ಆವೃತ್ತಿಗಳು
Kannada

ಸ್ಮರಣಿಕೆಗಳ ಮಾರಾಟದಿಂದ ಲೈಫ್‌ಸ್ಟೈಲ್ ಬ್ರಾಂಡ್ ಮಾರಾಟದವರೆಗೆ ಅಭಿವೃದ್ಧಿಯ "ಚುಂಬಕ್"

ಟೀಮ್ ವೈ.ಎಸ್.

YourStory Kannada
25th Sep 2015
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಬೆಂಗಳೂರಿನ ಇಂದಿರಾನಗರದಲ್ಲಿರುವ ಚುಂಬಕ್ ಶಾಪ್‌ನೊಳಗೆ ಕಾಲಿಟ್ಟರೆ ನಿಮಗೆ ಹೊಳೆಯುವ ಬಣ್ಣದ ಹಾಗೂ ಕಲಾತ್ಮಕವಾದ ವಸ್ತುಗಳು ಆಕರ್ಷಿಸುತ್ತವೆ. ಮಾರ್ಚ್ 2010ರಲ್ಲಿ ವಿವೇಕ್ ಪ್ರಭಾಕರ್ ಮತ್ತು ಶುಭ್ರಚಡ್ಡಾ ಪ್ರಾರಂಭಿಸಿದ ಶಾಪ್ ಚುಂಬಕ್. ಭಾರತೀಯ ಮೂಲದ ಕಲಾತ್ಮಕ ವಸ್ತುಗಳ ಹಾಗೂ ಸ್ಮರಣಿಕೆಗಳ ಮಾರಾಟಕ್ಕಾಗಿಯೇ ಈ ಶಾಪ್ ಸ್ಥಾಪಿಸಲಾಯಿತು. ಲೈಫ್‌ಸ್ಟೈಲ್‌ಗೆ ಸಂಬಂಧಿಸಿದ ಬ್ರಾಂಡ್‌ಗಳನ್ನು ಮಾರುತ್ತಿರುವ ಚುಂಬಕ್ ಬೆಂಗಳೂರು, ಮುಂಬೈ ಹಾಗೂ ನವದೆಹಲಿಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಜೊತೆಗೆ ಇದು ಬೆಂಗಳೂರು ಮತ್ತು ದೆಹಲಿಗಳಲ್ಲಿ ಪ್ರಮುಖ ಶಾಖೆಗಳನ್ನು ತೆರೆದಿದೆ. ಹಾಗೂ ಭಾರತದಾದ್ಯಂತ ಸುಮಾರು 35 ಚಿಕ್ಕ ಅಂಗಡಿಗಳನ್ನು ತೆರೆದಿದೆ.

ಚುಂಬಕ್‌ನ ಸ್ಥಾಪಕರಾದ ವಿವೇಕ್ ಹೇಳಿಕೊಂಡಿರುವಂತೆ ಮಾಮೂಲಿ ಮಾರ್ಬಲ್ ತಾಜ್‌ಮಹಲ್ ಹಾಗೂ ಹ್ಯಾಂಡಿಕ್ರಾಫ್ಟ್ ವಸ್ತುಗಳ ಮಾರಾಟದಿಂದ ಅವರು ಬೇಸರಹೊಂದಿದ್ದರು. ಜೊತೆಗೆ ಈ ವಸ್ತುಗಳು ಮಾತ್ರ ಆಗ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತದ್ದಾಗಿತ್ತು. ಹಾಗಾಗಿ, ಪ್ರವಾಸಿಗಳಿಗೆ ಹೆಚ್ಚಿನ ಖರೀದಿ ಆಯ್ಕೆ ಒದಗಿಸುವ ನಿಟ್ಟಿನಲ್ಲಿ ಸ್ಮರಣಿಕೆಗಳ ಸಂಗ್ರಹ ಮತ್ತು ಮಾರಾಟದ ಯೋಜನೆ ಸಿದ್ಧವಾಯಿತು. ಹೀಗೆ ಹುಟ್ಟಿಕೊಂಡಿದ್ದೇ ಚುಂಬಕ್ ಶಾಪ್.

ಸಂಸ್ಥಾಪಕರಾದ ವಿವೇಕ್ ಪ್ರಭಾಕರ್, ಶುಭ್ರಾ ಚಡ್ಡಾ

ಸಂಸ್ಥಾಪಕರಾದ ವಿವೇಕ್ ಪ್ರಭಾಕರ್, ಶುಭ್ರಾ ಚಡ್ಡಾ


ಬೆಳವಣಿಗೆಯ ಕ್ರಿಯಾಯೋಜನೆ

ಸುಮಾರು 40 ಲಕ್ಷ ರೂ. ಮೂಲ ಬಂಡವಾಳದೊಂದಿಗೆ ಆರಂಭವಾದ ಸಂಸ್ಥೆ ಚುಂಬಕ್. ಈ ಬಂಡವಾಳದ ಹೂಡಿಕೆಗಾಗಿ ವಿವೇಕ್, ತಮ್ಮ ಉಳಿತಾಯದ ಹಣವನ್ನು ಬಳಸಿದ್ದರು. 5 ವರ್ಷಗಳಲ್ಲಿ ಚುಂಬಕ್, ಸ್ಟೇಷನರಿ ವಸ್ತುಗಳಿಂದ ಹಿಡಿದು ಬ್ಯಾಗ್, ವ್ಯಾಲೆಟ್, ಆಭರಣಗಳು, ವಿವಿಧ ವಿನ್ಯಾಸದ ಕೀಚೈನ್‌ಗಳು, ಗೃಹ ಬಳಕೆಯ ಅಲಂಕಾರಿಕ ವಸ್ತುಗಳನ್ನು ಸಂಗ್ರಹಿಸಿ ಮಾರಲಾರಂಭಿಸಿತು.

ವಿವೇಕ್ ಹೇಳುವಂತೆ ಚುಂಬಕ್‌ನ ಉತ್ಪನ್ನಗಳ ಅತೀ ದೊಡ್ಡ ಗ್ರಾಹಕರೆಂದರೆ ಯುವ ಭಾರತೀಯರು ಹಾಗೂ ಭಾರತೀಯ ಸಂಸ್ಕೃತಿಯನ್ನು ಧರಿಸುವ ಫ್ಯಾಶನ್ ಹೊಂದಿರುವವರು. ಗ್ರಾಹಕರು ಇನ್ನೂ ಹೆಚ್ಚಿನ ಬೇರೆ ಬಗೆಯ, ಬೇರೆ ಶೈಲಿಯ ಸ್ಮರಣಿಕೆಯಂತಹ ಅಲಂಕಾರಿಕ ವಸ್ತುಗಳನ್ನು ಇಚ್ಛಿಸಿದ್ದು ಚುಂಬಕ್‌ನ ಉದ್ಯಮ ಪ್ರಗತಿಗೆ ನಾಂದಿಯಯಿತು ಹಾಗೂ ಈ ಮೂಲಕ ಹೊಸ ಭಾರತದ ಅಗತ್ಯತೆಗಳು ಮಾರುಕಟ್ಟೆ ಪ್ರವೇಶ ಪಡೆದವು.

ಚುಂಬಕ್ ಮಳಿಗೆ

ಚುಂಬಕ್ ಮಳಿಗೆ


ವಿವೇಕ್ ಪ್ರಭಾಕರ್ ಹಾಗೂ ಶುಭ್ರಾ ಚಡ್ಡಾ ಚುಂಬಕ್‌ನ ಸಂಸ್ಥಾಪಕರಾದರೂ, ಅವರ ಸ್ಮರಣಿಕೆಗಳಂತಹ ವಸ್ತುಗಳು ಆಧುನಿಕ ಬ್ರಾಂಡೆಡ್ ಔಟ್‌ಲೆಟ್‌ಗಳಲ್ಲಿ ಸ್ಥಾನ ಪಡೆದುಕೊಂಡವು. ಶೀಘ್ರದಲ್ಲೇ ಅವರ ತಂಡ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡು, ಉತ್ಸಾಹದಿಂದ ಗ್ರಾಹಕರ ಸ್ಪಂದನೆಗಳನ್ನು ಅರ್ಥಮಾಡಿಕೊಂಡು ಉತ್ಪನ್ನ ಒದಗಿಸಲು ಸಿದ್ಧವಾಯಿತು. ಗ್ರಾಹಕರು ತಮ್ಮ ಇಷ್ಟದ ಎಲ್ಲಾ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವಸ್ತುಗಳು ಒಂದೇ ಸೂರಿನಡಿ ಸಿಕ್ಕರೆ ಅನುಕೂಲ ಎಂದು ಬಗೆದಿದ್ದರು. ಇದು ಭಾರತದ ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಚುಂಬಕ್‌ನ ಸಣ್ಣಪುಟ್ಟ ಮಳಿಗೆಗಳನ್ನು ಆರಂಭಿಸಿ ಶಾಖೆಗಳ ವಿಸ್ತರಣೆಗೆ ಪ್ರೇರೇಪಿಸಿತು.

ಶೀಘ್ರದಲ್ಲೇ ನಾವು ಉಡುಗೊರೆಗಳಾಗಿ ನೀಡಬಲ್ಲ ವಸ್ತುಗಳನ್ನು ಮಾರುವ ಬೋಟಿಕ್ ಬ್ರಾಂಡ್‌ಗಳನ್ನು ಭಾರತದಾದ್ಯಂತ ಪರಿಚಯಿಸಿದೆವು ಎಂದು ಮಾಹಿತಿ ನೀಡಿದ್ದಾರೆ ವಿವೇಕ್. ಈ ಸಂದರ್ಭದಲ್ಲಿ ಪುರಾತನ ಭಾರತೀಯ ಸಾಂಸ್ಕೃತಿಕ ಮಾದರಿಯ ವಸ್ತ್ರ ವಿನ್ಯಾಸಕ್ಕೆ ಯುವ ಭಾರತೀಯರಿಂದ ಬೇಡಿಕೆ ಬಂದ ಕಾರಣ, ಚುಂಬಕ್ ಈ ದೃಷ್ಟಿಕೋನದಲ್ಲೂ ವ್ಯವಹಾರಕ್ಕೆ ಮುಂದಾಯಿತು. ಹೀಗಾಗಿ, ಚುಂಬಕ್‌ನಲ್ಲಿ ವಿಭಿನ್ನ ಶೈಲಿಯ, ಭಿನ್ನ ಭಾಷಿಕರು ತೊಡುವಂತಹ ಹಾಗೂ ವಿಭಿನ್ನ ವಿನ್ಯಾಸದ ವಸ್ತ್ರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

image


20 ಚದರಡಿಯ ಅಂಗಡಿಗಳಿಂದ 2500 ಚದರಡಿಯ ಮಳಿಗೆಗಳತ್ತ:

ಗೃಹ ಬಳಕೆಯ ಅಲಂಕಾರಿಕ ವಸ್ತುಗಳು, ಸ್ಮರಣಿಕೆಗಳು ವಿವಿಧ ಕಲಾಕೃತಿಗಳು, ವಸ್ತ್ರವಿನ್ಯಾಸ ಮುಂತಾದ ಆರ್ಟ್ ವಸ್ತುಗಳನ್ನು ಮಾರಾಟ ಮಾಡುವ ಚುಂಬಕ್‌ನ ಅತೀ ಮುಖ್ಯ ಮಳಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ಇಂದಿರಾನಗರದಲ್ಲಿ ಆರಂಭವಾಯಿತು.

ಗ್ರಾಹಕರಿಗೆ ವಿವಿಧ ಬಗೆಯ, ವಿವಿಧ ಬಣ್ಣಗಳ ಹಾಗೂ ವಿವಿಧ ವಿನ್ಯಾಸದ ವಸ್ತುಗಳ ಆಯ್ಕೆ ನೀಡಲು ಮುಂದಾದ ಚುಂಬಕ್, ಮಣ್ಣಿನ ಕಲಾಕೃತಿ, ಪ್ರಾಚೀನ ದೀಪಗಳ ಮಾದರಿ, ಡೈನಿಂಗ್‌ ಟೇಬಲ್‌ನ ಅಲಂಕಾರಿಕ ವಸ್ತುಗಳು, ಬಿತ್ತಿಚಿತ್ರ, ತೈಲವರ್ಣದ ಕಲಾಕೃತಿಗಳನ್ನು ಒದಗಿಸಿತು.

ಯಾವುದೇ ಯಶೋಗಾಥೆ ಸವಾಲುಗಳಿಲ್ಲದೇ ಸಂಪೂರ್ಣವಾಗಲಾರದು. ಎಲ್ಲಾ ವಸ್ತುಗಳನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕಾಗಿದ್ದಿದ್ದು ಚುಂಬಕ್‌ನ ಅತೀದೊಡ್ಡ ಸವಾಲಾಗಿತ್ತು. ಎಲ್ಲಾ ಶೈಲಿಯ ಕ್ರಿಯಾಶೀಲ, ಸೃಜನಾತ್ಮಕ, ಕಲಾತ್ಮಕ ವಸ್ತುಗಳನ್ನು ಸಂಗ್ರಹಿಸುವುದು ಅಷ್ಟು ಸುಲಭದ ಸಂಗತಿಯೇನಲ್ಲ. ಮಳಿಗೆಯೊಳಗಿನ ಸ್ಥಳಾವಕಾಶದಲ್ಲೇ ಓರಣವಾಗಿ ಹಾಗೂ ಆಕರ್ಷಣೀಯವಾಗಿ ಅವುಗಳನ್ನು ಜೋಡಿಸುವುದು ಈ ಮೂಲಕ ಗ್ರಾಹಕರ ಗಮನ ಸೆಳೆಯುವುದು ಮತ್ತೊಂದು ಸವಾಲಾಗಿತ್ತು. ಮೇಲಾಗಿ ಬ್ರಾಂಡ್‌ ಗಳಿಸಿರದ ಹೊಸದೊಂದು ಉದ್ಯಮ ಆರಂಭಿಸುವ ಪ್ರತಿಯೊಬ್ಬರಿಗೂ ಎದುರಾಗುವ ಮೂಲಭೂತ ಸಮಸ್ಯೆಗಳು ವಿವೇಕ್‌ರಿಗೂ ಎದುರಾಗಿತ್ತು. ಪ್ರಮುಖ ಮಳಿಗೆಗಳನ್ನು ಆರಂಭಿಸಿ, ಶಾಖೆಗಳನ್ನು ವಿಸ್ತರಿಸಿದಾಗ ಮತ್ತಷ್ಟು ಸವಾಲುಗಳು ಅವರಿಗೆ ಎದುರಾಯ್ತು. ದೇಶದ ಬೇರೆ ಬೇರೆ ರಾಜ್ಯಗಳ ಮಹಾನಗರಗಳ ಮಾಲ್‌ಗಳಲ್ಲಿ ಅಂಗಡಿಗಳನ್ನು ತೆರೆದಾಗ ಸಹಜವಾಗಿ ಭಾಷೆಯ ಸಮಸ್ಯೆ ಎದುರಾಯ್ತು. ಪ್ರಾರಂಭಿಕ ಹಂತದಲ್ಲಿ ಮಾರ್ಕೆಟಿಂಗ್‌ಗೆ ಇದರಿಂದ ಕೊಂಚಮಟ್ಟಿನ ಹಿನ್ನಡೆಯೂ ಆಯ್ತು. ಆದರೆ, ವಿವೇಕ್ ಈ ಎಲ್ಲಾ ಸವಾಲು, ಕಹಿ ಅನುಭವಗಳನ್ನು ಮೆಟ್ಟಿ ನಿಂತು ತಮ್ಮ ಸಂಸ್ಥೆಯ ವಿಸ್ತರಣೆಯತ್ತ ಗಟ್ಟಿ ನಿರ್ಧಾರ ಮಾಡಿದ್ದರಿಂದ ಕ್ರಮೇಣ ಚುಂಬಕ್ ಗ್ರಾಹಕರ ನೆಚ್ಚಿನ ಸಂಸ್ಥೆಯಾಯ್ತು.

ಕಳೆದ ವರ್ಷದ ಮೊದಲ ಅರ್ಧದಲ್ಲಿ 30 ಸದಸ್ಯರನ್ನು ಹೊಂದಿದ್ದ ಚುಂಬಕ್ ಈಗ ಸುಮಾರು 150 ಉದ್ಯೋಗಿಗಳನ್ನು ಸೃಷ್ಟಿಸಿಕೊಂಡಿದೆ. ಸಂಸ್ಥೆಯ ವೆಬ್‌ಸೈಟ್ ಮೂಲಕ ಆನ್‌ಲೈನ್ ಪ್ರಚಾರ ಹಾಗೂ ವ್ಯಾಪಾರ ವೃದ್ಧಿಯಾದಂತೆಲ್ಲಾ ಕಳೆದ ಕೆಲವು ತಿಂಗಳಿನಿಂದ ಸಂಸ್ಥೆ ಮತ್ತಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಚುಂಬಕ್ ತನ್ನ ಮೊದಲ ಹೆಜ್ಜೆ ಇಟ್ಟಲ್ಲಿಂದ ಇಲ್ಲಿಯವರೆಗೆ ಕಳೆದ 5 ವರ್ಷಗಳಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಭಾಗಗಳಲ್ಲಿ ಸುಮಾರು 300 ಪ್ರತಿಶತ ಅಭಿವೃದ್ಧಿ ಸಾಧಿಸಿದೆ.

image


ಮಾರ್ಕೆಟ್ ಮತ್ತು ಭವಿಷ್ಯದ ಯೋಜನೆಗಳು

ಮೊದಮೊದಲು ಭಾರತೀಯ ಸಾಂಸ್ಕೃತಿಕ ವಿನ್ಯಾಸಕ್ಕೆ ಅತೀ ದೊಡ್ಡ ಪ್ರತಿಕ್ರಿಯೆ ಲಭಿಸಿತ್ತು. ಗ್ರಾಹಕರು ಈ ಬಗೆಯ ವಸ್ತುಗಳ ಖರೀದಿಯ ಮೂಲಕ ಜಗತ್ತಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಟ್ರೆಂಡ್ ಹುಟ್ಟುಹಾಕಿದ್ದರು. ಈಗ ನಮ್ಮ ಗ್ರಾಹಕರು ನಾವು ಮಾರುವ ವಿನ್ಯಾಸಗಳನ್ನು ಗುರುತಿಸುತ್ತಿದ್ದಾರೆ. ಜೊತೆಗೆ ನಮ್ಮಬ್ರಾಂಡ್ ಜೊತೆ ಅವರು ವ್ಯವಹರಿಸುತ್ತಿರುವ ರೀತಿಯಲ್ಲೂ ಮಹತ್ತರ ಬದಲಾವಣೆಗಳಾಗಿದೆ ಎಂದು ವಿವೇಕ್ ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಗ್ರಾಹಕರ ಪ್ರತಿಕ್ರಿಯೆ ಹಾಗೂ ಪ್ರಚಾರ ನಮ್ಮ ಸಂಸ್ಥೆಗೆ ಅನುಕೂಲವಾಗಿ ಪರಿಣಮಿಸಿದೆ. ಸಂಸ್ಥೆಯ ಜೊತೆ ಗ್ರಾಹಕರ ನಿರಂತರ ಸಂಪರ್ಕ ಹೊಂದುವ ಮೂಲಕ ನಮ್ಮ ಬ್ರಾಂಡ್‌ನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಚುಂಬಕ್‌ನ ಆಫ್‌ಲೈನ್ ತಂಡ ಭವಿಷ್ಯದಲ್ಲಿ ಭಾರತದಾದ್ಯಂತ ದೊಡ್ಡ ದೊಡ್ಡ ಪ್ರತ್ಯೇಕ ಸ್ಮರಣಿಕೆಗಳ ಮಳಿಗೆಗಳನ್ನು ವಿಸ್ತರಿಸುವ ಯೋಜನೆ ಸುತ್ತ ಕೆಲಸ ಮಾಡುತ್ತಿದೆ. ಇದಕ್ಕೆ ಆನ್‌ಲೈನ್ ಪ್ರಚಾರ ಹಾಗೂ ಮಾರ್ಕೆಟಿಂಗ್ ವಿಭಾಗ ಬೆನ್ನೆಲುಬಾಗಿದೆ.

ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ವೆಬ್‌ಸ್ಟೋರ್‌ ಇ-ಕಾಮರ್ಸ್ ಮೂಲಕ ಚುಂಬಕ್‌ನ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಸಹ ರೂಪಿಸಲಾಗುತ್ತಿದೆ. ಇದಕ್ಕೆ ಅಮೇಜಾನ್ ಸ್ಟೋರ್‌ನಲ್ಲಿ ಒಪ್ಪಿಗೆಯೂ ಲಭಿಸಿದೆ. ಜೊತೆಗೆ ಚುಂಬಕ್‌ನ ತಂಡ ಸ್ವತಃ ಪ್ರಯೋಗಿಸಿ ಸೃಷ್ಟಿಸಿದ ಕಲಾತ್ಮಕ ವಸ್ತುಗಳನ್ನೂ ಆನ್‌ಲೈನ್ ಮಾರಾಟಕ್ಕೆ ಒದಗಿಸಲು ಮುಂದಾಗಿದೆ.

ಈಗಾಗಲೇ ವಿವೇಕ್ ಗುರುತಿಸಿರುವಂತೆ ಭಾರತೀಯ ಗ್ರಾಹಕರು ಸಮಯದ ಜೊತೆ ನಿರಂತರವಾಗಿ ಬದಲಾಗುತ್ತಿರುತ್ತಾರೆ. ಜಗತ್ತಿನೆದುರು ತಮ್ಮ ವಿಭಿನ್ನ ವಿನ್ಯಾಸ ಹಾಗೂ ಶೈಲಿಯ ಹವ್ಯಾಸದ ಜೊತೆ ತಮ್ಮನ್ನು ಪ್ರತಿನಿಧಿಸಿಕೊಳ್ಳಲು ಕಾತುರರಾಗಿರುತ್ತಾರೆ. ಇದೂ ಸಹ ಚುಂಬಕ್‌ನ ಈಗಿನ ಯಶಸ್ಸಿಗೆ ಇನ್ನೊಂದು ಮಾನದಂಡ

1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags