"ಮಿಸ್ಟರ್‍ ಏಷ್ಯಾ" ಈ ಬೆಂಗಳೂರು ಬಲಾಢ್ಯ..!

ಟೀಮ್​ ವೈ.ಎಸ್​. ಕನ್ನಡ

"ಮಿಸ್ಟರ್‍ ಏಷ್ಯಾ" ಈ ಬೆಂಗಳೂರು ಬಲಾಢ್ಯ..!

Tuesday November 22, 2016,

2 min Read

ಕಟುಮಸ್ತಾದ ದೇಹವನ್ನು ತಮ್ಮದಾಗಿಸಿಕೊಳ್ಳಬೇಕು ಅನ್ನೋದು ಅದೆಷ್ಟೋ ಪುರುಷರ ಆಸೆ. ಈ ವಿಷಯದಲ್ಲಿ ಯುವ ಪೀಳಿಗೆಯನ್ನಂತೂ ಕೇಳೋದೇ ಬೇಡ. ಆದ್ರೆ, ಸಿಕ್ಸ್ ಪ್ಯಾಕ್ ಮಾಡ್ಕೊಂಡು ಸಾಧನೆ ಮಾಡ್ತೀನಿ, ಆ ದೇಹವನ್ನು ಪ್ರದರ್ಶನಕ್ಕಿಟ್ಟು ವಿಶ್ವದಾದ್ಯಂತ ಹೆಸರು ಮಾಡ್ತೀನಿ ಅನ್ನೋದು ತಮಾಷೆ ಮಾತಲ್ಲ. ನಾವಿಲ್ಲಿ ಹೇಳೋಕೆ ಹೊರಟಿರೋದು ಅಂತಹದ್ದೇಒಬ್ಬ ವ್ಯಕ್ತಿಯ ಬಗ್ಗೆ. ಈ ಬಾರಿಯ,ಅಂದ್ರೆ 2016ರ ಮಿಸ್ಟರ್‍ ಏಷ್ಯಾ ಪಟ್ಟವನ್ನು ಮುಡಿಗೇರಿಸಿಕೊಂಡ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ಯುವಕನ ಬಗ್ಗೆ. 

image


ಈ ಬೃಹತ್ ಬೆಂಗಳೂರಿನ ಒಬ್ಬ ಸಾಧಾರಣ ಮನುಷ್ಯ ಈ ಬಾಲಕೃಷ್ಣ. ದಿನವೊಂದಕ್ಕೆ 6 ತಾಸು ಸಮಯವನ್ನು ತನ್ನ ದೇಹದಾರ್ಡ್ಯತೆಗಾಗಿಯೇ ಮುಡಿಪಾಗಿರೋ ಇವ್ರು ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಜಿಮ್‍ ಒಂದ್ರಲ್ಲಿ ಟ್ರೈನರ್ ಆಗಿ ಕೆಲಸ ಮಾಡ್ತಾ, ತಮ್ಮದೇಹವನ್ನ ದಂಡಿಸುತ್ತಾ ಆಕರ್ಷಕ ಮೈಕಟ್ಟನ್ನ ತಮ್ಮದಾಗಿಸಿಕೊಂಡವ್ರು ಈ ಬಾಲಕೃಷ್ಣ. ಅಷ್ಟೇಅಲ್ಲ, ಜಿಮ್‍ನಲ್ಲಿ ಕೆಲಸ ಮುಗಿತಾಇದ್ದ ಹಾಗೇ, ಗ್ರೌಂಡ್‍ ಒಂದ್ರಲ್ಲಿ ರನ್ನಿಂಗ್, ಜಂಪಿಂಗ್‍ ಅಂತ ದೇಹವನ್ನು ದಂಡಿಸೋಕೆ ಶುರುಮಾಡಿ ಬಿಡ್ತಾರೆ. ದಿನವೊಂದಕ್ಕೆ ಆರು ಗಂಟೆ ದೇಹವನ್ನು ಅಷ್ಟೆಲ್ಲಾ ಕಸರತ್ತುಗಳಿಗೆ ಒಳಪಡಿಸ್ಬೇಕು ಅಂದ್ರೆ ಅದಕ್ಕೆ ಆಹಾರ ಕೂಡ ಹಾಗೇ ಬೇಕಲ್ವ. ಅದಕ್ಕಾಗೇ ದಿನವೊಂದಕ್ಕೆಇವ್ರು ಮುಕ್ಕಾಲು ಕೆ.ಜಿ. ಚಿಕನ್ ಸೇವನೆ ಮಾಡ್ತಾರೆ. ಅದ್ರ ಜೊತೆಗೆ ದಿನಕ್ಕೆ 25 ಮೊಟ್ಟೆ, 300 ಗ್ರಾಂಅನ್ನ, 200 ಗ್ರಾಂ ತರಕಾರಿ, ಮೀನು ಸೇವನೆ ಮಾಡ್ತಾರೆ.

image


ಬಾಲಕೃಷ್ಣ ಈ ಹಿಂದೆಕೂಡ ಸಾಕಷ್ಟು ದೇಶಗಳಲ್ಲಿ ಭಾರತದ ಹೆಸರು ಕೇಳಿ ಬರುವಂತೆ ಮಾಡಿದ್ದಾರೆ. 2013ರಲ್ಲಿ ಜರ್ಮನಿಯಲ್ಲಿ ನಡೆದ 24 ವರ್ಷದೊಳಗಿನ ಮಿಸ್ಟರ್‍ ಯೂನಿವರ್ಸ್​ನ ಕಿರಿಯ ಸ್ಪರ್ಧಿ. 2014ರಲ್ಲಿ ಅಥೆನ್ಸ್​ನಲ್ಲಿ ನಡೆದ ಅದೇ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟವನ್ನ ಮುಡಿಗೇರಿಸಿಕೊಂಡ್ರು. ಈಗ ಫಿಲಿಪೈನ್ಸ್​ನಲ್ಲಿ ನಡೆದ 2016ರ ಮಿಸ್ಟರ್‍ ಏಷ್ಯಾ ಗರಿ ಕೂಡ ಇವರ ಮುಡಿ ಸೇರಿದೆ.

ಇದೆಲ್ಲಕ್ಕಿಂತ ಹೆಚ್ಚು ಆಶ್ಚರ್ಯ, ಖುಷಿ ತರೋ ವಿಚಾರ ಅಂದ್ರೆ ಬಾಲಕೃಷ್ಣರ ವೃತ್ತಿ. ವಿಶ್ವಮಟ್ಟದಲ್ಲಿ ಹೆಸರು ಮಾಡಿರೋ ಇವ್ರು ಸಾಕಷ್ಟು ಓದಿ, ದೊಡ್ಡ ಕಂಪನಿಯಲ್ಲಿ ಸಂಬಳ ಎಣಿಸೋರಲ್ಲ. ಬದಲಾಗಿ ವಾಟರ್‍ ಟ್ಯಾಂಕರ್‍ ಓಡಿಸುತ್ತಾ ಜೀವನ ನಡೆಸ್ತಿರೋರು. ಹೌದು, ವರ್ತೂರಿನ ರಾಮಗೊಂಡನಹಳ್ಳಿಯ ನಿವಾಸಿಯಾಗಿರೋ ಇವ್ರು, ಬೆಂಗಳೂರಿನ ವೈಟ್‍ಫೀಲ್ಡ್​ನಲ್ಲಿ ವಾಟರ್‍ ಟ್ಯಾಂಕರ್‍ ಒಂದರ ಡ್ರೈವರ್‍ ಆಗಿದ್ದಾರೆ. ಜೊತೆಗೆ ಆಗಾಗ ಜಿಮ್‍ ಇನ್ಸ್ಟ್ರಕ್ಟರ್‍ ಆಗಿಯೂ ಕೆಲಸ ಮಾಡ್ತಾರೆ.

ಇದನ್ನು ಓದಿ: ವನ್ಯಜೀವಿಗಳ ಪಾಲಿನ ಸಂರಕ್ಷಕ- ಜೀವ ಸಂಕುಲಗಳನ್ನು ಕಾಪಾಡಲು ಪಾಠ ಮಾಡುವ ಶಿಕ್ಷಕ

ತಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲದ ಬಗ್ಗೆ ಬಾಲಕೃಷ್ಣರಿಗೆ ಎಲ್ಲಿಲ್ಲದ ಹೆಮ್ಮೆ. ತಾಯಿ ಪಾರ್ವತಮ್ಮರ ಬೆನ್ನೆಲುಬು,ಸಂಗ್ರಾಮ್‍ಚೌಗ್ಲಾ ಮತ್ತು ಮನಿಷ್ ಕುಮಾರ್‍ ಅನ್ನೋ ಬಾಡಿ ಬಿಲ್ಡರ್‍ಗಳ ಸಪೋರ್ಟ್​ ಅನ್ನು ಬಾಲಕೃಷ್ಣ ಯಾವಾಗ್ಲೂ ನೆನೆಪಿಸಿಕೊಳ್ತಾರೆ. ಬಾಲಕೃಷ್ಣ ಈ ಮಟ್ಟಕ್ಕೆ ಬೆಳೆಯೋಕೆ ತಾಯಿಯನ್ನು ಬಿಟ್ಟು ಯಾರೊಬ್ಬರಿಂದಲೂ ಧನಸಹಾಯ ಸಿಕ್ಕಿಲ್ಲ. ಸರ್ಕಾರ ಕೂಡ ಇವ್ರ ಪ್ರತಿಭೆಯನ್ನು ಗುರುತಿಸಿಲ್ಲ.

ಆಸೆ, ಕನಸು, ಸಾಧನೆ ಅನ್ನೋದು ಯಾರೊಬ್ಬರ ಸ್ವತ್ತು ಅಲ್ಲ ಅನ್ನೋದನ್ನು ಬಾಲಕೃಷ್ಣ ಸಾಬೀತುಪಡಿಸಿದ್ದಾರೆ. ಸರ್ಕಾರ ಇಂತಹ ಪ್ರತಿಭೆಗಳನ್ನು ಗುರುತಿಸಿ ಅವ್ರಿಗೆ ಪ್ರೋತ್ಸಾಹ ನೀಡಿದ್ರೆ, ದೇಶದ ಕೀರ್ತಿ ಮತ್ತಷ್ಟು ಹೆಚ್ಚೋದ್ರಲ್ಲಿ ಸಂಶಯ ಇಲ್ಲ. ಒಂದು ವಿಷಯದಲ್ಲಿ ಆಸಕ್ತಿ, ಶ್ರದ್ಧೆ ಮನುಷ್ಯನನ್ನು ಉನ್ನತ ಮಟ್ಟಕ್ಕೆ ಏರಿಸಬಲ್ಲದು ಅನ್ನೋದಕ್ಕೆ ಬಾಲಕೃಷ್ಣ ಅವ್ರು ಒಂದು      ಉದಾಹರಣೆ. ಬೆಳೆಯುವ ಅದೆಷ್ಟೋ ಮಕ್ಕಳಿಗೆ ಸ್ಪೂರ್ತಿಕೂಡ ಹೌದು. ಇವರ ಕೀರ್ತಿ ಮತ್ತಷ್ಟು ದೇಶಗಳಲ್ಲಿ ಹರಡಲಿ, ಇವರ ಸಾಧನೆ ಮತ್ತಷ್ಟು ಜನರನ್ನು ಹುರಿದುಂಬಿಸಲಿ ಅಂತ ಹಾರೈಸೋಣ.

ಇದನ್ನು ಓದಿ:

1. ಸೈಕಲ್ ಸವಾರಿ ಮಾಡುತ್ತಲೇ ಚೆನ್ನೈ ನಗರದ ರಕ್ಷಣೆಗಿಳಿದ ಖಾಕಿ ಪಡೆ..

2. ಐದು ತಲೆಮಾರಿನ ಗಾಯಕರಿಂದ ನಾಡಗೀತೆ- ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಸಾಹಸ

3. ಇದು ಸ್ಟಿಕ್ಕರ್​ ಹಿಂದಿರುವ ಕಥೆ..! ಕರಣ್​ ಶ್ರಮದ ಚರಿತ್ರೆ..!