ಆವೃತ್ತಿಗಳು
Kannada

ಸರಕು ಸಾಗಣಿಕೆಯ ಚಿಂತೆ ನಿಮಗೇಕೆ- ಪೋರ್ಟರ್​ ಆ್ಯಪ್​ನಲ್ಲಿ ಸಿಗುತ್ತೆ ಉತ್ತರ

ಟೀಮ್​ ವೈ.ಎಸ್​. ಕನ್ನಡ

22nd Sep 2016
Add to
Shares
7
Comments
Share This
Add to
Shares
7
Comments
Share

ಸಿಲಿಕಾನ್ ಸಿಟಿ ಬೆಂಗಳೂರಿನಂತಹ ನಗರಗಳಲ್ಲಿ ಮನೆ ಸಾಮಾನುಗಳನ್ನು ಒಂದೆಡೆಯಿಂದ ಮತ್ತೊಂಡೆಗೆ ವರ್ಗಾಯಿಸುವಾಗ ಆಗುವ ತೊಂದರೆ ಅಷ್ಟಿಷ್ಟಲ್ಲ. ಇದಕ್ಕಾಗಿ ನಾವು ಟ್ರಕ್​ಗಳು ಇರುವ ಜಾಗಕ್ಕೆ ಹೋಗಿ ಅವರೊಂದಿಗೆ ಚೌಕಾಸಿ ಮಾಡುತ್ತಾ ನಿಲ್ಲಬೇಕು.ಇದನ್ನು ನಿವಾರಿಸಲು ಮೂವರು ಐಐಟಿ ಪಧವೀದರರು ಓಲಾ ಮತ್ತು ಉಬರ್ ಮಾದರಿಯಲ್ಲಿ ‘ಪೋರ್ಟರ್’ ಎಂಬ ಸರಕು ಸಾಗಾಟದ ಸ್ಟಾರ್ಟ್ ಆಪ್ ಪ್ರಾರಂಭಿಸಿದ್ದಾರೆ.

image


ಹೌದು ಬೆಂಗೂರಿನಂತಹ ಮಹಾನಗರದಲ್ಲಿ ಬಾಡಿಗೆಗೆ ಸರಕು ಸಾಗಾಣೆ ವಾಹನಗಳನ್ನು ತೆಗೆದುಕೊಳ್ಳುವುದು ಸಾಕಷ್ಟು ಕಷ್ಟದ ಕೆಲಸ. ಗ್ರಾಹಕರ ರೇಟ್​ಗೆ ಅವರು ಬರುವುದಿಲ್ಲ, ಅವರ ರೇಟ್ ಗ್ರಾಹಕರಿಗೆ ದುಬಾರಿಯಾಗಿರುತ್ತದೆ. ಇದನ್ನು ಮನಗಂಡ ಐಐಟಿ ಪಧವೀದರರಾದ ಪ್ರಣವ್ ಗೋಯೆಲ್, ಉತ್ತಮ್ ದಿಗ್ಗಾ, ವಿಕಾಸ್ ಚೌಧರಿ ಎಂಬ ಮೂವರು ಯುವಕರ ಒಂದು ಸ್ಟಾರ್ಟ್ ಆಪ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಂದು ಆ್ಯಪ್ ಕೂಡಾ ಇವರು ಅಭಿವೃದ್ಧಿ ಪಡಿಸಿದ್ದು ನೀವು ಅದನ್ನು ಡೌನ್​ಲೋಡ್ ಮಾಡಿಕೊಂಡರೆ ಟ್ಯಾಕ್ಸಿ ಸೇವೆಯನ್ನು ಬುಕ್ ಮಾಡುವ ರೀತಿಯಲ್ಲಿ ಈ ಸರಕು ಸಾಗಾಣೆ ವಾಹನವನ್ನು ಬುಕ್ ಮಾಡಿ ನಿಮ್ಮ ಮನೆ ಬಾಗಿಲಿಗೆ ಬರುವಂತೆ ಮಾಡಬಹುದು.

ಇದನ್ನು ಓದಿ: 60 ರೂಪಾಯಿ ಸಂಬಳ ತರುತ್ತಿದ್ದವ ಈಗ ಕೋಟಿ ಒಡೆಯ

ವಾಹನಗಳನ್ನು ಹೊಂದಿರುವ ಚಾಲಕರು ಟ್ಯಾಕ್ಸಿ ಸೇವೆಗಳಲ್ಲಿ ತಮ್ಮನ್ನು ನೋಂದಾಯಿಸಿಕೊಂಡಂತೆ ಇಲ್ಲಿಯೂ ವಾಹನವನ್ನು ನೋಂದಣಿ ಮಾಡಿಕೊಳ್ಳಬಹುದು. ಕ್ಯಾಂಟರ್ ಸ್ಟ್ಯಾಂಡ್​ನಲ್ಲಿ ನಿಂತು ಗ್ರಾಹಕರಿಗಾಗಿ ಕಾಯುವ ಬದಲಿಗೆ ಈ ಆ್ಯಪ್ ಬಳಸಿಕೊಂಡರೆ ಚಾಲಕರು ಹೆಚ್ಚು ಹಣ ಗಳಿಸಬಹುದು. ಪ್ರತಿ ದಿನ 3 ಕ್ಕೂ ಹೆಚ್ಚು ಟ್ರಿಪ್ ಮಾಡಿ ಹೆಚ್ಚು ಆದಾಯಗಳಿಸಬಹುದು. ಒಂದು ಟ್ರಿಪ್ ಮಾಡಿಕೊಂಡು ವಸ್ತುಗಳನ್ನು ಡೆಲಿವರಿ ಮಾಡಿದ ನಂತರ ವಾಪಾಸ್ ಬರುವಾಗಲು ಮತ್ತೊಂದು ಬಾಡಿಗೆ ಪಡೆಯುವ ಅವಕಾಶಗಳು ಹೆಚ್ಚಾಗಿ ಇರುತ್ತದೆ.

image


ಈ ಸ್ಟಾರ್ಟ್ಅಪ್ ಆರಂಭಿಸಿ ಕೆಲವೇ ದಿನಗಳಲ್ಲಿ ಈ ಮೂವರು ಯುವಕರು ಇದನ್ನು ಬೆಂಗಳೂರು ಮಾತ್ರವಲ್ಲದೆ ಇನ್ನಿತರ ನಗರಗಳಿಗೂ ಈ ಉದ್ಯಮ ವಿಸ್ತರಿಸಿದ್ದಾರೆ . ಈ ಮೂಲಕ ಲಕ್ಷಗಟ್ಟಲೆ ಡೆಲಿವರಿಗಳನ್ನು ಈಗಾಗಲೇ ಈ ಪೋರ್ಟರ್ ಕಂಪನಿ ಮಾಡಿದೆ. ಸರಕು ಸಾಗಾಣೆ ಕ್ಷೇತ್ರಕ್ಕೆ ತಂತ್ರಜ್ಞಾನದ ಸ್ಪರ್ಶ ನೀಡಿ ಅದರಿಂದ ಗ್ರಾಹಕರಿಗೆ ಮತ್ತು ಚಾಲಕರಿಗೆ ಅನುಕೂಲ ಮಾಡುವುದು ಈ ಮೂವರು ಯುವಕರ ಮುಖ್ಯ ಉದ್ದೇಶವಾಗಿದೆ. ಈ ಉದ್ದೇಶದಿಂದಲೇ ಈ ಸ್ಟಾರ್ಟ್ಅಪ್ ಆರಂಭವಾಗಿದೆ.

ಯಾವ್ಯಾವ ವಾಹನಗಳು ಲಭ್ಯವಿದೆ..?

’ಪೋರ್ಟರ್​ನಲ್ಲಿ ಟಾಟಾ ಏಸ್, ಮಹಿಂದ್ರಾ ಬುಲೇರೋ,407, ಮಿನಿ ಟ್ರಕ್, ಕ್ಯಾಂಟರ್​ಗಳನ್ನು ಸೇರಿಸಬಹುದು. ಈ ಕಂಪನಿ ಜತೆಗೆ ಟೈ ಆಪ್ ಆಗಿ ಆ್ಯಪ್​ನಲ್ಲಿ ಟ್ರಕ್​ಗಳನ್ನು ರಿಜಿಸ್ಟರ್ ಮಾಡಿಕೊಂಡರೆ ಸಾಕು ಅವರು ಆ ಕಂಪನಿಯ ಸದಸ್ಯರಾಗುತ್ತಾರೆ.

image


ಕಾರ್ಯನಿರ್ವಹಣೆ ಹೇಗೆ..?

ಗ್ರಾಹಕರಾದರೆ ಪೋರ್ಟರ್ ಆ್ಯಪ್​ನ್ನು ಡೌನ್​ಲೋಡ್ ಮಾಡಿಕೊಂಡು ನೊಂದಾಯಿಸಿಕೊಳ್ಳಬೇಕು. ಅದರಲ್ಲಿ ನೀವು ಸರ್ಚ್ ಮಾಡಿದಾಗ ನಿಮ್ಮ ಸಮೀಪದ ಟ್ರಕ್​ನ್ನು ತೋರಿಸುತ್ತದೆ, ಆಗ ನೀವು ಓಕೆ ಎಂದರೆ ಸಾಕು ಟ್ರಕ್ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ವಾಹನ ಬರುವುದು ತಡವಾದರೆ ನಿಮ್ಮ ಆ್ಯಪ್​ನಲ್ಲಿರುವ ಕಾಲ್ ಸೆಂಟರ್ ನಂಬರ್​ಗೂ ಕರೆ ಮಾಡಬಹುದು. ನೀವು ಸರಕು ತುಂಬಿದ ವಾಹನವನ್ನು ಅಡ್ರೆಸ್ ಹೇಳಿ ಕಳುಹಿಸಿದರೆ ಅದು ಯಾವ ಮಾರ್ಗದಲ್ಲಿ ಹೋಗುತ್ತಿದೆ ಎಂಬುದನ್ನು ಕುಳಿತಲ್ಲಿಯೇ ಟ್ರ್ಯಾಕ್ ಮಾಡಬಹುದು. ಅಂತಹ ವ್ಯವಸ್ಥೆಯೂ ಈ ಪೊರ್ಟರ್​ನಲ್ಲಿ ಇದೆ. ಈ ಆ್ಯಪ್ ಮೂಲಕ ನೀವು ಸರಕು ಸಾಗಣೆ ಮಾಡಿದರೆ ಹೊರಗಿಗಿಂತ ಶೇ 25 ರಷ್ಟು ಬಾಡಿಗೆ ಹಣವನ್ನು ಉಳಿಸಬಹುದು. ಸುಮಾರು 800ಕ್ಕೂ ಹೆಚ್ಚು ವಾಹನಗಳು ಬೆಂಗಳೂರಿನಲ್ಲಿ ಈ ಪೊರ್ಟರ್ ಸ್ಟಾರ್ಟಅಪ್ ಮೂಲಕ ಕಾರ್ಯನಿರ್ವಹಿಸುತ್ತಿವೆ. ಒಟ್ಟಿನಲ್ಲಿ ಈ ಐಐಟಿ ಪದವೀಧರರ ಹೊಸ ಆಲೋಚನೆಯಿಂದಾಗಿ ಸರಕು ಸಾಗಣೆ ವಾಹನಕ್ಕೂ ತಂತ್ರಜ್ಞಾನದ ಸ್ಪರ್ಶ ಸಿಕ್ಕಿ, ಕಡಿಮೆ ಬಾಡಿಗೆ ದರದಲ್ಲಿ ಸರಕು ಸಾಗಾಣೆ ವಾಹನ ದೊರೆಯುವಂತಾಗಿದೆ. ಚಾಲಕರಿಗೂ ಹೆಚ್ಚಿನ ಲಾಭ ಸಿಗುವಂತೆ ಮಾಡಿದ್ದಾರೆ. ಅಪ್ಲಿಕೇಶನ್ ಎಲ್ಲರಿಗೂ ಮಾದರಿ ಮಾತ್ರವಲ್ಲದೆ ಇದರ ವೆಬ್​ಸೈಟ್ ಕೂಡಾ ಇದ್ದು ಇದರ ಮೂಲಕವೂ ವಾಹನಗಳನ್ನು ಬುಕ್ ಮಾಡಬಹುದು.

ಇದನ್ನು ಓದಿ:

1. ಹಠ+ ಛಲ+ ಸಾಧನೆ = ದೀಪಾಲಿ ಸಿಕಂದ್

2. ಕ್ರೀಡಾಪಟುಗಳ ಬದುಕಿನ ವ್ಯಥೆ- ಬಾಲಿವುಡ್​ ಮಂದಿಗೆ ಅದೇ ಕಥೆ..!

3. ಹಸಿವಿನ ಬಗ್ಗೆ ಚಿಂತೆ ಬಿಡಿ- 7thಸಿನ್ ​ಫುಡ್​ಟ್ರಕ್​ಗೆ ವಿಸಿಟ್​ ಕೊಡಿ

Add to
Shares
7
Comments
Share This
Add to
Shares
7
Comments
Share
Report an issue
Authors

Related Tags