ಆವೃತ್ತಿಗಳು
Kannada

ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳು ಕೆಟ್ಟಿವೆಯೇ..? ರಿಪೇರಿಗೆ ಇದೆ ಸೇವಾ ಕಂಪನಿ..!

ಉಷಾ ಹರೀಶ್​​

11th Dec 2015
Add to
Shares
4
Comments
Share This
Add to
Shares
4
Comments
Share

ಆತ್ಮಸ್ಥೈರ್ಯವೊಂದಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದು. ಎಂತಹ ಬಡವ ಕೂಡಾ ದೊಡ್ಡ ಕಂಪನಿ ಕಟ್ಟಿ ಬೆಳಸಬಹುದು. ಸಮಾಜದಲ್ಲಿ ಗೌರವಯುತ ಜೀವನ ನಡೆಸಬೇಕು ಎಂಬ ಕನಸಿದ್ದರೆ ಸಾಕು ಅವರಲ್ಲಿರುವ ಛಲದಿಂದ ಅದನ್ನು ನನಸಾಗಿಸಿಕೊಳ್ಳಬಹುದು. ಅದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಗುಜರಾತ್ ಮೂಲದ ಯುವಕ ರವಿ ರೈಝಾದ್.

image


ಚಿಕ್ಕ ವಯಸ್ಸಿನಲ್ಲಿ ಮನೆಯಲ್ಲಿ ಕಡು ಬಡತನವಿದ್ದರೂ ಆರ್ಥಿಕವಾಗಿ ತನ್ನ ಖರ್ಚನ್ನು ತಾನೆ ನೋಡಿಕೊಂಡು ಮನೆಯವರಿಗೆ ಹಣಕಾಸಿನ ವಿಚಾರದಲ್ಲಿ ನೆರವಾಗುವ ದೃಷ್ಟಿಯಿಂದ ಕೊಚಿಂಗ್ ಕ್ಲಾಸ್ ಒಂದನ್ನು ರವಿ ಪ್ರಾರಂಭಿಸಿದ್ದರು. ಆದರೆ ಅದು ಯಾವುದೇ ಉಪಯೋಗಕ್ಕೆ ಬರುತ್ತಿರಲಿಲ್ಲ. ಆದರೆ 32 ವರ್ಷ ತುಂಬುವುದರೊಳಗೆ 70 ಲಕ್ಷ ರೂಪಾಯಿ ವರಮಾನ ಗಳಿಸುವ ಕಂಪನಿಯನ್ನು ಕಟ್ಟಿ ತಮ್ಮ ಗೌರವಯುತ ಜೀವನದ ಕನಸನ್ನು ನನಸು ಮಾಡಿಕೊಂಡರು.

ತಾವು ನಡೆಸುತ್ತಿದ್ದ ರವಿಯ ಕೋಚಿಂಗ್ ಕ್ಲಾಸ್​​ನಿಂದ ಬರುತ್ತಿದ್ದುದ್ದು ಕೇವಲ ಐದು ನೂರು ರೂಪಾಯಿ ಮಾತ್ರ. ಎಷ್ಟೇ ಕಷ್ಟ ಪಟ್ಟರೂ ಸಾವಿರದ ಮೇಲೆ ಅವರ ದುಡಿಮೆ ಹೋಗಲಿಲ್ಲ. ಅದಕ್ಕಾಗಿ ಸ್ವಲ್ಪ ದಿನಗಳಲ್ಲೇ ತಮ್ಮ ಕೋಚಿಂಗ್ ಕ್ಲಾಸ್ ನಿಲ್ಲಿಸಿದ ರವಿ, ತಾಂತ್ರಿಕ ಶಿಕ್ಷಣವನ್ನು ಪಡೆದರು. ಅವರ ದುರಾದೃಷ್ಟವೆನೋ ಎಂಬಂತೆ ರವಿಯವರು ಒಂದೆರೆಡು ವರ್ಷ ಕೆಲಸವಿಲ್ಲದೇ ಮನೆಯಲ್ಲಿ ಖಾಲಿ ಕುಳಿತರು. ಆಗ ಏನಾದರೂ ಮಾಡಲೇಬೇಕು ಎಂದು ತೀರ್ಮಾನ ಮಾಡಿದ ರವಿಯವರ ಕಣ್ಣಿಗೆ ಕಂಡದ್ದು ಕೆಟ್ಟು ಹೋಗಿದ್ದ ಎಲೆಕ್ಟ್ರಾನಿಕ್ ವಸ್ತುಗಳು.

image


ಹೌದು ತಮ್ಮ ಮನೆಯಲ್ಲಿ ಹಾಗೂ ಬೇರೆಯವರ ಮನೆಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಆಗಾಗ್ಗೆ ಕೆಟ್ಟು ಹೋಗುತ್ತಿದ್ದವು. ಅವುಗಳನ್ನು ಅಂಗಡಿಗೆ ತೆಗೆದುಕೊಂಡು ಹೋಗಿ ರಿಪೇರಿ ಮಾಡಿಸಿಕೊಂಡು ಬರಬೇಕಿತ್ತು. ಕೆಲವನ್ನು ರವಿಯವರೇ ರಿಪೇರಿ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಇನ್ನು ಕೆಲ ವಸ್ತುಗಳನ್ನಂತೂ ಕಂಪನಿಯ ನೌಕರರೇ ಬಂದು ದುರಸ್ತಿ ಮಾಡಬೇಕಿತ್ತು. ಕಾಯುವ ಅನಿವಾರ್ಯತೆ ಸಹ ಸೃಷ್ಟಿಯಾಗಿತ್ತು. ಈ ಹಂತದಲ್ಲೇ ರವಿಯವರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲೆಯನ್ಸ್​​​ಗಳನ್ನು ರಿಪೇರಿ ಮಾಡುವ ಕಂಪನಿ ಪ್ರಾರಂಭ ಮಾಡಿದರೆ ಹೇಗೆ ಎಂಬ ಐಡಿಯಾ ಹೊಳೆಯಿತು. ಅದಕ್ಕಾಗಿ ಒಂದಷ್ಟು ದಿನ ರಿಸರ್ಚ್ ನಡೆಸಿದ ರವಿ 2010ರಲ್ಲಿ ತಮ್ಮ ಕನಸಿನ ಯೋಜನೆಯನ್ನು ಪ್ರಾರಂಭ ಮಾಡಿಯೇ ಬಿಟ್ಟರು. ಅದೇ ಸೇವಾ ಕಂಪನಿ. (SEVA CONSUMER SERVICES PVT. LTD.)

image


ರವಿ ತಮ್ಮ ಕಂಪನಿ ಮೂಲಕ ಮಾಡುವ ಮೊದಲ ಕೆಲಸವೆಂದರೆ ಗ್ರಾಹಕರು ಮಾಹಿತಿ ನೀಡಿದರೆ ಅವರ ಮನೆಗಳಿಗೆ ಹೋಗಿ ಕೆಟ್ಟ ವಸ್ತುಗಳನ್ನು ರಿಪೇರಿ ಮಾಡುತ್ತಾರೆ. ನಿಮ್ಮ ಮನೆಯಲ್ಲಿ ಯಾವುದೇ ಎಲೆಕ್ಟ್ರಾನಿಕ್ ವಸ್ತು ಕೆಟ್ಟು ಹೋಗಿದ್ದರೆ ಅದರ ಬಗ್ಗೆ ಎಸ್ಎಂಎಸ್ ಅಥವಾ ಫೋನ್ ಮೂಲಕ ಮಾಹಿತಿ ನೀಡಿದರೆ ಸೇವಾ ತಂಡದ ಸದಸ್ಯರು ನಿಮ್ಮ ಮನೆಗೆ ಕೆಲವೇ ನಿಮಿಷಗಳಲ್ಲಿ ಬರುತ್ತಾರೆ ಕೆಟ್ಟಿರುವ ವಸ್ತುಗಳನ್ನು ರಿಪೇರಿ ಮಾಡುತ್ತಾರೆ. ಇತ್ತೀಚೆಗೆ ರವಿ ತಮ್ಮ ಸೇವಾ ಯೋಜನೆಯನ್ನು ಮೊಬೈಲ್ ಆ್ಯಪ್​​ಗೂ ವಿಸ್ತರಿಸಿದ್ದಾರೆ. ನೀವು ಆ್ಯಪ್ ಡೌನ್​ಲೋಡ್ ಮಾಡಿ ಅದರಲ್ಲಿ ಕೆಟ್ಟಿರುವ ವಸ್ತುಗಳ ಬಗ್ಗೆ ಮಾಹಿತಿ ನಿಮ್ಮ ವಿಳಾಸವನ್ನು ನಮೂದಿಸಿದರೆ ನಿಮ್ಮ ವಸ್ತುಗಳನ್ನು ರಿಪೇರಿಯಾಗುತ್ತವೆ. ಸಧ್ಯಕ್ಕೆ ಸೇವಾ ಸಂಸ್ಥೆಯು ದೆಹಲಿ, ಪುಣೆ ಸೇರಿದಂತೆ ದೇಶದ ಏಳು ನಗರಗಳಲ್ಲಿ ಕೆಲಸ ಮಾಡುತ್ತಿದೆ. ತನ್ನ ಸ್ವಂತ ಪರಿಶ್ರಮದಿಂದ ಈ ಕಂಪನಿ ಕಟ್ಟಿ ಯಶಸ್ವಿಯಾಗಿರುವ ರವಿ ಉದ್ಯಮ ಸ್ಥಾಪಿಸಬೇಕು ಎನ್ನುವ ಯುವಕರಿಗೆ ಮಾದರಿಯಾಗಿದ್ದಾರೆ. ವೆಬ್​​ಸೈಟ್ ಮೂಲಕವೂ ರವಿ ಅವರ ಸೇವಾ ಕಂಪನಿ ಲಭ್ಯ www.sevaservices.com

Add to
Shares
4
Comments
Share This
Add to
Shares
4
Comments
Share
Report an issue
Authors

Related Tags