ಆವೃತ್ತಿಗಳು
Kannada

ದುಬಾರಿ ಬಾಡಿಗೆಯ ಚಿಂತೆ ಬಿಟ್ಟುಬಿಡಿ- ವೋಲಾರ್​ ಕಾರ್​ ಬುಕ್​ ಮಾಡಿ

ಟೀಮ್​ ವೈ.ಎಸ್​. ಕನ್ನಡ

25th Jun 2016
Add to
Shares
1
Comments
Share This
Add to
Shares
1
Comments
Share

ಈಗಿನ ಕಾಸ್ಟ್ಲೀ ಲೈಫ್​​ನಲ್ಲಿ ಕಾರು ಕೊಳ್ಳುವುದಿರಲಿ ಸೈಕಲ್ ಕೊಳ್ಳಲು ಆಗುತ್ತಿಲ್ಲ. ಒಂದು ಸಾಮಾನ್ಯ ಕಾರಿಗೆ ಮಿನಿಮಮ್ ಎರಡು ಲಕ್ಷ ಆಗುತ್ತದೆ. ಮಧ್ಯಮ ವರ್ಗದವರಿಗೆ ಅಷ್ಟೋಂದು ಹಣ ನೀಡಿ ಕಾರು ತೆಗೆದುಕೊಳ್ಳಲು ಆಗುವುದಿಲ್ಲ. ಹಾಗಂತ ಕಾರಿನಲ್ಲಿ ಓಡಾಡುವ ಆಸೆಯೂ ಹೋಗುವುದಿಲ್ಲ. ಆಸೆಯಿಂದಾಗಿ ಬಾಡಿಗೆ ಕಾರು ಮಾಡಿಕೊಂಡು ಹೋದರೆ ಕಿಲೋಮೀಟರ್​ಗಿಷ್ಟು ಅಂತ ಹಣ ನೀಡಬೇಕು. ಕೆಲವೊಮ್ಮೆ ದೂರ ಹೆಚ್ಚಾದಾಗ ಅದು ಕೂಡ ದುಬಾರಿಯಾಗುತ್ತದೆ. ಆದರೆ ಉತ್ತರ ಭಾರತದಲ್ಲಿ ವೋಲಾರ್ ಬಾಡಿಗೆ ಕಾರಿನ ಸೇವೆ ಲಭ್ಯವಿದೆ. ಅದು ಈಗ ನಮ್ಮ ರಾಜ್ಯಕ್ಕೂ ವಿಸ್ತಾರಗೊಂಡಿದೆ.

image


ಏನಿದು ವೋಲಾರ್..?

ಉತ್ತರ ಭಾರತದ ರಾಜ್ಯಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ವೋಲಾರ್ ಕಾರಿನ ವಿಶೇಷತೆ ಎಂದರೆ ವಾಟ್ಸ್ಆ್ಯಪ್ ಮೂಲಕ ಆರ್ಡರ್ ಮಾಡಿದರೆ ಮನೆಗೆ ಕಾರನ್ನು ತಂದು ಕೊಟ್ಟು ಹೋಗುತ್ತಾರೆ. ತಂದು ಕೊಡುವಾಗ ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಡುತ್ತಾರೆ. ಕಾರನ್ನು ಆರ್ಡರ್​ ಮಾಡಿದವರೇ ಡ್ರೈವ್ ಮಾಡಿಕೊಂಡು ಹೋಗಬಹುದು.

image


ಉತ್ತರ ಭಾರತದ ದಿಲ್ಲಿ ಮತ್ತಿತರ ನಗರಗಳಲ್ಲಿ ಸೇರಿ ಸುಮಾರು ಹದಿನೈದು ಸಾವಿರಕ್ಕೂ ಅಧಿಕ ಗ್ರಾಹಕರನ್ನು ಹೊಂದಿರುವ ಈ ವೋಲಾರ್ ಸಂಸ್ಥೆ ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ಸೇವೆ ಆರಂಭಿಸಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಸೇವೆಯನ್ನು ಚಾಲ್ತಿಗೊಳಿಸಿದೆ.

ಇದನ್ನು ಓದಿ: ಕಲಾವಿದನೊಳಗೊಬ್ಬ ಕೃಷಿಕ - ತವರಿನ ರೈರಿಗಾಗಿ ನೀರಾವರಿ ವಿಧಾನ ಆಮದು ಮಾಡಿಕೊಂಡ ನವಾಜುದ್ದೀನ್ ಸಿದ್ದಿಕಿ

ಮಿನಿ ಕಾರುಗಳಿಂದ ಹಿಡಿದು ಐಷಾರಾಮಿ ಕಾರುಗಳವರೆಗೆ ಅಗತ್ಯಕ್ಕೆ ತಕ್ಕಂತಹ ಕಾರುಗಳನ್ನು ವಾಟ್ಸ್ಆ್ಯಪ್ ಮೂಲಕ ಮನೆ ಬಾಗಿಲಿಗೆ ಕರೆಸಿಕೊಳ್ಳಬಹುದಾಗಿದೆ. ಫುಲ್ ಟ್ಯಾಂಕ್ ಪೆಟ್ರೋಲ್ ಜತೆಗೆ ಗ್ರಾಹಕರು ಕೇಳಿದ ಕಾರುಗಳು ಮನೆ ಬಾಗಿಲಿಗೆ ಬಂದು ನಿಲ್ಲುತ್ತವೆ. ಸೇವೆ ಪಡೆಯುವಾಗ ಭದ್ರತಾ ಠೇವಣಿ ಪಡೆದು ಕಾರುಗಳನ್ನು ನೀಡಲಾಗುವುದು. ವಾಪಾಸ್ ಕಾರನ್ನು ನೀಡುವಾಗ ಗಂಟೆಗೆ ಮೂವತ್ತು ರೂಪಾಯಿಯಂತೆ ಲೆಕ್ಕ ಹಾಕಿ ಬಾಡಿಗೆ ಪಡೆದುಕೊಳ್ಳಲಾಗುತ್ತದೆ. ಸ್ವಂತ ಕಾರನ್ನು ಇಟ್ಟುಕೊಳ್ಳುವುದಕ್ಕಿಂತ ಇದು ಲಾಭದಾಯಕ ಎನ್ನುವ ಕಾರಣಕ್ಕೇ ವೋಲಾರ್ ಸಂಸ್ಥೆ ಕೆಲವೇ ವರ್ಷಗಳಲ್ಲಿ ತನ್ನ ಗ್ರಾಹಕರ ಸಂಖ್ಯೆಯನ್ನು ದಿಲ್ಲಿಯಲ್ಲೇ 15 ಸಾವಿರಕ್ಕೆ ಏರಿಸಿಕೊಂಡಿದೆ.

image


ಪಾರ್ಕಿಂಗ್​ ಬಗ್ಗೆ ನೋ ವರಿ..!

ತಮ್ಮದೇ ಕಾರನ್ನು ಇಟ್ಟುಕೊಂಡರೆ ಬೆಂಗಳೂರಿನಂತಹ ನಗರಗಳಲ್ಲಿ ಇಟ್ಟುಕೊಳ್ಳುವುದು ಕಷ್ಟ . ಸಾಮಾನ್ಯವಾಗಿ ಎಲ್ಲರೂ ಬಾಡಿಗೆ ಮನೆಯಲ್ಲಿರುತ್ತಾರೆ ಅವರಿಗೆ ಕಾರಿದ್ದರೆ ಅದಕ್ಕೆ ಪಾರ್ಕಿಂಗ್​ಗೆ ವ್ಯವಸ್ಥೆ ಮಾಡಬೇಕಾಗುತ್ತದೆ. ಜತೆಗೆ ಅದನ್ನು ಸರ್ವೀಸ್ ಮಾಡಿಸದಿದ್ದರೆ ಯಾವುದೇ ವಾಹನವೂ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆದರೆ ವೋಲಾರ್ ಕಾರಿನಲ್ಲಿ ನಿಮಗೆ ಬೇಕಾದ ಮಾಡೆಲ್​ನ್ನು ಬಾಡಿಗೆಗೆ ಪಡೆಯಬಹುದು. ದರವೂ ಸಹ ಅದಕ್ಕೆ ತಕ್ಕಂತೆ ಇರುತ್ತದೆ. ಇದು ಸ್ನೇಹಿತರೆಲ್ಲರೂ ಒಟ್ಟುಗೂಡಿ ಟ್ರಿಪ್ ಹೋಗಲು ಅನುಕೂಲವಾಗುತ್ತದೆ. ಇದರಿಂದ ದುಬಾರಿ ಬಾಡಿಗೆಯ ವೆಚ್ಚವೂ ಉಳಿಯುತ್ತದೆ.

ಸೇವೆ ಪಡೆಯುವುದು ಹೇಗೆ ?

ವೋಲಾರ್ ಸಂಸ್ಥೆಯ http://www.volarcars.com ಈ ವೆಬ್​ಸೈಟ್​ಗೆ ಭೇಟಿ ನೀಡಿ ಅಲ್ಲಿ ವೋಲಾರ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಆ್ಯಪ್ ಮೂಲಕ ತಮ್ಮ ಇಚ್ಛೆಯ ಕಾರನ್ನು ಎಷ್ಟು ಬೇಗ ಬೇಕಾದರೂ ಪಡೆಯಬಹುದು.ಮನೆ ಬಾಗಿಲಿಗೆ ಉತ್ತಮ ಗುಣಮಟ್ಟದ ಕಾರುಗಳು ಬಂದು ನಿಲ್ಲುತ್ತವೆ. ಇನ್ನೇಕೆ ತಡ ಒಂದು ಟೆಸ್ಟ್​ ರೈಡ್​ ಮಾಡೇ ಅನುಭವವನ್ನು ಪಡೆದುಕೊಳ್ಳಿ.

ಇದನ್ನು ಓದಿ:

1. ಗ್ಲಾಮರ್ ಬೊಂಬೆಯಾದ್ಲು ಯೋಗ ಟೀಚರ್..!

2. ಎಟಿಎಂ ಕಾರ್ಡ್​ ಇಲ್ದೇ ಇದ್ರೂ ಹಣ ಡ್ರಾ ಮಾಡಬಹುದು..!

3. "ತಿಥಿ"ಫೇಮಸ್ ಆಗಿದ್ದು ಹೇಗೆ ಗೊತ್ತಾ..? ಸೆಕ್ಯುರಿಟಿ ಗಾರ್ಡ್​ನ ಕಥೆಗೆ ಸಿಕ್ತು ನ್ಯೂ ಲುಕ್​...!

Add to
Shares
1
Comments
Share This
Add to
Shares
1
Comments
Share
Report an issue
Authors

Related Tags