ಆವೃತ್ತಿಗಳು
Kannada

ರೇಸಿಂಗ್ ಜಗತ್ತಿನ ಆಶಾಕಿರಣ- ದಾಖಲೆ ಬರೆದ ವಡೋದರಾದ ಬಾಲಕಿ

ಟೀಮ್​ ವೈ.ಎಸ್​. ಕನ್ನಡ

27th Jun 2017
Add to
Shares
23
Comments
Share This
Add to
Shares
23
Comments
Share

ರೇಸ್ ಕಾರುಗಳನ್ನು ಓಡಿಸುವುದನ್ನು ನೋಡುವಾಗಲೇ ಮೈ ಜುಂ ಅನ್ನುತ್ತೆ. ಇನ್ನು ಆ ಕಾರುಗಳನ್ನು ಓಡಿಸುವ ಡ್ರೈವರ್​​ಗಳು ಎಷ್ಟು ಕಾರ್ಯಕ್ಷಮತೆ ಹೊಂದಿರಬೇಕು ಅನ್ನುವುದನ್ನು ನೀವೇ ಯೋಚಿಸಿ. ಬಹು ಕಠಿಣವಾದ ಕಾರ್ ರೇಸಿಂಗ್​ನಲ್ಲಿ ಪುರುಷರದ್ದೇ ಮೇಲುಗೈ. ಆದ್ರೆ ವಡೋದರಾದ ಮಿರಾ ಇರ್ಧಾ ಎಲ್ಲಾ ಮಹಿಳೆಯರಿಗೆ ಸ್ಪೂರ್ತಿಯಾಗಬಲ್ಲ ಸಾಧನೆ ಮಾಡಿದ್ದಾಳೆ. 9ನೇ ವರ್ಷದಲ್ಲಿ ರೇಸ್ ಕಡೆಗೆ ಆಕರ್ಷಿತರಾಗಿದ್ದ ಮಿರಾ ಈಗ 17ನೇ ವರ್ಷದಲ್ಲಿ ಹೊಸ ದಾಖಲೆ ಮಾಡಿದ್ದಾಳೆ. ಸಖತ್ ಟಫ್ ಕಾಂಪಿಟೇಷನ್ ಇರುವ "ಯುರೋ ಜೆ.ಕೆ. ಸಿರೀಸ್ ರೇಸ್​"ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದುಕೊಂಡಿದ್ದಾಳೆ. ಮಿರಾ ಇಲ್ಲಿ ತನಕ ಸುಮಾರು 75 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ರೇಸ್​​ಗಳಲ್ಲಿ ಪಾಲ್ಗೊಂಡಿದ್ದಾಳೆ. ಈಗ "ಯುರೋ ಜೆ.ಕೆ. ಸಿರೀಸ್ ರೇಸ್"ಗೆ ಆಯ್ಕೆಯಾಗಿ, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಡ್ರೈವರ್ ಅನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

image


9ನೇ ವರ್ಷದಲ್ಲೇ ಮಿರಾ ರೇಸಿಂಗ್ ಕಡೆಗೆ ವಾಲಿಬಿಟ್ಟಿದ್ದರು. ಆರಂಭದಲ್ಲಿ ನ್ಯಾಷನಲ್ ಕಾರ್ಟಿಂಗ್ ಮೂಲಕ ರೇಸಿಂಗ್ ಕ್ಷೇತ್ರಕ್ಕೆ ಎಂಟ್ರಿಕೊಟ್ರು. ವಡೋದರಾದಲ್ಲಿ ಮಿರಾ ತಂದೆ ರೇಸಿಂಗ್ ಟ್ರ್ಯಾಕ್ ಒಂದರ ಮಾಲೀಕರಾಗಿರುವುದರಿಂದ ಮಿರಾಗೆ ಅಭ್ಯಾಸ ನಡೆಸಲು ಸುಲಭವಾಗಿತ್ತು. ಪುಣೆಯಲ್ಲಿ ನಡೆಯುತ್ತಿದ್ದ ಕಾರ್ಟಿಂಗ್ ರೇಸ್ ವೇಳೆ ಮಿರಾ ಅದ್ರಲ್ಲಿ ಪಾಲ್ಗೊಳ್ಳಲು ನಿರ್ಧಾರ ಮಾಡಿದರು. ಆರಂಭದಲ್ಲಿ ತಮಾಷೆಗಾಗಿ ಆರಂಭಿಸಿದ ಕಾರ್ಟಿಂಗ್ ರೇಸ್ ನಿಧಾನವಾಗಿ ಮಿರಾಗೆ ಇಷ್ಟವಾಯಿತು. ಅಷ್ಟೇ ಅಲ್ಲ ತನ್ನ ರೇಸಿಂಗ್ ಜೀವನದ ಮೊದಲ ಹೆಜ್ಜೆಯಾಗಿ ಬದಲಾಯಿತು.

ಇದನ್ನು ಓದಿ: ಪತ್ರಕರ್ತನ ಸ್ಟಾರ್ಟ್​ಅಪ್ ಉದ್ಯಮ- "ನದಿಮನೆ"ಯಲ್ಲಿ ಪ್ರವಾಸಿಗರಿಗೆ ಸಿಗುತ್ತೆ ಸಂಭ್ರಮ

201ರಲ್ಲಿ ಮಿರಾ ಕೊಲ್ಹಾಪುರ, ಹೈದ್ರಬಾದ್ ಮತ್ತು ಕೊಯಂಬತ್ತೂರ್ ಗಳಲ್ಲಿ ನಡೆದ ಐದು ಸುತ್ತುಗಳ ಜೆ.ಕೆ. ಟೈರ್ ನ್ಯಾಷನಲ್ ರೊಟಕ್ಸ್ ಮ್ಯಾಕ್ಸ್ ಚಾಂಪಿಯನ್ಶಿಪ್ ನಲ್ಲಿ ಪಾಲ್ಗೊಂಡರು. ಇದರಲ್ಲಿ ಮಿರಾ ಉತ್ತಮ ಸಾಧನೆ ಮಾಡಿದ್ರು. ಈ ಹಂತದಲ್ಲಿ ಮಿರಾ ಕಾರ್ಟಿಂಗ್ ನಿಂದ ಫಾರ್ಮುಲಾ ರೇಸಿಂಗ್ ಕಡೆಗೆ ಮನಸ್ಸು ಮಾಡಿದ್ದರು.

image


"ಯುರೋ ಜೆ.ಕೆ. ಸಿರೀಸ್ ರೇಸ್" ಜೆ.ಕೆ. ಟೈಯರ್ಸ್ ರೇಸಿಂಗ್​​ಗಳ ಪೈಕಿ ಅತಿ ಪ್ರತಿಷ್ಠಿತ ರೇಸ್ ಆಗಿದೆ. FB02 ಸಿರೀಸ್ ನ ಕಾರುಗಳ ಜೊತೆ 1.2 ಲೀಟರ್ ಬೈಕ್ ಎಂಜಿನ್​ಗಳನ್ನು ಹೊಂದಿದ ಕಾರುಗಳು ಈ ರೇಸ್​​ನಲ್ಲಿರಲಿವೆ. ಈ ರೇಸಿಂಗ್​​ನಲ್ಲಿ ಪಾಲ್ಗೊಳ್ಳುವ ಕಾರುಗಳ ಗರಿಷ್ಟ ವೇಗ 240 ಕಿಲೋಮೀಟರ್​ಗಳಾಗಿರಲಿದೆ. ಈ ಹಿಂದೆ ಈ ರೇಸ್​​ಗೆ "ಜೆ.ಕೆ. ರೇಸಿಂಗ್ ಏಷ್ಯಾ ಸಿರೀಸ್" ಅನ್ನುವ ಹೆಸರಿತ್ತು.

12ನೇ ತರಗತಿಯಲ್ಲಿ ಓದುತ್ತಿರುವ ಮಿರಾ ಈ ವರ್ಷದ ಉದ್ದಕ್ಕೂ ಸಾಕಷ್ಟು ರೇಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಾಂಪಿಯನ್ ಶಿಪ್, ರ್ಯಾಲಿಗಳು ಸೇರಿದಂತೆ ಇಂಟರ್ ನ್ಯಾಷನಲ್ ಕಾರ್ಟಿಂಗ್ ಕಾಂಪಿಟೇಷನ್ ನಲ್ಲೂ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.

“ ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿದೆ. ನನ್ನ ರೇಸ್ ಗಳನ್ನು ನೋಡಲು ಬರುವ ಹುಡುಗಿಯರು ನನ್ನ ಬಳಿ ರೇಸಿಂಗ್ ಬಗ್ಗೆ ಅನೇಕ ಟಿಪ್ಸ್ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಎಲ್ಲರೂ ವೃತ್ತಿಪರ ರೇಸ್ ಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ.”
- ಮಿರಾ, ರೇಸರ್

ರೇಸಿಂಗ್​​ನಲ್ಲಿ ಅದ್ಭುತ ಸಾಧನೆ ಮಾಡಿರುವ ಮಿರಾ ಓದಿನಲ್ಲೂ ಹಿಂದೆ ಬಿದ್ದಿಲ್ಲ. ರೇಸಿಂಗ್ ಟ್ರ್ಯಾಕ್​​ಗೆ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಕಲಿಕಾ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಕಲಿಕೆಯಲ್ಲೂ ಉತ್ತಮ ಅಂಕಗಳನ್ನು ಪಡೆದುಕೊಂಡಿರುವ ಮಿರಾಗೆ ಶಾಲೆಯ ಕಡೆಯಿಂದಲೂ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಆದ್ರೆ ಮಿರಾ ತನ್ನ ವಯಸ್ಸಿನ ಹುಡುಗಿಯರ ಜೊತೆ ಸುತ್ತಾಡುವ ಅವಕಾಶವನ್ನು ಕಳೆದುಕೊಂಡ ಬೇಸರದಲ್ಲಿದ್ದಾರೆ.

ಫಾರ್ಮುಲಾ ರೇಸ್ ಕಡೆಗೆ ಗಮನ ಇಟ್ಟಿರುವ ಮಿರಾ ಮುಂದಿನ ದಿನಗಳಲ್ಲಿ ರೇಸಿಂಗ್ ನಲ್ಲಿ ಸಾಕಷ್ಟು ಉತ್ತಮ ಸಾಧನೆಗಳನ್ನು ಮಾಡುವ ಕನಸು ಕಾಣುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಉತ್ತಮ ಸಾಧನೆ ಮಾಡಿರುವ ಮಿರಾ ಭವಿಷ್ಯದಲ್ಲಿ ಉತ್ತಮ ರೇಸ್ ಆಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ. 

ಇದನ್ನು ಓದಿ:

1. ಮಹಿಳಾ ಕ್ರಿಕೆಟ್​ನ ಸಚಿನ್ ತೆಂಡುಲ್ಕರ್- ವಿಶ್ವಕಪ್ ಎತ್ತುವ ಕನಸು ಕಾಣ್ತಿದ್ದಾರೆ ಮಿಥಾಲಿ ರಾಜ್

2. ಮಹಿಳೆರಿಗೆ ಕಿರಿಕಿರಿ ಮಾಡುವ ಪುಡಾರಿಗಳೇ ಹುಷಾರ್..! ಜೈಪುರದಲ್ಲಿ ರಚನೆಯಾಗಿದೆ ವಿಶೇಷ ಮಹಿಳಾ ಪೊಲೀಸ್ ಪಡೆ

3. ಶೇಫ್ ಆಫ್ ಯೂ; ಪಡ್ಡೆಗಳನ್ನು ಹುಚ್ಚೆಬ್ಬಿಸುತ್ತಿರುವ ಮ್ಯೂಸಿಕ್


Add to
Shares
23
Comments
Share This
Add to
Shares
23
Comments
Share
Report an issue
Authors

Related Tags