.

ಇದನ್ನು ಓದಿ: ಪೂಜೆ ಮಾಡೋದು ಮಾತ್ರ ನಿಮ್ಮ ಕೆಲಸ- ವಸ್ತು ತಂದುಕೊಡುವುದು ನಮ್ಮ ಕೆಲಸ..!

ಐಡೊ ರೋಬೊ ಗೃಹ ಬಳಕೆಗೆ ಸೀಮಿತವಾದ ರೋಬೊ ಆಗಿದ್ದು, ಮನರಂಜನಾ ವ್ಯವಸ್ಥೆಯಾಗಿ, ಸ್ಮಾರ್ಟ್ ಹೋಂ ನಿಯಂತ್ರಕವಾಗಿ, ಭದ್ರತಾ ಪಡೆಯಾಗಿ ಕೆಲಸ ಮಾಡುತ್ತದೆ. ಅಲ್ಲದೆ ಅಡುಗೆ ಮನೆಯಲ್ಲಿ ಸಹಾಯ ಮಾಡುತ್ತದೆ. ಒಟ್ಟಿನಲ್ಲಿ ಈವರೆಗೆ ಬಳಕೆಗೆ ಬಂದಿರುವ ರೋಬೊಗಳಲ್ಲೇ ಐಡೊ ರೋಬೊ ಅತ್ಯಂತ ಆಪ್ತವಾದ ಸಹಾಯಕ ಎಂಬ ಹಿರಿಮೆಗೆ ಪಾತ್ರವಾಗಿದೆ.

image


ಇದು ಸ್ಮಾರ್ಟ್​ಯುಗ. ಸದ್ಯ ಸ್ಮಾರ್ಟ್ ಉತ್ಮನ್ನಗಳು ಹೆಚ್ಚಾಗಿ ಮಾರಾಟವಾಗುತ್ತವೆ. ಹಾಗಾಗಿ ಐಡೊ ರೋಬೋ ಇದನ್ನೆ ಟಾರ್ಗೆಟ್ ಮಾಡಿದೆ. ವಿಶ್ವದ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ರೋಬೊಗಳಿಗೆ ಬೇಡಿಕೆಯಂತೂ ಸದ್ಯ ಹೆಚ್ಚಾಗಿದೆ. ಈಗ ಈ ಪಟ್ಟಿಗೆ ಐಡೊ ರೋಬೊ ಹೊಸ ಸೇರ್ಪಡೆಯಾಗಿದೆ. ಕಡಿಮೆ ದರದ, ಅತ್ಯಾಧುನಿಕ ಅದರಲ್ಲೂ ಮನೆ ಕೆಲಸಕ್ಕೆ ನೆರವಾಗುವ ಕಾರಣಕ್ಕೆ ಬೇಡಿಕೆ ಇನ್ನಷ್ಟು ಹೆಚ್ಚಿದೆ. ಸದ್ಯ ಇರುವ ರೋಬೊಗಳಲ್ಲಿ ಅತ್ಯಂತ ಸಮರ್ಪಕವಾಗಿ ಕಾರ್ಯನಿರ್ವಹಿಸುವ ರೋಬೊ ಇದಾಗಿದೆ.

ಹಲವು ತಂತ್ರಜ್ಞಾನಕ್ಕೆ ಸಂಬಂಧಿಸಿದ ನಿಯತಕಾಲಿಕೆಗಳು, ಐಡೊ ರೋಬೊ ವರ್ಷದ ಬೆಸ್ಟ್ ರೋಬೊ ಎಂದು ಬಣ್ಣಿಸಿವೆ. ಹಾಗಾಗಿ ಐಡೊ ರೋಬೊಗೆ ಈಗಾಗಲೇ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಬೇಡಿಕೆ ಸಲ್ಲಿಸಿದವರಿಗೆ ಈ ವರ್ಷದ ಅಕ್ಟೋಬರ್​ನಲ್ಲಿ ಅವು ದೊರೆಯಲಿವೆ. ಐಡೊ ರೋಬೊದ ಜನಪ್ರಿಯತೆಯಿಂದಾಗಿ ಇದನ್ನು ಸಿದ್ಧಪಡಿಸಿದ ತಂಡ ಕೂಡ ಸಖತ್ ಖುಷ್ ಆಗಿದೆ.

image


ಐಡೊ ರೋಬೊದಲ್ಲಿ ವಿಶೇಷತೆ ಏನಿದೆ..?

ಐಡೊ ರೋಬೊದಲ್ಲಿ ಪ್ರಾಜೆಕ್ಟರ್ ವ್ಯವಸ್ಥೆ, ಅತ್ಯಾಧುನಿಕವಾದ ಮಾತು ಗುರುತಿಸುವ ಶಕ್ತಿ, ಮುಖ ಗುರುತಿಸುವ ಸಾಮರ್ಥ್ಯ, ಸೆನ್ಸರ್​ಗಳು ಮತ್ತು ಆ್ಯಪ್ ಒಳಗೊಂಡಿದೆ. ಮೂರು ಅಡಿ ಎತ್ತರದ ಇದು 8 ಕೆ.ಜಿ.ತೂಕವಿದೆ. ನಾಲ್ಕು ಡಿಗ್ರಿಯಲ್ಲಿ ಸುತ್ತಬಲ್ಲದು. ಹಲವು ಕಮಾಂಡ್​ಗಳನ್ನು ಪಾಲಿಸುವಂತಹ ಮತ್ತು ಸೂಚಿಸಿದ ಕೆಲ ಕೆಲಸಗಳನ್ನು ಸರಾಗವಾಗಿ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಇದರಲ್ಲಿರುವ ಅಂತರ್ ಸಂವಹನದ ಪ್ರಾಜೆಕ್ಟರ್ ಮನುಷ್ಯರು ನೀಡುವ ಸೂಚನೆಗಳನ್ನು ಕರಾರುವಕ್ಕಾಗಿ ಪಾಲಿಸುತ್ತದೆ. ಮಕ್ಕಳ ಜೊತೆ ಉತ್ತಮ ಜೊತೆಗಾರನ್ನಾಗಿ ಇದು ಅವರಿಗೆ ಖುಷಿ ನೀಡಲಿದೆ. ಜೊತೆಗೆ ಅನೇಕ ಕಥೆಗಳು, ರೈಮ್ಸ್​ಗಳು ಇದರಲ್ಲಿ ಸ್ಟೋರ್ ಮಾಡಿದ್ರೆ ಸಾಕು ನಿಮ್ಮ ಮಕ್ಕಳ ಟೀಚರ್ ಆಗಿ ಇದು ಕಾರ್ಯನಿರ್ವಹಿಸುತ್ತದೆ. ಮಕ್ಕಳಿಗೆ ದೈಹಿಕ ಶಿಕ್ಷಕನಾಗಿ ಕೂಡ ಇದು ಆಟ ಆಡಿಸಬಲ್ಲದು. ನೀವು ಯಾವ ರೀತಿ ಪ್ರೋಗ್ರಾಮ್ ಮಾಡುತ್ತಿರೋ ಅದರಂತೆ ಇದು ಕೆಲಸ ನಿರ್ವಹಿಸಲಿದೆ..

ಐಡೊ ರೋಬೊ ಬ್ಲೂಟೂತ್, ವೈಫೈಗಳಿಗೆ ಸ್ಪಂದಿಸುತ್ತದೆ. ಮನೆಯಲ್ಲಿನ ಕೊಠಡಿಯನ್ನು ಲಾಕ್ ಮಾಡುವಂತೆ, ಉಷ್ಣಾಂಶವನ್ನು ಹೊಂದಿಸುವಂತೆ, ಸ್ವಿಚ್​ಗಳನ್ನು ಆಫ್ ಮಾಡುವಂತೆ ಪ್ರೋಗ್ರಾಮಿಂಗ್ ಸಿದ್ಧಪಡಿಸಿ ಇಟ್ಟುಕೊಳ್ಳಬಹುದು. ವಾಯ್ಸ್ ಕಮಾಂಡ್​ಗಳನ್ನು ಸಹ ಕೊಡಬಹುದಾಗಿದೆ.

ಐಡೋ ರೋಬೋದ ತಂತ್ರಜ್ಞಾನ ಇಡೀ ವಿಶ್ವಕ್ಕೆ ಇಷ್ಟವಾಗಬಹುದು. ಮನೆಗೆಲಸದ ತಲೆನೋವು ಹೊಂದಿದವರಿಗೆ ಈ ಐಡೋ ಹೊಸ ಸಹಾಯಕನಾಗಬಹುದು.

ಇದನ್ನು ಓದಿ:

1. ಸರಕು ಸಾಗಣಿಕೆಯ ಚಿಂತೆ ನಿಮಗೇಕೆ- ಪೋರ್ಟರ್​ ಆ್ಯಪ್​ನಲ್ಲಿ ಸಿಗುತ್ತೆ ಉತ್ತರ

2. ಹಠ+ ಛಲ+ ಸಾಧನೆ = ದೀಪಾಲಿ ಸಿಕಂದ್

3. ಹಸಿವಿನ ಬಗ್ಗೆ ಚಿಂತೆ ಬಿಡಿ- 7thಸಿನ್ ​ಫುಡ್​ಟ್ರಕ್​ಗೆ ವಿಸಿಟ್​ ಕೊಡಿ

Add to
Shares
7
Comments
Share This
Add to
Shares
7
Comments
Share
Report an issue
Authors

Related Tags