ಆವೃತ್ತಿಗಳು
Kannada

ಐಟಿ,ಜೈವಿಕ ವಿಜ್ಞಾನದ ಮತ್ತು AI ಜಾದು: ಕೇವಲ ಡಿ‌ಎನ್‌ಎ ಎಳೆಗಳಿಂದ ವ್ಯಕ್ತಿಯ ಪತ್ತೆ

YourStory Kannada
20th Nov 2017
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
image


ಕಂಪ್ಯೂಟಿಂಗ್ ಸಿಸ್ಟಮ್‌ಗಳಲ್ಲಿನ ಪ್ರಗತಿಗಳೊಂದಿಗೆ, ಜೀವಶಾಸ್ತ್ರವು ಈಗ ಐಟಿ ಜೊತೆ ಒಮ್ಮುಖವಾಗಿದೆ. ಉದಾಹರಣೆಗೆ, ಒಂದು ಪ್ರದೇಶದ ಜನಸಂಖ್ಯೆಯಿಂದ ಸಂಗ್ರಹಿಸಲಾದ ಡೇಟಾವನ್ನು ಮತ್ತು ಇತರರ ಪ್ರದೇಶಗಳ ಡೇಟಾ ಜೊತೆಗೆ ತಾಳಾಮೇಳ ಮಾಡಿ ನೋಡಿದಾಗ ಗುಂಪುಗಳಾದ್ಯಂತ ಜನಸಂಖ್ಯೆಯ ವಲಸೆಯಿದೆ ಎಂದು ನಮಗೆ ತಿಳಿಯುತ್ತದೆ.

ಇದರಿಂದಾಗಿ, ವಲಸೆ ವಿಜ್ಞಾನಿಗಳು ವಲಸೆ, ಮದುವೆಗಳು ಮತ್ತು ಅಂತರ್ಜಾತಿಗಳ ಆಧಾರದ ಮೇಲೆ ರೋಗಗಳ ರೂಪಾಂತರವನ್ನು ಅಧ್ಯಯನ ಮಾಡಬಹುದು. ಇಂತಹ ಅಧ್ಯಯನವು ಬಹುಶಃ ಡೇಟಾ ವಿಜ್ಞಾನ, ಸಮಾಜಶಾಸ್ತ್ರ ಮತ್ತು ಜೀವಶಾಸ್ತ್ರದ ಅತ್ಯುತ್ತಮ ಸಂಯೋಜನೆಯಾಗಿದೆ.

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ’ಬಯೋ-ಐಟಿ ಕನ್ವರ್ಜೆನ್ಸ್: ಡಾಟಾ, ಸಿಸ್ಟಮ್ಸ್ ಮತ್ತು ಬಯೋಟೆಕ್ನಾಲಜಿ’ ಎಂಬ ತಜ್ಞಸಮಿತಿಯ ಚರ್ಚೆಯಲ್ಲಿ, ವಿಜ್ಞಾನಿಗಳು ಡಾಟಾವನ್ನು ವೇಗಗೊಳಿಸಲು ಮತ್ತು ಮಾನವನ ಡಿ‌ಎನ್‌ಎಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ತಂತ್ರಜ್ಞಾನವು ಅನುಮತಿಸುತ್ತಿದೆ ಎಂಬ ವಿಷಯದ ಮೇಲೆ ಗಹನವಾದ ಚರ್ಚೆ ಮಾಡಿದರು.

ಈ ಸಮಿತಿಯು ಕೆಳಗೆ ತಿಳಿಸಿರುವ ಘಟಾನುಘಟಿ ತಜ್ಞರನ್ನು ಒಳಗೊಂಡಿತ್ತು.ವಿಜಯ್ ಚಂದ್ರು, ಅಧ್ಯಕ್ಷ, ಸ್ಟ್ರಾಂಡ್ ಲೈಫ್ಸೈನ್ಸ್; ಡಾ. ವಂಶಿ ವೀರಮಚನನಿ, ಸಿ‌ಎಸ್‌ಒ, ಸ್ಟ್ರಾಂಡ್ ಲೈಫ್ಸೈನ್ಸನ್ಸ್; ಪ್ರೊಫೆಸರ್ ಎಂ.ಎಸ್. ಮಧುಸೂದನ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ (ಐ‌ಐ‌ಎಸ್‌ಇ‌ಆರ್) ಸಹಾಯಕ ಪ್ರೊಫೆಸರ್; ಡಾ. ಹರ್ಷ ಗೌಡ, ಫ್ಯಾಕಲ್ಟಿ ಸೈಂಟಿಸ್ಟ್, ಇನ್ಸ್ಟಿಟ್ಯೂಟ್ ಆಫ್ ಬಯೋ‌ಇನ್ಫರ್ಮ್ಯಾಟಿಕ್ಸ್ (ಐ‌ಒಬಿ); ಡಾ. ಕೆ. ಥಂಗರಾಜ್, ಹಿರಿಯ ಪ್ರಿನ್ಸಿಪಾಲ್ ಸೈಂಟಿಸ್ಟ್, ಸೆಂಟರ್ ಫಾರ್ ಸೆಲ್ಯುಲರ್ & ಮಾಲಿಕ್ಯೂಲರ್ ಬಯಾಲಜಿ (ಸಿಸಿಬಿಬಿ); ಡಾ ವೇದಮ್ ರಾಮ್ಪ್ರಸಾದ್, ಸಿ‌ಒ‌ಒ, ಸ್ಟ್ರಾಂಡ್ ಲೈಫ್ಸೈನ್ಸ್; ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫಾರ್ಮ್ಯಾಟಿಕ್ಸ್ ಅಂಡ್ ರಿಸರ್ಚ್ (ಎನ್ಸಿಡಿ‌ಐ‌ಆರ್) ನಿರ್ದೇಶಕ ಡಾ.ಪ್ರಶಾಂತ್ ಮಾಥೂರ್ ಮತ್ತು ಪ್ರೊಫೆಸರ್ ಮತ್ತು ಕೋ-ಚೇರ್, ಬಯೋಸಿಸ್ಟಮ್ಸ್ ಸೈನ್ಸ್ & ಇಂಜಿನಿಯರಿಂಗ್ ಕೇಂದ್ರ, ಐ‌ಐ‌ಎಸ್ಸಿ ಪ್ರೊಫೆಸರ್ ಜಿ.ಕೆ ಅನಂತಶೇಶ್.

ನಾವು ಕೃತಕ ಇಂಟೆಲಿಜೆನ್ಸ್ (ಎ‌ಐ) ಅನ್ನು ತರುವಲ್ಲಿ ಅದು ರಕ್ತ ಮತ್ತು ಜೊಲ್ಲಿನ ಮಾದರಿಗಳ ಮೂಲಕ ಜೀನೋಮಿಕ್ಸ್ನ ಅರ್ಥವನ್ನು ಬಹಳ ಸುಲಭವಾಗಿ ಮಾಡಬಹುದು. ಕ್ಯಾನ್ಸರ್ನಂತಹ ರೋಗಗಳು ಬೇಗನೆ ಟ್ರ್ಯಾಕ್ ಮಾಡಬಹುದು ಮತ್ತು ಚಿಕಿತ್ಸೆಯನ್ನು ತ್ವರಿತವಾಗಿ ಸೂಚಿಸಬಹುದು.

ಐ‌ಐ‌ಎಸ್ಸಿನಲ್ಲಿನ ಬೋಧನಾ ವಿಭಾಗದ ವಿಜಯ್ ಚಂದ್ರು ಹೀಗೆ ಹೇಳುತ್ತಾರೆ: "ಇಂದಿನ ಡಿ‌ಎನ್‌ಎ ಸಾಧನಗಳಿಂದ ತಾಂತ್ರಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳ ಅತ್ಯುತ್ತಮತೆಯನ್ನು ಸಂಯೋಜಿಸಿರುವ ಅತೀ ಹೆಚ್ಚು ಮಾಹಿತಿಯನ್ನು ಅರಿಯಬಹುದು. ಕಾಂಪ್ಯುಟೇಶನಲ್ ಬಯಾಲಜಿ ಮತ್ತು 3D ಸ್ಟ್ರಕ್ಚರ್ಗಳು ಬಯೋ-ಟೆಕ್ನಾಲಜಿ ಕ್ಷೇತ್ರದಲ್ಲಿ ಹಲವಾರು ಹೊಸ ಆವಿಷ್ಕಾರಗಳನ್ನು ತರುವಂತಹ ಜೈವಿಕ-ಅಂಕಿ-ಅಂಶಗಳ ಯುಗವನ್ನು ಆಶಿಸುತ್ತವೆ.

CSIR-CCMB ನಲ್ಲಿರುವ ಹಿರಿಯ ಸಂಶೋಧನಾ ವಿಭಾಗದ ಅಧ್ಯಾಪಕ ಡಾ. ಕೆ. ಥಂಗರಾಜ್, "ಸೋಂಕುಶಾಸ್ತ್ರ ಮತ್ತು ಅಂಕಿ‌ಅಂಶಗಳ ಸಾಕ್ಷ್ಯಾಧಾರಗಳು ನಾವು ನಿಜವಾಗಿಯೂ ಯಾರೆಂದು ತೋರಿಸಿವೆ ಮತ್ತು ಮಾನವನ ವಿಕಸನ ಮತ್ತು ರೋಗದ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ನಾವು ಆಳವಾಗಿ ಅಧ್ಯಯನ ಮಾಡಬೇಕಾಗಿದೆ ಮತ್ತು ರಾಜಕೀಯ-ಸಾಮಾಜಿಕ ವರ್ಗಗಳ ಮೂಲಗಳನ್ನು ಪತ್ತೆಹಚ್ಚಲು ಸಹಾಯ ಮಾಡಿವೆ. " ಎಂದರು.

ವಾಸ್ತವವಾಗಿ ಮಾನವ ವಲಸೆಗಳು ಸಾಕಷ್ಟು ಇರುವುದರಿಂದ ಸಂಸ್ಕೃತಿ ನಿರಂತರವಾಗಿ ಬದಲಾಗುತ್ತಿರುವದನ್ನು ಡೇಟಾವು ನಮಗೆ ಹೇಳುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಿವಾಸಿಗಳು ಆಫ್ರಿಕಾದಿಂದ ವಲಸೆ ಬಂದವರು ಮತ್ತು ಮೊದಲ ವಲಸಿಗರು ಎಂದು ದತ್ತಾಂಶವು ತೋರಿಸುತ್ತದೆ.

ವಿಜ್ಞಾನಿಗಳು, ಭಾರತದಲ್ಲಿ ಅನೇಕ ತರಹದ ವಸಾಹತುಗಳಿದ್ದಾರೆ. ಗಣಕಯಂತ್ರದ ಜೀವಶಾಸ್ತ್ರ ಮತ್ತು ತಂತ್ರಜ್ಞಾನದ ಜೊತೆಗೆ ಅಧ್ಯಯನ ಮಾಡಿ ರೋಗಗಳಿಗೆ ಸಾಕಷ್ಟು ಪತ್ತೆ ಹಚ್ಚಬಹುದ್ ಎಂದು ಅಭಿಪ್ರಾಯ ಪಟ್ಟರು.

ಸ್ಟ್ರಾಂಡ್ ಲೈಫ್ ಸೈನ್ಸಸ್ನ ವಮ್‍ಸಿ ವೀರಮಾಚೇನಿ ಹೇಳುತ್ತಾರೆ: "ಪ್ರತಿ ದ್ರಾವಣದ ಮಾದರಿ 5 ಜಿಬಿ ಡೇಟಾವನ್ನು ನೀಡುತ್ತದೆ ಮತ್ತು ಕಂಪ್ಯೂಟರ್ ರೋಗವು ಹೇಗೆ ಹರಡುತ್ತಿದೆ ಎಂಬುದನ್ನು ತೋರಿಸುತ್ತದೆ."

ಮೆಷಿನ್ ಲರ್ನಿಂಗ್ (ಎಮ್‌ಎಲ್) ಮತ್ತು ಎ‌ಐ ಜಿನೊಮ್ ಸೀಕ್ವೆನ್ಸಿಂಗ್ ಕೆಲಸವನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಇದು ಜನಸಂಖ್ಯಾ ಎಳೆಗಳ ಆಧಾರದ ಮೇಲೆ ವೈದ್ಯಕೀಯ ಕಾರ್ಯವಿಧಾನಗಳನ್ನು ಯೋಜಿಸಲು ಆರೋಗ್ಯ ಕಂಪನಿಗಳು ಮತ್ತು ಸರ್ಕಾರಗಳಿಗೆ ಅನುಕೂಲ ಕಲ್ಪಿಸುತ್ತದೆ.

ದುರದೃಷ್ಟವಶಾತ್, ಈ ವಿಧಾನವು ಮುಖ್ಯವಾಹಿನಿಯೆನಿಸಬೇಕಿದೆ ಮತ್ತು ಜೀನೋಮ್ ಅನುಕ್ರಮಣಿಕೆಯ ಡೇಟಾಬೇಸ್‌ಗಳನ್ನು ರಚಿಸಲು ಸರ್ಕಾರಗಳನ್ನು ಪ್ರಭಾವ ಬೀರಲು ಅಧ್ಯಯನಗಳು ನಡೆಯುತ್ತಿವೆ. ಕೊನೆಯಲ್ಲಿ, ಅದರ ಜನರನ್ನು ಅರ್ಥಮಾಡಿಕೊಳ್ಳುವ ಸರಕಾರವು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದು. ಆದಾಗ್ಯೂ, ವಿಜ್ಞಾನಿಗಳು, ಸಂಶೋಧನೆ ಜೀನೋಮಿಕ್ಸ್ಗೆ ಮುಖ್ಯವಾದುದೆಂದು ಹೇಳುತ್ತಾರೆ.

"ನಾವು 15 ಟಿಬಿ ಜೀನೋಮ್ ಡೇಟಾವನ್ನು ರಕ್ತದ ರೂಪ, ಕೂದಲಿನ ಎಳೆಗಳು ಅಥವಾ ಸ್ಪ್ಯೂಟಮ್ ರೂಪದಲ್ಲಿ ಉತ್ಪಾದಿಸುತ್ತೇವೆ. ಮಿಲಿಯನ್ ರೂಪಾಂತರಗಳಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಇದರಿಂದಾಗಬಹುದಾದ ಅಪಾಯವನ್ನು ಹೇಳಬಹುದು, " ಎಂದು ಮೆಡ್ಜಿನೋಮ್ನಲ್ಲಿ ಲ್ಯಾಬ್ ಸಹಾಯಕರಾದ ವೇದಮ್ ರಾಮಪ್ರಸಾದ್ ಹೇಳುತ್ತಾರೆ.

ವಿಜ್ಞಾನಿಗಳು ಜನಾಂಗೀಯತೆಯ ಆಧಾರದ ಮೇಲೆ ರೋಗಗಳನ್ನು ಪತ್ತೆಹಚ್ಚಲು ಉದ್ದೇಶಿತರಾಗಿದ್ದರು. ಈಗ, AI ಮುಖಾಂತರ ಅವರು ರೋಗಗಳ ಘಟನೆಗಳನ್ನು ವೇಗವಾಗಿ ಕಂಡುಕೊಳ್ಳುತ್ತಾರೆಯೇ ಅಥವಾ ಹೆಚ್ಚಿನ ಪ್ರಶ್ನೆಗಳನ್ನು ಎಸೆಯುತ್ತಾರೆಯೇ ಎಂಬುದನ್ನು ನಾವು ಕಾಯಬೇಕಾಗಿದೆ. ಎರಡೂ ಸಾಧ್ಯತೆಗಳಿವೆ.

1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags