ಆವೃತ್ತಿಗಳು
Kannada

ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಂತ ಉದ್ಯಮ ಆರಂಭಿಸಲು ಸರಿಯಾದ ಸಮಯ ಯಾವುದು..?

ಟೀಮ್​​ ವೈ.ಎಸ್​​.

8th Nov 2015
Add to
Shares
3
Comments
Share This
Add to
Shares
3
Comments
Share

ತಮ್ಮ ಬಹಳಷ್ಟು ಸಮಯವನ್ನು ಓದುವುದು, ಬರೆಯುವುದು ಮತ್ತು ಉದ್ಯಮಗಳಿಗೆ ಮಾರ್ಕೆಟಿಂಗ್ ಪ್ಲಾನ್ ಮಾಡಿಕೊಡುವುದರಲ್ಲೇ ಕಳೆಯುತ್ತಾರೆ ಪ್ರದೀಪ್ ಗೋಯೆಲ್. ಪ್ರದೀಪ್ ಅವರಿಗೆ ಹೊಸ ಉದ್ಯಮಿಗಳಿಗೆ ಸಹಾಯ ಮಾಡುವುದು ಇಷ್ಟದ ಕೆಲಸ. ತಮ್ಮ ಉದ್ಯಮ ಯಾನವನ್ನು ಡಬ್ಲ್ಯುಡಬ್ಲ್ಯುಡಬ್ಲ್ಯು.ಸ್ಟಾರ್ಟ್‌ಅಪ್‌ಕರ್ಮ.ಕೋ ದಲ್ಲಿ ಹಂಚಿಕೊಂಡಿದ್ದಾರೆ ಪ್ರದೀಪ್ ಗೋಯೆಲ್. ಹೊಸ ಉದ್ಯಮ ಆರಂಭಿಸುವ ಸಲುವಾಗಿ ತಮ್ಮ ಉದ್ಯೋಗವನ್ನು ಯಾವಾಗ ತ್ಯಜಿಸಬೇಕು ಎಂಬುದರ ಕುರಿತು ಇಲ್ಲಿ ತಿಳಿಸಿದ್ದಾರೆ ಪ್ರದೀಪ್. ಹಾಗಾದರೆ ಪ್ರದೀಪ್ ಉದ್ಯಮಿಗಳಿಗೆ ಯಾವ ಸಲಹೆ ನೀಡುತ್ತಾರೆಂಬುದನ್ನು ಅವರ ಮಾತುಗಳಲ್ಲೇ ತಿಳಿಯೋಣ.

ನಾನು ನನ್ನ ಉದ್ಯಮದ ಅನುಭವಗಳನ್ನು ಮತ್ತು ಮೊದಲ ಉದ್ಯಮದಲ್ಲಿ ವಿಫಲತೆ ಅನುಭವಿಸಿದ ನಂತರವೂ ಹೇಗೆ ಯಶಸ್ವಿಯಾದೆ ಎಂಬುದನ್ನು ಜನರೊಂದಿಗೆ ಹಂಚಿಕೊಳ್ಳುತ್ತೇನೆ. ಉದ್ಯಮಿಯಾಗುವುದು ಅಷ್ಟೊಂದು ಸುಲಭವಾದ ವಿಚಾರವಲ್ಲ. ಪ್ರತಿ ದಿನವೂ ಅನೇಕ ನೋವುಗಳನ್ನು ನೀವು ಸಹಿಸಿಕೊಳ್ಳಬೇಕಾಗುತ್ತದೆ. ತಮ್ಮ ಉದ್ಯಮವನ್ನು ಆರಂಭಿಸುವುದಕ್ಕಾಗಿ ಈಗಿರುವ ಉದ್ಯೋಗವನ್ನು ಬಿಟ್ಟುಬಿಡಲು ಜನರಿಗೆ ಧೈರ್ಯವಿರುವುದಿಲ್ಲ. ಏಕೆಂದರೆ ಅವರಿಗೆ ಅನಿಶ್ಚಿತತೆಯ ಭಯವಿರುತ್ತದೆ. ಆದರೆ ಅನಿಶ್ಚಿತತೆಯ ಮುಂದಿನ ಹಂತದಲ್ಲಿ ಅನೇಕ ಸಾಧ್ಯತೆಗಳಿರುತ್ತವೆ ಎಂಬುದನ್ನು ಎಂದಿಗೂ ಮರೆಯಬಾರದು.

image


ಕಾಲೇಜು ಓದುತ್ತಿರುವಾಗಲೇ ಉದ್ಯಮ ಕ್ಷೇತ್ರಕ್ಕೆ ಧುಮುಕುವುದು ಉತ್ತಮ ಸಂದರ್ಭ ಎಂಬುದು ನನ್ನ ಅಭಿಪ್ರಾಯ. ಇದು ಯಾರಿಗೇ ಆದರೂ ಅತ್ಯಂತ ಕಷ್ಟಕರವಾದ ನಿರ್ಧಾರ, ಆದರೆ ನನಗೆ ನಾನು ಆ ಸಮಯಕ್ಕೆ ವಾಪಸ್ ಹೋಗಿ ಹೊಸತಾಗಿ ಜೀವನವನ್ನು ಕಟ್ಟಬೇಕೆಂಬ ಆಸೆ. ನಿಮಗೆ ಕಾಲೇಜಿನ ಜೊತೆ ಜೊತೆಗೆ ಉದ್ಯಮವನ್ನು ನಡೆಸಲಾಗುವುದಿಲ್ಲ ಎಂದೆನಿಸಿದರೆ ಪದವಿ ಮುಗಿಸಿದ ಕೂಡಲೇ ಉದ್ಯಮವನ್ನು ಆರಂಭಿಸಿ. ಇಲ್ಲದಿದ್ದರೆ ಕಾರ್ಪೋರೇಟ್ ವಲಯದ ನಿಮ್ಮ ಕೆಲಸ ನಿಮ್ಮನ್ನು ಜಡಗೊಳಿಸುತ್ತದೆ ಮತ್ತು ಹೆದರುವಂತೆ ಮಾಡುತ್ತದೆ. ನಿಮ್ಮ ಕನಸಿನಂತೆ ಬದುಕಲು ನಿಮಗೆ ಉದ್ಯೋಗದಲ್ಲಿ 7 ವರ್ಷಗಳ ಕಾಲ ಕಾರ್ಯನಿರ್ವಹಿಸಲೇಬೇಕಾದ ಪರಿಸ್ಥಿತಿಯೂ ಬರಬಹುದು.

ನಿಮ್ಮೊಂದಿಗೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತೇನೆ. ಇದರಿಂದ ನೀವು ನಿಮ್ಮ ಕೆಲಸ ಬಿಟ್ಟು ಉದ್ಯೋಗ ಆರಂಭಿಸಲು ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಬಹುದು.

ಮೊದಲಿಗೆ ನಿಮಗೆ ನೀವೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ

ನೀವು ಏಕಾಗಿ ಉದ್ಯಮವನ್ನು ಆರಂಭಿಸಬೇಕು? ಹಣ ಮತ್ತು ಖ್ಯಾತಿಗಾಗಿಯೇ?, ನಿಮಗೆ ನೀವೇ ಬಾಸ್ ಆಗುವುದಕ್ಕಾಗಿಯೇ? ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿಯೇ?

ನಿಮ್ಮ ದೈನಂದಿನ ವೆಚ್ಚ ಎಷ್ಟು?

ನಿಮ್ಮ ಬಂಡವಾಳ ಎಷ್ಟು? ನಿಮ್ಮನ್ನು ಮತ್ತು ನಿಮ್ಮ ಉದ್ಯಮವನ್ನು 2 ವರ್ಷಗಳ ಕಾಲ ನಿರಾತಂಕವಾಗಿ ಸಾಗಿಸುವಷ್ಟು ಬಂಡವಾಳ ನಿಮ್ಮಲ್ಲಿದೆಯೇ?

ನಿಮಗೆ ಆದಾಯದ ಬೇರೆ ಮೂಲಗಳೇನಾದರೂ ಇದೆಯೇ?

ನಿಮಗೇನಾದರೂ ಬಾಧ್ಯತೆಗಳಿವೆಯೇ?

ನಿಮ್ಮ ಹತ್ತಿರದ ಭವಿಷ್ಯದಲ್ಲಿ ಏನಾದರೂ ದೊಡ್ಡ ಖರ್ಚು ಬರುವ ಸಾಧ್ಯತೆ ಇದೆಯೇ?

ನಿಮ್ಮ ವಿಚಾರಗಳನ್ನು ಕಾರ್ಯಗತಗೊಳಿಸಲು ಯಾವುದಾದರೂ ಪ್ರಾಥಮಿಕ ಕೌಶಲ್ಯಗಳು ನಿಮಗೆ ತಿಳಿದಿವೆಯೇ?

ನಿಮ್ಮ ಯೋಜನೆಯನ್ನು ಸಮರ್ಥವಾಗಿ ಕಾರ್ಯಗತಗೊಳಿಸಲು ಕೋರ್ ಟೀಂ ಅಥವಾ ಅತ್ಯುತ್ತಮ ತಿಳುವಳಿಕೆಯುಳ್ಳ ಜನರ ತಂಡವನ್ನು ನಿಮ್ಮಿಂದ ನೇಮಿಸಿಕೊಳ್ಳಲು ಸಾಧ್ಯವಿದೆಯೇ?

ಈ ಪ್ರಶ್ನೆಗಳಲ್ಲಿ ಬಹುತೇಕ ಪ್ರಶ್ನೆಗಳಿಗೆ ನಿಮ್ಮ ಉತ್ತರಗಳು ನಕಾರಾತ್ಮಕವಾಗಿರುತ್ತದೆ ಮತ್ತು ನಿಮ್ಮ ಕೆಲಸವನ್ನು ಬಿಡುವುದರ ಕುರಿತು ನೀವು ಇನ್ನಷ್ಟು ಚಿಂತಿಸುತ್ತೀರಿ ಎಂಬುದು ನನಗೆ ತಿಳಿದಿದೆ. ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಸಕಾರಾತ್ಮಕ ಉತ್ತರ ದೊರೆತ ಬಳಿಕವಷ್ಟೇ ಉದ್ಯಮವನ್ನು ಪ್ರಾರಂಭಿಸುತ್ತೇನೆ ಎಂದು ನೀವಂದುಕೊಂಡರೆ ಅದು ಎಂದಿಗೂ ಸಾಧ್ಯವಾಗದು.

ಎಲ್ಲಾ ಹಸಿರು ದೀಪಗಳು ಹೊತ್ತಿದ ಬಳಿಕವಷ್ಟೇ ನೀವು ಮನೆ ಬಿಡುತ್ತೀರಿ ಎಂದಾದರೆ ನೀವು ಉನ್ನತ ಹಂತಕ್ಕೇರಲು ಯಾವಾಗಲೂ ಸಾಧ್ಯವಾಗುವುದೇ ಇಲ್ಲ ಎನ್ನುತ್ತಾರೆ ಜಿಗ್ ಜಿಗ್ಲ್ಯಾರ್.

ನಿಮ್ಮ ಉದ್ಯೋಗ ಬಿಡುವುದಕ್ಕೂ ಮೊದಲು ನಿಮ್ಮದೇ ಆದ ಉದ್ಯಮವೊಂದನ್ನು ಆರಂಭಿಸಲು 18 ರಿಂದ 24 ತಿಂಗಳುಗಳ ಕಾಲ ಸರಿಯಾದ ಮಾರ್ಗವನ್ನು ರೂಪಿಸಿಕೊಳ್ಳಬೇಕು.

ನಾನು ಕೆಲಸವನ್ನು ಬಿಡುವ ಮೊದಲು ಕೆಲವು ತಪ್ಪುಗಳನ್ನು ಮಾಡಿದೆ. ಆದರೆ ಉದ್ಯಮಕ್ಕಾಗಿ ನಾನು 24 ತಿಂಗಳ ಕಾಲ ತೆಗೆದುಕೊಂಡು ಮಾರ್ಗವನ್ನು ರೂಪಿಸಿಕೊಂಡಿದ್ದೆ. ಈ ಯಾತ್ರೆಯಲ್ಲಿ ಕೆಲವು ಅದ್ಭುತವಾದ ಜನರನ್ನು ನಾನು ಭೇಟಿಯಾದೆ. ಇವೆರಡೂ ನನ್ನನ್ನು ರಕ್ಷಿಸಿದವು. ನೀವು ಅದೃಷ್ಟವಂತರಾಗಿರಬಹುದು ಅಥವಾ ಅದೃಷ್ಟವಂತರಾಗಿರದೇ ಇರಬಹುದು. ಆದರೆ ನೀವು ಉದ್ಯಮವನ್ನು ಆರಂಭಿಸಲು ನನ್ನ 5 ಅಂಶಗಳ ಮಂತ್ರವನ್ನು ಉದ್ಯೋಗದಲ್ಲಿದ್ದುಕೊಂಡೆ ಅನುಸರಿಸಬಹುದು.

1.ಮೂರರಿಂದ ನಾಲ್ಕು ತಿಂಗಳ ಕಾಲ ಉತ್ಪನ್ನದ ಕನಿಷ್ಟ ಸಾಮರ್ಥ್ಯದ ಕುರಿತು ಕೆಲಸ ಮಾಡಬೇಕು.

ನೀವು ನಿಮ್ಮ ಉದ್ಯೋಗದಲ್ಲಿ ಆದಾಯ ಗಳಿಸುತ್ತಿದ್ದಾಗಲೇ ನಿಮ್ಮ ಉತ್ಪನ್ನದ ಕನಿಷ್ಟ ಸಾಮರ್ಥ್ಯದ(ಎಂವಿಪಿ) ಕುರಿತು ಕಾರ್ಯನಿರ್ವಹಿಸಬೇಕು. ಎಂವಿಪಿ ಕೇವಲ ಮಾದರಿಯಷ್ಟೇ ಅಲ್ಲ. ಕನಿಷ್ಟ ಲಕ್ಷಣಗಳೊಂದಿಗೆ ಕಾರ್ಯನಿರ್ವಹಿಸುವ ಉತ್ಪನ್ನವೂ ಹೌದು. ನಂತರ ನೀವು ಯುಐ/ಯುಎಕ್ಸ್ ಮಾದರಿಯನ್ನು ನಂತರ ಅಭಿವೃದ್ಧಿಪಡಿಸಬಹುದು. ಆದರೆ ಇದು ನಿಮ್ಮ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಮರ್ಥವಾಗಿರಬೇಕು.

2. ತಂಡವನ್ನು ಕಟ್ಟಿ ಮತ್ತು ನಿಮ್ಮೊಂದಿಗೆ ಕೆಲಸ ಬಿಡಲು, ಹೊಸ ಉದ್ಯಮದಲ್ಲಿ ಪಾಲ್ಗೊಳ್ಳಲು ಒಬ್ಬ ವ್ಯಕ್ತಿಯಾದರೂ ನಿಮ್ಮೊಂದಿಗಿರಲಿ.

ಉದ್ಯಮ ಎಂಬುದು ಒಂದು ಏಕಾಂಗಿ ಕ್ಷೇತ್ರ. ನೀವು ನಿಮ್ಮನ್ನು ಹುಡುಕಿಕೊಳ್ಳುವ ದಾರಿಯಲ್ಲಿರುತ್ತೀರಿ. ಆದರೆ ಕನ್ಸಲ್ಟಿಂಗ್ ಉದ್ಯಮ ಹೊರತುಪಡಿಸಿದರೆ ಇನ್ಯಾವುದೇ ಉದ್ಯಮದಲ್ಲಿ ಎಲ್ಲವನ್ನೂ ನೀವೊಬ್ಬರೇ ಮಾಡಲು ಸಾಧ್ಯವಿಲ್ಲ. ನಿಮ್ಮೊಂದಿಗೆ ಕೌಶಲ್ಯ ಹೊಂದಿರುವ, ನಿಮಗೆ ಉತ್ಪನ್ನವನ್ನು ಕಟ್ಟಲು, ಬಿಡುಗಡೆ ಮಾಡಲು ಒಬ್ಬ ವ್ಯಕ್ತಿಯಾದರೂ ಇರಲೇಬೇಕು ಅವರು ನಿಮಗಾಗಿ ಕೆಲಸ ಬಿಡುವ ಬದ್ಧತೆ ಇರುವವರಾಗಿರಬೇಕು. ಆಗ ನೀವು ಒಂದೇ ದೃಷ್ಟಿಕೋನ ಇಟ್ಟುಕೊಂಡು ಕಾರ್ಯನಿರ್ವಹಿಸಬಹುದು.

3. ನಿಮ್ಮ ಖರ್ಚನ್ನು ಕಡಿಮೆ ಮಾಡಿಕೊಳ್ಳಿ ಮತ್ತು ಒಂದು ವರ್ಷಕ್ಕೆ ಸಾಕಾಗುವಷ್ಟು ಹಣವನ್ನು ಉಳಿಸಿಕೊಳ್ಳಿ

ಮಿತವ್ಯಯದಿಂದ ನೀವು ಹೇಗೆ ಜೀವಿಸಬೇಕು ಮತ್ತು ಕಡಿಮೆ ಖರ್ಚಿನಲ್ಲಿ ಬದುಕುವುದನ್ನು ನೀವು ಕಲಿಯಬೇಕು. ವೈಯಕ್ತಿಕವಾಗಿ ಹಾಗೂ ಉದ್ಯಮದಲ್ಲೂ ಇದನ್ನು ಬಳಸಿಕೊಳ್ಳಬೇಕು. ಈಗಷ್ಟೇ ಉದ್ಯಮದಲ್ಲಿ ಹೆಜ್ಜೆ ಇಡುತ್ತಿರುವ ಎಲ್ಲಾ ಉದ್ಯಮಿಗಳು ಪ್ರತಿ ರೂಪಾಯಿಯನ್ನೂ ಉಳಿಸುವುದರ ಬಗ್ಗೆ ಚಿಂತಿಸಲೇಬೇಕು. ಅಂದರೆ ಒಂದು ವರ್ಷ ನೀವು ಆರಾಮವಾಗಿ ಬದುಕಲು ಸಾಕಾಗುವಷ್ಟು ಹಣವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ವೈಯಕ್ತಿಕವಾಗಿ ಅಷ್ಟೇ ಅಲ್ಲದೇ ಉದ್ಯಮ ಕ್ಷೇತ್ರಕ್ಕೂ ಒಂದು ವರ್ಷಕ್ಕೆ ಸಾಕಾಗುವಷ್ಟು ಹಣ ನಿಮ್ಮ ಬಳಿ ಇರಲೇಬೇಕು.

4. ಉತ್ಪಾದನೆಯನ್ನು ಹೆಚ್ಚಿಸಿ

ಇದು ನಿಮ್ಮ ಪಾಲಿನ ಗೇಮ್ ಚೇಂಜರ್ ಹಂತವಾದರೂ ಆಗಬಹುದು. ಉತ್ಪಾದಕತೆಯನ್ನು ಕಡಿಮೆ ಸಮಯದಲ್ಲಿ ಶೇ.150ರಷ್ಟು ಪ್ರಮಾಣಕ್ಕೆ ಹೇಗೆ ಹೆಚ್ಚಿಸಬಹುದೆಂದು ನೀವು ಕಲಿತುಕೊಳ್ಳಬೇಕು. ಈ ಕೌಶಲ್ಯವನ್ನು ಆದಷ್ಟು ಬೇಗ ಸಂಪಾದಿಸಬೇಕು. ಆಗ ನೀವು ನಿಮ್ಮ ಉದ್ಯೋಗದ ಜೊತೆ ಜೊತೆಗೆ ಉದ್ಯಮವನ್ನು ಕಟ್ಟುವ ಕೆಲಸ ಆರಂಭಿಸಬಹುದು. ಕೆಲಸ ಬಿಟ್ಟ ನಂತರ ನೀವು ಇಬ್ಬರು ಮಾಡುವಷ್ಟು ಕೆಲಸವನ್ನು ಒಬ್ಬರೇ ಮಾಡಬೇಕಾಗಿ ಬರಬಹುದು. ಅದಕ್ಕೂ ಸಿದ್ಧರಾಗಿರಬೇಕು.

5. ಮಾರ್ಗದರ್ಶಕರನ್ನು ಪಡೆಯಿರಿ

ನೀವೆಷ್ಟು ಬೇಗ ಮಾರ್ಗದರ್ಶಕರನ್ನು ಪಡೆಯುತ್ತಾರೋ ಅಷ್ಟು ಬೇಗ ನೀವು ಯಶಸ್ಸುಗಳಿಸಲು ಸಾಧ್ಯ. ಪ್ರತೀ ಉದ್ಯಮಿಗೂ ಒಬ್ಬ ಮಾರ್ಗದರ್ಶಕರಿರುತ್ತಾರೆ. ನನ್ನ ಮಾರ್ಗದರ್ಶಕರಿಗೂ ಸಹ ಮಾರ್ಗದರ್ಶಕರಿದ್ದರು.

ಆದರೆ ಎಚ್ಚರವಹಿಸಿ. ಆದರೆ ಉದ್ಯಮವನ್ನು ಆರಂಭಿಸಿದ, ನಿಮಗೆ ಧಾರಾಳವಾಗಿ ಸಲಹೆ ನೀಡುವ ಜನರನ್ನು ಎಂದಿಗೂ ನಂಬಬೇಡಿ. ಅವರು ನಿಮ್ಮ ಕಂಪನಿಯನ್ನು ಆರಂಭಿಸುವ ಬಗ್ಗೆ ಸೂಕ್ತ ಸಲಹೆ ನೀಡಲು ಸಾಧ್ಯವಿಲ್ಲ. ಸ್ವಲ್ಪ ಮಟ್ಟಿನ ಸರಿಯಾದ ಮಾರ್ಗದರ್ಶನವನ್ನು ಮಾತ್ರ ನೀಡಬಹುದು. ನಿಮ್ಮಷ್ಟಕ್ಕೆ ನೀವೇ ಉದ್ಯಮ ನಡೆಸುವುದನ್ನು ಕಲಿಯುವ ತನಕ ಯಾರು ನಿಮ್ಮೊಂದಿಗೆ ಇರುತ್ತಾರೋ, ನಿಮ್ಮ ಕಷ್ಟ ಸುಖದಲ್ಲಿ ಪಾಲುಪಡೆಯುತ್ತಾರೋ ಅಂತಹ ಜನರನ್ನು ಹುಡುಕಿ. ಕೆಲವು ಮಾರ್ಗದರ್ಶಕರು ನಿಮ್ಮಿಂದ ಗೌರವವನ್ನು ಮಾತ್ರ ಬಯಸುತ್ತಾರೆ. ಇನ್ನೂ ಕೆಲವು ಮಾರ್ಗದರ್ಶಕರು ಗೌರವ ಹಾಗೂ ಹಣ ಎರಡನ್ನೂ ಬಯಸುತ್ತಾರೆ. ಆದರೆ ನೀವಿರುವ ಪರಿಸ್ಥಿತಿಯಲ್ಲಿ ನಿಮಗೆ ಯಾವುದು ಉತ್ತಮ ಎಂಬುದನ್ನು ಕಂಡುಕೊಳ್ಳಿ.

Add to
Shares
3
Comments
Share This
Add to
Shares
3
Comments
Share
Report an issue
Authors

Related Tags